Weight Management: ಅಡುಗೆ ಮನೆಯಲ್ಲಿ ಈ ವಸ್ತು ಇದ್ರೆ ತೂಕ ಹೆಚ್ಚಾಗುತ್ತೆ
ನಮ್ಮ ಆರೋಗ್ಯ ಅಡುಗೆ ಮನೆಯಲ್ಲಿ ಅಡಗಿದೆ. ಕಿಚನ್ ನಲ್ಲಿ ಇಷ್ಟದ ಆಹಾರ ಕಂಡ ತಕ್ಷಣ ಬಾಯಲ್ಲಿ ನೀರು ಬರುತ್ತೆ. ಅದೇ ಅಡುಗೆ ಮನೆಯಲ್ಲಿ ನಿಮ್ಮ ತೂಕ ಹೆಚ್ಚಿಸುವ ಆಹಾರ ಇಲ್ವೆ ಇಲ್ಲ ಅಂದ್ರೆ ಹೇಗೆ ತಿನ್ನುತ್ತೀರಾ? ತೂಕ ಇಳಿಸ್ಬೇಕೆಂದ್ರೆ ಮೊದಲು ಕಿಚನ್ ಕ್ಲೀನ್ ಮಾಡಿ.
ನಿತ್ಯದ ಆಹಾರದಲ್ಲಿನ ಏರುಪೇರು, ಅನ್ ಹೆಲ್ದಿ ಆಹಾರಗಳಿಂದ ಜನರಲ್ಲಿ ಬೊಜ್ಜು ಹೆಚ್ಚುತ್ತಿದೆ. ಒಮ್ಮೆ ವಿಪರೀತ ತೂಕ ಏರಿದ್ರೆ ಅದನ್ನು ಕಡಿಮೆ ಮಾಡಿಕೊಳ್ಳೋದು ಕಷ್ಟ. ಹಾಗಂತ ತೂಕ ಇಳಿಯೋದಿಲ್ಲ ಎಂದಲ್ಲ. ಕೆಲವರು ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಸಾಕಷ್ಟು ಶ್ರಮವಹಿಸ್ತಾರೆ. ಆದ್ರೆ ಅತಿ ಬೇಗ ತೂಕ ಇಳಿಸೋದು ಆರೋಗ್ಯಕ್ಕೆ ಹಾನಿಕರ. ತೂಕ ಇಳಿಕೆ ಯಾವಾಗ್ಲೂ ಆರೋಗ್ಯಕರವಾಗಿ ಹಾಗೂ ಹಂತ ಹಂತವಾಗಿ ನಡೆಯಬೇಕು. ತೂಕ (Weight) ಇಳಿಸಲು ಸರಿಯಾದ ಆಹಾರ (Food) ಕ್ರಮಗಳು, ವ್ಯಾಯಾಮ (Exercise) ಬಹಳ ಮುಖ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ವೇಟ್ ಲಾಸ್ ಡ್ರಿಂಕ್ಸ್ ಅಥವಾ ಇನ್ಯಾವುದೋ ಪ್ರಾಡಕ್ಟ್ ಬಳಸಿ ತೂಕ ಇಳಿಸುವುದಕ್ಕಿಂತ ನಮ್ಮ ಮನೆಯಲ್ಲಿ ನಾವು ತಿನ್ನುವ ಕೆಲವು ತಿಂಡಿಗಳನ್ನು ಬಿಟ್ಟರೂ ತೂಕ ಕಡಿಮೆಯಾಗುತ್ತದೆ.
ಅಡುಗೆ ಮನೆ (Kitchen) ಯಲ್ಲೇ ನಮ್ಮ ಆರೋಗ್ಯ ಅಡಗಿದೆ ಎಂದರೆ ತಪ್ಪಾಗದು. ಏಕೆಂದರೆ ಅಡುಗೆ ಮನೆಯಲ್ಲಿ ನಾವು ಬಳಸುವ ಎಷ್ಟೋ ಆಹಾರಗಳೇ ಶರೀರದ ಬೊಜ್ಜಿಗೆ ಕಾರಣವಾಗಿರಬಹುದು. ಅಡುಗೆ ಮನೆಯಲ್ಲಿ ಕೆಲವು ವಸ್ತು ಅಥವಾ ಆಹಾರವನ್ನು ಬ್ಯಾನ್ ಮಾಡಿದಾಗ ಹೆಚ್ಚಾದ ತೂಕವನ್ನು ಇಳಿಸಿಕೊಳ್ಳುವುದು ಸುಲಭವಾಗುತ್ತೆ.
ಅಡುಗೆ ಮನೆಯಲ್ಲಿ ಈ ವಸ್ತು ಇಡಬೇಡಿ :
ರುಚಿಯಾದ ಜಾಮ್ ಇಡಬೇಡಿ : ಈಗಿನ ಮಕ್ಕಳು ಜಾಮ್ ಬಹಳ ಇಷ್ಟ ಪಡುತ್ತಾರೆ. ಕೆಲವು ಮನೆಯಲ್ಲಿ ಬೆಳಗ್ಗಿನ ತಿಂಡಿಗೂ ಬ್ರೆಡ್ ಜಾಮ್ ಸಾಮಾನ್ಯವಾಗಿದೆ. ಕರಿದ ಪದಾರ್ಥಗಳನ್ನೂ ಕೆಲವರು ಜಾಮ್ ಜೊತೆ ತಿನ್ನುತ್ತಾರೆ. ಮಾರ್ಕೆಟ್ ನಲ್ಲಿ ಸಿಗುವ ಜಾಮ್ ಗೆ ಆರ್ಟಿಫಿಶಿಯಲ್ ಫ್ಲೇವರ್ ಮತ್ತು ಕಲರ್ ಗಳನ್ನು ಹಾಕಿರುತ್ತಾರೆ. ಜಾಮ್ ನಲ್ಲಿ ಅಧಿಕ ಸಕ್ಕರೆ ಅಂಶ ಇರುವುದರಿಂದ ಇದು ತೂಕವನ್ನು ಏರಿಸುತ್ತದೆ. ಹಾಗಾಗಿ ತೂಕ ಇಳಿಸುವವರು ನಿಮ್ಮ ಅಡುಗೆಮನೆಯಲ್ಲಿ ಜಾಮ್ ಇಡಬೇಡಿ. ಜಾಮ್ ಸೇವನೆಯನ್ನು ಸಂಪೂರ್ಣ ನಿಲ್ಲಿಸಿದ್ರೆ ನಿಮ್ಮ ತೂಕ ಇಳಿದಂತೆ.
ಮೂಡ್ ಹಾಳಾಗಿದ್ಯಾ? ಈ ಕೆಲ್ಸ ಮಾಡಿದ್ರೆ ನಿಮಿಷದಲ್ಲಿ ಖುಷಿಯಾಗ್ತೀರಿ ನೋಡಿ
ಫ್ರಿಜ್ ನಲ್ಲಿ ಕೂಲ್ ಡ್ರಿಂಕ್ಸ್ ಇಡಬೇಡಿ : ಬಾಯಾರಿಕೆ ನೀಗಿಸಲು ಅನೇಕರು ಕೂಲ್ ಡ್ರಿಂಕ್ಸ್ ಮೊರೆ ಹೋಗ್ತಾರೆ. ಫ್ರಿಜ್ ನಲ್ಲಿ ಒಂದಿಷ್ಟು ವೆರೈಟಿ ಕೂಲ್ ಡ್ರಿಂಕ್ಸ್ ಇದ್ದೇ ಇರುತ್ತದೆ. ಬೇಸಿಗೆಯಲ್ಲಂತೂ ತಂಪು ಪಾನೀಯ ಸೇವನೆ ಮಾಡುವವರ ಖ್ಯೆ ಹೆಚ್ಚು. ಈ ಡ್ರಿಂಕ್ಸ್ ನಲ್ಲಿರುವ ಕ್ಯಾಲೊರಿ ತೂಕವನ್ನು ಹೆಚ್ಚಿಸುತ್ತವೆ. ಇದು ಹಾರ್ಮೋನ್ ಇಂಬಾಲೆನ್ಸ್ ಮತ್ತು ಇನ್ಸುಲಿನ್ ಪ್ರತಿರೋಧಕಕ್ಕೂ ಕಾರಣವಾಗುತ್ತದೆ. ಸಕ್ಕರೆಯ ರೂಪದಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬನ್ನು ದೇಹ ಹೋಗುತ್ತದೆ. ದೇಹದಲ್ಲಿ ಸೋಡಿಯಂ ಹೆಚ್ಚಿಸುವ ಕೆಲಸವನ್ನು ಇವು ಕಾಡ್ತವೆ. ಹಾಗಾಗಿ ಮನೆಯಲ್ಲಿ ಎಂದಿಗೂ ಕೂಲ್ ಡ್ರಿಂಕ್ಸ್ ಇಡಬೇಡಿ. ಹಾಗೆಯೇ ತೂಕ ಇಳಿಬೇಕೆಂದ್ರೆ ಅದನ್ನು ಕುಡಿಬೇಡಿ.
ಸಕ್ಕರೆಯಿಂದ ದೂರವಿರಿ : ಸಕ್ಕರೆ ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಅಧಿಕ ತೂಕದ ಸಮಸ್ಯೆ ಇರುವವರಿಗೆ ಸಕ್ಕರೆ ಒಳ್ಳೆಯದಲ್ಲ. ಪ್ರತಿನಿತ್ಯ ಹೆಚ್ಚು ಸಕ್ಕರೆ ಬಳಸುವುದರಿಂದ ಶರೀರದಲ್ಲಿ ಕ್ಯಾಲೊರಿ ಹೆಚ್ಚುತ್ತದೆ. ಇದರಿಂದ ತೂಕವೂ ಹೆಚ್ಚುತ್ತದೆ. ಸಕ್ಕರೆ ಹಾರ್ಮೋನುಗಳ ಅಸಮತೋಲನ, ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ.
Health Tips: ನಿಮ್ಮ ಎತ್ತರ ಹೆಚ್ಚಾದಂತೆ ಕ್ಯಾನ್ಸರ್ ಅಪಾಯ ಹೆಚ್ಚು!
ಬಿಸ್ಕತ್ ಬೇಡ : ಟೀ ಜೊತೆ ಬಿಸ್ಕತ್ ಇರ್ಲೇಬೇಕು ಎನ್ನುವವರಿದ್ದಾರೆ. ಬಿಸ್ಕತ್ ಆ ಕ್ಷಣಕ್ಕೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಮೈದಾ, ಸಕ್ಕರೆ ಮತ್ತು ಎಣ್ಣೆಯನ್ನು ಬಳಸಿ ತಯಾರಿಸುವ ಬಿಸ್ಕತ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ತೂಕವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಬಿಸ್ಕತ್ ಇದ್ರೆ ತಿನ್ಬೇಕು ಅನ್ನಿಸೋದು ಸಾಮಾನ್ಯ. ಹಾಗಾಗಿ ಬಿಸ್ಕತ್ ಖರೀದಿಗೆ ಮಾಡೋಕೆ ಹೋಗ್ಬೇಡಿ. ಬಿಸ್ಕತ್ ನಿಂದ ದೂರವಿದ್ದಷ್ಟು ಆರೋಗ್ಯ ವೃದ್ಧಿ ಜೊತೆ ತೂಕ ಕಡಿಮೆ ಮಾಡ್ಬಹುದು.