Asianet Suvarna News Asianet Suvarna News

ಕರ್ನಾಟಕದಲ್ಲಿ ಅಬ್ಬರಿಸಿ ಬೊಬ್ಬಿರಿದ ಕೊರೋನಾ: ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಕೊರೋನಾ ಅನ್ನೋ ಮಹಾಮಾರಿ ಹೆಸರು ಹೇಳಿದ್ರೆ ಸಾಕು, ಇಡೀ ಜಗತ್ತೇ ಬೆಚ್ಚಿ ಬೀಳ್ತಿದೆ. ಜನರ ಜೀವ ಬಾಯಿಗೆ ಬಂದಂತಾಗ್ತಿದೆ. ಮನೆಯಿಂದ ಕಾಲಿಡೋಕೂ ಎದೆಯೇ ಝೆಲ್ ಅಂತಿದೆ. ಯಾಕಂದ್ರೆ ಕೊರೋನಾ ಇಡೀ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಇದೀಗ ಕೊರೋನಾ ಸೋಂಕತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ.

5324 New COVID-19 cases reported July 27th  Karnataka Cross 1 Lakh Coronavirus
Author
Bengaluru, First Published Jul 27, 2020, 7:34 PM IST

ಬೆಂಗಳೂರುಮ (ಜುಲೈ.27): ಸೋಮವಾರ ಮತ್ತೆ ಕರ್ನಾಟಕದ 30 ಜಿಲ್ಲೆಗಳಲ್ಲಿ ಕೊರೋನಾ ಅಬ್ಬರಿಸಿ ಬೊಬ್ಬಿರಿದಿದ್ದು, ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. 

ಭಾನುವಾರ ಸಾಯಂಕಾಲದಿಂದ ಸೋಮವಾರ ಸಾಯಂಕಾಲದವರೆಗಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 5324 ಕೋವಿಡ್ 19 ಕೇಸ್‌ ಪತ್ತೆಯಾಗಿವೆ. ಈ ಮೂಲಕ  ಸೋಂಕಿತರ ಸಂಖ್ಯೆ (101465) 1 ಲಕ್ಷದ ಗಡಿ ದಾಟಿದೆ. 

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಇಲ್ಲ: ಸಿಎಂ ಬಿಎಸ್‌ವೈ ಸ್ಪಷ್ಟನೆ

ಇಂದು (ಸೋಮವಾರ) ಒಟ್ಟು 1847 ಮಂದಿ ಗುಣಮುಖರಾಗಿ ಡಿಸ್ಚಾರ್ಜ್  ಆಗಿದ್ದು, ಒಟ್ಟು 75 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 

ಒಟ್ಟು ರಾಜ್ಯದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 37,685 ಇದ್ದು,  61,819 ಸಕ್ರಿಯ ಪ್ರಕರಣಗಳಿವೆ. ಇನ್ನು ಕೊರೋನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 1953ಕ್ಕೇರಿದೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.

ಜಿಲ್ಲಾವಾರ ಅಂಕಿ-ಅಂಶ
ಬೆಂಗಳೂರು ನಗರ 1470, ಬಳ್ಳಾರಿ 840, ಕಲಬುರಗಿ 631, ಮೈಸೂರು  296, ಉಡುಪಿ 225, ಧಾರವಾಡ 193, ಬೆಳಗಾವಿ 155, ಕೋಲಾರ 142, ಬೆಂಗಳೂರು ಗ್ರಾಮಾಂತರ 138, ರಾಯಚೂರು 120, ದಕ್ಷಿಣ ಕನ್ನಡ 119, ವಿಜಯಪುರ ಮತ್ತು ದಾವಣಗೆರೆ 110, ತುಮಕೂರು 89, ಶಿವಮೊಗ್ಗ - 76, ಹಾಸನ 66, ಯಾದಗಿರಿ 64, ಗದಗ  63, ರಾಮನಗರ 62, ಮಂಡ್ಯ 56, ಚಿತ್ರದುರ್ಗ 51, ಬೀದರ್ 42, ಚಿಕ್ಕಬಳ್ಳಾಪುರ 40, ಉತ್ತರ ಕನ್ನಡ 32, ಕೊಪ್ಪಳ 28, ಬಾಗಲಕೋಟೆ ಮತ್ತು ಹಾವೇರಿ 27, ಚಿಕ್ಕಮಗಳೂರು 26, ಚಾಮರಾಜನಗರ 16, ಕೊಡಗು 10 ಸೇರಿದಂತೆ ಒಟ್ಟು 5324 ಜನರಿಗೆ ಕೊರೋನಾ ಪಾಸಿಟಿವ್  ದೃಢಪಟ್ಟಿದೆ. 

Follow Us:
Download App:
  • android
  • ios