ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳ ಚಟ ಹೆಚ್ಚುತ್ತಿದ್ದು, ಇದರಿಂದಾಗುವ ಮಾನಸಿಕ ಮತ್ತು ದೈಹಿಕ ಪರಿಣಾಮಗಳನ್ನು ಚರ್ಚಿಸಲಾಗಿದೆ. ಚಟದಿಂದ ಹೊರಬರಲು ಕೆಲವು ಪರಿಣಾಮಕಾರಿ ಮಾರ್ಗಗಳನ್ನು ಸಹ ಸೂಚಿಸಲಾಗಿದೆ.

ಇಗೀನ ಪೀಳಿಗೆಯವರಿಗೆ ಸೋಷಿಯಲ್‌ ಮೀಡಿಯಾ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, ಇವಾಗ ಹುಟ್ಟಿ ಆಡುತ್ತಿರುವ ಮಗುವಿನಿಂದ ಹಿಡಿದು ಇನ್ನೇನು ಕೊನೆ ದಿನಗಳನ್ನ ಎಣಿಸುತ್ತಿರುವ ವೃದ್ದರವರೆಗೆ ಸೋಷಿಯಲ್‌ ಮೀಡಿಯಾ ಹಾಸು ಹೊಕ್ಕಾಗಿದೆ. ಇನ್‌ಸ್ಟಾಗ್ರಾಮ್‌(Instagram), ಫೇಸ್‌ಬುಕ್‌(FaceBook), ಟ್ವಿಟ್ಟರ್‌(Twitter) ಒಂದಾ ಎರಡಾ, ಮೊಬೈಲ್‌ ತೆಗೆದರೆ ಟೈಮ್‌ ಪಾಸ್‌(Time Pass) ಮಾಡುವುದಕ್ಕೆ ಬೇಕಾದಷ್ಟು ವಿಷಯಗಳು ಸೋಷಿಯಲ್‌ ಮೀಡಿಯಾದಲ್ಲಿವೆ (Social Media). ಅದು ಇನ್‌ಸ್ಟಾಗ್ರಾಮ್‌ ಬಂದ ಮೇಲಂತು ಎಲ್ಲರೂ ಅದರದಲ್ಲಿಯೇ ಮುಳುಗಿ ಹೋಗಿದ್ದಾರೆ. ರೀಲ್ಸ್‌(Reels) ಮನುಷ್ಯನ ಹೊಸ ಚಟ ಆಗಿಹೋಗುತ್ತಿದೆ. ದಿನಕ್ಕೆ ಐವತ್ತರಿಂದ ನೂರು ರೀಲ್ಸ್‌ ನೋಡುತ್ತಿದ್ದೇವೆ ಎಂದು ಕೆಲವು ವರದಿಗಳು ಹೇಳುತ್ತಿವೆ.

ರೀಲ್ಸ್‌ ಬರುವುದಕ್ಕೂ ಮುನ್ನ ಭಾರತದಲ್ಲಿ ಎಂಟು ಕೋಟಿ ಜನ ಇನ್‌ಸ್ಟಾಗ್ರಾಮ್‌(Instagram), ಬಳಸ್ತಾ ಇದ್ರು. ರೀಲ್ಸ್‌ ಬಂದ ನಂತರ ಮೂವತ್ತಾರು ಕೋಟಿ ಜನ ಬಳಸ್ತಾ ಇದ್ದಾರೆ. ಇದರಲ್ಲಿ ಶೇಕಡಾ ಐವತ್ತು ಜನ ರೀಲ್ಸ್‌ಗೆ ಅಂತಾನೆ ಇಸ್ಟಾಗ್ರಾಮ್‌ (Instagram) ನಲ್ಲಿ ತಮ್ಮ ಖಾತೆಯನ್ನ ತೆರೆದು ಇನ್‌ಸ್ಟಾಗ್ರಾಮ್‌ ಬಳಸುತ್ತಿದ್ದಾರೆ. ಹೀಗಾಗಿ ದಿನಕ್ಕೆ 200 ಬಿಲಿಯನ್‌ ರೀಲ್ಸ್‌ಗಳು ಅಪ್‌ಲೋಡ್‌(Uplode) ಆಗುತ್ತಿವೆ. ಇಡೀ ವಿಶ್ವದಲ್ಲಿ ಮನುಷ್ಯರ ಸಂಖ್ಯೆಗಿಂತ ರೀಲ್ಸ್‌ ಹೆಚ್ಚು ಉತ್ಪತ್ತಿ ಆಗುತ್ತಿದೆ. ರೀಲ್ಸ್‌ ನೋಡ್ತಾ ನೋಡ್ತಾನೇ ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳು ಹೋಗ್ತಾ ಇದೆ. ಹಾಗಾದರೆ ಈ ಡಿಜಿಟಲ್‌ ಚಟದಿಂದ ಮುಕ್ತಿ ಹೊಂದುವುದು ಹೇಗೆ? ಇಸ್ಟಾಗ್ರಾಮ್‌ ಶಾರ್ಟ್ಸ್ ಗಳೆಲ್ಲಾ (shorts) ತೊಂಬತ್ತು ಸೆಕೆಂಡ್‌ನ ಚಿಕ್ಕ ಕಂಟೆಂಟ್‌. ಆದರೆ ಅದೇ ನಮ್ಮನ್ನ ಗಂಟೆಗಟ್ಟಲೇ ಇಸ್ಟಾಗ್ರಾಮ್‌(Instagram) ನಲ್ಲಿ ಮುಳುಗಿ ಹೋಗುವಂತೆ ಮಾಡುತ್ತಿದೆ. ಕಾರಣ ಈ ಶಾರ್ಟ್ಸ್ ಗಳೆಲ್ಲಾ(shorts) ವಿನ್ಯಾಸಗೋಡಿರುವುದೇ ಅದಕ್ಕೆ. ತೊಂಬತ್ತು ಸೆಕೆಂಡ್‌ನ ವಿಡಿಯೋ ಅಲ್ವಾ ಅಂತ ನೋಡೊ ನಾವುಗಳು ಮೊಬೈಲ್‌ ಸ್ಕ್ರೀನ್‌ನನ್ನ ಒತ್ತುತ್ತಾ ಗಂಟೆಗಳ ಪರಿವೆ ಇಲ್ಲದಂತೆ ಅದರಲ್ಲಿ ಮುಳುಗಿ ಹೋಗಿರುತ್ತೇವೆ. ರೀಲ್ಸ್‌ಗಳಲ್ಲಿ ಬರುವಂಹ ಟ್ರೆಂಡಿಂಗ್‌ ಸಾಂಗ್ಸ್‌ಗಳು, ಬ್ರೈಟ್‌ ಕಲರ್ಸ್‌, ಪೋಟೋಸ್‌(Photos) ನಮ್ಮನ್ನ ಅದರಲ್ಲಿ ಮುಳುಗಿ ನಮ್ಮ ಬೆರಳುಗಳು ತಾವಾಗಿಯೇ ಸ್ಕ್ರೀನ್‌ನನ್ನ(Screen) ಮೇಲಕ್ಕೆತ್ತುತ್ತಿರುತ್ತವೆ. ನಮ್ಮನ್ನ ಅದರಲ್ಲಿ ಹಿಡಿದಿಟ್ಟುಕೊಳ್ಳಬೇಕಂತಲೇ ಅದರಲ್ಲಿ ಆಟೋ ಪ್ಲೇ ಒಂದಾದ ಮೇಲೋಂದು ಮೂವ್‌ ಆಗ್ತಾನೇ ಇರುತ್ತೆ. ಸಾಮಾನ್ಯವಾಗಿ ಒಂದು ರೀಲ್ಸ್‌ ಸ್ಕ್ರೋಲ್‌ (Scroll) ಮಾಡೋದಿಕ್ಕೆ ಅರ್ಧ ಸೆಕೆಂಡು ಬೇಕಾಗುವುದಿಲ್ಲ. ಆದರೆ ಅಷ್ಟರಲ್ಲೇ ಮತ್ತೊಂದು ರೀಲ್ಸ್‌ ಪ್ಲೇ ಆಗಿರುವಂತೆ ಮಾಡಿರ್ತಾರೆ.

ಇಸ್ಟಾಗ್ರಾಮ್‌ನ ಆಲ್ಗೋರಿದಮ್‌(Algoridam) ನಮ್ಮ ಇಷ್ಟ ಕಷ್ಟಗಳನ್ನೇಲ್ಲಾ ತಿಳಿದುಕೊಂಡು ನಿಮಗೆ ಏನು ಬೇಕೋ ಅಂತ ಕಂಟೆಂಟ್‌ಗಳನ್ನ ಕೊಡುತ್ತೆ. ನೀವು ಇಸ್ಟಾಗ್ರಾಮ್‌ ರೀಲ್ಸ್‌ ನೋಡಬೇಕಾದರೆ ಗಮನಿಸಿರಬಹುದು ನಮಗೆ ಏನಾದರೂ ತಿನ್ನಬೇಕೆನಿಸಿದರೆ, ಆಹಾರಗಳ ಕಂಟೆಂಟ್‌ ಇರುವಂತಹ ರೀಲ್ಸ್‌ಗಳೇ ಬರುತ್ತವೆ. ಹಾಗೆ ಏನಾದರೂ ದುಖಃದಲ್ಲಿದ್ದರೆ ದುಖಃ ಭರಿತವಾದಂಥಹ ರೀಲ್ಸ್‌ಗಳೆ ಬರುತ್ತವೆ. ಅವುಗಳನ್ನ ನೋಡದೇ ಹೊದರೆ ಏನೋ ಕಳೆದುಕೊಂಡು ಬಿಡುತ್ತೆವೆ ಎಂಬ ಭಾವನೆಯನ್ನ ಹುಟ್ಟಿಸೋ ರೀತಿ ಮಾಡುತ್ತವೆ. ಒಂದು ಅಂದಾಜಿನ ಪ್ರಕಾರ ಪ್ರತಿದಿನ ರೀಲ್ಸ್‌ಗಳನ್ನ ಸ್ಕ್ರೋಲ್‌ ಮಾಡ್ತಾ ಮಾಡ್ತಾ 390 ಮೀಟರ್‌ನಷ್ಟು ಸ್ಕ್ರೀನ್‌ನನ್ನ ಗೀರ್ತಿರ್ತಿವಿ.

ಇದೆಲ್ಲಾ ಪರಿಣಾಮಗಳು ಮೆಲ್ನೋಟಕ್ಕೆ ಕಂಡರೆ ಈ ರೀಲ್ಸ್‌ಗಳು ಮಾನಸಿಕವಾಗಿ ಪರಿಣಾಮವನ್ನ ಬೀರುತ್ತಿವೆ. ಯಾವ ರೀತಿಯ ಮಾನಸಿಕ ಹೊಡೆತ ಎಂದರೆ ಡೊಪಮೈನ್‌(Dopamine) ಹೊಡೆತ, ಮತ್ತು ಅಟೆನ್ಷನ್‌ ಕುಸಿತ, ಡೊಪಮೈನ್‌ (Dopamine) ಅಂದರೆ ನಮ್ಮ ದೇಹದಲ್ಲಿ ಯಾವುದೇ ಇಷ್ಟವಾದಂತಹ ಕೆಲಸವನ್ನ ಮಾಡಿದಾಗ ಡೊಪಮೈನ್‌ ಬಿಡುಗಡೆಯಾಗುತ್ತೆ. ಈ ಡೊಪಮೈನ್‌ ಮತ್ತೆ ಆ ಕೆಲಸವನ್ನ ಮಾಡಲು ಪ್ರಚೋದಿಸುತ್ತದೆ. ಆದರೆ ಈ ರೀಲ್ಸ್‌ ಡೊಪಮೈನ್‌ನ್ನೆ ಹೈಜಾಕ್‌ ಮಾಡಿದೆ ಎಂದು ಹಲವು ತಜ್ಞರು ಹೇಳ್ತಾ ಇದ್ದಾರೆ. ಇಷ್ಟದ ರೀಲ್ಸ್‌ಗಳನ್ನ ನೋಡುವುದರಿಂದ ಡೊಪಮೈನ್‌ ಬಿಡುಗಡೆಯಾಗುತ್ತಿದೆ. ಬಿಡುಗಡೆಯಾದ ಡೊಪಮೈನ್‌ ಮತ್ತೆ ಹೆಚ್ಚೆಚ್ಚಾಗಿ ರೀಲ್ಸ್‌(Reels) ನೋಡುವುದಕ್ಕೆ ಉತ್ತೇಜ ನೀಡುತ್ತದೆ.

ಹಾಗೇ ಅಟೆನ್ಷನ್‌ ಸ್ಪಾನ್‌(Attention span) ಕೊರತೆ ಉಂಟಾಗುತ್ತಿದೆ. ಮೊದಲಿಗೆ ಮನುಷ್ಯ 12 ಸೆಕೆಂಡ್‌ನಷ್ಟು ಕಾಲ ಬೇರೆ ಕಡೆ ಗಮನಹರಿಸದೇ ಒಂದೇ ಕಡೆ ಗಮನ ಕೇಂದ್ರಿಕರಿಸುವ ಸಾಮರ್ಥ್ಯವನ್ನ ಹೊಂದಿದ್ದ, ಆದರೆ ಇಗ ಗಮನ ಕೇಂದ್ರಿಕರಿಸುವಂತಹ ಸಾಮಥ್ಯ ಎಂಟು ಸೆಕೆಂಡ್‌ಗಿಂತ ಕಡಿಮೆಯಾಗಿದೆ. ಹಾಗಾಗಿ ಯಾವುದೇ ಕೆಲಸವನ್ನ ನಾವು ಹೆಚ್ಚು ಸಮಯ ಅದರಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪೂರ್ತಿ ಸಿನಿಮಾವನ್ನ ಮುಗಿಯುವ ವರೆಗೆ ನೋಡುವುದಕ್ಕೆ ಆಗ್ತಾಇಲ್ಲಾ, ಮಕ್ಕಳಿಗೆ ಓದುವುದಕ್ಕೆ ಆಗುತ್ತಿಲ್ಲ. ಇದರ ಜೊತೆಗೆ ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಬರ್ತಾ ಇದೆ. ಮೆಮೊರಿ ಪವರ್‌ ಕಡಿಮೆಯಾಗುತ್ತಿದೆ. ಆಳವಾಗಿ ಯೋಚನೆ ಮಾಡುವುದಕ್ಕೆ ಸಾಧ್ಯವಾಗ್ತಾ ಇಲ್ಲಾ. ಹಾಗಾದ್ರೆ ಈ ರೀಲ್ಸ್‌ ಚಟದಿಂದ ಹೊರಗಡೆ ಬರುವುದು ಹೇಗೆ? ಕೆಲವು ನಿಯಮಗಳನ್ನ ಹಾಕಿಕೊಂಡು ಅದನ್ನ ಪಾಲಿಸುವುದರಿಂದ ರೀಲ್ಸ್‌ ಚಟದಿಂದ ಹೊರಗಡೆ ಬರಬಹುದು.

ಮೊದಲನೆಯದಾಗಿ ರೀಲ್ಸ್‌ ನೋಡಬೇಕು ಏನಿಸಿದಾಗ ಆ ಯೋಚನೆಯನ್ನ ಡೈವರ್ಟ್‌ ಮಾಡಿ, ರೀಲ್ಸ್‌ ಬದಲು ಬೇರೆ ಕೆಲಸಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ, ಪ್ರಾರಂಭದಲ್ಲಿ ಸಾಧ್ಯವಾಗದೇ ಇರಬಹುದು. ಆದರೆ ಪ್ರಯತ್ನಿಸಿದರೆ ಸಾಧ್ಯವಾಗುತ್ತದೆ. ಎರಡನೆಯದಾಗಿ 5 ಸೆಕೆಂಡ್‌ ರೂಲ್‌ (5 Second Rool) ಮೊಬೈಲ್‌ನ್ನ ಬಳಸಬೇಕು ಎಂದು ಯೋಚನೆ ಬಂತು ಎಂದರೆ 5 ಸೆಕೆಂಡ್‌ ಕೂತು ಯೋಚಿಸಿ ಮೈಡ್‌ನ್ನ ಬೇರೆ ಕೆಲಸದ ಕಡೆ ಡೈವರ್ಟ್‌ ಮಾಡಿ. ಮೂರನೆಯದಾಗಿ ಮೊಬೈಲ್‌ನ್ನ ಬಳಸುವಾಗ ಸಮಯ ಮಿತಿಯನ್ನ ಹಾಕಿಕೊಳ್ಳಿ. ಇಷ್ಟು ಸಮಯ ಮಾತ್ರ ನಾನು ಮೊಬೈಲ್‌ನನ್ನಾ ಬಳಕೆ ಮಾಡ್ತಿನಿ ಎಂದು ನಿಮಗೆ ನೀವೆ ನಿಯಮವನ್ನ ಹಾಕಿಕೊಳ್ಳಿ.

ನಾಲ್ಕನೆಯದಾಗಿ ಸೋಷಿಯಲ್‌ ಮೀಡಿಯಾ ಮೊನಿಟರ್‌ ಟೂಲ್‌ಗಳನ್ನ(Social media monitoring tools) ಉಪಯೋಗಿಸಿ. ಇಗಂತು ಎಲ್ಲರ ಮೊಬೈಲ್‌ಗಳಲ್ಲಿ ಡಿಜಿಟಲ್‌ ವೆಲ್‌ಬೀಯಿಂಗ್‌(Digital wellbeing)ನಂತಹ ಮೊನಿಟರ್‌ ಟೂಲ್‌ಗಳು ಬಂದಿವೆ. ಇವುಗಳಿಂದ ಎಷ್ಟು ಹೊತ್ತು ಮೊಬೈಲ್‌ ಉಪಯೋಗಿಸುತ್ತಿದ್ದೇವೆ ಎಂಬುದರ ಬಗ್ಗೆ ತಿಳಿಯುತ್ತದೆ. ಇದರಲ್ಲಿಯೇ ಸ್ಕ್ರೀನ್‌ ಲಿಮಿಟ್‌ ಹಾಕಿಕೊಳ್ಳಬಹುದು. ಐದನೆಯದಾಗಿ ಒಳ್ಳೆಯ ಆಲ್ಗೊರಿದಮ್‌ನನ್ನು ಸೃಷ್ಟಿಸಿಕೊಳ್ಳಿ., ಸೋಷಿಯಲ್‌ ಮೀಡಿಯಾದಲ್ಲಿ ನೀವು ಯಾವುದನ್ನ ಹೆಚ್ಚೆಚ್ಚಾಗಿ ನೋಡುತ್ತೀರೋ ಅದೇ ರೀತಿಯ ಕಂಟೆಂಟ್‌ಗಳನ್ನ ಪುನಃ ಪುನಃ ತೋರಿಸುತ್ತಿರುತ್ತದೆ. ಹಾಗಾಗಿ ನಮಗೆ ಯಾವ ವಿಷಯ ಪ್ರಯೋಜನಕಾರಿಯಾಗಿದೆಯೋ ಅದನ್ನ ಹೆಚ್ಚಾಗಿ ನೋಡುವುದರಿಂದ ಅದೇ ರೀತಿಯ ವಿಷಯಗಳು ಬರುತ್ತಿರುತ್ತವೆ. ಇದರಿಂದ ಸಾಕಷ್ಟು ವಿಷಯಗಳನ್ನ ತಿಳಿದುಕೊಳ್ಳಬಹುದು.

ಆರನೆಯದಾಗಿ ಒಳ್ಳೆಯ ದಿನಚರಿಯನ್ನ ರೂಢಿಸಿಕೊಳ್ಳಿ, ಯೋಗ, ಧ್ಯಾನಗಳಂತಹ ಅಭ್ಯಾಸಗಳಗೆ ಹೆಚ್ಚಿನ ಒತ್ತನ್ನ ಕೊಡಿ, ಯಾವ ಸಮಯದಲ್ಲಿ ಏನ್ನ ಮಾಡಬೇಕೋ ಅದನ್ನ ಕಟ್ಟುನಿಟ್ಟಾಗಿ ಪ್ರತಿನಿತ್ಯ ಮಾಡಿ, ಒಳ್ಳೆ ಒಳ್ಳೆ ಪುಸ್ತಕಗಳನ್ನ ಓದಿ. ಈ ಅಭ್ಯಾಸಗಳನ್ನ ಪ್ರತಿನಿತ್ಯ ಮಾಡಲು ರೂಢಿಸಿಕೊಳ್ಳಿ ಇದರಿಂದ ಮೊಬೈಲ್‌ನತ್ತ ಕೊಡುವ ಗಮನ ಕಡಿಮೆಯಾಗುತ್ತಾ ಹೋಗುತ್ತದೆ.