ಜಾಗತಿಕ ಪಿಡುಗಾದ ಕೊರೋನಾ ವೈರಸ್ ಕಣ್ಣೀರಿನಿಂದಲೂ ಮತ್ತೊಬ್ಬರಿಗೆ ಹರಡಬಹುದು ಎನ್ನುವ ಅಘಾತಕಾರಿ ಮಾಹಿತಿಯನ್ನು ಅಮೆರಿಕ ನೇತ್ರ ತಜ್ಞರು ಖಚಿತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ವಾಷಿಂಗ್ಟನ್‌(ಜೂ.05): ಬಾಯಿ ಮತ್ತು ಮೂಗಿನ ಮುಖಾಂತರ ಕೊರೋನಾ ಸೋಂಕು ಹರಡುತ್ತದೆ ಎಂದು ವಿಜ್ಞಾನಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಸೋಂಕಿತ ವ್ಯಕ್ತಿಯ ಕಣ್ಣೀರಿನಿಂದಲೂ ಕೊರೋನಾ ಸೋಂಕು ತಗುಲುತ್ತದೆ ಎಂದರೆ ನಂಬುತ್ತೀರಾ?

ನಂಬಲೇ ಬೇಕು! ಏಕೆಂದರೆ ಸೋಂಕಿತ ವ್ಯಕ್ತಿಯ ಕಣ್ಣೀರಿನಿಂದಲೂ ಕೊರೋನಾ ಹರಡುತ್ತದೆ ಎಂದು ಅಮೆರಿಕ ನೇತ್ರವಿಜ್ಞಾನ ಅಕಾಡೆಮಿ ಎಚ್ಚರಿಸಿದೆ. ಜೊತೆಗೆ ಬರೀ ಬಾಯಿ, ಮೂಗಿಂದ ಮಾತ್ರವಲ್ಲದೆ ಕಣ್ಣಿನಿಂದಲೂ ಕೊರೋನಾ ಸೋಂಕು ಹರಡುವ ಸಾಧ್ಯತೆ ಇದೆ. 

ಚಾಮರಾಜನಗರ ಕೊರೋನಾ ಮುಕ್ತ ಹೇಗಾಯ್ತು?

ಕೊರೋನಾ ವೈರಸ್‌ ಸಂಪರ್ಕಕ್ಕೆ ಬಂದು ಕೈಯಿಂದ ಕಣ್ಣನ್ನು ಉಜ್ಜಿಕೊಂಡರೂ ಸೋಂಕು ಹರಡುತ್ತದೆ. ಆದ್ದರಿಂದ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯ ಸಿಬ್ಬಂದಿ ಸುರಕ್ಷಿತ ಕನ್ನಡಕ ಧರಿಸಿ ಚಿಕಿತ್ಸೆ ನೀಡಬೇಕು ಎಂದು ಇಲ್ಲಿನ ವೈದ್ಯರು ಸಲಹೆ ನೀಡಿದ್ದಾರೆ. ಹಾಗೆಯೇ ಕಿವಿಯ ಮೂಲಕವಾಗಿ ಕೊರೋನಾ ಸೋಂಕು ಹರಡುವುದಿಲ್ಲ ಎಂದು ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಅಭಿಪ್ರಾಯಪಟ್ಟಿವೆ.

85 ಸಾವಿರ ಮಂದಿಗೆ ಕೊರೋನಾ: ಚೀನಾ ಹಿಂದಿಕ್ಕಿದ ಪಾಕ್‌

ಇಸ್ಲಾಮಾಬಾದ್‌: ಕಳೆದ 24 ಗಂಟೆಯಲ್ಲಿ 4,677 ಹೊಸ ಕೊರೋನಾ ಪ್ರಕರಣಗಳು ದಾಖಲಾಗುವ ಮೂಲಕ ಪಾಕಿಸ್ತಾನದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 85,246ಕ್ಕೆ ಏರಿಕೆಯಾಗಿದೆ. ಆ ಮೂಲಕ ವೈರಸ್‌ನ ಉಗಮ ಸ್ಥಳ ಚೀನಾವನ್ನು ಮೀರಿಸಿ ವಿಶ್ವ ಪಟ್ಟಿಯಲ್ಲಿ 17ನೇ ಸ್ಥಾನಕ್ಕೇರಿದೆ. 

ಚೀನಾದಲ್ಲಿ 84,160 ಮಂದಿ ಸೋಂಕಿತರಿದ್ದಾರೆ. ಸಿಂಧ್‌ ಪ್ರಾಂತ್ಯದಲ್ಲಿ ಅತೀ ಹೆಚ್ಚು ಅಂದರೆ 32,910 ಮಂದಿ ಸೋಂಕಿಗೆ ತುತ್ತಾಗಿದ್ದು, ಉಳಿದಂತೆ ಪಂಜಾಬ್‌ ಪ್ರಾಂತ್ಯದಲ್ಲಿ 31,104, ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ 11,373, ಬಲೂಚಿಸ್ತಾನದಲ್ಲಿ 5,224, ಇಸ್ಲಾಮಾಬಾದ್‌ನಲ್ಲಿ 3,544, ಗಿಲ್ಗಿಟ್‌ ಬಾಲ್ಟಿಸ್ತಾನದಲ್ಲಿ 824 ಹಾಗೂ ಆಕ್ರಮಿತ ಕಾಶ್ಮೀರದಲ್ಲಿ 285 ಕೇಸುಗಳು ಈ ವರೆಗೆ ದಾಖಲಾಗಿದೆ. ದೇಶಾದ್ಯಂತ ಒಟ್ಟು 1770 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಒಟ್ಟು 6,15,511 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ.