ರೆಡ್ ಮೀಟ್ ತಿನ್ನೋದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ? ಅಧ್ಯಯನ ಹೇಳೋದೇನು?

ಮಾಂಸಾಹಾರ ತಿನ್ನೋರಿಗೆ ಸಸ್ಯಹಾರ ರುಚಿಸೋದಿಲ್ಲ. ಹಾಗಂತ ಮಾಂಸಾಹಾರ ಆರೋಗ್ಯಕ್ಕೆ ತುಂಬಾ ಒಳ್ಳೆಯದಲ್ಲ. ಅದನ್ನು ಪ್ರತಿ ದಿನ ಸೇವನೆ ಮಾಡಬಾರದು. ರೆಡ್ ಮೀಟ್  ಪ್ರೇಮಿಗಳು ಎಷ್ಟು ಪ್ರಮಾಣದಲ್ಲಿ ಆಹಾರ ಸೇವನೆ ಮಾಡ್ತಿದ್ದೇವೆ ಎಂಬುದನ್ನು ಅರಿತಿರಬೇಕು.

Increasing Legumes Intake Limiting Red Meat Is Good For Bone Health Study roo

ನಾವು ಸೇವಿಸುವ ಆಹಾರದ ಮೇಲೇ ನಮ್ಮ ಆರೋಗ್ಯ ನಿಂತಿದೆ. ಶಾಖಾಹಾರವಿರಲಿ ಅಥವಾ ಮಾಂಸಾಹಾರವಿರಲಿ ಎಲ್ಲವನ್ನೂ ನಾವು ಮಿತವಾಗಿ ಬಳಸಿದ್ರೆ ಅದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಬಾಯಿಗೆ ರುಚಿ ನೀಡುತ್ತೆ ಎನ್ನುವ ಕಾರಣಕ್ಕೆ ಮಿತಿಮೀರಿ ತಿಂದರೆ ನಮ್ಮ ಅನಾರೋಗ್ಯಕ್ಕೆ ನಾವೇ ಜವಾಬ್ದಾರರಾಗುತ್ತೇವೆ. ನಾನ್ ವೆಜ್ (Non Veg ) ಇಷ್ಟಪಡುವವರು ಚಿಕನ್ ಕಬಾಬ್, ತಂದೂರಿ ಚಿಕನ್, ಮಟನ್ ಮುಂತಾದ ಪದಾರ್ಥಗಳ ಸೇವನೆ ಮಾಡಲು ಇಷ್ಟಪಡುತ್ತಾರೆ. ಇವು ಬಾಯಿಗೆ ರುಚಿಯನ್ನೂ ನೀಡುತ್ತವೆ. ಎಲ್ಲ ಮಾಂಸಗಳೂ ಆರೋಗ್ಯ (Health)ಕ್ಕೆ ಹಾನಿಮಾಡುತ್ತವೆ ಎಂದಲ್ಲ. ಕೆಲವು ಸಮಯದಲ್ಲಿ ಅವು ಕೂಡ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ಅವುಗಳಲ್ಲಿ ಕೆಲವೇ ಕೆಲವು ನಮ್ಮ ಆರೋಗ್ಯವನ್ನು ಹದಗೆಡುವಂತೆ ಮಾಡುತ್ತವೆ. ಇಂತಹ ಮಾಂಸಗಳು ಬಾಯಿಗೆ ರುಚಿ ನೀಡುವುದು ಎಷ್ಟು ಸತ್ಯವೋ, ಇದರಿಂದ ನಮ್ಮ ಶರೀರ ಹಾನಿಗೊಳಗಾಗುವುದು ಕೂಡ ಅಷ್ಟೇ ಸತ್ಯ. ಇಂತಹ ಆಹಾರಗಳಲ್ಲಿ ರೆಡ್ ಮೀಟ್ (ಕೆಂಪು ಮಾಂಸ)ಕೂಡ ಒಂದು.

ಕೆಂಪು ಮಾಂಸ (Red Meat ) ವನ್ನು ಕುರಿ, ಜಿಂಕೆ, ಹಂದಿ ಮೇಕೆ ಮುಂತಾದ ಕೆಲವು ಪ್ರಾಣಿಗಳಿಂದ ಪಡೆಯಲಾಗುತ್ತದೆ. ಕೆಂಪು ಮಾಂಸದ ಸೇವನೆ ಮೂಳೆ ಮತ್ತು ದೇಹಕ್ಕೆ ಒಳ್ಳೆಯದಲ್ಲ. ಹಾಗಾಗಿ ಇದನ್ನು ಕಡಿಮೆ ಸೇವಿಸಬೇಕು. ಇದರ ಬದಲಾಗಿ ಅವರೆಕಾಳು ಮತ್ತು ಫಾವಾ ಬೀನ್ಸ್ ನಂತಹ ದ್ವಿದಳ ಧಾನ್ಯಗಳನ್ನು ಸೇವಿಸಬೇಕು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಸಂಶೋಧನೆಯ ಪ್ರಕಾರ, ಕೆಂಪು ಮಾಂಸ ಮತ್ತು ಪ್ಯಾಕ್ ಮಾಡಿದ ಮಾಂಸದಲ್ಲಿ ಬಹಳಷ್ಟು ಅಮೈನೋ ಎಸಿಡ್ ಇರುತ್ತವೆ. ಇದು ಮೂಳೆ ಮತ್ತು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ತಿಳಿದುಬಂದಿದೆ.

ರೆಡ್ ಮೀಟ್ ತಿನ್ನೋದ್ರಿಂದ ಹೀಗಾಗುತ್ತೆ :  ಕೆಂಪು ಮಾಂಸದ ಸೇವನೆ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯುವುದನ್ನು ತಡೆಯುತ್ತದೆ. ಇದರಿಂದ ಹೃದ್ರೋಗದ ಅಪಾಯ ಹೆಚ್ಚುತ್ತದೆ ಹಾಗೂ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಮಾಂಸದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚು ಇರೋದ್ರಿಂದ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗುತ್ತೆ. ಇದರಿಂದ ದೇಹದ ತೂಕವೂ ಹೆಚ್ಚಾಗುವುದರ ಜೊತೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ.
ರೆಡ್ ಮೀಟ್ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಕೂಡ ಹೆಚ್ಚುತ್ತದೆ. ಹೆಚ್ಚಿ ಕೊಬ್ಬನ್ನು ಹೊಂದಿರುವ ಕೆಂಪು ಮಾಂಸ ಜೀರ್ಣಕ್ರಿಯೆಯ ಸಮಸ್ಯೆಯನ್ನೂ ತಂದೊಡ್ಡುತ್ತದೆ. ಜೀರ್ಣಕ್ರಿಯೆಯ ಸಮಸ್ಯೆಯಿಂದ ಅಜೀರ್ಣ, ಮಲಬದ್ಧತೆ ಮುಂತಾದ ಸಮಸ್ಯೆಗಳು ತಲೆದೋರುತ್ತವೆ.

ಭಾರತದ ಅತ್ಯಂತ ಕೆಟ್ಟ ಸ್ಟ್ರೀಟ್‌ಫುಡ್‌ ಲಿಸ್ಟ್ ಬಿಡುಗಡೆ, ನಿಮ್ಮ ನೆಚ್ಚಿನ ಚಾಟ್ಸ್ ಇದ್ಯಾ ಚೆಕ್ ಮಾಡ್ಕೊಳ್ಳಿ

ರೆಡ್ ಮೀಟ್ ದ್ವಿದಳ ಧಾನ್ಯಗಳನ್ನು ಸೇವಿಸಿ : ರೆಡ್ ಮೀಟ್ ಮತ್ತು ಪ್ಯಾಕ್ಡ್ ಮೀಟ್ ಅನ್ನು ಕಡಿಮೆ ಸೇವಿಸಬೇಕು. ಏಕೆಂದರೆ ಇದರಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುತ್ತದೆ. ಅದರ ಬದಲಾಗಿ ಪ್ರೋಟೀನ್ ಹೆಚ್ಚು ಇರುವ ಅವರೆಕಾಳು ಮತ್ತು ಫಾವಾ ಬೀನ್ಸ್ ಗಳನ್ನು ಸೇವನೆ ಮಾಡಬಹುದು. ಸತತವಾಗಿ ಆರು ವಾರಗಳ ಕಾಲ 102 ಪುರುಷರ ಮೇಲೆ ಈ ಸಂಶೋಧನೆ ನಡೆಸಲಾಯ್ತು. ಅವರಲ್ಲಿ ಒಂದು ಗುಂಪಿಗೆ ವಾರಕ್ಕೆ 760 ಗ್ರಾಂ ಕೆಂಪು ಮತ್ತು ಪ್ಯಾಕ್ ಮಾಡಿದ ಮಾಂಸವನ್ನು ನೀಡಲಾಯಿತು. ಇದು ಒಟ್ಟೂ ಪ್ರೋಟೀನ್ ಸೇವನೆಯ 25 ಪ್ರತಿಶತದಷ್ಟಿತ್ತು. ಇನ್ನೊಂದು ಗುಂಪಿಗೆ ದ್ವಿದಳ ಧಾನ್ಯಗಳನ್ನು ಆಧರಿಸಿದ ಆಹಾರ ಉತ್ಪನ್ನಗಳನ್ನು ನೀಡಲಾಗಿತ್ತು. ಇದು ಒಟ್ಟೂ ಪ್ರೋಟೀನ್ ಸೇವನೆಯ 20 ಪ್ರತಿಶತದಷ್ಟಿತ್ತು.

Health Tips: ಈ ಸಮಸ್ಯೆ ಇರೋರು ಬದನೆಕಾಯಿ ತಿನ್ಬೇಡಿ

ಎರಡೂ ಗುಂಪುಗಳ ನಡುವೆ ಕ್ಯಾಲ್ಸಿಯಂ ಅಥವಾ ವಿಟಮಿನ್ ಡಿ ಸೇವನೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ವಾತಾವರಣದ ಪ್ರಭಾವವೂ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹಾಗಾಗಿ ಕೆಂಪು ಮಾಂಸದ ಸೇವನೆಯನ್ನು ಕಡಿಮೆ ಮಾಡುವುದು ಬಹಳ ಅವಶ್ಯವಾಗಿದೆ. ಒಬ್ಬ ವ್ಯಕ್ತಿ ಮಾಂಸಾಹಾರದ ಸೇವನೆಯನ್ನು ಬಿಟ್ಟಾಗ ಅದರ ಬದಲಾಗಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಮ್ ಇರುವ ಆಹಾರಗಳನ್ನು ಸೇವಿಸಲೇಬೇಕು ಎಂದು ಸಂಶೋಧನಾಕಾರರು ಹೇಳಿದ್ದಾರೆ.

Latest Videos
Follow Us:
Download App:
  • android
  • ios