ಕರಗದ ಕೊಬ್ಬಿಗೆ ಕೊಡಿ ಘಾಟಿ ಮೆಣಸಿನ ನಾಟಿ ಟ್ರೀಟ್ಮೆಂಟ್

ನೀವು ಸ್ಪೈಸಿ ಫುಡ್ ಪ್ರಿಯರಾಗಿದ್ದಲ್ಲಿ, ತಿನ್ನೋದೆಲ್ಲ ಖಾರ ಇರಬೇಕೆಂದು ಬಯಸುವವರಾಗಿದ್ದಲ್ಲಿ, ತೂಕ ಇಳಿಸೋದು ನಿಮಗೆ ಸ್ವಲ್ಪ ಸುಲಭವೇ.  ನಿಮ್ಮ ಕರಗದ ಕೊಬ್ಬಿಗೆ ಕೊಡಿ ಘಾಟಿ ಹಸಿರು ಮೆಣಸಿನ ನಾಟಿ ಟ್ರೀಟ್ಮೆಂಟ್.

How green chilli can help you lose weight

ತೂಕ ಇಳಿಸೋ ಹಟಕ್ಕೆ ಬಿದ್ದವರು ಯಾರು ಏನು ಹೇಳಿದ್ರೂ ಮಾಡೋಕೆ ಸೈ. ಒಟ್ನಲ್ಲಿ ಒಂದಿಷ್ಟು ಕಿಲೋ ಕರಗಬೇಕಷ್ಟೇ. ಅದಕ್ಕಾಗಿ ಕಿಟೋ, ವೇಗನ್ ಮತ್ತಿತರೆ ಡಯಟ್ ಟ್ರೈ ಮಾಡಿ, ಇನ್ಯಾವ ಹೊಸ ಡಯಟ್ ತಮಗೆ ವರವಾಗಬಹುದೆಂದು ನೆಟ್‌ನಲ್ಲಿ ಸರ್ಚ್ ಮಾಡುತ್ತಾ, ಯಾವ ನಟಿ ತೂಕ ಇಳಿಸೋಕೆ ಏನು ಮಾಡಿದ್ಲು ಎಂದೆಲ್ಲ ನೋಡಿಕೊಳ್ಳುತ್ತಾ ಕುಳಿತುಕೊಳ್ಳುತ್ತಾರೆ. ಆದರೆ, ಪರ್ಫೆಕ್ಟ್ ಡಯಟ್ ಎಂಬುದು ಖಂಡಿತಾ ಇಲ್ಲ. ಬದಲಿಗೆ ಸಣ್ಣ ಪುಟ್ಟ ಲೈಫ್‌ಸ್ಟೈಲ್ ಬದಲಾವಣೆಗಳು ಹಾಗೂ ಆಹಾರಾಭ್ಯಾಸದಲ್ಲಿ ಸಣ್ಣ ಪುಟ್ಟ ಪ್ಲಸ್ಸು ಮೈನಸ್ಸುಗಳಿಂದ ತೂಕ ಮೈನಸ್ ಮಾಡಬಹುದು. 

ಭಾರತೀಯ ಆಹಾರ ಪದ್ಧತಿಯಲ್ಲಿ ಹಸಿರು ಮೆಣಸಿನಕಾಯಿ ಹೊಸತೇನಲ್ಲ. ಇದನ್ನು ಹಸಿ ಹಸಿಯಾಗಿ ಕಚಕಚ ತಿನ್ನುವವರಿಂದ ಹಿಡಿದು ಬೋಂಡಾ, ಗೊಜ್ಜು, ತಡ್ಕಾ ಮುಂತಾದವಕ್ಕೆ ಬಳಸುವವರೆಗೆ ಎಲ್ಲಕ್ಕೂ ತನ್ನ ಫ್ಲೇವರ್ ಆ್ಯಡ್ ಮಾಡುವಷ್ಟು ಸ್ವಂತಿಕೆ ಹೊಂದಿದೆ ಈ ಮಿರ್ಚಿ. 

ಈ ಚುಚ್ಚುವಂಥ ಖಾರದ ರುಚಿ ನೀಡುವುದರೊಂದಿಗೆ ಹಸಿ ಮೆಣಸಿನಕಾಯಿ ಕೂಡಾ ಹಲವು ಆರೋಗ್ಯ ಲಾಭಗಳನ್ನು ಹೊಂದಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅವುಗಳಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್ಸ್ ಹಾಗೂ ಡಯಟರಿ ಫೈಬರ್ಸ್, ವಿಟಮಿನ್ ಎ, ಪೊಟ್ಯಾಶಿಯಂ ಹಾಗೂ ಐರನ್ ಬಹಳಷ್ಟಿದೆ. 
ಹಸಿಮೆಣಸು ಹೇಗೆ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತೆ?

- ಮೆಟಾಬಾಲಿಸಂ‌ನ್ನು ವೇಗಗೊಳಿಸುತ್ತದೆ
ನೀವು ತೂಕ ಕಳೆದುಕೊಳ್ಳಲು ನೋಡುತ್ತಿದ್ದರೆ ನಿಮ್ಮ ಡಯಟ್‌ಗೆ ಹಸಿರು ಮೆಣಸಿನಕಾಯಿ ಸೇರಿಸುವುದರಿಂದ ಮತ್ತಷ್ಟು ಫ್ಯಾಟ್ ಕರಗಿಸಲು ಸಾಧ್ಯವಾಗುತ್ತದೆ. ಏಕೆಂದರೆ ಖಾರವು ತಿಂದ ಮೂರು ಗಂಟೆಗಳ ಕಾಲ ಮೆಟಾಬಾಲಿಸಂ‌ನ್ನು ವೇಗಗೊಳಿಸುತ್ತದೆ. 

- ಹಸಿವು ಹೋಗಿಸುತ್ತದೆ
'ಅಪೆಟೈಟ್' ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಂತೆ ಸ್ಪೈಸಿ ಆಹಾರವು ಬೇಗ ಹೊಟ್ಟೆ ತುಂಬಿದ ಫೀಲಿಂಗ್ ನೀಡುತ್ತದೆ. ಹಾಗಾಗಿ, ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಅತಿಯಾಗಿ ತಿನ್ನುವುದು ತಪ್ಪುತ್ತದೆ. 

ರಾಗಿ ತಿಂದು ಆರೋಗ್ಯವಂತರಾಗಿ

- ತೂಕ ಇಳಿಕೆ
'ಕ್ಲಿನಿಕಲ್ ನ್ಯೂಟ್ರಿಶನ್' ಎಂಬ ಅಮೆರಿಕನ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನದಂತೆ ಹಸಿಮೆಣಸಿನಕಾಯಿಯಲ್ಲಿರುವ ಕ್ಯಾಪ್‌ಸೈಸಿನ್ ಎಂಬ ಕಾಂಪೌಂಡ್ ಹೊಟ್ಟೆಯ ಬೊಜ್ಜನ್ನು ಇಳಿಸಲು ಸಹಕಾರಿ ಎಂದು ತಿಳಿದುಬಂದಿದೆ. 
ಕೇವಲ ತೂಕ ಇಳಿಕೆಯಲ್ಲ, ಹಸಿ ಮೆಣಸಿನಕಾಯಿಯಿಂದ ಹಲವಾರು ಆರೋಗ್ಯ ಲಾಭಗಳಿವೆ.
- ಹಸಿ ಮೆಣಸಿನಲ್ಲಿರುವ ಕ್ಯಾಪ್‌ಸೈನಿನ್ ಕೋಲ್ಡ್ ಹಾಗೂ ಸೈನಸ್ ಪರಿಣಾಮ ಕಡಿಮೆ ಮಾಡುತ್ತದೆ. ಈ ಕೆಮಿಕಲ್ ಕಾಂಪೌಂಡ್ ಮ್ಯೂಕಸ್ ಮೆಂಬ್ರೇನ್‌ನಲ್ಲಿ ರಕ್ತದ ಹರಿವನ್ನು ಹೆಚ್ಚಿಸಿ, ಮ್ಯೂಕಸ್ ಉತ್ಪತ್ತಿ ತೆಳುವಾಗುವಂತೆ ಮಾಡುತ್ತದೆ. 
- ಹಸಿಮೆಣಸು ತಿನ್ನುವುದರಿಂದ ದೇಹದ ಹೀಟ್ ಹೆಚ್ಚುತ್ತದೆ. ಇದು ನೋವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ.
- ಇದರಲ್ಲಿರುವ ಬೀಟಾ ಕೆರೋಟಿನ್ ಹಾಗೂ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ, ಚರ್ಮಕ್ಕೆ ಕಾಂತಿ ನೀಡುತ್ತದೆ. 
- ಯಾವುದೇ ಬಾಯಿಯಲ್ಲಿ ನೀರೂರಿಸುವ ಆಹಾರವು ಜೀರ್ಣಕ್ರಿಯೆ ಚೆನ್ನಾಗಾಗಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಹಸಿಮೆಣಸು ಕೂಡಾ. 
- ಡಯಾಬಿಟೀಸ್ ಇರುವವರು ಹಸಿಮೆಣಸಿನ ಬಳಕೆ ಹೆಚ್ಚಿಸಬೇಕು. ಏಕೆಂದರೆ, ಇದು ಹೆಚ್ಚಾದ ಶುಗರ್ ಲೆವೆಲ್ ಇಳಿಸಿ ಆರಾಮಾಗಿರಲು ಸಹಾಯ ಮಾಡುತ್ತದೆ. 

ಆಲೂ ಪೂರಿ ಮುಂದೆ ಮೊಟ್ಟೆ, ಓಟ್ಸ್ ವೇಸ್ಟ್

ಹಸಿ ಮೆಣಸಿನಕಾಯಿ ಪ್ರತಿನಿತ್ಯ ಬಳಕೆ ಹೇಗೆ?
ಹಸಿಮೆಣಸಿನಕಾಯಿಯನ್ನು ಡಯಟ್‌ನಲ್ಲಿ ಬಳಸೋಕೆ ನೀವೇನು ಅಂಥ ಕ್ರಿಯೇಟಿವ್ ಆಗಬೇಕಾಗಿಲ್ಲ. ಮಾಡುವ ಎಲ್ಲ ಗ್ರೇವಿಗಳು, ಸಾಂಬಾರ್, ಸಾರು, ಚಟ್ನಿ, ದಾಲ್, ಪರೋಟಾ, ಮಸಾಲೆ ದೋಸೆ, ಪಲ್ಯಗಳು ಎಲ್ಲದರಲ್ಲೂ ಹಸಿಮೆಣಸು ಬಳಕೆ ಮಾಡಬಹುದು. ನಿಮಗಿಷ್ಟ ಎಂದಾದಲ್ಲಿ ಹಸಿಹಸಿಯಾಗಿಯೇ ಕಚ್ಚಿಕೊಂಡು ತಿನ್ನಬಹುದು. ಹಸಿಮೆಣಸಿನ ಉಪ್ಪಿನಕಾಯಿ ಕೂಡಾ ರುಚಿರುಚಿಯಾಗಿದ್ದು ನಾಲಿಗೆಯಲ್ಲಿ ನೀರೂರಿಸುತ್ತದೆ. 

ಪ್ರತಿರೋಧಕ ಶಕ್ತಿ ಹೆಚ್ಚಿಸೋ ಜ್ಯೂಸ್‌ಗಳಿವು..

"

Latest Videos
Follow Us:
Download App:
  • android
  • ios