Negative Comment ಮಾಡುತ್ತೀರಾ? ನಿಮ್ಮ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತೆ ಇದು!
ಗುರಿ ಇದ್ದಾಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ. ಅನೇಕರು ಇಟ್ಟ ಗುರಿ ತಲುಪಲು ಸಾಧ್ಯವಾಗದೆ ಹೋದಾಗ ಕೊರಗುತ್ತಾರೆ. ಆತ್ಮವಿಶ್ವಾಸ ಕಳೆದುಕೊಳ್ತಾರೆ. ಒಮ್ಮೆ ಹೋಗ ಆತ್ಮವಿಶ್ವಾಸವನ್ನು ಮರಳಿ ಪಡೆಯಬೇಕೆಂದ್ರೆ ಕೆಲ ಅಭ್ಯಾಸ ಬಿಡಬೇಕಾಗುತ್ತದೆ.
ಗುರಿ ಸಾಧನೆ ಬಹಳ ಮುಖ್ಯ. ಅನೇಕ ಬಾರಿ ಗುರಿ ಸಾಧಿಸಲು ನಾವು ವಿಫಲವಾಗ್ತೇವೆ. ಆಗ ನಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ. ಅದೃಷ್ಟ ಸರಿಯಿಲ್ಲ ಎನ್ನುತ್ತ ತಿರಗ್ತೆವೆ. ಕಳೆದುಕೊಂಡ ಆತ್ಮವಿಶ್ವಾಸವನ್ನು ಮರಳಿ ಪಡೆಯೋದು ಹೇಗೆ, ಮತ್ತೆ ಗುರಿಯತ್ತ ಸಾಗೋದು ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ನಮ್ಮ ಆತ್ಮವಿಶ್ವಾಸವನ್ನು ನಮ್ಮ ಕೆಲ ಹವ್ಯಾಸಗಳು ಕುಗ್ಗಿಸುತ್ತವೆ. ಆ ಚಟ, ಹವ್ಯಾಸಗಳು ಸಣ್ಣದಿರಬಹುದು ಇಲ್ಲ ದೊಡ್ಡದಿರಬಹುದು. ಅವು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತವೆ.
ಆತ್ಮವಿಶ್ವಾಸ (Confidence) ಎಂಬುದು ನಮ್ಮ ಆಲೋಚನೆ (Thought). ಹೌದು, ನಮ್ಮ ಆಲೋಚನೆಯೇ ನಮ್ಮ ಆತ್ಮವಿಶ್ವಾಸ. ನಾವು ನಮ್ಮ ಬಗ್ಗೆ ಧನಾತ್ಮಕವಾಗಿ ಯೋಚಿಸಿದರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಾವು ನಕಾರಾತ್ಮಕ (Negative) ವಾಗಿ ಯೋಚಿಸಿದರೆ ನಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ. ನಕಾರಾತ್ಮಕ ಆಲೋಚನೆಗಳು ನಮ್ಮನ್ನು ನಿರುತ್ಸಾಹ ಗೊಳಿಸುತ್ತವೆ. ಹಾಗಾಗಿ ಮೊದಲು ನಾವು ಆಲೋಚನೆ ಬದಲಿಸಬೇಕು ಎನ್ನುತ್ತಾರೆ ತಜ್ಞರು. ಆತ್ಮವಿಶ್ವಾಸ ಹೆಚ್ಚಾಗಬೇಕೆಂದ್ರೆ ನಾವು ಕೆಲ ಅಭ್ಯಾಸವನ್ನು ಬಿಡಬೇಕಾಗುತ್ತದೆ.
ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು : ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಗಾಧೆಯಿದೆ. ಅದರಂತೆ ನಮ್ಮ ಸಾಮರ್ಥ್ಯವಿದ್ದಷ್ಟೇ ನಾವು ಗುರಿ ಹೊಂದಿರಬೇಕು. ಅನೇಕ ಬಾರಿ ನಮಗೆ ಅಸಾಧ್ಯ ಎನ್ನುವುದನ್ನೇ ನಾವು ಗುರಿಯಾಗಿ ಆಯ್ಕೆ ಮಾಡಿಕೊಳ್ಳುತ್ತೇವೆ. ಆದ್ರೆ ಆ ಗುರಿಯನ್ನು ನಮ್ಮಿಂದ ಎಂದಿಗೂ ಮುಟ್ಟಲು ಸಾಧ್ಯವಾಗುವುದಿಲ್ಲ. ಇದ್ರಿಂದಾಗಿ ನಮ್ಮ ಆತ್ಮವಿಶ್ವಾಸ ಕಡಿಮೆಯಾಗ್ತಾ ಬರುತ್ತದೆ. ವೃತ್ತಿ ಮತ್ತು ಕುಟುಂಬದಲ್ಲಿ ಅತಿಯಾದ ಮಹತ್ವಾಕಾಂಕ್ಷೆ ನಮ್ಮನ್ನು ನಿರಾಶೆಗೊಳಿಸುತ್ತದೆ. ನಮ್ಮ ಆತ್ಮವಿಶ್ವಾಸವನ್ನು ಅಲುಗಾಡಿಸುತ್ತದೆ. ಅರ್ಜೆಂಟೀನಾದ ವಿಶ್ವ ಪ್ರಸಿದ್ಧ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ, ನಾವು ಗುರಿ ತಲುಪದೆ ಹೋದಾಗ ಆತ್ಮವಿಶ್ವಾಸ ಹಾಗೂ ಪ್ರೇರಣೆ ಎರಡನ್ನೂ ಕಳೆದುಕೊಳ್ತೆವೆ ಎನ್ನುತ್ತಾರೆ. ಇದು ನೂರಕ್ಕೆ ನೂರು ಸತ್ಯ. ಯಾವಾಗ್ಲೂ ಸಾಮರ್ಥ್ಯಕ್ಕೆ ತಕ್ಕಂತೆ ಗುರಿ ಇರಬೇಕು. ಸಣ್ಣ ಸಣ್ಣ ಗುರಿ ಮುಟ್ಟುತ್ತಾ ದೊಡ್ಡ ಗುರಿಯತ್ತ ಸಾಗಬೇಕು. ಸಣ್ಣ ಗುರಿ ಮುಟ್ಟಿದ್ರೂ ನಿಮ್ಮ ಆತ್ಮವಿಶ್ವಾಸ ಡಬಲ್ ಆಗುತ್ತದೆ.
ಸೂಪರ್ ಮೆನ್ ಆಗಲು ಸಾಧ್ಯವಿಲ್ಲ : ಅನೇಕರು ಒಂದೇ ಬಾರಿ ನೂರಾರು ಕೆಲಸ ಮಾಡಲು ಬಯಸ್ತಾರೆ. ಎಲ್ಲ ಕ್ಷೇತ್ರದಲ್ಲೂ ಕಾಣಿಸಿಕೊಂಡಾಗ ಜನರು ಮೆಚ್ಚುತ್ತಾರೆಂದು ಬಯಸ್ತಾರೆ. ಆದ್ರೆ ಎಲ್ಲ ಕೆಲಸಗಳನ್ನು ಮೈಮೇಲೆ ಎಳೆದುಕೊಂಡಾಗ ಯಾವುದ್ರಲ್ಲೂ ಗುರಿ ಸಾಧನೆ ಸಾಧ್ಯವಾಗುವುದಿಲ್ಲ. ಎಲ್ಲವನ್ನೂ ಅರ್ಧಕ್ಕೆ ಬಿಡಬೇಕಾಗುತ್ತದೆ. ಇದ್ರಿಂದ ಆತ್ಮವಿಶ್ವಾಸ, ಆಸಕ್ತಿ ಎರಡೂ ಕಡಿಮೆಯಾಗುತ್ತದೆ. ವೃತ್ತಿ ಜೀವನದಲ್ಲಿ ನಿಮ್ಮ ಗ್ರಾಫ್ ಹೆಚ್ಚಾಗುವ ಕೆಲಸವನ್ನು ಮಾತ್ರ ನೀವು ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ಸಾಕಷ್ಟು ಶ್ರಮ ನೀಡಬೇಕು.
ಮೂಲಂಗಿ ಜೊತೆ ಸೌತೆಕಾಯಿ ತಿನ್ತೀರಾ ? ಹಾಗಿದ್ರೆ ಎಡವಟ್ಟು ಆಗೋದು ಖಂಡಿತ
ಹೋಲಿಕೆ ಅಭ್ಯಾಸ : ಸಾಮಾಜಿಕ ಜಾಲತಾಣಗಳಿಂದ (Social Media) ಈ ಹೋಲಿಕೆ (Comparison) ಮತ್ತಷ್ಟು ಹೆಚ್ಚಾಗಿದೆ. ಅನೇಕರು ಆಗಾಗ ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡ್ತಿರುತ್ತಾರೆ. ಅದ್ರಲ್ಲಿರುವ ವ್ಯಕ್ತಿಗಳ ಜೊತೆ ತಮ್ಮನ್ನು ಹೋಲಿಕೆ ಮಾಡಿಕೊಳ್ತಾರೆ. ಅವರಿಗಿಂತ ತಾವು ಕೀಳೆಂದು ಭಾವಿಸ್ತಾರೆ. ಇದು ಅವರ ಆತ್ಮವಿಶ್ವಾಸವನ್ನು ದೊಡ್ಡ ಮಟ್ಟದಲ್ಲಿ ಕುಸಿಯುವಂತೆ ಮಾಡುತ್ತದೆ. ತಜ್ಞರ ಪ್ರಕಾರ, ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡಿ, ಬೇರೆಯವರ ಏಳ್ಗೆ ಬಗ್ಗೆ ಕೊರಗುತ್ತ ಕೂರುವ ಬದಲು ಆ ಸಮಯವನ್ನು ನಿಮ್ಮ ಕೆಲಸಕ್ಕೆ ಬಳಸಿದ್ರೆ ಯಶಸ್ಸು ಸಾಧ್ಯ.
ಯಾವ ರೀತಿಯ ಸ್ಯಾನಿಟರಿ ಪ್ಯಾಡ್ ಒಳ್ಳೇದು ನೋಡಿ
ಸದಾ ಸಂತೋಷವಾಗಿರಿ : ಅನೇಕರು ಯಾವಾಗ್ಲೂ ಗಂಟು ಹಾಕಿದ ಮುಖದಲ್ಲಿರುತ್ತಾರೆ. ನಗು ಮಾಯವಾಗಿರುತ್ತದೆ. ಒಂದಲ್ಲ ಒಂದು ಕಾರಣ ಹುಡುಗಿ ನೋವಿನಲ್ಲಿರುತ್ತಾರೆ. ಈ ನೋವು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಮನಸ್ಥಿತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ನಾವು ಪ್ರತಿ ದಿನ, ಪ್ರತಿ ಕ್ಷಣವನ್ನು ಅನುಭವಿಸಬೇಕು. ಸದಾ ಸಂತೋಷವಾಗಿರಲು ಪ್ರಯತ್ನಿಸಬೇಕು. ಧನಾತ್ಮಕವಾಗಿ ಆಲೋಚನೆ ಮಾಡ್ಬೇಕು.