Asianet Suvarna News Asianet Suvarna News

Omicron: ಕೋವಿಡ್‌ ಲಸಿಕೆ ಹಾಕಿಸಿಕೊಂಡವರಿಗೆ ಓಮಿಕ್ರಾನ್‌ ಬರಲ್ವಾ? ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ?

* ವಿಶ್ವದೆಲ್ಲೆಡೆ ಕೋವಿಡ್‌ ರೂಪಾಂತರಿ ಓಮಿಕ್ರಾನ್‌ನದೇ ಸುದ್ದಿ

* ಕೋವಿಡ್‌ಗೆ ಲಸಿಕೆ ಹಾಕಿಸಿಕೊಂಡವರಲ್ಲಿ ಓಮಿಕ್ರಾನ್‌ ಅಟ್ಯಾಕ್‌ ಆಗುವ ಸಾಧ್ಯತೆ ಕಡಿಮೆಯೇ?

* ವ್ಯಾಕ್ಸಿನ್‌ಗೂ ಹೊಸ ರೂಪಾಂತರಿಗೂ ಸಂಬಂಧವೇ ಇಲ್ವಾ?

How effective is covid vaccine to prevent new coronavirus variant Omicron
Author
Bengaluru, First Published Nov 30, 2021, 3:45 PM IST
  • Facebook
  • Twitter
  • Whatsapp

ಕೋವಿಡ್‌ (Covid 19) ಬಗ್ಗೆ ಮಾತಾಡುವವರು ಈಗ ಕಡಿಮೆ. ಎಲ್ಲರ ಬಾಯಲ್ಲೂ ಓಮಿಕ್ರಾನ್‌ನದ್ದೇ (Omicron) ಮಾತು. ಆ ಡೆಡ್ಲೀ ವೈರಸ್‌ ಕೋವಿಡ್‌ಗಿಂತ ಹೆಚ್ಚು ತೀವ್ರವಾಗಿ ನಮ್ಮ ಮೇಲೆ ಆಕ್ರಮಣ ಮಾಡುತ್ತದಾ, ಅದು ಬಂದರೆ ಸಾವು ಖಂಡಿತವಾ ಅಥವಾ ಅದು ಕೋವಿಡ್‌ನಷ್ಟು ತೀವ್ರವಾಗಿ ಬಾಧಿಸೋದಿಲ್ವಾ.. ಈ ಕುರಿತು ಅಂತೆಕಂತೆಗಳೇ ಹರಿದಾಡುತ್ತಿವೆ. ಇದು ವಿಶ್ವಕ್ಕೇ ಹೊಸ ಬಗೆಯ ಸಮಸ್ಯೆಯಾದ ಕಾರಣ ಉತ್ತರ ಹುಡುಕಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆಯೇ ವಿನಃ ಇದಕ್ಕೆ ಖಚಿತ ಉತ್ತರ ನೀಡುವುದು ಕಷ್ಟವೇ. ಇದರ ಜೊತೆಗೆ ನಮ್ಮ ಜನರನ್ನು ಇನ್ನೊಂದು ಸಂದೇಹ ಬಾಧಿಸುತ್ತಿದೆ. ಕೋವಿಡ್ -19 ಗೆ ಕಾರಣವಾಗುವ ಸಾರ್ಸ್-ಕೋವ್-2 ನ ಓಮಿಕ್ರಾನ್ ರೂಪಾಂತರದ ವಿರುದ್ಧ ಲಸಿಕೆ (Vaccine) ಕಾರ್ಯ ನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಇದೀಗ ಹಲವರಲ್ಲಿ ಪ್ರಶ್ನೆ ಮೂಡಲು ಕಾರಣವಾಗಿದೆ. 

ಕೋವಿಡ್‌ ನಿಂದ ಜನರನ್ನು ಪಾರು ಮಾಡಲು ದೇಶದೆಲ್ಲೆಡೆ ಕೋವಿಡ್‌ ಲಸಿಕೆ (Covid vaccine) ಅಭಿಯಾನ ಬಹಳ ಚರುಕಾಗಿ ನಡೆದಿತ್ತು. ಪರಿಣಾಮ ಹೆಚ್ಚಿನ ಜನರು ಕೋವಿಡ್-19 ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಮಕ್ಕಳನ್ನು ಹೊರತುಪಡಿಸಿದರೆ ಉಳಿದ ಹೆಚ್ಚಿನವರು ಲಸಿಕೆ ಪಡೆದವರೇ. ಆದರೆ ಈ ಲಸಿಕೆ ಓಮಿಕ್ರಾನ್‌ ವಿರುದ್ಧವೂ ಕಾರ್ಯ ನಿರ್ವಹಿಸುತ್ತಾ, ಅಥವಾ ಅದಕ್ಕೆ ಬೇರೆ ಲಸಿಕೆ ಪಡೆದುಕೊಳ್ಳಬೇಕಾ, ಹೀಗೆ ಪ್ರತಿ ವರ್ಷ ಹೊಸ ಹೊಸ ರೂಪಾಂತರಗಳು ಬರುತ್ತಿದ್ದರೆ ಜನ ಸಾಮಾನ್ಯರ ಬದುಕು ಹೇಗೆ ನಡೆಯಬೇಕು ಎಂಬಿತ್ಯಾದಿ ಪ್ರಶ್ನೆಗಳೂ ಎದ್ದಿವೆ. ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ಸಾರ್ಸ್-ಕೋವ್-2 ವಿರುದ್ಧ ಲಸಿಕೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಗಮನಿಸಬೇಕು. ಹೆಚ್ಚಿನ ಲಸಿಕೆಗಳು ವೈರಸ್‌ನ ಸ್ಪೈಕ್ ಪ್ರೋಟೀನ್ ಪ್ರದೇಶವನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಇದು ಮಾನವ ಜೀವಕೋಶವನ್ನು ಪ್ರವೇಶಿಸಲು ಬಳಸುವ ಕೊರೋನಾ ವೈರಸ್ ನ ಭಾಗವಾಗಿದೆ. ಸಾರ್ಸ್-ಕೋವ್-2 ನ ಸ್ಪೈಕ್ ಪ್ರೋಟೀನ್ ಅನ್ನು ಗುರುತಿಸಲು ಮತ್ತು ವೈರಸ್ ದೇಹವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಅದರ ಮೇಲೆ ದಾಳಿ ಮಾಡಲು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯನ್ನು ತರಬೇತಿ ಮಾಡುವ ಮೂಲಕ ಲಸಿಕೆಗಳು ಕಾರ್ಯನಿರ್ವಹಿಸುತ್ತವೆ.

Sexual health: ಉತ್ತಮ ಲೈಂಗಿಕತೆಗೆ ಸರಳ ವ್ಯಾಯಾಮಗಳು

ಓಮಿಕ್ರಾನ್ ರೂಪಾಂತರದಲ್ಲಿ ಕಂಡುಬರುವ ಅಂಶವೆಂದರೆ ಅದರ ಸ್ಪೈಕ್ ಪ್ರೋಟೀನ್ 30ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ. ಸ್ಪೈಕ್ ಪ್ರೋಟೀನ್‌ನ ರಿಸೆಪ್ಟರ್-ಬೈಂಡಿಂಗ್ ಡೊಮೇನ್ ಅಥವಾ ಆರ್ ಬಿ ಡಿ ಎಂದು ಕರೆಯಲ್ಪಡುವ ಈ ಹತ್ತು ರೂಪಾಂತರಗಳು ಕಂಡು ಬರುತ್ತವೆ. ಆರ್ ಬಿ ಡಿ ಎಂಬುದು ಸ್ಪೈಕ್ ಪ್ರೋಟೀನ್‌ನ ಭಾಗವಾಗಿದ್ದು, ಅದು ಮಾನವ ಜೀವಕೋಶಕ್ಕೆ ಅಂಟಿಕೊಳ್ಳುತ್ತದೆ. ಸ್ಪೈಕ್ ಪ್ರೊಟೀನ್‌ಗಳು ಕೊರೋನಾ ವೈರಸ್‌ನ ಒಂದೇ ಭಾಗವಲ್ಲ. ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಗುರುತಿಸುತ್ತದೆ ಮತ್ತು ಗುರಿಯಾಗಿಸಬಹುದು. ಹಿಂದಿನ ಸೋಂಕು ಅಥವಾ ವ್ಯಾಕ್ಸಿನೇಷನ್‌ಗೆ ಪ್ರತಿಯಾಗಿ ದೇಹದಲ್ಲಿ ಬೆಳೆಯುವ ಪ್ರತಿಕಾಯಗಳು ಮತ್ತು ಟಿ ಕೋಶಗಳು ನಿರ್ದಿಷ್ಟ ಕೋಶಗಳು ಮತ್ತು ರೋಗಕಾರಕಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅವು ಇನ್ನೂ ರೂಪಾಂತರಿತ ಸಾರ್ಸ್-ಕೋವ್-2 ವಿರುದ್ಧ ರಕ್ಷಣೆ ನೀಡುತ್ತವೆ

Black Coffee : ಬೆಳಗ್ಗಿನ ಈ ಅಭ್ಯಾಸ ಬಿಟ್ಟು ಬಿಡಿ, ಇಲ್ಲಾಂದ್ರೆ ಹೃದಯಕ್ಕೆ ಮಾರಕ

ಲಸಿಕೆ ಹಾಕಿದ ಇನ್ನೂ ಡೆಲ್ಟಾ (Delta) ರೂಪಾಂತರದ (Mutation) ಸೋಂಕಿಗೆ ಒಳಗಾದ ಸಂದರ್ಭದಲ್ಲಿ, ಕೋವಿಡ್ -19 ರೋಗಿಗಳು ಸಾಯುವ ಸಾಧ್ಯತೆ ಒಂಭತ್ತು ಪಟ್ಟು ಕಡಿಮೆ ಎಂದು ವರದಿಯಾಗಿದೆ. ಲಸಿಕೆ ಹಾಕದವರಿಗೆ ಹೋಲಿಸಿದರೆ ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಮೂರು ಪಟ್ಟು ಕಡಿಮೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ನೀವು ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದರೆ ಹಾಗೂ ಡೆಲ್ಟಾ ಸೋಂಕಿಗೆ ಒಳಗಾಗಿ, ಚೇತರಿಸಿಕೊಂಡಿದ್ದರೆ ನಿಮ್ಮ ದೇಹದಲ್ಲಿ ಅತ್ಯಂತ ಪರಿಣಾಮಕಾರಿಯಾದ ಪ್ರತಿಕಾಯ ರೂಪುಗೊಂಡಿರುತ್ತದೆ ಎಂದು ಪ್ರಸಿದ್ಧ ವಿಶ್ವವಿದ್ಯಾನಿಲಯದ ವೈರಾಲಜಿ ಪ್ರೊಫೆಸರ್ ಒಬ್ಬರು ತಿಳಿಸಿದ್ದಾರೆ.

ಇವೆಲ್ಲ ನೋಡಿದರೆ ಲಸಿಕೆ ಹಾಕಿಸಿಕೊಂಡವರು ಸದ್ಯಕ್ಕೆ ರಿಲೀಫ್ ಪಡೆಯಬಹುದು. ಆದರೆ ಲಸಿಕೆ ಹಾಕದವರಿಗೆ ಮಾತ್ರ ಇದು ಭಯಾನಕವಾಗಿ ಕಾಡಬಹುದು. 

Fat-To-Fit Transformation: ಎಲ್ಲ ಹುಬ್ಬೇರಿಸುವಂತೆ ತೂಕ ಇಳಿಸಿದ ಬಿ ಟೌನ್ ಬೆಡಗಿಯರು, ಗುಟ್ಟೇನು ಗೊತ್ತಾ?

Follow Us:
Download App:
  • android
  • ios