Esophagus Cancer: ಪದೆ ಪದೇ ತೇಗುವಂತಾದರೆ ನಿರ್ಲಕ್ಷ್ಯ ಬೇಡ!

ಎದೆಯಲ್ಲಿ ಉರಿಯಾಗುವುದು, ಅತಿಯಾಗಿ ತೇಗು ಬರುವುದು ಅನೇಕರ ಸಮಸ್ಯೆ. ಇದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ, ಇದು ಅನ್ನನಾಳದ ಕ್ಯಾನ್ಸರ್ ಲಕ್ಷಣವೂ ಆಗಿರಬಹುದು.
 

If you have indigestion it may symptom of Esophagus Cancer

ಎದೆಯಲ್ಲಿ ಉರಿಯಾಗುವುದು (Burnign in Chest) ಸಾಮಾನ್ಯವಾಗಿ ಪಿತ್ತದೋಷದಿಂದ (Acidity) ಎನ್ನುವುದು ಎಲ್ಲರ ನಂಬಿಕೆ. ಅದು ನಿಜವೇನೋ ಹೌದು. ಆದರೆ, ಎದೆಯುರಿ, ಅಜೀರ್ಣದ (Indigestion) ಸಮಸ್ಯೆ ಅನ್ನನಾಳದ ಕ್ಯಾನ್ಸರ್ (Esophagus Cancer) ನಿಂದಲೂ ಉಂಟಾಗುತ್ತದೆ. ಕೆಲವರಿಗೆ ಪದೇ ಪದೆ ಅಜೀರ್ಣವಾಗುತ್ತದೆ. ಅದನ್ನವರು ನಿರ್ಲಕ್ಷಿಸಿದರೆ ಅನಾಹುತ ಗ್ಯಾರೆಂಟಿ. ಏಕೆಂದರೆ, ಪದೇ ಪದೆ ಅಜೀರ್ಣವಾಗುವುದು ಕ್ಯಾನ್ಸರ್ ಲಕ್ಷಣವೂ ಆಗಿರಬಹುದು. 

ತಜ್ಞರ ಪ್ರಕಾರ, ಅನ್ನನಾಳದ ಕ್ಯಾನ್ಸರ್ ಆಗಿದ್ದಾಗ ವ್ಯಕ್ತಿಗೆ ಪದೇ ಪದೆ ಅಜೀರ್ಣವಾಗುತ್ತದೆ. ಬಾಯಿಯಿಂದ ತಿಂದ ಆಹಾರ ಸೀದಾ ಹೊಟ್ಟೆಗೆ ಹೋಗಿ ಬೀಳುವ ಕೊಳವೆಯೇ ಅನ್ನನಾಳ. ಇದನ್ನು ಫುಡ್ ಪೈಪ್ (Food Pipe) ಎಂದೂ ಹೇಳಬಹುದು. ಅನ್ನನಾಳದ ಕ್ಯಾನ್ಸರಿನ ಆರಂಭಿಕ ಲಕ್ಷಣಗಳಲ್ಲಿ ಅಜೀರ್ಣವಾಗುವುದೂ ಒಂದು. ಹೀಗಾಗಿ, ಈ ಕುರಿತು ಹೆಚ್ಚು ಎಚ್ಚರಿಕೆ ವಹಿಸುವುದು ಸೂಕ್ತ. ಎದೆಯಲ್ಲಿ ಉರಿಯಾಗುವುದು, ಪದೇ ಪದೆ ಅಜೀರ್ಣವಾಗುತ್ತಿದ್ದರೆ ವೈದ್ಯರನ್ನು ಕಾಣಬೇಕು.

ತುಂಬಾ ತೇಗಿದರೆ ಏನಾಗುತ್ತೆ?

ಅನ್ನನಾಳದ ಕ್ಯಾನ್ಸರ್ ಉಂಟಾದಾಗ ಬಾಯಿಯಲ್ಲಿ ಜೊಲ್ಲು (Saliva) ಕಡಿಮೆಯಾಗುವುದು, ಅನ್ನನಾಳದಿಂದ ಆಸಿಡ್ (Acid) ಹಿಮ್ಮುಖವಾಗಿ ಚಲಿಸಿ, ಎದೆಯಲ್ಲಿ ಉರಿ ಉಂಟುಮಾಡುತ್ತದೆ. ಎದೆಯಲ್ಲಿ ನಿರಂತರವಾಗಿ ಉರಿ ಇರುವ ತೊಂದರೆಗೆ ಗ್ಯಾಸ್ಟ್ರೊ ಏಸೋಫೆಗಸ್ ರಿಫ್ಲಕ್ಷನ್ ಡಿಸೀಸ್ (GORD) ಎಂದು ಕರೆಯಲಾಗುತ್ತದೆ. ಹೀಗಾದಾಗ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಸಿಡ್ ಅಂಶ ಅನ್ನನಾಳದ ಮೂಲಕ ಎದೆಯವರೆಗೆ ಬರುತ್ತದೆ. ಅನ್ನನಾಳದ ಕೆಳಭಾಗದಲ್ಲಿ ಇರುವ ಮಾಂಸಖಂಡಗಳಿಗೆ (Muscles) ಹಾನಿಯಾಗುವ ಹಾಗೂ ಈ ಮಾಂಸಖಂಡಗಳು ದುರ್ಬಲಗೊಳ್ಳುವುದರಿಂದ  ಸಮಸ್ಯೆ ಉಂಟಾಗುತ್ತದೆ. ಈ ಭಾಗದ ಮಾಂಸಖಂಡಗಳಿಗೆ ಹಾನಿಯಾಗುವುದು ಕ್ಯಾನ್ಸರ್ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇಲ್ಲಿ ಹಾನಿಗೊಳಗಾದ ಕೋಶಗಳು ಅಲ್ಲಿಯೇ ಗಟ್ಟಿಯಾಗಿ ಟ್ಯೂಮರ್ (Tumor) ಅಥವಾ ಗಡ್ಡೆಯ ರೂಪ ಪಡೆದುಕೊಳ್ಳುತ್ತವೆ. ಅಲ್ಲಿ ಗಡ್ಡೆ ಬೆಳವಣಿಗೆಯಾದರೆ ಹೊಟ್ಟೆಗೆ ಸಂಬಂಧಿಸಿದ ಹಲವಾರು ತೊಂದರೆಗಳು ಒಂದಕ್ಕೊಂದು ಸೇರಿಕೊಳ್ಳುತ್ತವೆ.
ಸಂಶೋಧನೆ ಏನು ಹೇಳುತ್ತದೆ?

If you have indigestion it may symptom of Esophagus Cancer


ಯುಕೆ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಪ್ರಕಾರ, ಅನ್ನನಾಳದ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಮಾಡಿದರೆ ಅದರಿಂದ ಬಚಾವಾಗುವ ಸಾಧ್ಯತೆ ಶೇಕಡ 4ರಷ್ಟು ಹೆಚ್ಚಾಗುತ್ತದೆ. ಹೀಗಾಗಿ, ಪದೇ ಪದೆ ಎದೆಯುರಿ, ಅಜೀರ್ಣ ಮೊದಲಾದ ಸಮಸ್ಯೆ ಕಂಡುಬಂದರೆ ಅಲಕ್ಷಿಸುವುದು ಸಲ್ಲದು. ಎದೆಯಲ್ಲಿ ನೋವು ಕಂಡುಬಂದರೂ ಗಮನ ನೀಡಬೇಕಾಗುತ್ತದೆ.

ಎದೆಯಲ್ಲಿ ಉರಿಯಾಗೋದ್ಯಾಕೆ?
ನಿರಂತರವಾಗಿ ಎದೆಯಲ್ಲಿ ಉರಿ ಸುಖಾಸುಮ್ಮನೆ ಉಂಟಾಗುವುದಿಲ್ಲ. ಕೆಲವು ಕಾರಣವಂತೂ ಇದ್ದೇ ಇರುತ್ತದೆ. ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ,  ಕೆಲವು ಕಾರಣಗಳಿಂದಲೂ ಎದೆಯಲ್ಲಿ ಉರಿ ಉಂಟಾಗುತ್ತದೆ. 
•    ಕೆಲವು ಆಹಾರಗಳಿಂದ (Food) ಸದಾಕಾಲ ಎದೆಯಲ್ಲಿ ಉರಿಯಾಗಬಹುದು. ಕಾಫಿ, ಟೊಮ್ಯಾಟೋ, ಚಾಕೋಲೇಟ್, ಮಸಾಲೆಯುಕ್ತ ಪದಾರ್ಥ (Spicy) ಇತ್ಯಾದಿ.
•    ಅಧಿಕ ತೂಕ (Over Weight) ಹೊಂದಿದ್ದರೆ
•    ಧೂಮಪಾನ (Smoking)
•    ಗರ್ಭ ಧರಿಸಿರುವಾಗ (Pregnancy)
•    ಒತ್ತಡ ಮತ್ತು ಆತಂಕದ ಸಮಸ್ಯೆ (Stress and Anxiety)
•    ಕೆಲವು ಔಷಧಗಳು (Some Medicine)

ಗರ್ಭಿಣಿ ಬೆಳ್ಳುಳ್ಳಿ ಸೇವಿಸುವುದು ಅಪಾಯವೇ?

ಅನ್ನನಾಳದ ಕ್ಯಾನ್ಸರ್ ಲಕ್ಷಣಗಳು
•    ಜೊಲ್ಲು ಸುರಿಸುವಿಕೆ ಕಡಿಮೆಯಾಗುವುದು.
•    ಏನೋ ಅನಾರೋಗ್ಯವಾದಂತೆ ಭಾಸವಾಗುವುದು.
•    ಎದೆಯಲ್ಲಿ ಉರಿ
•    ಪದೇ ಪದೆ ಅತಿಯಾಗಿ ತೇಗು ಬರುವುದು.
•    ದೀರ್ಘ ಅವಧಿಯವರೆಗೆ ಕಫದ ಸಮಸ್ಯೆ
•    ದನಿಯಲ್ಲಿ ಬದಲಾವಣೆ ಉಂಟಾಗುವುದು.
•    ಹಸಿವು ಕಡಿಮೆಯಾಗುವುದು ಹಾಗೂ ಕಾರಣವಿಲ್ಲದ ತೂಕದಲ್ಲಿ ಇಳಿಕೆ.
•    ಗಂಟಲಲ್ಲಿ ನೋವು, ಎದೆಯ ಮಧ್ಯಭಾಗದಲ್ಲಿ ನೋವು.

ಬಹಳಷ್ಟು ಜನರಿಗೆ ಎದೆಯಲ್ಲಿ ಉರಿ, ತೇಗು ಬರುವ ಸಮಸ್ಯೆ ಸಾಮಾನ್ಯವಾಗಿ ಇರುತ್ತದೆ. ಅವೆಲ್ಲವೂ ಅನ್ನನಾಳದ ಕ್ಯಾನ್ಸರ್ ಇರಬಹುದೆಂದು ಹೆದರುವ ಅಗತ್ಯವಿಲ್ಲ. ಏಕೆಂದರೆ, ಇದು ವಯಸ್ಸಾದ ಬಳಿಕ ಉಂಟಾಗುವ ಸಾಧ್ಯತೆ ಹೆಚ್ಚು. 75 ವರ್ಷ ಮೇಲ್ಪಟ್ಟ ಪುರುಷರಲ್ಲಿ ಹಾಗೂ ದೀರ್ಘಕಾಲದ ಅನಾರೋಗ್ಯ ಹೊಂದಿರುವವರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತದೆ. 

Latest Videos
Follow Us:
Download App:
  • android
  • ios