Mental Health : ಈ ಟಚ್ಚಲಿ ಏನೇನೋ ಇದೆ…

ಯಾವುದೇ ವ್ಯಕ್ತಿ ದುಃಖದಲ್ಲಿದ್ದಾಗ ಆತನನ್ನು ಅಪ್ಪಿಕೊಂಡ್ರೆ ಅಥವಾ ಆತನ ತಲೆ ಸವರಿದ್ರೆ ಆತ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗ್ತಾನೆ. ಮನಸ್ಸಿಗೆ ಧೈರ್ಯ ತುಂಬುವು ಒಂದು ವಿಧಾನ ಸ್ಪರ್ಶ. ಈ ಟಚ್ ನಿಂದ ಏನೆಲ್ಲ ಲಾಭವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
 

How Touch Therapy Can Release Your Stress And Make You Happy

ಸ್ಪರ್ಶಕ್ಕೆ ಅದ್ಭುತ ಶಕ್ತಿಯಿದೆ. ಯಾವುದೇ ವ್ಯಕ್ತಿ ತುಂಬಾ ಕೋಪಗೊಂಡಿದ್ದಾಗ ಆತನ ಭುಜದ ಮೇಲೆ ಪ್ರೀತಿಯಿಂದ ಕೈ ಇಟ್ಟರೆ ಅಥವಾ ತಲೆಯನ್ನು ಸವರಿದ್ರೆ ಕೋಪ ಶಾಂತವಾಗುತ್ತದೆ. ಈ ಸ್ಪರ್ಶದಿಂದ ಆರಾಮ ಸಿಗುತ್ತದೆ. ವ್ಯಕ್ತಿಯ ಕೋಪ ತಣ್ಣಗಾಗಿ ಆತ ಭಾವುಕನಾಗುವಂತೆ ಮಾಡುತ್ತದೆ. ಪ್ರೀತಿಯ ಸ್ಪರ್ಶ ನಿಮ್ಮ ಮನಸ್ಸುನ್ನು ಶಾಂತಗೊಳಿಸುತ್ತದೆ. ನೀವು ಸಮಾಧಾನಗೊಳ್ಳಲು ನೆರವಾಗುತ್ತದೆ. ವಿಜ್ಞಾನಿಗಳು ಇದನ್ನು ಸ್ಪರ್ಶ ಚಿಕಿತ್ಸೆಯ ಅದ್ಭುತ ಎಂದು ಕರೆಯುತ್ತಾರೆ. ಪ್ರೀತಿಯ ಸ್ಪರ್ಶ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ವೈಜ್ಞಾನಿಕ ಅಧ್ಯಯನಗಳು ಹೇಳಿವೆ.

ಭಾರತ (India) ದಲ್ಲಿ ಶತ ಶತಮಾನಗಳಿಂದಲೂ ಚಾಲ್ತಿಯಲ್ಲಿದೆ  ಸ್ಪರ್ಶ (Touch) ಚಿಕಿತ್ಸೆ : ಭಾರತದಲ್ಲಿ ಸ್ಪರ್ಶ ಚಿಕಿತ್ಸೆ ಹೊಸದಲ್ಲ. ಶತ ಶತಮಾನಗಳಿಂದಲೂ ಸ್ಪರ್ಶ ಚಿಕಿತ್ಸೆ ಜಾರಿಯಲ್ಲಿದೆ. ಸ್ಪರ್ಶದಿಂದ ವ್ಯಕ್ತಿಯ ಸ್ನಾಯು (muscle) ಗಳ ಒತ್ತಡ ಕಡಿಮೆಯಾಗುತ್ತದೆ. ವ್ಯಕ್ತಿಯ ಭಾವನೆ ನಿಯಂತ್ರಣಕ್ಕೆ ಬರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ. ಸ್ಪರ್ಶ ಸಹಾನುಭೂತಿ ಅಥವಾ ಕರುಣೆ ಭಾವನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಎಲ್ಲರಿಗೂ ಸ್ಪರ್ಶ ಇಷ್ಟವಾಗುತ್ತದೆ. ಸ್ಪರ್ಶದಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. 

ಸ್ಪರ್ಶದ ಬಗ್ಗೆ ಸಂಶೋಧನೆ ಹೇಳೋದೇನು ? : ಡಿಪಾವ್ ವಿಶ್ವವಿದ್ಯಾಲಯದ ಪ್ರೊಫೆಸರ್ ಟಿ ಹೆರ್ಟೆನ್‌ಸ್ಟೈನ್ ಸ್ಪರ್ಶದ ಬಗ್ಗೆ ಪ್ರಯೋಗ ಮಾಡಿದ್ದಾರೆ. ಅವರು ಒಬ್ಬ ವ್ಯಕ್ತಿಯನ್ನು ಅನೇಕ ರೀತಿಯಲ್ಲಿ ಸ್ಪರ್ಶಿಸಿದ್ದಾರೆ. ಸ್ಪರ್ಶಕ್ಕೊಳಗಾದ ವ್ಯಕ್ತಿ, ಸಂಶೋಧಕರನ್ನು ನೋಡಿರಲಿಲ್ಲ. ಬರೀ ಅವರ ಸ್ಪರ್ಶದ ಮೂಲಕವೇ ಅವರ ಭಾವನೆಯನ್ನು ಪತ್ತೆ ಹಚ್ಚಿದ್ರು. ಸುಮಾರು 50ಕ್ಕರೂ ಹೆಚ್ಚು ಭಾವನೆಗಳನ್ನು ಅವರು ಸ್ಪರ್ಶದ ಮೂಲಕವೇ ಗುರುತಿಸಿದ್ರು. ಕೋಪ, ಭಯ, ಆತಂಕ, ಪ್ರೀತಿ ಇತ್ಯಾದಿ ಇದ್ರಲ್ಲಿ ಸೇರಿತ್ತು. ಪ್ರೀತಿಯ ಭಾವನೆಯಿಂದ ಸ್ಪರ್ಶಿಸಿದಾಗ ವ್ಯಕ್ತಿಯ ಮನಸ್ಸು ಅತ್ಯಂತ ಶಾಂತವಾಗಿತ್ತು ಮತ್ತು ಒತ್ತಡ ಕಡಿಮೆಯಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

Healthy Food: ಮಧ್ಯಾಹ್ನ ಮೊಸರನ್ನ ತಿಂದ್ರೆ ಸಿಕ್ಕಾಪಟ್ಟೆ ಲಾಭ ಇದೆ

ನವಜಾತ ಮಕ್ಕಳಿಗೆ ಟಚ್ ಥೆರಪಿ ಪ್ರಯೋಜನ : ಅಮೆರಿಕಾದಲ್ಲಿ ನವಜಾತ ಶಿಶುಗಳಿಗೆ ಈ ಟಚ್ ಥೆರಪಿ ನೀಡಲಾಗಿತ್ತು. ಟಚ್ ಥೆರಪಿಸ್ಟ್ ಮತ್ತು ಮನಶ್ಶಾಸ್ತ್ರಜ್ಞ ಟಿಫಾನಿ ಫೀಲ್ಡ್ ನವಜಾತ ಶಿಶುಗಳ ಮೇಲೆ ಈ  ಪ್ರಯೋಗ ಮಾಡಿದ್ದರು. ನವಜಾತ ಶಿಶುಗಳಿಗೆ 5-10 ದಿನಗಳವರೆಗೆ ಪ್ರತಿದಿನ ಕೇವಲ 15 ನಿಮಿಷಗಳ ಕಾಲ ಟಚ್ ಥೆರಪಿ ನೀಡಲಾಗಿತ್ತು. 15 ನಿಮಿಷಗಳ ಕಾಲ ಮಕ್ಕಳ ತಲೆಯನ್ನು ಸ್ಪರ್ಶಿಸಲಾಗ್ತಿತ್ತು. ಹಾಗೇ ಇಡೀ ದೇಹಕ್ಕೆ ಪ್ರೀತಿಯ ಸ್ಪರ್ಶ ನೀಡಲಾಗ್ತಿತ್ತು. ಈ ಟಚ್ ಥೆರಪಿಯನ್ನು ಮೂರು ಅವಧಿಯಲ್ಲಿ ನೀಡಲಾಯ್ತು.
ಈ ಟಚ್ ಥೆರಪಿ ಪಡೆದ ಮಕ್ಕಳ ತೂಕದಲ್ಲಿ ಏರಿಕೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಟಚ್ ಥೆರಪಿ ಪಡೆದ ಶೇಕಡಾ 47ಕ್ಕಿಂತ ಹೆಚ್ಚು ತೂಕ ಏರಿಕೆಯಾಗಿತ್ತು. ಚಾಲೆಂಜಿಂಗ್ ಮಕ್ಕಳಲ್ಲಿ ಕೂಡ ಟಚ್ ಥೆರಪಿ ಪರಿಣಾಮ ಬೀರುತ್ತದೆ. ಆಟಿಜಂ ಹೊಂದಿರುವ ಮಕ್ಕಳಿಗೆ ಪಾಲಕರು ಅಥವಾ ವೈದ್ಯರಿಂದ ಟಚ್ ಥೆರಪಿ ನೀಡಲಾಗುತ್ತದೆ. ಇದ್ರಿಂದ ಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬರುತ್ತದೆ. ಗರ್ಭಿಣಿಯರಿಗೆ ಹೆರಿಗೆ ನೋವು ಕಡಿಮೆ ಮಾಡಲು ಕೂಡ ಟಚ್ ಥೆರಪಿ ಬಳಕೆ ಮಾಡಲಾಗುತ್ತದೆ ಎಂದು ಟಿಫಾನಿ ಹೇಳಿದ್ದಾರೆ.

ಹಬ್ಬಕ್ಕೆ ಮನೆ ಸ್ವಚ್ಛಗೊಳಿಸುವಾಗ ಧೂಳಿನ ಅಲರ್ಜಿ ತಪ್ಪಿಸುವುದು ಹೇಗೆ ?

ಆಟಗಾರರ ಮೇಲೆ ಪರಿಣಾಮ ಬೀರುತ್ತೆ ಸ್ಪರ್ಶ : ಜಿಮ್ ಕೊಹ್ನ್ ಮತ್ತು ರಿಚರ್ಡ್ ಡೇವಿಡ್ಸನ್ ಹೆಸರಿನ ವಿಜ್ಞಾನಿಗಳು ಸ್ಪರ್ಶದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ದೊಡ್ಡ ಸ್ಫೋಟದ ಶಬ್ಧ ಕೇಳಿದ ಕೆಲವರು ಭಯಗೊಂಡಿದ್ದರು. ಒತ್ತಡಕ್ಕೆ ಒಳಗಾಗಿದ್ದರು. ಅವರನ್ನು ಅವರ ಸಂಗಾತಿ ಸ್ಪರ್ಶಿಸಿದಾಗ ಹಾಗೂ ಅವರ ತಲೆ ಮೇಲೆ ಕೈ ಆಡಿಸಿದಾಗ ಅವರು ಭಯ ಕಡಿಮೆ ಆಗುವುದಲ್ಲದೆ ಒತ್ತಡ ಕಣ್ಮರೆಯಾಯ್ತು. ಈ ಸ್ಪರ್ಶ ಆಟಗಾರರಿಗೂ ಅಗತ್ಯ. ಆಟಗಾರರನ್ನು ಸ್ಪರ್ಶಿಸಿದಾಗ ಅಥವಾ ಅವರ ಬೆನ್ನು ತಟ್ಟಿದಾಗ ಅವರಿಗೆ ಧೈರ್ಯ ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios