ಟೀ ಸೇವನೆಯಿಂದ ಎದೆ ಉರಿ ಕಾಡ್ತಿದೆಯಾ? 20 ನಿಮಿಷದ ಮೊದಲು ಹಿಂಗ್ ಮಾಡಿ

ಚಹಾ ಪ್ರೇಮಿಗಳ ಸಂಖ್ಯೆ ಭಾರತದಲ್ಲಿ ಸಾಕಷ್ಟಿದೆ. ಟೀ ಸೇವನೆ ಒಂದು ರೀತಿ ಕಿಕ್ ನೀಡುತ್ತೆ. ಟೀ ವಾಸನೆ ಸೆಳೆದ್ರೂ ಆರೋಗ್ಯ ಹಾಳು ಮಾಡುತ್ತೆ ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ.
 

How To Drink Tea Without Side Effects Know Five Foods To Eat Before Morning Tea roo

ಟೀ ಇಲ್ಲದೆ ಅನೇಕರಿಗೆ ಬೆಳಕು ಹರಿಯೋದಿಲ್ಲ. ಸೂರ್ಯೋದಯಕ್ಕಿಂತ ಮೊದಲು ಸೂರ್ಯಾಸ್ತದ ನಂತ್ರ ಎಲ್ಲ ಸಮಯದಲ್ಲೂ ಚಹಾ ಸೇವನೆ ಮಾಡುವವರಿದ್ದಾರೆ. ದಿನದಲ್ಲಿ ಅದೆಷ್ಟು ಕಪ್ ಟೀ ಒಳಗೆ ಹೋಗಿರುತ್ತೋ ತಿಳಿಯೋದಿಲ್ಲ. ಚಹಾ ಮೂಡ್ ಫ್ರೆಶ್ ಮಾಡುತ್ತೆ. ದೇಹಕ್ಕೆ ಶಕ್ತಿ ನೀಡಿದ ಅನುಭವವಾಗುತ್ತೆ. ಕೆಲಸ ಮಾಡಿ ಸುಸ್ತಾದವರು, ತಲೆ ನೋವು ಬಂದವರು, ಯಾಕೋ ಬೇಜಾರು ಎನ್ನುವವರು, ಕೆಲಸ ಇಲ್ಲದೆ ಸ್ವಲ್ಪ ಸಮಯ ಖಾಲಿ ಕುಳಿತವರು ಹೀಗೆ ಎಲ್ಲರೂ ರಿಲ್ಯಾಕ್ಸ್ ಆಗೋಕೆ ಟೀ ಸೇವನೆ ಮಾಡ್ತಾರೆ. ಈ ಟೀ ಸೇವನೆ ಮಾಡೋವಾಗ ರುಚಿ ಹೌದು, ಆದ್ರೆ ಸೇವನೆ ಮಾಡಿದ ನಂತ್ರ ಜನರು ಎಸಿಡಿಟಿ ಮತ್ತು ಎದೆಯುರಿ ಸಮಸ್ಯೆ ಎದುರಿಸುತ್ತಾರೆ. ಕೆಲವರಿಗೆ ಒಂದು ಕಪ್ ಟೀ ಕುಡಿದ್ರೂ ಎದೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ .

ಅತಿಯಾಗಿ ಟೀ (Tea) ಸೇವನೆ ಯಾವಾಗ್ಲೂ ಒಳ್ಳೆಯದಲ್ಲ. ಟೀ ಹೆಚ್ಚಾದ್ರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಣಿಸಿಕೊಳ್ಳುತ್ತದೆ. ಚಹಾದಲ್ಲಿ ಟ್ಯಾನಿನ್ (Tannin) ಇರುವ ಕಾರಣ ಕಬ್ಬಿಣವನ್ನು ದೇಹ ಸರಿಯಾಗಿ ಹೀರಿಕೊಳ್ಳುವುದಿಲ್ಲ. ಇದ್ರಿಂದ ಆತಂಕ, ಒತ್ತಡ, ಚಡಪಡಿಕೆ, ನಿದ್ರೆಯ ಕೊರತೆ, ವಾಕರಿಕೆ, ಎದೆಯುರಿ, ತಲೆನೋವು, ತಲೆತಿರುಗುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಟೀ ಕುಡಿದ ನಂತ್ರ ಯಾವುದೇ ಸಮಸ್ಯೆ ಆಗಬಾರದು ಎಂದಾದ್ರೆ ಚಹಾ ಸೇವನೆಯ 20 ನಿಮಿಷ ಮೊದಲು ಮುಖ್ಯವಾದ ಕೆಲಸ ಮಾಡ್ಬೇಕು. ಅದು ಏನು ಅನ್ನೋದನ್ನು ನಾವು ಹೇಳ್ತೇವೆ.

ಪಲ್ಯ ತಿಂದಂಗೆ ಉಪ್ಪಿಕಾಯಿ ತಿಂತೀರಾ? ಲೈಂಗಿಕ ಜೀವನಕ್ಕೇ ಕುತ್ತು ತರೋದು ಪಕ್ಕಾ

ಸೇಬು (Apple) ಹಣ್ಣು : ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ದೇಹದ pH ಸಮತೋಲನವನ್ನು ಹಾಳುಮಾಡುತ್ತದೆ. ಹಾಗಾಗಿ ನೀವು ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ ಮಾಡುವ ಬದಲು 10 ನಿಮಿಷ ಮೊದಲು ಸೇಬು ಹಣ್ಣನ್ನು ತಿನ್ನಿ. ಸೇಬು ತಿಂದ 20 ನಿಮಿಷದ ನಂತ್ರ ಚಹಾ ಕುಡಿದ್ರೆ ಗ್ಯಾಸ್, ಅಜೀರ್ಣ ಮತ್ತು ಎದೆಯುರಿ ಕಾಣಿಸಿಕೊಳ್ಳುವುದಿಲ್ಲ. 

ಡ್ರೈ ಫ್ರೂಟ್ಸ್ : ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ ಮಾಡುವ ಅಭ್ಯಾಸ ಹೊಂದಿದ್ದು, ಅದ್ರಿಂದ ಸಮಸ್ಯೆಯಾಗ್ತಿದೆ, ಬಿಡೋಕೆ ಆಗ್ತಿಲ್ಲ ಎನ್ನುವವರಾಗಿದ್ದರೆ ಟೀ ಕುಡಿಯುವ 20 ನಿಮಿಷ ಮೊದಲು ಡ್ರೈ ಫ್ರೂಟ್ಸ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದು ಕೂಡ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ನೀವು ಡ್ರೈ ಫ್ರೂಟ್ಸ್ ಹಾಗೆ ತಿನ್ನುವ ಬದಲು ನೆನೆಸಿ ತಿಂದ್ರೆ ಪ್ರಯೋಜನ ಹೆಚ್ಚು. ರಾತ್ರಿ ನೀರಿನಲ್ಲಿ ಡ್ರೈ ಫ್ರೂಟ್ಸ್ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಿ ನಂತ್ರ ಚಹಾ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಮಾಡೋದು ಸುಲಭ, ತಿನ್ನಲೂ ರುಚಿ, ಆದರೆ ದೇಹಕ್ಕೆ ಪೂರ್ತಿ ಶಕ್ತಿ ಕೊಡುತ್ತೆ ಈ ಉಂಡೆ!

ಬಾದಾಮಿ, ಒಣದ್ರಾಕ್ಷಿ, ವಾಲ್ನಟ್ ಗಳನ್ನು ನೀವು ರಾತ್ರಿ ನೆನೆಹಾಕಿ ಬೆಳಿಗ್ಗೆ ತಿಂದ್ರೆ ಪ್ರಯೋಜನ ಹೆಚ್ಚು. ನೆನೆಸಿದ ಬಾದಾಮಿ ತಿನ್ನುವುದರಿಂದ ಪ್ರೋಟೀನ್ ಮತ್ತು ಫೈಬರ್ ದೊರೆಯುತ್ತದೆ. ಇದನ್ನು ತಿನ್ನುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಇನ್ನು ವಾಲ್‌ನಟ್ಸ್ ನಲ್ಲಿ ಒಮೆಗಾ ಕೊಬ್ಬಿನಾಮ್ಲಗಳಿವೆ. ಇದು ನಿಮ್ಮ ಮನಸ್ಸಿಗೆ ಹಾಗೂ ಇಡೀ ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ.
ಒಣದ್ರಾಕ್ಷಿಯನ್ನು ನೀವು ನೀರಿನಲ್ಲಿ ನೆನೆಹಾಕಿ ಅದ್ರ ಸೇವನೆ ಮಾಡಿದ್ರೆ ಆರೋಗ್ಯದ ಲಾಭ ದುಪ್ಪಟ್ಟಾಗುತ್ತದೆ. ನೀವು ದ್ರಾಕ್ಷಿ ಹಾಗೂ ರಸ ಎರಡನ್ನೂ ಸೇವನೆ ಮಾಡಬೇಕು. ಒಣದ್ರಾಕ್ಷಿ ನಿಮ್ಮ ಹೊಟ್ಟೆಯ ಆಮ್ಲದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕಬ್ಬಿಣ ಹಾಗೂ ಬಿ ಕಾಂಪ್ಲೆಕ್ಸ್ ಒದಗಿಸುವ ಮೂಲಕ ರಕ್ತಹೀನತೆ ಸಮಸ್ಯೆಗೂ ಮುಕ್ತಿ ನೀಡುತ್ತದೆ. ನೀವು ತೂಕವನ್ನು ಕಡಿಮೆ ಮಾಡಲು ಬಯಸಿದ್ದರೂ ಒಣದ್ರಾಕ್ಷಿ ಸೇವನೆ ಮಾಡಬಹುದು.

ಟೀ ಸೇವನೆ ಮಾಡಿದ ನಂತ್ರವೂ ನೀವು ಆರೋಗ್ಯವಾಗಿರಬೇಕೆಂದ್ರೆ ಈ ಎಲ್ಲ ಆಹಾರ ಸೇವನೆ ಮಾಡಿ. ಇವು ನಿಮ್ಮ ಆರೋಗ್ಯವನ್ನು ಮತ್ತಷ್ಟು ಹೆಚ್ಚಿಸುವ ಜೊತೆಗೆ ಟೀ ದುಷ್ಪರಿಣಾಮವನ್ನು ತಡೆಯುತ್ತವೆ. 
 

Latest Videos
Follow Us:
Download App:
  • android
  • ios