ಮೊಬೈಲ್ ನೋಡೋದು ಹೆಚ್ಚಾಗಿದೆ, ಕಣ್ಣು ಪೂರ್ತಿ ಹಾಳಾಗೋ ಮುಂಚೆ ಕ್ಯಾರೇಟ್ ತಿಂದರೊಳಿತು!
ಕ್ಯಾರೆಟ್ ಆರೋಗ್ಯಕ್ಕೆ ಒಳ್ಳೆಯದು. ಇದು ನಮಗೆ, ನಿಮಗೆ ಎಲ್ಲ ಗೊತ್ತು. ಆದ್ರೆ ದೃಷ್ಟಿ ಸರಿಯಾಗಿರಬೇಕು ಅಂದ್ರೆ ಎಷ್ಟು ಕ್ಯಾರೆಟ್ ಸೇವನೆ ಮಾಡ್ಬೇಕು ಅನ್ನೋದು ಗೊತ್ತಾ? ಇದ್ರ ಬಗ್ಗೆ ಇಲ್ಲಿದೆ ಮಾಹಿತಿ.
ದೃಷ್ಟಿ ಮಂದವಾಗಿದೆ ಎನ್ನುವ ಸಮಸ್ಯೆ ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ತಿದ್ದ ಕಾಲವೊಂದಿತ್ತು. ಆದ್ರೀಗ ಕಣ್ಣು ದುರ್ಬಲವಾಗೋದು, ದೃಷ್ಟಿ ಸಮಸ್ಯೆ ಒಂದುವರೆ ವರ್ಷದ ಮಗುವಿನಲ್ಲೂ ಕಾಣಿಸಿಕೊಳ್ತಿದೆ. ಅನೇಕ ಮಕ್ಕಳ ಕಣ್ಣಿಗೆ ಈಗ ಕನ್ನಡಕ ಬರ್ತಿದೆ.
ಕಣ್ಣಿ (Eye) ನ ಸಮಸ್ಯೆಗೆ ಅನೇಕ ಕಾರಣಗಳಿವೆ. ನಮ್ಮ ಜೀವನ ಶೈಲಿ (Lifestyle), ಆಹಾರ ಸೇವನೆ ಹಾಗೂ ಅತಿಯಾದ ಗೆಜೆಟ್ ಬಳಕೆ ಇಲ್ಲಿ ಮುಖ್ಯವಾಗುತ್ತದೆ. ಆರಂಭದಲ್ಲಿಯೇ ಕಣ್ಣಿನ ಸಮಸ್ಯೆಗೆ ಸೂಕ್ತ ಚಿಕಿತ್ಸೆ ದೊರೆತ್ರೆ ಒಳ್ಳೆಯದು. ಕಣ್ಣಿನ ಚಿಕಿತ್ಸೆ ಜೊತೆ ನಾವು ಸೇವಿಸುವ ಆಹಾರದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ.
ಕ್ಯಾರೆಟ್ (Carrot) ಕಣ್ಣಿಗೆ ಒಳ್ಳೆಯದು. ಈ ಮಾತನ್ನು ನಾವು ಹಿರಿಯರ ಬಾಯಿಂದ್ಲೂ ಕೇಳಿರ್ತೇವೆ. ಕ್ಯಾರೆಟ್ ಕಣ್ಣಿನ ಆರೋಗ್ಯ ಕಾಪಾಡುವುದ್ರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಣ್ಣಿಗೆ ಅಗತ್ಯವಿರುವ ಎಲ್ಲ ಪೋಷಕಾಂಶ (Nutrient ) ಕ್ಯಾರೆಟ್ ನಲ್ಲಿದೆ. ಸಾಮಾನ್ಯವಾಗಿ ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್ ಸೇವನೆ ಮಾಡ್ಬೇಕು ಎಂಬುದು ಎಲ್ಲರಿಗೂ ತಿಳಿದಿದೆ, ಆದ್ರೆ ದಿನಕ್ಕೆ ಎಷ್ಟು ಕ್ಯಾರೆಟ್ ಸೇವನೆ ಮಾಡಿದ್ರೆ ನಾವು ಕನ್ನಡಕದ ಕಾಟದಿಂದ ಮುಕ್ತಿ ಹೊಂದಬಹುದು ಎಂಬುದು ಗೊತ್ತಿಲ್ಲ. ನಾವಿಂದು ಇದ್ರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೆವೆ. ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ಬಹಳ ಮುಖ್ಯ. ತಜ್ಞರ ಪ್ರಕಾರ, 19 ವರ್ಷ ಮೇಲ್ಪಟ್ಟ ಪುರುಷರು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ದಿನಕ್ಕೆ 3,000 ಐಯು ವಿಟಮಿನ್ ಎ ಸೇವನೆ ಮಾಡಬೇಕು. 19 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ದಿನ 2,333 ಐಯು ವಿಟಮಿನ್ ಎ ಅಗತ್ಯವಿರುತ್ತದೆ.
ವಿಟಮಿನ್ ಎ ಕ್ಯಾರೆಟ್ ನಲ್ಲಿ ಹೇರಳವಾಗಿರುತ್ತದೆ. 100 ಗ್ರಾಂ ಹಸಿ ಕ್ಯಾರೆಟ್‌ನಲ್ಲಿ 16,700 ಐಯು ವಿಟಮಿನ್ ಎ ಸಿಗುತ್ತದೆ. ಈ ಲೆಕ್ಕಾಚಾರದಲ್ಲಿ ನೋಡಿದಾಗ ನಾವು ಪ್ರತಿನಿತ್ಯ 50 ಗ್ರಾಂ ಕ್ಯಾರೆಟ್ ಸೇವನೆ ಮಾಡಿದ್ರೆ ಸಾಕಾಗುತ್ತದೆ. ಇದ್ರಿಂದ ನಮ್ಮ ಕಣ್ಣಿಗೆ ಬೇಕಾದ ವಿಟಮಿನ್ ಎ ಸರಿಯಾದ ಪ್ರಮಾಣದಲ್ಲಿ ಸಿಗುತ್ತದೆ. ಕ್ಯಾರೆಟ್ ನಲ್ಲಿ ಬರೀ ವಿಟಮಿನ್ ಎ ಮಾತ್ರ ಇಲ್ಲ. ಕಣ್ಣಿನ ಆರೋಗ್ಯ ಹೆಚ್ಚಿಸುವ ಇನ್ನೂ ಅನೇಕ ಪೋಷಕಾಂಶಗಳು ಕ್ಯಾರೆಟ್ ನಲ್ಲಿದೆ.
Health Tips: ಹೀಗೆಲ್ಲಾ ಆಯ್ತು ಅಂದ್ರೆ ಲಿವರ್ ಬಗ್ಗೆ ಎಕ್ಸ್ಟ್ರಾ ಕೇರ್ ತಗೋಬೇಕು ಅಂತರ್ಥ
ಕ್ಯಾರೆಟ್ ನಲ್ಲಿರುವ ಪೋಷಕಾಂಶ : ನಾವು ಪ್ರತಿ ದಿನ ಸೇವನೆ ಮಾಡುವ ಕ್ಯಾರೆಟ್‌ನಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್, ಬೀಟಾ ಕ್ಯಾರೋಟಿನ್, ಆಲ್ಫಾ ಕ್ಯಾರೋಟಿನ್ ಇದೆ. ಈ ಎಲ್ಲ ಪೋಷಕಾಂಶಗಳು ವಯಸ್ಸಾದಂತೆ ನಮ್ಮನ್ನು ಕಾಡುವ ದೃಷ್ಟಿ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮ ದೃಷ್ಟಿ ದುರ್ಬಲವಾಗದಂತೆ ನೋಡಿಕೊಳ್ಳುತ್ತದೆ. ಕಣ್ಣುಗಳ ಸ್ನಾಯುಗಳನ್ನು ಒತ್ತಡ ಹಾಗೂ ಹಾನಿಕಾರಕ ಕಿರಣಗಳಿಂದ ರಕ್ಷಿಸುವ ಕೆಲಸವನ್ನು ಕ್ಯಾರೆಟ್ ನಲ್ಲಿರುವ ಈ ಪೋಷಕಾಂಶಗಳು ಮಾಡುತ್ತವೆ.
ಕೊಬ್ಬಿನ ಸಮಸ್ಯೆಗೆ ಮುಕ್ತಿ : ಕೆಟ್ಟ ಕೊಬ್ಬಿನಿಂದ ಬಳಲುತ್ತಿರುವವರು ಪ್ರತಿ ದಿನ 50 ಗ್ರಾಂ ಕ್ಯಾರೆಟ್ ಸೇವನೆ ಮಾಡಬೇಕು. ಇದ್ರಿಂದ ಕೆಟ್ಟ ಕೊಬ್ಬು ದೇಹದಿಂದ ಹೊರಗೆ ಹೋಗುತ್ತದೆ. ಕ್ಯಾರೆಟ್ ಸೇವನೆ ಮಾಡಿದ್ರೆ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಸಿವಾಗದ ಕಾರಣ ನೀವು ಅನವಶ್ಯಕ ಯಾವುದೇ ಆಹಾರ ಸೇವನೆ ಮಾಡುವುದಿಲ್ಲ. ಇದ್ರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ. ಇದಲ್ಲದೆ ಕ್ಯಾರೆಟ್ ನಲ್ಲಿರುವ ನೀರಿನಾಂಶ ಚಯಾಪಚಯಕ್ಕೆ ಸಹಾಯ ಮಾಡುವ ಜೊತೆಗೆ ಕೊಬ್ಬನ್ನು ಸುಡುವ ಕೆಲಸವನ್ನೂ ಮಾಡುತ್ತದೆ.
ಬಾಡಿ ಬಿಲ್ಡ್ ಮಾಡಲು ಸಸ್ಯಾಹಾರದೊಂದಿಗೆ…. ಈ ನಾನ್ ವೆಜ್ ಸೇವಿಸಿ
ಕ್ಯಾರೆಟ್ ಸೇವನೆಯಿಂದ ಕೂದಲಿನ ಆರೋಗ್ಯ ಸುಧಾರಿಸುವ ಜೊತೆಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ನಮ್ಮ ದೇಹ ಪಡೆಯುತ್ತದೆ. ಮಕ್ಕಳಿಗೆ ಕ್ಯಾರೆಟನ್ನು ಪ್ರತಿ ದಿನ ನೀಡುವ ಅಗತ್ಯವಿದೆ. ಹಸಿ ಕ್ಯಾರೆಟ್ ಸೇವನೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.