Asianet Suvarna News Asianet Suvarna News

Covid Cases: ಕೋವಿಡ್ ಹೆಚ್ಚಳ; ಆರೋಗ್ಯ ವ್ಯವಸ್ಥೆ ಸನ್ನದ್ಧತೆಗೆ ಮೋದಿ ಸೂಚನೆ

ಪ್ರಧಾನಿ ನರೇಂದ್ರ ಮೋದಿ ದೇಶ​ದ ಆರೋಗ್ಯ ವ್ಯವ​ಸ್ಥೆ​ಯನ್ನು ಸನ್ನದ್ಧ ಸ್ಥಿತಿ​ಯ​ಲ್ಲಿ​ರಿ​ಸು​ವಂತೆ ಸೂಚನೆ ನೀಡಿ​ದ್ದಾ​ರೆ. ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ಕೋವಿಡ್‌ ಆತಂಕ ಇನ್ನು ಅಂತ್ಯ​ವಾ​ಗಿಲ್ಲ. ಮುಂಬ​ರುವ ಹಬ್ಬ​ಗಳ ದಿನ​ಗ​ಳಲ್ಲಿ ಕೋವಿಡ್‌ ಇನ್ನು ಉಲ್ಬ​ಣಿ​ಸುವ ಸಾಧ್ಯ​ತೆ​ಯಿದ್ದ ಹಿನ್ನೆ​ಲೆ​ಯಲ್ಲಿ ಆರೋಗ್ಯ ವ್ಯವ​ಸ್ಥೆ​ಯನ್ನು ಸನ್ನದ್ಧ ಸ್ಥಿತಿ​ಯ​ಲ್ಲಿ​ಡುವಂತೆ ಹೇಳಿದ್ದಾರೆ.

Increase in covid cases, PM Modi instructions for health system preparation Vin
Author
First Published Dec 23, 2022, 12:46 PM IST

ನವ​ದೆ​ಹ​ಲಿ: ಚೀನಾ, ಜಪಾನ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಮತ್ತೆ ಕೋವಿಡ್‌ ಸೋಂಕು ಉಲ್ಬ​ಣ​ವಾ​ಗು​ತ್ತಿ​ರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶ​ದ ಆರೋಗ್ಯ ವ್ಯವ​ಸ್ಥೆ (Health System)​ಯನ್ನು ಸನ್ನದ್ಧ ಸ್ಥಿತಿ​ಯ​ಲ್ಲಿ​ರಿ​ಸು​ವಂತೆ ಸೂಚನೆ ನೀಡಿ​ದ್ದಾ​ರೆ. ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ (Meeting) ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ಕೋವಿಡ್‌ ಆತಂಕ ಇನ್ನು ಅಂತ್ಯ​ವಾ​ಗಿಲ್ಲ. ಮುಂಬ​ರುವ ಹಬ್ಬ​ಗಳ ದಿನ​ಗ​ಳಲ್ಲಿ ಕೋವಿಡ್‌ ಇನ್ನು ಉಲ್ಬ​ಣಿ​ಸುವ ಸಾಧ್ಯ​ತೆ​ಯಿದ್ದ ಹಿನ್ನೆ​ಲೆ​ಯಲ್ಲಿ ಆರೋಗ್ಯ ವ್ಯವ​ಸ್ಥೆ​ಯನ್ನು ಸನ್ನದ್ಧ ಸ್ಥಿತಿ​ಯ​ಲ್ಲಿ​ಡ​ಬೇಕು. ಆಸ್ಪ​ತ್ರೆ​ಗ​ಳಲ್ಲಿ ಕೋವಿಡ್‌ ಸಂಬಂಧಿತ ಚಿಕಿ​ತ್ಸೆ​ಗಾಗಿ (Treatment) ಆಕ್ಸಿ​ಜನ್‌ ಸಿಲಿಂಡರ್‌, ಪಿಎ​ಸ್‌ಎ ಘಟಕ, ವೆಂಟಿ​ಲೇ​ಟರ್‌, ಆಸ್ಪ​ತ್ರೆ​ಯಲ್ಲಿ ಕೋವಿಡ್‌ ರೋಗಿ​ಗ​ಳಿ​ಗಾಗಿ ಹಾಸಿಗೆ ಹಾಗೂ ವೈದ್ಯ​ಕೀಯ ಸಿಬ್ಬಂದಿ ಸಾಕಷ್ಟುಪ್ರಮಾ​ಣ​ದಲ್ಲಿ ಇರು​ವಂತೆ ನೋಡಿ​ಕೊ​ಳ್ಳ​ಬೇಕು' ಎಂದು ಸೂಚಿ​ಸಿ​ದ್ದಾ​ರೆ. 

ಕೋವಿಡ್‌ ಸಂಬಂಧಿ ಮಾರ್ಗ​ಸೂ​ಚಿ​ಗ​ಳನ್ನು ಪಾಲಿ​ಸುವಂತೆ ಸೂಚನೆ
ಅಲ್ಲದೇ ಆಸ್ಪ​ತ್ರೆ​ಗ​ಳಲ್ಲಿ ಕೋವಿ​ಡ್‌​ ಚಿಕಿ​ತ್ಸೆ​ಗಾಗಿ ಲಸಿಕೆ (Vaccine) ಹಾಗೂ ಔಷ​ಧಿ​ಗ​ಳನ್ನು ಅಗತ್ಯ ಪ್ರಮಾ​ಣ​ದ​ಲ್ಲಿ ಲಭ್ಯ​ವಿ​ರು​ವಂತೆ ನೋಡಿ​ಕೊ​ಳ್ಳ​ಬೇಕು. ಈ ಔಷ​ಧಿ​ಗಳ ಬೆಲೆಯ ಮೇಲೂ ನಿಗಾ ಇರಿ​ಸ​ಬೇಕು ಎಂದು ಸೂಚನೆ ನೀಡಿ​ದ್ದಾ​ರೆ. ಇದ​ಲ್ಲದೆ ಜನರು ಕೂಡಾ ಕೋವಿಡ್‌ ಸಂಬಂಧಿ ಮಾರ್ಗ​ಸೂ​ಚಿ​ಗ​ಳನ್ನು ಪಾಲಿ​ಸ​ಬೇ​ಕು. ಜನರು ಸಾರ್ವ​ಜ​ನಿಕ ಸ್ಥಳ​ಗ​ಳಲ್ಲಿ ಮಾಸ್ಕ್‌ ಧರಿ​ಸು​ವು​ದನ್ನು ಮತ್ತೆ ಆರಂಭಿ​ಸ​ಬೇ​ಕು. ವಿಶೇ​ಷ​ವಾಗಿ ವಯ​ಸ್ಕರು ಶೀಘ್ರವೇ ಮುಂಜಾ​ಗ್ರತಾ ಡೋಸು ಪಡೆ​ದು​ಕೊ​ಳ್ಳ​ಬೇ​ಕು ಎಂದು ಕರೆ​ ನೀ​ಡಿ​ದ್ದಾ​ರೆ.

ಆದಷ್ಟು ಬೇಗ ಬೂಸ್ಟರ್‌ ಲಸಿಕೆ ಹಾಕಿಸಿಕೊಳ್ಳಿ: ಸಾರ್ವಜನಿಕರಿಗೆ ಐಎಂಎ ವೈದ್ಯರ ಎಚ್ಚರಿಕೆ

ಪ್ರತಿ ರಾಜ್ಯ​ಗ​ಳಿಗೂ ಪ್ರತಿ​ದಿನ ಹೆಚ್ಚಿನ ಸಂಖ್ಯೆ​ಯಲ್ಲಿ ಮಾದ​ರಿ​ಗ​ಳನ್ನು ಜಿನೋಮ್‌ ಸೀಕ್ವೆ​ನ್ಸಿಂಗ್‌ಗೆ ಒಳ​ಪ​ಡಿ​ಸ​ಬೇಕು ಎಂದು ಸೂಚಿ​ಸಿದ್ದು, ಹೊಸ ತಳಿ​ಗಳು ಪತ್ತೆ​ಯಾ​ದಲ್ಲಿ ಅವು​ಗಳ ಬಗ್ಗೆ ತಿಳಿ​ದು​ಕೊ​ಳ್ಳಲು ಇದ​ರಿಂದ ನೆರ​ವಾ​ಗು​ತ್ತದೆ ಎಂದು ಹೇಳಿ​ದ್ದಾರೆ. ಅಲ್ಲ​ದೇ ಅಧಿ​ಕಾ​ರಿ​ಗ​ಳಿಗೆ (Officers) ವಿಶೇ​ಷ​ವಾಗಿ ಅಂತಾರಾ​ಷ್ಟ್ರೀಯ ವಿಮಾನ ನಿಲ್ದಾ​ಣ​ಗ​ಳಲ್ಲಿ ಸೋಂಕಿ​ನ ನಿಗಾ ವ್ಯವ​ಸ್ಥೆ​ಯನ್ನು ಬಲ​ಪ​ಡಿ​ಸಲು ಸೂಚಿಸಿದ್ದಾ​ರೆ.

ಸಂಸತಲ್ಲೂ ಮಾಸ್ಕ್ ಧರಿಸಲು ಸೂಚನೆ
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಾಗೂ ರಾಜ್ಯಸಭೆ ಮುಖ್ಯಸ್ಥೆ ಜಗದೀಪ್ ಧನಕರ್ ಅವರು ಸ್ವತಃ ತಾವು ಮಾಸ್ಕ್ ಧರಿಸಿಕೊಂಡು ಕಲಾಪಕ್ಕೆ ಹಾಜರಾಗಿ ಸದಸ್ಯರಿಗೂ ಮಾಸ್ಕ್ ಧರಿಸುವಂತೆ ಸೂಚಿಸಿದರು. ಜೊತೆಗೆ ಎಲ್ಲಾ ಸಂಸದರು ಸಾಮಾಜಿಕ ಅಂತರ (Social distance) ಕಾಪಾಡಿಕೊಳ್ಳುವ ಮೂಲಕ ದೇಶದ ಜನರಿಗೆ ಮಾದರಿಯಾಗಬೇಕು ಎಂದು ಹೇಳಿದರು. ಪ್ರಧಾನಿ ಮೋದಿ ಸೇರಿದಂತೆ ಆಡಳಿತ ಬಿಜೆಪಿಯ ಬಹುತೇಕ ಸದಸ್ಯರು ಸಂಸತ್ತಿನ ಉಭಯ ಸದನಗಳಲ್ಲಿ ಮಾಸ್ಕ್ ಧರಿಸಿ ಗಮನ ಸೆಳೆದರೆ, ವಿಪಕ್ಷ ನಾಯಕರು ಮಾಸ್ಕ್‌ನಿಂದ ದೂರವೇ ಉಳಿದಿದ್ದರು.

ಕೋವಿಡ್ ನಿಗಾ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ
ಜಾಗತಿಕವಾಗಿ ಕೋವಿಡ್ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ರಾಜ್ಯಗಳಲ್ಲಿ ಕೋವಿಡ್ ಬಗ್ಗೆ ಕಟ್ಟೆಚ್ಚರ ವಹಿಸಲು ಹಾಗೂ ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅಲ್ಲದೆ, ಕೋವಿಡ್ ಹೆಚ್ಚಿರುವ ಸ್ಥಳಗಳಲ್ಲಿ ಕಂಟೋನ್ಮೆಂಟ್ ನಿಯಮ ಜಾರಿ ಮತ್ತು ಎಲ್ಲೆಡೆ ಬೂಸ್ಟರ್‌ ಡೋಸ್ ಹೆಚ್ಚಿಸುವುದಕ್ಕೂ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದೆ.

ಆದಷ್ಟು ಬೇಗ ಬೂಸ್ಟರ್‌ ಲಸಿಕೆ ಹಾಕಿಸಿಕೊಳ್ಳಿ: ಸಾರ್ವಜನಿಕರಿಗೆ ಐಎಂಎ ವೈದ್ಯರ ಎಚ್ಚರಿಕೆ

ಸಂಸತ್ತಿನ ಉಭಯ ಸದನಗಳಿಗೆ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ, ವಿಮಾನ ನಿಲ್ದಾಣಗಳಲ್ಲಿ ಶನಿವಾರದಿಂದ ವಿದೇಶದಿಂದ ಬರುವ ಪ್ರಯಾಣಿಕರಲ್ಲಿ ಶೇ.2ರಷ್ಟು ಪ್ರಯಾಣಿಕರನ್ನು ರ್ಯಾಂಡಮ್‌ ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ. ಜಗತ್ತಿನಲ್ಲಿ ನಿತ್ಯ ಈಗ 5.87 ಲಕ್ಷ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿದ್ದರೆ, ಭಾರತದಲ್ಲಿ ಕೇವಲ 153 ಕೇಸ್ ಪತ್ತೆಯಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್ ಹೆಚ್ಚಳದ ಬಗ್ಗೆ ತೀವ್ರ ನಿಗಾ ವಹಿಸಿದೆ. ಅಗತ್ಯವಿದ್ದರೆ ಕಠಿಣ ಕ್ರಮಗಳನ್ನು ಸರ್ಕಾರ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios