Asianet Suvarna News Asianet Suvarna News

ಬೆಂಗಳೂರು: ಮನೆಗಳ್ಳನನ್ನು ಹಿಡಿದು ಕೊಟ್ಟ ಸೇಫ್‌ ಸಿಟಿ ಎಚ್‌ಡಿ ಕ್ಯಾಮೆರಾ!

ಕೆಲ ದಿನಗಳ ಹಿಂದೆ ವಿಜ್ಞಾನ ನಗರ ಸಮೀಪ ಹಗಲು ಹೊತ್ತಿನಲ್ಲೇ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಸೀಲಿಸಿದರು. ಆಗ ವಿಜ್ಞಾನ ನಗರದಲ್ಲಿ ಸೇಫ್ ಸಿಟಿ ಯೋಜನೆಯಡಿ ಅಳವಡಿಸಿದ್ದ ಎಚ್‌ಡಿ ಗುಣಮಟ್ಟದ ಕ್ಯಾಮೆರಾದಲ್ಲಿ ಆರೋಪಿ ಮುಖ ಚಹರೆ ಪತ್ತೆಯಾಯಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಖದೀಮ ಪುಟ್ಟ ಸಿಕ್ಕಿಬಿದ್ದ ಎಂದು ಪೊಲೀಸರು ಹೇಳಿದ್ದಾರೆ.

Safe City HD Camera caught the Thief in Bengaluru grg
Author
First Published Jul 3, 2024, 7:57 AM IST

ಬೆಂಗಳೂರು(ಜು.03):  ಸೇಫ್ ಸಿಟಿ ಯೋಜನೆಯಡಿ ಅಳವಡಿಸಿರುವ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳಿಂದ ಖದೀಮನೊಬ್ಬ ಎಚ್‌ಎಎ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನೆಲ್ಲೂರಪುರದ ಮಲ್ಲಿಕಾರ್ಜುನ ಅಲಿಯಾಸ್ ಪುಟ್ಟ ಬಂಧಿತನಾಗಿದ್ದು, ಆರೋಪಿಯಿಂದ 25 ಗ್ರಾಂ ಚಿನ್ನ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ವಿಜ್ಞಾನ ನಗರ ಸಮೀಪ ಹಗಲು ಹೊತ್ತಿನಲ್ಲೇ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಸೀಲಿಸಿದರು. ಆಗ ವಿಜ್ಞಾನ ನಗರದಲ್ಲಿ ಸೇಫ್ ಸಿಟಿ ಯೋಜನೆಯಡಿ ಅಳವಡಿಸಿದ್ದ ಎಚ್‌ಡಿ ಗುಣಮಟ್ಟದ ಕ್ಯಾಮೆರಾದಲ್ಲಿ ಆರೋಪಿ ಮುಖ ಚಹರೆ ಪತ್ತೆಯಾಯಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಖದೀಮ ಪುಟ್ಟ ಸಿಕ್ಕಿಬಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕಡಿಮೆ ಬೆಲೆ ಅಂತಾ ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವ ಮುನ್ನ ಎಚ್ಚರ ಎಚ್ಚರ!

ಪುಟ್ಟ ವೃತ್ತಿಪರ ಕಳ್ಳನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಗಲು ಹೊತ್ತಿನಲ್ಲೇ ಆತ ಮನೆಗಳಿಗೆ ಕನ್ನ ಹಾಕುವುದಕ್ಕೆ ಕುಖ್ಯಾತಿ ಪಡೆದಿದ್ದಾನೆ. ಅದೇ ರೀತಿ ವಿಜ್ಞಾನ ನಗರದಲ್ಲಿ ಕೂಡ ಆತ ಮನೆಗಳ್ಳತನ ಮಾಡಿದ್ದ. ಈಗ ಪುಟ್ಟನ ಬಂಧನದಿಂದ ನಾಲ್ಕು ಮನೆಗಳ್ಳತನ ಕೃತ್ಯಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಗರ ವ್ಯಾಪ್ತಿ ಸೇಫ್ ಸಿಟಿ ಯೋಜನೆಯಡಿ ₹400 ಕೋಟಿ ವೆಚ್ಚದಲ್ಲಿ 600ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳಿಂದ ಸಮಾಜಘಾತುಕ ವ್ಯಕ್ತಿಗಳ ಮೇಲೆ ನಿಗಾವಹಿಸಲಾಗಿದೆ. ವಿಜ್ಞಾನ ನಗರದ ಕ್ಯಾಮೆರಾಗಳ ನೆರವಿನಿಂದ ಮನೆಗಳ್ಳತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios