Asianet Suvarna News Asianet Suvarna News

ವಿಟಮಿನ್ ಡಿ ನಿಮ್ಮಲ್ಲಿ ಸಾಕಷ್ಟಿದೆಯಾ? ತಿಳಿಯೋದು ಹೇಗೆ?

ಮಳೆಗಾಲದಲ್ಲಿ ಸೂರ್ಯನ ಬೆಳಕು ಸಿಗದೆ ಹೋಗದಿರುವುದರಿಂದ ವಿಟಮಿನ್ ಡಿ ಪೋಷಕಾಂಶಗಳ ನಮ್ಮ ದೈನಂದಿನ ಸೇವನೆ ಕಡಿಮೆಯಾಗುತ್ತದೆ. ನಮ್ಮಲ್ಲಿ ವಿಟಮಿನ್ ಡಿ ಕೊರತೆಯಾಗಿದೆ ಎಂದು ತಿಳಿಯುವ ಸುಲಭದ ಬಗೆ ಹೇಗೆ?

How do you find out sufficient Vitamin D content in your body
Author
Bengaluru, First Published Jul 26, 2021, 11:44 AM IST
  • Facebook
  • Twitter
  • Whatsapp

ವಿಟಮಿನ್ ಡಿ ಎಲ್ಲರಿಗೂ ಸೂಕ್ತ ಪ್ರಮಾಣದಲ್ಲಿ ಅಗತ್ಯ. ಇದು ದೇಹದಲ್ಲಿ ಸಾಕಷ್ಟು ಇಲ್ಲದೆ ಹೋದರೆ ಏನಾಗುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಮಳೆಗಾಲದಲ್ಲಿ ಸೂರ್ಯನ ಬೆಳಕು ಸಿಗದೆ ಹೋಗದಿರುವುದರಿಂದ ವಿಟಮಿನ್ ಡಿ ಪೋಷಕಾಂಶಗಳ ನಮ್ಮ ದೈನಂದಿನ ಸೇವನೆ ಕಡಿಮೆಯಾಗುತ್ತದೆ.  2018ರಲ್ಲಿ ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಮತ್ತು ಫ್ಯಾಮಿಲಿ ಕೇರ್‌ನಲ್ಲಿ ಪ್ರಕಟವಾದ ಅಧ್ಯಯನವು ಭಾರತದ ಎಲ್ಲಾ ವಯೋಮಾನದವರಲ್ಲಿ ವಿಟಮಿನ್ ಡಿ ಕೊರತೆಯು 80%ರಿಂದ 90%ರಷ್ಟು ಹೆಚ್ಚಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ. 

ಇದರಿಂದ ಕೋವಿಡ್‌ನಂಥ ಕಾಯಿಲೆಗಳೂ ಅಟಕಾಯಿಸಿಕೊಳ್ಳುತ್ತವೆ; ಮತ್ತು ಕ್ಯಾನ್ಸರ್, ಕ್ಷಯರೋಗ, ಹೃದಯ ಸಂಬಂಧಿ ಕಾಯಿಲೆಗಳಿಗೂ ವಿಟಮಿನ್ ಡಿ ಕೊರತೆ ಕಾರಣವಾಗುತ್ತದೆ. ಆದ್ದರಿಂದ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ವಿಟಮಿನ್ ಡಿ ಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂಬುದು ಸ್ಪಷ್ಟವಾಗಿದೆ. ಎಲ್ಸೆವಿಯರ್ ಪಬ್ಲಿಕ್ ಹೆಲ್ತ್ ಎಮರ್ಜೆನ್ಸಿ ಕಲೆಕ್ಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ವಿಟಮಿನ್ ಡಿ ಕೊರತೆಯು ಕೋವಿಡ್ ಸೋಂಕನ್ನು ಹೆಚ್ಚು ತೀವ್ರಗೊಳಿಸುತ್ತದೆ ಎಂದು ತಿಳಿದುಬಂದಿದೆ. ವಿಟಮಿನ್ ಡಿ ಕೊರತೆಗೆ, ಅನಾರೋಗ್ಯಕರ ಆಹಾರ ಮತ್ತು ಜಡ ಜೀವನಶೈಲಿ ಎರಡು ಪ್ರಮುಖ ಅಂಶಗಳಾಗಿವೆ. ಆದರೆ ವಿಟಮಿನ್ ಡಿ ಕೊರತೆಯ ಹಿಂದಿನ ಪ್ರಮುಖ ಕಾರಣ ಸೂರ್ಯನ ಬೆಳಕನ್ನು ನಾವು ಪಡೆಯದಿರುವುದು.
 

How do you find out sufficient Vitamin D content in your body


ನಾವು ನಮ್ಮ ಹೆಚ್ಚಿನ ಸಮಯವನ್ನು ಮನೆಯೊಳಗೆ, ಕಚೇರಿಯಲ್ಲಿ ಅಥವಾ ಮನೆಯಲ್ಲಿಯೇ ಕಳೆಯುತ್ತೇವೆ. ನಾವು ಹೊರಗೆ ಹೋದರೂ, ಸೂರ್ಯ ಇಲ್ಲದಿರುವ ಸಮಯದಲ್ಲಿ, ಹೆಚ್ಚಾಗಿ ಸಂಜೆ ಹೊರಗೆ ಹೋಗುತ್ತೆವೆ. ಇದು ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು. ಜೀವಸತ್ವಗಳನ್ನು ಸಕ್ರಿಯಗೊಳಿಸಲು ಮೂಲತಃ ಸೂರ್ಯನ ಬೆಳಕು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನಿಮಗೆ ಪ್ರತಿದಿನವೂ ಸೂರ್ಯನ ಬೆಳಕಿನ ಅಗತ್ಯವಿರುತ್ತದೆ. 20-25 ವರ್ಷ ವಯಸ್ಸಿನ ಯುವ ರೋಗಿಗಳು ಕೂಡ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆಯಾಗಿ ದೈಹಿಕ ನೋವಿಗೆ ಒಳಗಾಗುತ್ತಿದ್ದಾರೆ.
ವಿಟಮಿನ್ ಡಿ ಕೊರತೆಯ ಎಚ್ಚರಿಕೆಯ ಲಕ್ಷಣಗಳು ಹೀಗಿವೆ: 

- ನೋವಿನಿಂದ ನಿಧಾನವಾಗಿ ಚೇತರಿಸಿಕೊಳ್ಳುವುದು
ಯುವಕರು ಜಿಮ್‌ಗೆ ಹೋಗಲು ಪ್ರಾರಂಭಿಸಿದಾಗ ವ್ಯಾಯಾಮ ಸ್ನಾಯು ನೋವಿಗೆ ಕಾರಣವಾಗಬಹುದು. ಆದರೆ ವ್ಯಾಯಾಮಾವು ಆರೋಗ್ಯಕರ ದೇಹಕ್ಕೆ ಮುಖ್ಯವಾಗಿದೆ. ಆದರೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ, ಸಂಪೂರ್ಣ ಚೇತರಿಕೆ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶಗಳನ್ನು ವಿಟಮಿನ್ ಡಿ ಕೊರತೆ ವಿಳಂಬಗೊಳಿಸುತ್ತದೆ. ಚೇತರಿಕೆ ಪ್ರಕ್ರಿಯೆಯ ಕೊರತೆಯು ಮುಖ್ಯವಾಗಿ ಆಹಾರದಲ್ಲಿ ಜೀವಸತ್ವಗಳ ಕೊರತೆಯಿಂದಾಗಿ ಉಂಟಾಗುತ್ತದೆ. ಸರಿಸುಮಾರು 80% ರಿಂದ 90% ರಷ್ಟು ರೋಗಿಗಳು ಈ ದೋಷವನ್ನು ಹೊಂದಿದ್ದಾರೆ. ವಯಸ್ಸಾದವರು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಏಕೆಂದರೆ ಅವರು ಚಿಕ್ಕವರಾಗಿದ್ದಾಗ ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸದೇ ಇರಬಹುದು. ಜಿಮ್‌ಗೆ ಹೋಗುವ ಮೊದಲು ವಿಟಮಿನ್ ಡಿ ದೇಹದಲ್ಲಿ ಸಾಕಷ್ಟಿರಬೇಕು

ಮಳೆಗಾಲದಲ್ಲಿ ಈ ಕೆಲವು ತರಕಾರಿ ಅವಾಯ್ಡ್ ಮಾಡಿ, ಯಾಕೆ ಗೊತ್ತಾ?

- ದುರ್ಬಲ ಸ್ನಾಯುಗಳು ಮತ್ತು ನೋಯುತ್ತಿರುವಿಕೆ
ಇತ್ತೀಚಿನ ದಿನಗಳಲ್ಲಿ, ನಾವು ಕೆಲಸದ ಕಾರಣದಿಂದಾಗಿ ಜಡವಾಗಿದ್ದೇವೆ. ವ್ಯಾಯಾಮ ಕಡಿಮೆಯಾಗಿದೆ, ಮತ್ತು ಮುಖ್ಯವಾಗಿ, ನಾವು ಅಗತ್ಯವಾದ ಪ್ರಮಾಣದ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುತ್ತಿಲ್ಲ. ಇದು ಹೆಚ್ಚು ನೋವಿನ ಸಮಸ್ಯೆಯನ್ನು ಉಂಟುಮಾಡುತ್ತದೆ. ಹೆಚ್ಚಾಗಿ. ಬೆನ್ನು ನೋವು ಇರುವ ಜನರು ವಿಟಮಿನ್ ಡಿ ಕೊರತೆಯನ್ನು ಹೊಂದಿರುತ್ತಾರೆ. 
- ಗಾಯ ಗುಣವಾಗುವುದು ನಿಧಾನ
ವಿಟಮಿನ್ ಡಿ ಕೊರತೆಯಿಂದಾಗಿ, ನಿಮ್ಮ ಒಟ್ಟಾರೆ ಗುಣಪಡಿಸುವ ಪ್ರಕ್ರಿಯೆ ಮೇಲೆಯೂ ಪರಿಣಾಮ ಬೀರುತ್ತದೆ, ಮತ್ತು ಇದು ಗಾಯದ ಗುಣಪಡಿಸುವಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಮಹಿಳೆಯರಲ್ಲಿ ಹೃದಯಾಘಾತ: ಗಮನಿಸಲೇಬೇಕಾದ ಚಿಹ್ನೆಗಳಿವು..

- ಕೂದಲು ಉದುರುವಿಕೆ
ನೀವು ಭಾರಿ ಪ್ರಮಾಣದ ಕೂದಲು ಉದುರುವಿಕೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ಅದು ವಿಟಮಿನ್ ಡಿ ಕೊರತೆಯಿಂದಾಗಿರಬಹುದು. ಏಕೆಂದರೆ ಇದು ಪುರುಷರು ಮತ್ತು ಮಹಿಳೆಯರಲ್ಲಿ ಅಲೋಪೆಸಿಯಾ ಉಂಟುಮಾಡುತ್ತದೆ, ಇಂಟರ್ನ್ಯಾಷನಲ್ ಜರ್ನಲ್ ಆಫ್ ಮಾಲಿಕ್ಯುಲರ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ವಿಟಮಿನ್ ಡಿ ಕೊರತೆಯು ಸೀರಂನ ನಷ್ಟಕ್ಕೆ ಕಾರಣವಾಗುತ್ತದೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ನಿಮ್ಮ ಕೂದಲನ್ನು ಉದುರದಂತೆ ನೋಡಿಕೊಳ್ಳಲು ನೀವು ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದ್ದರೂ ಪ್ರಯೋಜನವಾಗದಿದ್ದರೆ, ಬಿಸಿಲಿನಲ್ಲಿ ನಿಂತು ವಿಟಮಿನ್ ಡಿ ಪಡೆಯಬೇಕು.
​​​​​​​
- ಉಸಿರಾಟದ ತೊಂದರೆ
ಕೊರೊನಾ ವೈರಸ್ ಮಾತ್ರವಲ್ಲ, ವಿಟಮಿನ್ ಡಿ ಕೊರತೆಯೂ ಇತರ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ನಿಮ್ಮನ್ನು ಉಸಿರಾಟದ ಅಲರ್ಜಿಗೆ ಹೆಚ್ಚು ಒಳಪಡಿಸುತ್ತದೆ ಮತ್ತು ಉಸಿರಾಟದ ಪ್ರದೇಶದಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಮಳೆಗಾಲದಲ್ಲಿ, ಪರಾಗ, ಶಿಲೀಂಧ್ರ ಮತ್ತು ಇತರ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಇರುವುದರಿಂದ, ನೀವು ಅಲರ್ಜಿಯಿಂದ ಬಳಲುತ್ತಿರುವ ಸಾಧ್ಯತೆಗಳಿವೆ.

ಮಳೆಗಾಲದಲ್ಲಿ ಮಕ್ಕಳನ್ನು ಕಾಡುತ್ತೆ ರೋಗ, ಅವರ ರಕ್ಷಣೆ ಹೇಗೆ?
 

Follow Us:
Download App:
  • android
  • ios