ಕೋಲ್ಕತ್ತಾ(ಜೂ. 09) ಕೋಲ್ಕತ್ತಾದ  24  ವರ್ಷದ ಮಹಿಳೆ 12ದಿನ ಎಮೋ(Extracorporeal Membrane Oxygenation) ದಲ್ಲಿದ್ದು ಕೊರೋನಾ ಗೆದ್ದು ಬಂದಿದ್ದಾರೆ.

ಇಡೀ ದೇಶದಲ್ಲಿಯೇ ಇದು ಈ ರೀತಿಯ ಮೊಟ್ಟ ಮೊದಲ ಪ್ರಕರಣ ಎನ್ನಲಾಗಿದೆ. ಎಮೋ ಎಂದರೆ ಕೃತಕ ಶ್ವಾಸಕೋಶದ ಮುಖೇನ ಉಸಿರಾಟದ ಕೆಲಸ ಮಾಡುವುದು ಎಂದು ಅರ್ಥ ಮಾಡಿಕೊಳ್ಳಬಹುದು.

ಆಮ್ಲಜನಕ ಯುಕ್ತ ರಕ್ತವನ್ನು ದೇಹಕ್ಕೆ ಪಂಪ್ ಮಾಡುವ ಪ್ರಕ್ರಿಯೆ, ಈ ಯಂತ್ರ ಬಳಕೆ ಮಾಡಿದ ವೇಳೆ ಹೃದಯ ಮತ್ತು ಶ್ವಾಸಕೋಶ ವಿಶ್ರಾಂತ ಸ್ಥಿತಿಯಲ್ಲಿ ಇರುತ್ತದೆ.

ಕಣ್ಣೀರಿಂದಲೂ ಕೊರೋನಾ ಬರುತ್ತದೆ ಹುಷಾರ್

ಧಕುರೈನ ಎಎಂ ಆರ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ದೊಡ್ಡ ಯುದ್ಧ ಗೆದ್ದು ಬಂದಿದ್ದಾರೆ. 300  ಗಂಟೆಗಳನ್ನು ಆಕೆ ಎಮೋದಲ್ಲಿ ಕಳೆದಿದ್ದಾರೆ.

ಕೋಲ್ಕತ್ತಾದ ಮಟ್ಟಿಗೆ ಇದು ಎರಡನೇ ಪವಾಡದ ಚೆತರಿಕೆ. ವೆಂಟಿಲೇಟರ್ ಸಪೋರ್ಟ್ ಪಡೆದುಕೊಂಡಿದ್ದ 52  ವರ್ಷದ ಡಯಾಬಿಟಿಕ್ ಪೇಶಂಟ್ ಹಿಂದೆ ಗುಣಮುಖವಾಗಿದದ್ದರು.

ಡಾ. ಸ್ವಸ್ತಿ ಸಿನ್ಹಾರವರ ಕಾರ್ಯಕ್ಕೆ ಎಲ್ಲ ಕಡೆಯಿಂದ ಪ್ರಶಂಸೆ ಬಂದಿದೆ. ಕಲಿಘಟ್ ಏರಿಯಾದ ಮಹಿಳೆ ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಬಳಿಯೇ ವಾಸವಿದ್ದರುತೀವ್ರ ಜ್ವರದ ಕಾರಣಕ್ಕೆ ಮೇ 17  ರಂದು ಆಸ್ಪತ್ರೆಗೆ ದಾಖಲಾಗಿದ್ದರು.