ದೇಶದಲ್ಲಿ ಮತ್ತೊಂದು ಡೇಂಜರಸ್ ಸೋಂಕಿನ ಭೀತಿ; ಜ್ವರವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿಗೆ ಚೈನೀಸ್ ನ್ಯುಮೋನಿಯಾ!

ವಿದೇಶದಲ್ಲಿ ಆತಂಕ ಮೂಡಿಸಿದ್ದ ಚೀನೀ ನ್ಯುಮೋನಿಯಾ ಭಾರತದಲ್ಲೂ ಪತ್ತೆಯಾಗಿದೆ. ಜ್ವರ, ಕೆಮ್ಮಿನಿಂದ ಬಳಲ್ತಿದ್ದ ಕೋಲ್ಕತ್ತಾದ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಪರಿಶೀಲನೆ ನಡೆಸಿದಾಗ ಚೀನೀ ನ್ಯುಮೋನಿಯಾ ಇರೋದು ದೃಢಪಟ್ಟಿದೆ.

In Kolkata 10 Year old girl suffers mild respiratory issues, detected with Chinese pneumonia Vin

ಕೋಲ್ಕತ್ತಾ: ಕೋಲ್ಕತ್ತಾದ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್‌ನಲ್ಲಿ 10 ವರ್ಷದ ಬಾಲಕಿಯಲ್ಲಿ 'ಚೈನೀಸ್ ನ್ಯುಮೋನಿಯಾ' ಎಂಬ ಅಪರೂಪದ ಸೋಂಕು ಪತ್ತೆಯಾಗಿದೆ. ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಬಾಲಕಿಯನ್ನು  ಡಿಸೆಂಬರ್ 25ರಂದು  ಪಾರ್ಕ್ ಸರ್ಕಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ, ವೈದ್ಯರು ಬಾಲಕಿ ಅಡೆನೊವೈರಸ್ ಸೋಂಕಿಗೆ ಒಳಗಾಗಿರಬಹುದು ಎಂದು ಶಂಕಿಸಿದ್ದರು. ಆದರೆ ಸ್ವ್ಯಾಬ್ ಮಾದರಿ ಪರೀಕ್ಷೆಯು ಆಕೆ ಮೈಕೋಪ್ಲಾಸ್ಮಾ ನ್ಯುಮೋನಿಯಾದಿಂದ ಬಳಲುತ್ತಿದ್ದಾಳೆ ಎಂಬುದನ್ನು ದೃಢಪಡಿಸಿದೆ. ಬಾಲಕಿ, ದಕ್ಷಿಣ ಕೋಲ್ಕತ್ತಾದ ಬಾನ್ಸ್‌ದ್ರೋನಿ ನಿವಾಸಿಯಾಗಿದ್ದಾಳೆ.

ಚೈನೀಸ್ ನ್ಯುಮೋನಿಯಾದಲ್ಲಿ ಬ್ಯಾಕ್ಟೀರಿಯಾಗಳು ರೋಗಿಗಳಲ್ಲಿ ತೀವ್ರವಾದ ನ್ಯುಮೋನಿಯಾಕ್ಕೆ ಕಾರಣವಾಗುತ್ತವೆ. ಇದು ಹೆಚ್ಚಿನ ಜ್ವರ, ಕೆಮ್ಮು ಮತ್ತು ಉಸಿರಾಟದ ರೋಗ ಲಕ್ಷಣವನ್ನು ತೋರಿಸುತ್ತದೆ. ಭಾರತದಲ್ಲಿ ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾ-ಸೋಂಕಿತ ಪ್ರಕರಣಗಳ ಹರಡುವಿಕೆ ಹೆಚ್ಚಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಏಮ್ಸ್-ದೆಹಲಿಯ ವೈದ್ಯರು ಕೆಲವು ವಾರಗಳ ಹಿಂದೆ ಕನಿಷ್ಠ ಏಳು ರೋಗಿಗಳಲ್ಲಿ, ಹೆಚ್ಚಾಗಿ ಮಕ್ಕಳಲ್ಲಿ ಈ ಸೋಂಕನ್ನು ಗಮನಿಸಿದ್ದಾರೆ.  

ಮಕ್ಕಳಲ್ಲಿ ದಿಢೀರ್‌ ನ್ಯುಮೋನಿಯಾಕ್ಕೆ ಪರಿಚಿತ ವೈರಸ್‌ ಕಾರಣ ಎಂದ ಚೀನಾ

'ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾಗಳು ಪ್ರಾಥಮಿಕವಾಗಿ ಉಸಿರಾಟದ ಒಳಪದರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಮಾತ್ರವಲ್ಲ ಹೃದಯ, ಮೂತ್ರಪಿಂಡಗಳು ಮತ್ತು ಕಣ್ಣುಗಳಂತಹ ಇತರ ಅಂಗಗಳಿಗೂ ತೊಂದರೆಯನ್ನುಂಟು ಮಾಡುತ್ತದೆ. ನಂತರದ ದಿನಗಳಲ್ಲಿ ತೀವ್ರ ಅನಾರೋಗ್ಯವನ್ನು ಉಂಟುಮಾಡಬಹುದು. ಈ ಸೋಂಕು ಪ್ರತಿಜೀವಕಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುವ ಕಾರಣ ಭಯಪಡುವ ಅಗತ್ಯವಿಲ್ಲ.  ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ' ಎಂದು ಕೋಲ್ಕತ್ತಾದ ಪೀಡಿಯಾಟ್ರಿಕ್ ಮೆಡಿಸಿನ್ ಮುಖ್ಯಸ್ಥ ಪ್ರೊಫೆಸರ್ ಜಯದೇಬ್ ರೇ ಹೇಳಿದ್ದಾರೆ.

ನ್ಯುಮೋನಿಯಾ ಬ್ಯಾಕ್ಟಿರೀಯಾ ಮೂಲತಃ ಚೀನಾದಲ್ಲಿ ಮೊದಲ ಬಾರಿಗೆ ಕಂಡು ಬಂದಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಮೈಕೋಪ್ಲಾಸ್ಮಾ ನ್ಯುಮೋನಿಯಾದಿಂದ ಉಂಟಾದ ಉಸಿರಾಟದ ಕಾಯಿಲೆಯ ಚೀನಾ ದೇಶದಲ್ಲಿ ಏಕಾಏಕಿ ಹರಡಿದ್ದರಿಂದ ಇದನ್ನು 'ಚೀನೀ ನ್ಯುಮೋನಿಯಾ' ಎಂದು ಕರೆಯಲಾಗುತ್ತದೆ. 

ಮಾರಕ ನ್ಯುಮೋನಿಯಾಗಿಂತ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತೆ: ಚೀನಾ ಎಚ್ಚರಿಕೆ; ಭಾರತಕ್ಕೂ ಆತಂಕ!

ಚೀನಾದ ಜೊತೆಗೆ, ಈ ಡೇಂಜರಸ್‌ ನ್ಯುಮೋನಿಯಾ ಯುಎಸ್ ಸೇರಿದಂತೆ ಇತರ ದೇಶಗಳಲ್ಲಿ ಉಲ್ಬಣಗೊಂಡಿದೆ. ಹಲವು ಮಕ್ಕಳಲ್ಲಿ ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವು ಸಾವುಗಳಿಗೂ ಕಾರಣವಾಗಿದೆ. ದುರ್ಬಲಗೊಂಡ ಶ್ವಾಸಕೋಶವನ್ನು ಹೊಂದಿರುವ ಹಿರಿಯರು ಸಹ ಸುಲಭವಾಗಿ ಈ ಸೋಂಕಿಗೆ ತುತ್ತಾಗುತ್ತಾರೆ.

Latest Videos
Follow Us:
Download App:
  • android
  • ios