Asianet Suvarna News Asianet Suvarna News

ಕೊರೋನಾ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ಕೊಡಿಸೋದು ಹೇಗೆ ?

ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದೇ? ಈ ಬಗ್ಗೆ ಸರಕಾರ ಹೇಳುವುದೇನು? ಚಿಕಿತ್ಸೆಯ ಸ್ವರೂಪ ಹೇಗಿರುತ್ತದೆ?

How to treat CoronaVirus patients at home
Author
Bangalore, First Published Jun 17, 2020, 5:56 PM IST

ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಳೆಗಾಲದಲ್ಲಿ ಈ ಸಂಖ್ಯೆ ಹಾಗೂ ವೇಗ ಏರುವ ಆತಂಕ ಹೆಚ್ಚಾಗಿದೆ. ಇದರ ನಡುವೆಯೇ ಸಮಾಧಾನದ ವಿಷಯವೆಂದರೆ ಅರ್ಧಕ್ಕರ್ಧ ಕೋವಿಡ್-19 ಪಾಸಿಟಿವ್ ಕೇಸ್ ಇರುವವರು ಹೆಚ್ಚಿನ ಚಿಕಿತ್ಸೆಯೇ ಇಲ್ಲದೆ ಗುಣಮುಖರಾಗುತ್ತಿದ್ದಾರೆ. ಮತ್ತು ರೋಗ ಲಕ್ಷಣಗಳು ಇವರಲ್ಲಿ ಬಹಳ ಕಡಿಮೆ ಇರುತ್ತವೆ ಅಥವಾ ಏನೂ ಇರುವುದೇ ಇಲ್ಲ. 

ಹೀಗೆ ವೃದ್ಧರು, ಮಕ್ಕಳು, ಬಿಪಿ, ಶುಗರ್, ಹೃದಯ ಸಮಸ್ಯೆಗಳು, ಕ್ಯಾನ್ಸರ್, ಉಸಿರಾಟದ ತೊಂದರೆ ಇರುವವರಲ್ಲಿ ಕೊರೋನಾ ಉಗ್ರ ರೂಪ ತಾಳಬಹುದು. ಉಳಿದಂತೆ ಬಹುತೇಕ ರೋಗಿಗಳಲ್ಲಿ ಹೀಗೆ ಬಂದು ಹಾಗೆ ಹೋಗುತ್ತದೆ. ಇವರಿಗೆ ಅಂಥ ವಿಶೇಷ ಚಿಕಿತ್ಸೆಯ ಅಗತ್ಯವಿಲ್ಲ. 

ಅಮೆರಿಕದಿಂದ ಬಂದ 100 ಅತ್ಯಾಧುನಿಕ ವೆಂಟಿಲೇಟರ್, ವಿಶೇಷ ಏನು?

ಆಸ್ಪತ್ರೆಗಳಲ್ಲಿ ಸ್ಥಳ, ವಿಶೇಷ ವಾರ್ಡ್‌ನ ಕೊರತೆ ಇರುವ ಈ ಸಂದರ್ಭದಲ್ಲಿ ಹೀಗೆ ಹೆಚ್ಚು ಗಂಭೀರ ಲಕ್ಷಣಗಳಿಲ್ಲದ, ಬೇರೆ ಕಾಯಿಲೆಗಳಿಲ್ಲದ ಕೊರೋನಾ ರೋಗಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ್ದು, ಈ ಸಂಬಂಧ ಕೆಲ ನಿಯಮಾವಳಿಗಳನ್ನು ನೀಡಿದೆ. ಅದರಂತೆ ಕೊರೋನಾ ಪಾಸಿಟಿವ್ ಬಂದವರಿಗೆ ಟೆಲಿ ಹೋಂ ಕೇರ್ ಸೇವೆ ಒದಗಿಸಲಾಗುತ್ತದೆ. ಹೀಗೆ ಮನೆಯಲ್ಲೇ ಚಿಕಿತ್ಸೆ ಪಡೆಯಲು, ಕೊಡಿಸಲು ಈ ಕೆಲ ವಿಷಯಗಳನ್ನು ಗಮನಿಸಿ.
How to treat CoronaVirus patients at home

ಪ್ರತ್ಯೇಕ ಕೋಣೆ
ಕೊರೋನಾ ಪಾಸಿಟಿವ್ ಬಂದವರನ್ನು ಉಳಿಸಲು ಮನೆಯಲ್ಲಿ ಗಾಳಿಬೆಳಕು ಹೊಂದಿರುವ ಪ್ರತ್ಯೇಕ ಕೋಣೆಯೊಂದಿದ್ದು, ಅಟ್ಯಾಚ್ಡ್ ಬಾತ್‌ರೂಂ ಹಾಗೂ ಟಾಯ್ಲೆಟ್ ಇರಬೇಕು. ಅವರ ಸೇವೆಗೆ ಸದಾ ಸಿದ್ಧವಿರುವವರೊಬ್ಬರು ಇರಬೇಕು. ಇವರು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರೋಗಿಯ ತಾಪಮಾನ ಏರುಪೇರು, ಇತರೆ ಕಾಯಿಲೆ ಲಕ್ಷಣಗಳು ಕಂಡುಬಂದಲ್ಲಿ ವರದಿ ನೀಡುತ್ತಿರಬೇಕು. ಕುಟುಂಬದ ಸದಸ್ಯರೆಲ್ಲರೂ ಐಸೋಲೇಶನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇವರೆಲ್ಲರೂ ಫೇಸ್ ಮಾಸ್ಕನ್ನು ಧರಿಸಿಯೇ ಇರುವುದು ಕಡ್ಡಾಯ. ರೋಗಿಗೆ ಪ್ರತ್ಯೇಕ ತಟ್ಟೆಲೋಟಗಳನ್ನು ಬಳಸಬೇಕು. ಮನೆಯಲ್ಲಿರುವ ಮಕ್ಕಳು ಹಾಗೂ ವೃದ್ಧರು ರೋಗಿಯ ಸಂಪರ್ಕಕ್ಕೆ ಬರದಂತೆ ಕಟ್ಟೆಚ್ಚರ ವಹಿಸಬೇಕು. ಹೀಗೆ ಹೋಮ್ ಕೇರಿಂಗ್ ಇರುವಾಗ ಪಲ್ಸ್ ಆಕ್ಸಿಮೀಟರ್ ಕೊಳ್ಳಲು ಅವಕಾಶವಿದ್ದು, ಅದರ ಬಳಕೆಯನ್ನು ಆರೋಗ್ಯಾಧಿಕಾರಿಗಳು ವಿಡಿಯೋ ಕಾಲ್ ಮೂಲಕ ತಿಳಿಸಬೇಕು.

ಕೇರ್ ಟೇಕರ್ ಕೆಲಸ
ರೋಗಿಯ ತಾಪಮಾನ, ಮೂತ್ರ, ಉಸಿರಾಟದ ವೇಗ, ಪಲ್ಸ್ ರೇಟ್, ಆಕ್ಸಿಜನ್ ಸ್ಯಾಚುರೇಶನ್ನನ್ನು ಆಗಾಗ ದಾಖಲಿಸುತ್ತಿರಬೇಕು. ಪ್ರತಿದಿನ ಬೆಳಗ್ಗೆ ವೈದ್ಯರಿಗೆ ಈ ಮಾಹಿತಿಗಳನ್ನು ನೀಡಬೇಕು. ರೋಗಿಗೆ ಉಸಿರಾಡಲು ಕಷ್ಟವಾಗುತ್ತಿದ್ದರೆ, ಮಾತನಾಡುವಾಗ ಏದುಸಿರು ಬರುತ್ತಿದ್ದರೆ, ಎದೆಯಲ್ಲಿ ನೋವು, ಒತ್ತಡ ಕಾಣಿಸಿಕೊಂಡರೆ, ಎಚ್ಚರ ಸ್ಥಿತಿಯಲ್ಲಿರಲು ಕಷ್ಟವಾಗುತ್ತಿದ್ದರೆ, ಕೈಕಾಲು ಮುಖಗಳು ಮರಗಟ್ಟುತ್ತಿದ್ದರೆ, ತುಟಿ ಹಾಗೂ ಮುಖ ಬಣ್ಣ ಬದಲಾಗಿದ್ದರೆ ಆಗ ತಕ್ಷಣ ವೈದ್ಯರಿಗೆ ತಿಳಿಸಬೇಕು. ಇವರು 3 ಲೇಯರ್‌ನ ಮೆಡಿಕಲ್ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕನ್ನು ಮುಟ್ಟಿಕೊಳ್ಳುತ್ತಿರಕೂಡದು. ಅದು ಎಂಜಲು, ಕಣ್ಣೀರು ಇತರೆ ರೀತಿಯಲ್ಲಿ ಒದ್ದೆಯಾದರೆ ತಕ್ಷಣ ತೆಗೆದು ಹಾಕಿ ಬೇರೆ ಮಾಸ್ಕ್ ಧರಿಸಬೇಕು. ಜೊತೆಗೆ ಗ್ಲೌಸ್ ಬಳಸಿ ರೋಗಿ ತಿಂದುಂಡ ತಟ್ಟೆ ಲೋಟ ತೊಳೆಯಬಹುದು. ಮನೆಯ ಇತರೆ ಸದಸ್ಯೆರೊಂದಿಗೆ ಡಿಸ್ಟೆನ್ಸ್ ನಿಭಾಯಿಸಬೇಕು. ಅಷ್ಟಾಗಿಯೂ ಪ್ರತಿದಿನ ತನ್ನ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಿರಬೇಕು. 

ಅಮೆರಿಕದಲ್ಲಿ ಕೊರೋನಾ ರೋಗಿಗೆ ಭಾರತೀಯ ವೈದ್ಯನಿಂದ ಮರು ಜನ್ಮ

ರೋಗಿ ಏನು ಮಾಡಬೇಕು?
ತಾನು ಮನೆಯಲ್ಲೇ ಚಿಕಿತ್ಸೆ ಪಡೆಯಲು ಇಚ್ಛಿಸುವುದಾಗಿ ಫಾರಂ ತುಂಬಿ ಸಹಿ ಮಾಡಿಕೊಡಬೇಕು. ವಾಟ್ಸಾಪ್ ಅಥವಾ ಮೇಲ್ ಮೂಲಕವೂ ಕಳುಹಿಸಬಹುದು. ಯಾವುದೇ ಕಾರಣಕ್ಕೂ ಕೋಣೆ ಬಿಟ್ಟು ಹೊರಹೋಗಬಾರದು. ಪದೇ ಪದೇ 40 ಸೆಕೆಂಡ್‌ಗಳ ಕಾಲ ಆಲ್ಕೋಹಾಲ್ ಹೊಂದಿದ ಹ್ಯಾಂಡ್ ವಾಶ್ ಬಳಸಿ ಕೈ ತೊಳೆಯಬೇಕು. ರೋಗಿಯಾಗಲಿ, ಅವರನ್ನು ನೋಡಿಕೊಳ್ಳುವವರಾಗಲಿ ಮುಖವನ್ನು ಮುಟ್ಟಿಕೊಳ್ಳಕೂಡದು. ಪ್ರತ್ಯೇಕ ಪಾತ್ರೆಗಳು, ಬಟ್ಟೆಬರೆ ಸೇರಿದಂತೆ ಇತರೆ ವಸ್ತುಗಳನ್ನು ಬಳಸಬೇಕು. ಡಿಹೈಡ್ರೇಟ್ ಆಗದಂತೆ ದೇಹಕ್ಕೆ ನೀರು ಸೇರಿದಂತೆ ಇತರೆ ಪಾನೀಯಗಳನ್ನು ಕೊಡುತ್ತಲೇ ಇರಬೇಕು. 

ಮನೆಮಂದಿಯೊಟ್ಟಿಗೆ ಕುಳಿತು ಊಟ ಮಾಡಿದ್ರೆ ಟೆನ್ಷನ್ ಮಾಯ!

ರೋಗಿ ಹಾಗೂ ಕೇರ್‌ಟೇಕರ್ ಬಳಸಿದ ಮಾಸ್ಕ್ ಸೇರಿದಂತೆ ಇತರೆ ಯಾವುದೇ ವಸ್ತುಗಳನ್ನು ಬ್ಲೀಚ್‌ನಿಂದ ಸ್ವಚ್ಛಗೊಳಿಸಿದ ಬಳಿಕವಷ್ಟೇ ಎಸೆಯಬೇಕು. ಮನೆಯಲ್ಲಿ ಸಾಮಾನ್ಯವಾಗಿ ಮುಟ್ಟುವ ಡೋರ್ ನಾಬ್ ಸೇರಿದಂತೆ ಇತರೆ ವಸ್ತುಗಳನ್ನು ಬ್ಲೀಚ್‌ನಿಂದ ಸ್ವಚ್ಛಗೊಳಿಸುತ್ತಲೇ ಇರಬೇಕು. ಐಸೋಲೇಶನ್ ಪೀರಿಯಡ್ ಮುಗಿದ ಬಳಿಕ ಮತ್ತೊಮ್ಮೆ ಪರೀಕ್ಷೆಗೊಳಪಟ್ಟು ಕೊರೋನಾರಹಿತವಾದ ಮೇಲೆ ಸಾಮಾನ್ಯ ಜೀವನಕ್ಕೆ ಮರಳಬಹುದು. 

Follow Us:
Download App:
  • android
  • ios