Asianet Suvarna News Asianet Suvarna News

Health Tips: ದೀರ್ಘಕಾಲದ ಒತ್ತಡ ನಿಮ್ಮನ್ನು ಕ್ಯಾನ್ಸರ್ ನೂಕಬಹುದು ಹುಷಾರ್

ನಮ್ಮ ಅರಿವಿಲ್ಲದೆ ನಾವು ಪ್ರತಿ ದಿನ ಒತ್ತಡಕ್ಕೆ ಒಳಗಾಗಿರುತ್ತೇವೆ. ಒತ್ತಡದಿಂದ ಈ ಸಮಸ್ಯೆ ಬಂದಿದೆ ಅಂದ್ರೆ ನಂಬೋಕೆ ಸಾಧ್ಯವಾಗೋದಿಲ್ಲ. ಒತ್ತಡಗಳು ನಾನಾ ಕಾಯಿಲೆ ತರುತ್ತವೆ. ಅದ್ರಲ್ಲಿ ಕ್ಯಾನ್ಸರ್ ಕೂಡ ಒಂದು. 
 

How Stress Affects Cancer Risk mental and physical health interlinked roo
Author
First Published Feb 26, 2024, 12:16 PM IST

ಮನಸ್ಸು ಹಾಗೂ ಮನಸ್ಸಿನ ಆರೋಗ್ಯ ನಮ್ಮ ದೇಹದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಾವು ಯಾವಾಗಲೂ ಸಂತೋಷದಿಂದ ಇದ್ದರೆ ಆರೋಗ್ಯವಂತರಾಗಿರುತ್ತೇವೆ. ಮನಸ್ಸಿಗಾಗುವ ಒತ್ತಡ, ಬೇಸರ ಮುಂತಾದವು ನಮ್ಮ ಆರೋಗ್ಯಕ್ಕೆ ಕೆಟ್ಟದ್ದಾಗಿದೆ ಮತ್ತು ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಕೆಲಸ (Work) ದಲ್ಲಿ ಅಥವಾ ಮನೆಯಲ್ಲಿ ಕೆಲವೊಮ್ಮೆ ಒತ್ತಡ (Stress) ಉಂಟಾಗುತ್ತೆ. ಕೆಲವರು ಸಣ್ಣ ಸಣ್ಣ ವಿಷಯಗಳಿಗೂ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ. ಹೀಗೆ ಯಾವಾಗಲೂ ಒತ್ತಡಕ್ಕೆ ಒಳಗಾಗುವುದು ಅಪಾಯಕರ ಎಂದು ಅಧ್ಯಯನ (Study) ಗಳು ಹೇಳುತ್ತವೆ. ದೀರ್ಘಕಾಲದ ಒತ್ತಡ ಹೃದ್ರೋಗ ಮತ್ತು ಪಾರ್ಶ್ವವಾಯುಗಳ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದು ತಿಳಿದುಬಂದಿದೆ. ಇದರ ಹೊರತಾಗಿ ಅತಿಯಾದ ಒತ್ತಡವು ಕ್ಯಾನ್ಸರ್ (Cancer) ಹರಡುವಿಕೆಯನ್ನು ಹೆಚ್ಚಿಸುತ್ತದೆ ಎನ್ನುವುದು ಸಾಬೀತಾಗಿದೆ.

ಕಾಲಿನ ನಡುವೆ ದಿಂಬು ಇಟ್ಟು ಮಲಗೋದರಿಂದ ಇವೆ ಲಾಭ

ಒತ್ತಡದಿಂದ ಏನಾಗುತ್ತೆ? : ನಾವು ಒತ್ತಡಕ್ಕೆ ಒಳಗಾದಾಗ ನಮ್ಮ ದೇಹದಲ್ಲಾಗುವ ಬದಲಾವಣೆಗಳು ನಮಗೆ ತಿಳಿಯುತ್ತವೆ. ಇಂತಹ ಒತ್ತಡಗಳು ಅಲ್ಪಾವಧಿಯಾಗಿರದೇ ದೀರ್ಘಕಾಲದ ಒತ್ತಡವಾಗಿದ್ದರೆ ಅದು ನಮ್ಮ ಆರೋಗ್ಯಕ್ಕೆ ಹಾನಿಕರವಾಗಿದೆ. ಇದರಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ಉಂಟಾಗುತ್ತದೆ. ದೀರ್ಘಕಾಲದ ಒತ್ತಡವು ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುವ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಒತ್ತಡದಿಂದ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕೂಡ ದುರ್ಬಲವಾಗುತ್ತದೆ. ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯ ಕೊರತೆಯಾಗುತ್ತದೆ. 

ಕ್ಯಾನ್ಸರ್ ರೋಗಿಗಳಲ್ಲಿ ಒತ್ತಡವನ್ನು ತಪ್ಪಿಸುವುದು ಅಸಾಧ್ಯ. ಏಕೆಂದರೆ ಅವರು ರೋಗ ನಿರ್ಣಯವಾದ ನಂತರ ರೋಗ, ವಿಮೆ ಮತ್ತು ಕುಟುಂಬದ ಬಗ್ಗೆ ಯೋಚನೆ ಮಾಡಿಯೇ ಮಾಡುತ್ತಾರೆ. ಇದರಿಂದಲೇ ನಮಗೆ ಒತ್ತಡ ನಮ್ಮ ಮೇಲೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

ಒತ್ತಡದಿಂದ ಕ್ಯಾನ್ಸರ್ ಉಂಟಾಗುತ್ತೆ ಎಂದು ಅಧ್ಯಯನಗಳು ಹೇಳುತ್ತವೆ :  ಜರ್ನಲ್ ಕ್ಯಾನ್ಸರ್ ಸೆಲ್ ನಲ್ಲಿ ಪ್ರಕಟವಾದ ಅಧ್ಯಯನ, ಒತ್ತಡವು ನ್ಯೂಟ್ರೋಫಿಲ್ ಗಳೆಂದು ಕರೆಯಲ್ಪಡುವ ಬಿಳಿ ರಕ್ತ ಕಣಗಳ ರಚನೆಗೆ ಕಾರಣವಾಗುತ್ತದೆ. ಇದು ದೇಹದ ಅಂಗಾಂಶಗಳನ್ನು ಮೆಟಾಸ್ಟಾಸಿಸ್ ಗೆ ಒಳಗಾಗುವಂತೆ ಮಾಡುತ್ತದೆ ಎಂದು ಹೇಳಿದೆ. ಮೆಟಾಸಿಸ್ ಒಂದು ಅಂಗ ಅಥವಾ ಅಂಗಾಂಶದಿಂದ ಇನ್ನೊಂದಕ್ಕೆ ಕ್ಯಾನ್ಸರ್ ಕೋಶಗಳನ್ನು ಹರಡುತ್ತದೆ. ಅಮೆರಿಕದ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿಯ (ಸಿಎಸ್ಎಚ್ಎಲ್) ವಿಜ್ಞಾನಿಗಳ ತಂಡವು ಕ್ಯಾನ್ಸರ್ ಆರಂಭವಾಗುವ ಮೊದಲು ಅದರ ಹರಡುವಿಕೆಯನ್ನು ನಿಲ್ಲಿಸುವ ಹೊಸ ಚಿಕಿತ್ಸಾ ವಿಧಾನಗಳ ಬಗ್ಗೆ ಸಂಶೋಧನೆ ನಡೆಸಿದೆ.

ಹೆಚ್ಚು ಸ್ಟ್ರೆಚ್ ಮಾಡಿಸಲು ಹೋಗಿ ಮಹಿಳೆಯ ಕಾಲನ್ನೇ ಮುರಿದ ಯೋಗ ಟೀಚರ್! ಸೇಫ್ ಆಗಿ ಅಭ್ಯಾಸ ಮಾಡೋದು ಹೇಗೆ?

ಸಿಎಸ್ಎಚ್ಎಲ್ ತಂಡ ಇಲಿಗಳ ಮೇಲೂ ಒತ್ತಡದ ಪ್ರಯೋಗವನ್ನು ಮಾಡಿತು. ಅದರಿಂದ ಅವರು ಮೆಟಾಸ್ಟಾಟಿಕ್ ಗಾಯಗಳಲ್ಲಿ 4 ಪಟ್ಟು ಹೆಚ್ಚಳವನ್ನು ಕಂಡರು. ಗ್ಲುಕೊಕಾರ್ಟಿಕಾಯ್ಡ್ಸ್ ಎಂಬ ಒತ್ತಡದ ಹಾರ್ಮೋನುಗಳು ನ್ಯೂಟ್ರೋಫಿಲ್ ಗಳ ಮೇಲೆ ಕಾರ್ಯನಿರ್ವಹಿಸುತ್ತವೆ ಎಂದು ತಂಡವು ಕಂಡುಹಿಡಿದಿದೆ. 

ಒತ್ತಡದ ನಿವಾರಣೆ ಹೇಗೆ? : ನಿಮ್ಮಲ್ಲಾಗುವ ಒತ್ತಡವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲವಾದರೂ ಒತ್ತಡವನ್ನು ನಿರ್ವಹಿಸುವುದು ಹೇಗೆ ಎನ್ನುವುದನ್ನು ನೀವು ಕಲಿಯಬೇಕು. ಇದರಿಂದ ನೀವು ಹೆಚ್ಚು ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಬಹುದು. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ) ಮುಂತಾದ ಥೆರಪಿಗಳ ಮೂಲಕ ಮಾನಸಿಕ ಆರೋಗ್ಯವನ್ನು ಮತ್ತು ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದು. ನಿಯಮಿತವಾಗಿ ಯೋಗ, ವ್ಯಾಯಾಮ ಮತ್ತು ಧ್ಯಾನ ಮಾಡುವುದರಿಂದ ಒತ್ತಡವನ್ನು ನಿವಾರಿಸಬಹುದು. ಒತ್ತಡ ನಿವಾರಣೆಗೆ ನಿದ್ರೆ ಕೂಡ ಮುಖ್ಯ ಹಾಗಾಗಿ ಪ್ರತಿನಿತ್ಯ ಎಂಟು ಗಂಟೆಗಳ ನಿದ್ರೆ ಒತ್ತಡದ ವಿರುದ್ಧ ರಕ್ಷಣೆ ನೀಡುತ್ತದೆ. ದೀರ್ಘಕಾಲದ ಒತ್ತಡವನ್ನು ನಿರ್ಲಕ್ಷಿಸುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಅದು ಋಣಾತ್ಮಕ ಪ್ರಭಾವ ಬೀರುವ ಮೊದಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಸೂಕ್ತ.

Follow Us:
Download App:
  • android
  • ios