ಕೊರೋನದ ಬಳಿಕ ಮನೆಯ ಸದಸ್ಯರು ಹೆಚ್ಚು ಬಾರಿ ಭೇಟಿ ನೀಡೋ ಸ್ಥಳಗಳಲ್ಲಿ ಬಾತ್‌ರೂಮ್‌ ಕೂಡ ಸೇರಿದೆ. ಮನೆಮಂದಿ ಆರೋಗ್ಯವಾಗಿರಬೇಕೆಂದ್ರೆ ಅಡುಗೆಮನೆಯಷ್ಟೇ ಬಾತ್‌ರೂಮ್‌ ಕೂಡ ಕ್ಲೀನ್‌ ಆಗಿರೋದು ಮುಖ್ಯ.ಹಾಗಾದ್ರೆ ಎಷ್ಟು ದಿನಕ್ಕೊಮ್ಮೆ ಬಾತ್‌ರೂಮ್‌ ಕ್ಲೀನ್‌ ಮಾಡ್ಬೇಕು? ಯಾವೆಲ್ಲ ಟಿಪ್ಸ್‌ ಪಾಲಿಸಬೇಕು?

ಕೊರೋನಾ ಎಲ್ಲರ ನೆಮ್ಮದಿ ಕೆಡಿಸಿರೋ ಜೊತೆ ಒಂದಿಷ್ಟು ಸ್ವಚ್ಛತೆ ಪಾಠವನ್ನು ಕಲಿಸಿದೆ.ಪ್ರತಿ ವಸ್ತುವನ್ನು ಮುಟ್ಟಿದ ತಕ್ಷಣ ಕೈ ತೊಳೆದುಕೊಳ್ಳೋದು ಈಗ ಎಲ್ಲರಿಗೂ ಅಭ್ಯಾಸವಾಗಿ ಬಿಟ್ಟಿದೆ. ಮನೆಯಿಂದ ಹೊರಗೆ ಹೋಗಿ ಬಂದ ತಕ್ಷಣ ಸ್ನಾನ ಮಾಡೋದ್ರಿಂದ ಹಿಡಿದು ದಿನಸಿ ಸಾಮಗ್ರಿಗಳನ್ನು ಸ್ಯಾನಿಟೈಸ್‌ ಮಾಡೋದು,ಪ್ರತಿದಿನ ಮನೆಯ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸೋದು ಈಗ ನಿತ್ಯದ ಕಾಯಕವಾಗಿದೆ. ಅಷ್ಟೇ ಏಕೆ,ಡೋರ್‌ ಹಿಡಿಗಳನ್ನು ಕೂಡ ತಿಕ್ಕಿ ಸ್ವಚ್ಛಗೊಳಿಸೋ ಮಟ್ಟಿಗೆ ಕೊರೋನಾ ನಮಗೆ ಸ್ವಚ್ಛತೆಯ ಪಾಠ ಮಾಡಿದೆ.ಆದ್ರೆ ಬಾತ್‌ರೂಮ್‌ ಕ್ಲೀನಿಂಗ್‌ ವಿಷಯಕ್ಕೆ ಬಂದ್ರೆ ನಮ್ಮಲ್ಲಿ ಬಹುತೇಕರು ಈಗಲೂ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸ್ವಚ್ಛಗೊಳಿಸುವ ಪರಿಪಾಠವಿಟ್ಟುಕೊಂಡಿದ್ದಾರೆ.ಆದ್ರೆ ಮನೆಯ ಇತರ ಭಾಗಗಳಂತೆ ಬಾತ್‌ರೂಮ್‌ ಕೂಡ ಸ್ವಚ್ಛಗೊಳಿಸೋದು ಅಗತ್ಯ. ಹಾಗಾದ್ರೆ ಬಾತ್‌ರೂಮ್‌ ಹಾಗೂ ಟಾಯ್ಲೆಟ್‌ಗಳನ್ನು ರೋಗಾಣುಮುಕ್ತಗೊಳಿಸೋದು ಹೇಗೆ?

ನಿರಂತರವಾಗಿ ಜ್ವರ ಕಾಡ್ತಾ ಇದ್ಯಾ? ಡೆಂಗ್ಯೂ ಆಗಿರಬಹುದು, ಪರೀಕ್ಷಿಸಿಕೊಳ್ಳಿ

ಸರಿಯಾದ ವಿಧಾನ ಯಾವುದು?
ಇತ್ತೀಚಿನ ದಿನಗಳಲ್ಲಿ ಮನೆಯ ಸದಸ್ಯರೆಲ್ಲರೂ ಪದೇಪದೆ ಕೈತೊಳೆಯೋದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರೋ ಕಾರಣ ಮನೆಯಲ್ಲಿ ಎಲ್ಲರೂ ಹೆಚ್ಚು ಭೇಟಿ ನೀಡೋ ಸ್ಥಳವೆಂದ್ರೆ ಅದು ಬಾತ್‌ರೂಮ್‌ ಆಗಿರುತ್ತೆ.ಅಲ್ಲದೆ, ಬಹುತೇಕರು ವರ್ಕ್‌ ಫ್ರಂ ಹೋಮ್‌ ಮಾಡುತ್ತಿರೋ ಕಾರಣ ಬಾತ್‌ರೂಮ್‌ ಮೊದಲಿಗಿಂತ ಹೆಚ್ಚೇ ಬಳಸಲ್ಪಡುತ್ತಿದೆ.ಈ ಕೊರೋನಾ ಸಮಯದಲ್ಲಿ ಮನೆಯಿಂದ ಪ್ರತಿದಿನ ಹೊರಗೆ ಹೋಗಿ ಬರೋ ವ್ಯಕ್ತಿಗೆ ಪ್ರತ್ಯೇಕ ಟಾಯ್ಲೆಟ್‌ ಹಾಗೂ ಬಾತ್‌ರೂಮ್‌ ಇದ್ದರೆ ಒಳ್ಳೆಯದು. ಇದ್ರಿಂದ ಒಂದು ವೇಳೆ ಆ ವ್ಯಕ್ತಿಗೆ ಸೋಂಕು ತಗಲಿದ್ದರೂ ಇತರ ಸದಸ್ಯರಿಗೆ ಹರಡೋ ಅಪಾಯ ಸ್ವಲ್ಪ ಮಟ್ಟಿಗೆ ತಗ್ಗುತ್ತೆ.ಒಂದು ವೇಳೆ ಮನೆಯ ಸದಸ್ಯರೆಲ್ಲ ಒಂದೇ ಟಾಯ್ಲೆಟ್‌ ಹಾಗೂ ಬಾತ್‌ರೂಮ್‌ ಬಳಸುತ್ತಿದ್ರೆ ಮರೆಯದೆ ಈ ಟಿಪ್ಸ್‌ ಪಾಲಿಸಿ. ಇದು ಕೇವಲ ಕೊರೋನಾ ವೈರಸ್‌ ಬಾರದಂತೆ ತಡೆಯಲು ಮಾತ್ರವಲ್ಲ, ಇತರ ಕಾಯಿಲೆಗಳಿಂದಲೂ ಮನೆಮಂದಿಯನ್ನು ರಕ್ಷಿಸಲು ನೆರವು ನೀಡುತ್ತದೆ. ಎಷ್ಟೋ ರೋಗಗಳಿಗೆ ಮನೆಯ ಬಾತ್‌ರೂಮ್‌ ಹಾಗೂ ಟಾಯ್ಲೆಟ್‌ಗಳೇ ಆವಾಸಸ್ಥಾನಗಳಾಗಿರುತ್ತವೆ. ಆದಕಾರಣ ಮನೆಮಂದಿ ರೋಗಮುಕ್ತ ಜೀವನ ನಡೆಸಲು ಇವೆರಡು ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋದು ಅತ್ಯಗತ್ಯ.

ಬಿದಿರಿನ ಬಿಸ್ಕತ್: ರುಚಿಯಲ್ಲಿ ಮಸ್ತ್‌, ಆರೋಗ್ಯಕ್ಕೆ ದೋಸ್ತ್‌

-ಪ್ರತಿ ಬಾರಿ ಟಾಯ್ಲೆಟ್‌ ಬಳಸಿದ ಬಳಿಕ ಮರೆಯದೆ ಕಮೋಡ್‌ ಸೀಟ್‌ ಸ್ವಚ್ಛಗೊಳಿಸಲು ಮರೆಯಬೇಡಿ. 
-ಟಾಯ್ಲೆಟ್‌ ಪೇಪರ್‌ಗಳನ್ನು ಕೈಗೆ ಸಿಗುವಂತೆ ಇಟ್ಟಿರಿ ಹಾಗೂ ಸೋಂಕುನಿವಾರಕ ಲಿಕ್ವಿಡ್‌ಗಳನ್ನು ಕಾಮೋಡ್‌ ಸೀಟ್‌ಗೆ ಸಿಂಪಡಿಸಿ ಈ ಪೇಪರ್‌ಗಳಿಂದ ಸ್ವಚ್ಛಗೊಳಿಸಿ.
-ಬಾತ್‌ರೂಮ್‌ನಲ್ಲಿರೋ ಟ್ಯಾಪ್‌, ಸಿಂಕ್‌ಗಳನ್ನು ಆಗಾಗ ಸೋಂಕುಮುಕ್ತಗೊಳಿಸಿ ಸ್ವಚ್ಛಗೊಳಿಸುತ್ತಿರಬೇಕು. ದಿನದಲ್ಲಿ ಕನಿಷ್ಠ 3-4 ಬಾರಿಯಾದ್ರೂ ಈ ಕೆಲಸ ಮಾಡಿ. 
-ಕೈಯಿಂದ ಟ್ಯಾಪ್‌ ಮುಟ್ಟೋ ಬದಲು ಮೊಣಕೈ ಅಥವಾ ಮಣಿಗಂಟನ್ನು ಬಳಸೋದು ಉತ್ತಮ. 
-ಒಬ್ಬರು ಟಾಯ್ಲೆಟ್‌ಗೆ ಹೋಗಿ ಬಂದ ತಕ್ಷಣ ಇನ್ನೊಬ್ಬರು ಒಳಗೆ ಹೋಗಬಾರದು. ಟಾಯ್ಲೆಟ್‌ ಫ್ಲಶ್‌ನಿಂದ ಕೂಡ ಕೊರೋನಾ ಹರಡೋ ಸಾಧ್ಯತೆಯಿದೆ ಎಂದು ಕೆಲವು ಅಧ್ಯಯನಗಳು ತಿಳಿಸಿರೋ ಕಾರಣ ಸ್ವಲ್ಪ ಸಮಯದ ಬಳಿಕ ಬಳಸೋದು ಸೂಕ್ತ.
-ಬಾತ್‌ರೂಮ್‌ ಬಾಗಿಲಿನ ಹಿಡಿಗಳನ್ನು ಕೂಡ ಆಗಾಗ ಸೋಂಕುಮುಕ್ತಗೊಳಿಸೋದು ಅಗತ್ಯ. ಬಾತ್‌ರೂಮ್‌ ಬಾಗಿಲು ತೆಗೆಯೋವಾಗ ಕೈಯಿಂದ ಮುಟ್ಟೋ ಬದಲು ಮೊಣಕೈ ಬಳಸಿ.
-ಬಾತ್‌ರೂಮ್‌ನಲ್ಲಿ ಹ್ಯಾಂಡ್‌ವಾಷ್‌ ಬಳಸೋವಾಗ ಅದರ ಬಾಟಲನ್ನು ಆದಷ್ಟು ಕೈಗಳಿಂದ ಮುಟ್ಟದೆ ಬಳಸಲು ಪ್ರಯತ್ನಿಸಿ.

ಡೆಂಗ್ಯೂ ಮರುಕಳಿಸಿದರೆ ಅಪಾಯ ಹೆಚ್ಚು

-ಬಾತ್‌ರೂಮ್‌ ನೆಲ ಹಾಗೂ ಗೋಡೆಗಳನ್ನು ಪ್ರತಿದಿನ ಒಂದು ಬಾರಿಯಾದ್ರೂ ಕ್ಲೀನಿಂಗ್‌ ಏಜೆಂಟ್‌ ಬಳಸಿ ಸ್ವಚ್ಛಗೊಳಿಸಿ.
-ಮನೆಯಲ್ಲಿ ಯಾರಾದ್ರೂ ಸೋಂಕಿನ ಲಕ್ಷಣಗಳನ್ನು ಹೊಂದಿದ್ರೆ ಅವರಿಗೆ ಪ್ರತ್ಯೇಕ ಬಾತ್‌ರೂಮ್‌ ಮೀಸಲಿಡೋದು ಒಳ್ಳೆಯದು. 
-ಇನ್ನು ಬಾತ್‌ರೂಮ್‌ನ ಕಿಟಕಿಗಳನ್ನು ದಿನದಲ್ಲಿ ಸ್ವಲ್ಪ ಹೊತ್ತಾದ್ರೂ ತೆಗೆದಿಡಿ. ಇದ್ರಿಂದ ಹೊರಗಿನ ಫ್ರೆಶ್‌ ಗಾಳಿ ಒಳಬರುತ್ತದೆ.
-ಕೋವಿಡ್‌-19 ಅಥವಾ ಇತರ ಯಾವುದೇ ಸೋಂಕಿಗೆ ಒಳಗಾಗಬಾರದೆಂದ್ರೆ ಕುಟುಂಬದ ಪ್ರತಿ ಸದಸ್ಯರು ಪ್ರತ್ಯೇಕ ಟವೆಲ್‌ ಬಳಸಬೇಕು. ಈ ಟವೆಲ್‌ಗಳನ್ನು ವಾರದಲ್ಲಿ ಕನಿಷ್ಠ ಎರಡು ಬಾರಿಯಾದ್ರೂ ಬಿಸಿ ನೀರಿನಲ್ಲಿ ವಾಷ್‌ ಮಾಡಿ ಬಿಸಿಲಿನಲ್ಲಿ ಒಣಗಿಸಬೇಕು.