Fatty Liver: ಹೊಟ್ಟೆ ದೊಡ್ಡದಾಗ್ತಾ ಇದ್ಯಾ? ಇವುಗಳನ್ನು ಪಾಲನೆ ಮಾಡಿ

ಲಿವರ್ ಹಾನಿಗೊಳಗಾದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನಮ್ಮ ದೇಹದ ಅತಿಮುಖ್ಯ ಅಂಗಗಳಲ್ಲಿ ಒಂದಾಗಿರುವ ಲಿವರ್ ಅನ್ನು ಚೆನ್ನಾಗಿ ನೋಡಿಕೊಳ್ಳಬೇಕಾದುದು ಅಗತ್ಯ. ಲಿವರ್ ಚೆನ್ನಾಗಿರಲು ಆಹಾರಶೈಲಿ ಅತ್ಯಂತ ಪ್ರಮುಖ.
 

If you do not want fatty liver do eat some foods and away from some

ಜನಸಮಾನ್ಯರು ದೈನಂದಿನ ಕೆಲಸಕಾರ್ಯಗಳಿಗೆ ಓಡಾಡುವ ಬಸ್ ಸ್ಟ್ಯಾಂಡೋ, ದಿನಸಿ ಅಂಗಡಿಗಳೋ, ಎಲ್ಲಾದರೂ ಒಮ್ಮೆ ಸ್ವಲ್ಪ ಸಮಯ ನಿಂತು ಜನರನ್ನು ವೀಕ್ಷಿಸಿ. ಬಹಳಷ್ಟು ಜನರ ಹೊಟ್ಟೆ ದಪ್ಪಗಿರುತ್ತದೆ. ಪುರುಷರು, ಮಹಿಳೆಯರ ಭೇದವಿಲ್ಲದೆ ಎಲ್ಲರಲ್ಲೂ ಹೊಟ್ಟೆ, ಸೊಂಟ ದಪ್ಪಗಾಗುವ ಸಮಸ್ಯೆ ಇತ್ತೀಚೆಗೆ ಸಾಕಷ್ಟು ಹೆಚ್ಚಿದೆ. ಪರಿಣಾಮವಾಗಿ, ಬಹಳಷ್ಟು ಜನರಲ್ಲಿ ಫ್ಯಾಟಿ ಲಿವರ್ ಸಮಸ್ಯೆಯೂ ಹೆಚ್ಚಿದೆ. ಇದರಿಂದಾಗಿ ಮಧುಮೇಹದಂತಹ ಜೀವನಶೈಲಿ ತೊಂದರೆಗಳು ಕಾಡುತ್ತಿವೆ. ನಿಮಗೆ ಗೊತ್ತಿದೆ, ಲಿವರ್ ನಮ್ಮ ದೇಹದ ಮಹತ್ವಪೂರ್ಣ ಅಂಗ. ಲಿವರ್ ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲವೆಂದಾದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಲಿವರ್ ಅಥವಾ ಯಕೃತ್ತು ಹಾಳಾಗಲು ನಮ್ಮದೇ ಜೀವನಶೈಲಿ ಅಥವಾ ಆಹಾರ-ವಿಹಾರಗಳು ಪ್ರಮುಖ ಕಾರಣವಾಗಿವೆ. ಇದರಿಂದಾಗಿಯೇ ಇತ್ತೀಚೆಗೆ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಅದರ ಕಾರ್ಯಕ್ಷಮತೆ ಕುಂದುತ್ತದೆ. ಫ್ಯಾಟಿ ಲಿವರ್ ಸಮಸ್ಯೆ ಎರಡು ರೀತಿಯಲ್ಲಿರುತ್ತದೆ. ಒಂದು ಆಲ್ಕೋಹಾಲಿಕ್ ಫ್ಯಾಟಿ ಲಿವರ್. ಇದು ಅಧಿಕ ಮದ್ಯ ಸೇವನೆಯಿಂದ ಉಂಟಾಗುವಂಥದ್ದು. ಇನ್ನೊಂದು ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್. ಇದು ಆಹಾರದ ಬಗ್ಗೆ ಎಚ್ಚರಿಕೆ ವಹಿಸದೆ ಉಂಟಾಗುವಂಥದ್ದು.

ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ (Non Alcoholic Fatty Liver) ಹೊಂದಿರುವವರು ತಮ್ಮ ಜೀವನಶೈಲಿಯ (Lifestyle) ಬಗ್ಗೆ ಅರಿತುಕೊಳ್ಳಬೇಕು. ಅನಾರೋಗ್ಯಕರ (Unhealthy) ಪದಾರ್ಥಗಳ ಸೇವನೆಯಿಂದಲೂ ಫ್ಯಾಟಿ ಲಿವರ್ ಹೆಚ್ಚುತ್ತದೆ. ಹೀಗಾಗಿ, ಹೊಟ್ಟೆ (Stomach) ದಪ್ಪಗಾಗದಿರಲು ಹಾಗೂ ಅದನ್ನು ನಿಯಂತ್ರಿಸಲು ಕೆಲವು ಆಹಾರಗಳನ್ನು ಸೇವಿಸಬೇಕು, ಹಾಗೆಯೇ ಕೆಲವು ಆಹಾರಗಳನ್ನು ಸೇವಿಸಬಾರದು. ಮುಖ್ಯವಾಗಿ, ಲಿವರ್ (Liver) ಚೆನ್ನಾಗಿರಲು ನಾರಿನಂಶ (Fibre) ಅಧಿಕವಾಗಿರುವ ಆಹಾರ ಸೇವಿಸುವುದು ಉತ್ತಮ ವಿಧಾನ. 

Health Tips: ಪದೇ ಪದೇ ರಾತ್ರಿ ಎಚ್ಚರವಾಗ್ತಿದ್ದರೆ ಎಚ್ಚರ: ಈ ಕಾಯಿಲೆ ಇರಬಹುದು!

ಲಿವರ್ ಆರೋಗ್ಯಕ್ಕೆ ಅಗತ್ಯ ಪದಾರ್ಥಗಳು
•    ಓಟ್ಸ್ ನಲ್ಲಿ (Oats) ನಾರಿನಂಶ ಹೇರಳವಾಗಿರುತ್ತದೆ. ಇದನ್ನು ತಿನ್ನುವುದರಿಂದ ದೀರ್ಘ ಕಾಲ ಹೊಟ್ಟೆ ತುಂಬಿರುವ ಭಾವನೆ ಬರುತ್ತದೆ. ಆಗ ಆಹಾರವನ್ನು (Food) ಕಡಿಮೆ ಪ್ರಮಾಣದಲ್ಲಿ ಸೇವಿಸಲು ಸಾಧ್ಯವಾಗುತ್ತದೆ. 
•    ಬಟರ್ ಪ್ರೂಟ್ (Butter fruit) ಅಥವಾ ಬೆಣ್ಣೆಹಣ್ಣಿನಲ್ಲಿ ಉತ್ತಮ ಕೊಬ್ಬಿರುತ್ತದೆ. ಅಲ್ಲದೆ, ಇದರಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಇರುತ್ತದೆ. ಬಟರ್ ಪ್ರೂಟ್ ಹಾನಿಗೊಳಗಾದ ಲಿವರ್ ಅನ್ನೂ ಸರಿಪಡಿಸಬಲ್ಲದು, ಕೊಬ್ಬನ್ನು (Fat) ಕರಗಿಸಬಲ್ಲದು.
•    ಸೋಯಾದಿಂದ ತಯಾರಿಸುವ ಟೋಫು (Tofu) ಲಿವರ್ ಗೆ ಉತ್ತಮ ಆಹಾರ ಪದಾರ್ಥ. ಇದು ಲಿವರ್ ನಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಪ್ರೊಟೀನ್ (Protein) ಭರಿತವಾಗಿರುವ ಟೋಫು ಆರೋಗ್ಯಕ್ಕೆ ಉತ್ತಮ.

•    ತರಕಾರಿ (Vegetables), ಕೆಲವು ಹಣ್ಣುಗಳ (Fruits) ಸೇವನೆ ಲಿವರ್ ಆರೋಗ್ಯಕ್ಕೆ ಒಳ್ಳೆಯದು. ಸೌತೆಕಾಯಿ, ಕಿತ್ತಳೆ ಸೇರಿದಂತೆ ಹಲವು ಹಣ್ಣು, ತರಕಾರಿಗಳಲ್ಲಿರುವ ವಿಟಮಿನ್ ಸಿ ಲಿವರ್ ಗೆ ಉತ್ತಮ. ದಾಳಿಂಬೆ ಹಣ್ಣಿನಲ್ಲಿರುವ ಆಂಟಿಆಕ್ಸಿಡಂಟ್ ಲಿವರ್ ಗೆ ಒಳ್ಳೆಯದು. ಹಸಿರುಸೊಪ್ಪುಗಳು (Green Leaf) ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಸಿರುಸೊಪ್ಪುಗಳ ಸೇವನೆಯಿಂದ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ. ಹಾಗೆಯೇ, ಬೆಳ್ಳುಳ್ಳಿ (Garlic) ಸಹ ಲಿವರ್ ಆರೋಗ್ಯಕ್ಕೆ ಪರಿಣಾಮಕಾರಿ. ಕೊಬ್ಬನ್ನು ಕರಗಿಸುವಲ್ಲಿ ಪಾತ್ರ ವಹಿಸುತ್ತದೆ. 

ಪ್ರತಿದಿನ ತಿನ್ನುವ ಈ ಆಹಾರಗಳಿಂದ ಆಗುತ್ತೆ ಲಿವರ್ ಡ್ಯಾಮೇಜ್

ಇವುಗಳಿಂದ ದೂರವಿರಿ
•    ಸಕ್ಕರೆ (Sugar) ಲಿವರ್ ಗೆ ಒಳ್ಳೆಯದಲ್ಲ. ರಿಫೈನ್ಡ್ ಸಕ್ಕರೆ ಮತ್ತು ಅಧಿಕ ಫ್ರಕ್ಟೋಸ್ ಭರಿತ ಸಕ್ಕರೆಯಿಂದ ಲಿವರ್ ನಲ್ಲಿ ಕೊಬ್ಬು ಜಮಾವಣೆಯಾಗುತ್ತದೆ. ಒಂದೊಮ್ಮೆ ನಿಮ್ಮ ತೂಕ (Weight) ಕಡಿಮೆ ಇದ್ದರೂ ಸಕ್ಕರೆ ಹಾಗೂ ಸಕ್ಕರೆಯುಕ್ತ ಪದಾರ್ಥಗಳನ್ನು ದೂರವಿಡಿ. ತೀರ ಅಪರೂಪಕ್ಕೆ ಒಮ್ಮೆ ಸೇವಿಸಿದರೆ ಪರವಾಗಿಲ್ಲ. 
•    ವಿಟಮಿನ್ ಎ ಅಂಶ ಕೆಂಪು, ಕೇಸರಿ, ಹಳದಿ ತರಕಾರಿ-ಹಣ್ಣುಗಳಲ್ಲಿ ದೊರೆಯುತ್ತದೆ. ಆದರೆ, ವಿಟಮಿನ್ ಎ ಸಪ್ಲಿಮೆಂಟ್ (Supplement) ಲಿವರ್ ಅನ್ನು ಹಾಳುಗೆಡವುತ್ತದೆ. ಇದನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ. 
•    ಸಾಫ್ಟ್ ಡ್ರಿಂಕ್ಸ್ (Soft Drinks) ಲಿವರ್ ಗೆ ತೀವ್ರ ಹಾನಿಯುಂಟು ಮಾಡುತ್ತದೆ. ಸೋಡಾವನ್ನು ಪದೇ ಪದೆ ಸೇವನೆ ಮಾಡುವುದರಿಂದ ಲಿವರ್ ಕುಂದುತ್ತದೆ. 
•    ಮದ್ಯಪಾನದಿಂದ (Alcohol) ದೂರವಿರಬೇಕು. ಅಥವಾ ದಿನಕ್ಕೆ ಒಂದು ಡ್ರಿಂಕ್ ಗಿಂತ ಹೆಚ್ಚು ಸೇವನೆ ಮಾಡಬಾರದು. 
 

Latest Videos
Follow Us:
Download App:
  • android
  • ios