ಹೈದರಾಬಾದ್(ಜು. 27) ಕೊರೋನಾದಿಂದ ಗುಣಮುಖರಾಗಿದ್ದೇವೆ ಎಂದು ಸೋಂಕು ತಗುಲಿ ಡಿಸ್ಚಾರ್ಜ್ ಆದವರು ನೆಮ್ಮದಿಯಿಂದ ಬದುಕುವ ಹಾಗಿಲ್ಲ. ಹೈದರಾಬಾದಿನಿಂದ ಬಂದ ಸುದ್ದಿ ಕೊರೋನಾದ ಮತ್ತೊಂದು ಕತೆಯನ್ನು ನಿಮ್ಮ ಮುಂದ ಹೇಳುತ್ತಿದೆ.

ಹೈದಾರಾಬಾದ್  ESIC  ಆಸ್ಪತ್ರೆಯ ಸ್ಟಾಫ್ ನರ್ಸ್  ಒಬ್ಬರ ಕತೆ ಇದು.  ಕಳೆದ ವಾರ ಸ್ಟಾಫ್ ನರ್ಸ್ ಕೊರೋನಾ ಪಾಸಿಟಿವ್ ಆಗಿದ್ದಾರೆ.  ಒಂದು ತಿಂಗಳು ಕಾಲ ಕ್ವಾರಂಟೈನ್ ಆಗಿದ್ದ ಅವರಿಗೆ ಈ ಹಿಂದೆ ನೆಗೆಟಿವ್ ಬಂದಿತ್ತು.  ಅಂದರೆ ಒಮ್ಮೆ ಕೊರೋನಾ ಕಾಣಿಸಿಕೊಂಡು ನೆಗೆಟಿವ್ ವರದಿ ಬಂದಿದ್ದವರಿಗೆ ಮತ್ತೆ ಪಾಸಿಟಿವ್ ಬಂದಿದೆ.

ಹೈದಾರಾಬಾದ್ ನಲ್ಲಿ ಇದು ಈ ರೀತಿಯ ಎರಡನೇ ಪ್ರಕರಣ.  30 ವರ್ಷದ ಪುರುಷ ಸ್ಟಾಫ್ ನರ್ಸ್ ಇದೀಗ ಮತ್ತೆ ಸೋಂಕಿಗೆ ಗುರಿಯಾಗಿದ್ದಾರೆ. ಜೂನ್ 15  ರಂದು ಇವರಿಗೆ ಮೊದಲ ಸಾರಿ ಪಾಸಿಟಿವ್ ಬಂದಿತ್ತು. ಇದಾದ ಮೇಲೆ ಐಸೋಲೇಶನ್ ಪಡೆದುಕೊಂಡು ನೆಗೆಟಿವ್ ಬಂದ ಕಾರಣಕ್ಕೆ ಜೂನ್  26  ರಂದು ಬಿಡುಗಡೆಯಾಗಿದ್ದರು.  ಮತ್ತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಲಕ್ಷ ದಾಟಿದ ಕರ್ನಾಟಕದ ಕೊರೋನಾ ಸೋಂಕಿತರ ಸಂಖ್ಯೆ

ಆದರೆ ಕಳೆದ ವಾರ ಕೆಮ್ಮು ಮತ್ತು ಥಂಡಿ ಲಕ್ಷಣ ಕಂಡುಬಂದಿದೆ.  ಪರೀಕ್ಷೆ ಮಾಡಿಸಿದಾಗ ಜುಲೈ  20  ರಂದು ಮತ್ತೆ ಪಾಸಿಟಿವ್ ಬಂದಿದೆ.  ಇದಾದ ಎರಡು ದಿನದ ನಂತರ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಇವರ ಹೆಂಡತಿ ಮತ್ತು ಎರಡೂವರೆ ವರ್ಷದ ಮಗಳು ಮತ್ತು ತಾಯಿಗೂ ಪಾಸಿಟಿವ್ ಬಂದಿದೆ.

ಎರಡನೇ ಸಾರಿ ಅಟ್ಯಾಕ್ ಆಗಿದ್ದು ತುಂಬಾ ತೀವ್ರವಾಗಿದೆ. ಜವರ ಮತ್ತು ಕೆಮ್ಮು ವಿಪರೀತವಾಗಿದೆ. ನನಗೀಗ ಆಕ್ಸಿಜನ್ ಸಪೋರ್ಟ್ ಬೇಕಾಗಿದೆ ಎಂದು ಸೋಂಕಿತ ಹೇಳಿದ್ದಾರೆ.