ಬಹುತೇಕ ಎಲ್ಲ ದೇಶಗಳನ್ನೂ ಈಗ ಕೊರೋನಾ ವೈರಸ್‌ ಆವರಿಸಿದೆ, ಎಲ್ಲೋ ದೂರದಲ್ಲಿ ಗ್ಲೋಬಿನ ಒಂದು ಮೂಲೆಯಲ್ಲಿರುವ ದ್ವೀಪ ರಾಷ್ಟ್ರಗಳನ್ನೂ ಬಿಟ್ಟಿಲ್ಲ. ಪ್ರವಾಸಿಗರು ಅಲ್ಲಿಗೂ ಕೊರೊನಾ ವೈರಸ್‌ನ್ನು ಕೊಂಡೊಯ್ದು ಹಾವಳಿ ಎಬ್ಬಿಸಿದ್ದಾರೆ. ಹೀಗೆ ವೈರಸ್‌ ಪಡೆದುಕೊಂಡ ದೇಶಗಳು ಹಲವಾರು. ಅವುಗಳಲ್ಲಿ ನ್ಯೂಜಿಲ್ಯಾಂಡ್‌ ಕೂಡ ಒಂದು. ಬಹುತೇಕ ಆಸ್ಟ್ರೇಲಿಯ ಹಾಗೂ ನ್ಯೂಜಿಲ್ಯಾಂಡ್‌ ಒಂದೇ ಅವಧಿಯಲ್ಲಿ ವೈರಸ್‌ ಪತ್ತೆ ಹಚ್ಚಿದವು. ಮಾರ್ಚ್‌ ಆರಂಭದಲ್ಲಿ ಇಲ್ಲಿ ಕೊರೊನಾವೈರಸ್‌ ಕಾಣಿಸಿಕೊಂಡಿತು. ಮಾರ್ಚ್ ಮಧ್ಯಭಾಗದಲ್ಲಿ ಇವೆರಡೂ ದೇಶಗಳಲ್ಲಿ ಒಂದೇ ರೀತಿಯ ದೃಶ್ಯ ಇತ್ತು. ನ್ಯೂಜಿಲ್ಯಾಂಡ್‌ನಲ್ಲಿ 102 ಕೇಸುಗಳು ಹಾಗೂ ಯಾವುದೇ ಸಾವು ಇರಲಿಲ್ಲ. ಆಸ್ಟ್ರೇಲಿಯದಲ್ಲಿ ಒಂದು ಸಾವುರ ಕೇಸುಗಳು ಹಾಗೂ ಹತ್ತು ಸಾವು ವರದಿಯಾದವು. ಇವೆರಡು ದೇಶಗಳು ಏಕಕಾಲಕ್ಕೆ ಒಂದೇ ಬಗೆಯ ಕೋವಿಡ್ ಎಲಿಮಿನೇಶನ್‌ ಸ್ಟ್ರಾಟಜಿ ಅನುಸರಿಸಿದವು. ಇದರಲ್ಲಿ ನ್ಯೂಜಿಲ್ಯಾಂಡ್‌ ಬಹುತೇಕ ಗೆದ್ದಿದೆ. ಆಸ್ಟ್ರೇಲಿಯದಲ್ಲಿ ಸಾವುಗಳ ಸಂಖ್ಯೆ ಹೆಚ್ಚುತ್ತಿದೆ; ಆದರೆ ನ್ಯೂಜಿಲ್ಯಾಂಡಿನಲ್ಲಿ 1243 ಕೇಸುಗಳಿಗೆ ಹೊಸ ಹರಡುವಿಕೆ ನಿಂತಿದೆ. ಮರಣ ಸಂಭವಿಸಿರುವುದು ೨ ಮಾತ್ರ. ಹೊಸ ಹರಡುವಿಕೆ ಕಂಡುಬಂದಿರುವುದು ವಿದೇಶಗಳಿಂದ ಬಂದ ಕೆಲವು ಮಂದಿಯಲ್ಲಿ ಮಾತ್ರ. ಹಾಗಿದ್ದರೆ ನ್ಯೂಜಿಲ್ಯಾಂಡಿನ ಈ ಯಶಸ್ವಿ ನಿಭಾವಣೆಯ ರಹಸ್ಯ ಏನು?

ಉತ್ತರ ಕೊರಿಯಾದಲ್ಲಿ ಕೊರೋನಾ ಕೇಸುಗಳೇ ಇಲ್ಲವೇ?

ಮೊದಲನೆಯದಾಗಿ, ಅದು ತನ್ನ ಗಡಿಗಳನ್ನು ಭದ್ರಪಡಿಸಿತು. ನ್ಯೂಜಿಲ್ಯಾಂಡ್‌ಗೆ ಯಾವುದೇ ಭೂಸಾರಿಗೆಯಿಲ್ಲ. ಯಾರೇ ಬರುವುದಾದರೂ ಹಡಗು ಅಥವಾ ವಿಮಾನದಿಂದಲೇ ಬರಬೇಕು. ಹೀಗೆ ಬರುವವರನ್ನೆಲ್ಲ ಅದು ಕಡ್ಡಾಯ ಕ್ವಾರಂಟೈನ್‌ನಲ್ಲಿ ಇಟ್ಟಿತು. ಈಗಲೂ ಅಲ್ಲಿಗೆ ಯಾರಾದರೂ ಬರಬೇಕಿದ್ದರೆ ವಿಮಾನದಿಂದಿಳಿದ ಬಳಿಕ ಹದಿನಾಲ್ಕು ದಿನಗಳ ಕ್ವಾರಂಟೈನ್‌ ಮುಗಿಸದೆ ದೇಶದೊಳಕ್ಕೆ ತೆರಳುವಂತೆಯೇ ಇಲ್ಲ. ದೇಶದಲ್ಲಿ ಭರ್ತಿ ಒಂದು ತಿಂಗಳ ಲಾಕ್‌ಡೌನ್‌ ವಿಧಿಸಲಾಗಿದೆ. ಸೋಶಿಯಲ್‌ ಡಿಸ್ಟೆನ್ಸಿಂಗ್‌ ತುಂಬ ಕಟ್ಟುನಿಟ್ಟಾಗಿದೆ. ಇದರ ನಡುವೆ ಕಾಂಟ್ಯಾಕ್ಟ್ ಟ್ರೇಸಿಂಗ್‌ ಅರ್ಥಾತ್‌ ಸೋಂಕಿತರ ನಿಕಟ ಸಂಪರ್ಕಕ್ಕೆ ಬಂದವರನ್ನು ಹುಡುಕಿ ಹುಡುಕಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.

ಗರ್ಭಿಣಿಯರು ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆಯಾ? 

ಹೆಚ್ಚಿನ ದೇಶಗಳು ಕೋವಿಡ್‌ ಸೋಂಕಿನ ತಡೆ ಕಾರ್ಯತಂತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿವೆ. ಆದರೆ ಚೀನಾ, ದಕ್ಷಿಣ ಕೊರಿಯ, ನ್ಯೂಜಿಲ್ಯಾಂಡ್‌ನಂಥ ಕೆಲವೇ ದೇಶಗಳು ಎಲಿಮಿನೇಶನ್‌ ಅರ್ಥಾತ್‌ ಸೋಂಕು ನಾಶ ಕಾರ್ಯತಂತ್ರವನ್ನು ರೂಪಿಸಿಕೊಂಡಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ. ಈ ಕಾರ್ಯತಂತ್ರದ ಪ್ರಮುಖ ನೀತಿ ಅಂದರೆ ಸೋಂಕಿಗೆ ಕಾರಣವಾಗುವ ಒಂದೊಂದು ವೈರಸ್ಸನ್ನೂ ಹುಡುಕಿ ಹುಡುಕಿ ನಾಶಪಡಿಸುವುದು. ಯಾವುದೇ ದೇಶದಲ್ಲಿ ಸೋಂಕಿನ ಸಂಖ್ಯೆ ಎರಡು ಸಾವಿರಕ್ಕಿಂತಲೂ ಮೀರಿದರೆ, ಅದು ಸೋಂಕು ನಾಶ ಮಾಡಲು ಕಷ್ಟಸಾಧ್ಯವೆಂದೇ ತಿಳಿಯಬೇಕಾಗುತ್ತದೆ. ಯಾಕೆಂದರೆ ಅದು ಅದಾಗಲೇ ಸಮುದಾಯಕ್ಕೆ ಹರಡಿರುತ್ತದೆ. ಆದರೆ ಇನ್ನೂ ಸೋಂಕಿನ ಸಂಖ್ಯೆ ಒಂದು ಸಾವಿರ ದಾಟದ ದೇಶಗಳಾದರೆ ಪರಿಣಾಮಕಾರಿಯಾಗಿ ಸೋಂಕು ನಾಶ ಮಾಡಬಹುದು. ನ್ಯೂಜಿಲ್ಯಾಂಡ್‌ ಅದರಲ್ಲಿ ಗೆದ್ದಿದೆ.

ಕೊರೋನಾದಿಂದ ಇಷ್ಟೊಂದು ಯುವಜನತೆ ಸಾಯ್ತಿರೋದೇಕೆ? 

ದಕ್ಷಿಣ ಕೊರಿಯಾ ಕೂಡ ಇಂಥ ಕಾರ್ಯತಂತ್ರ ಅಳವಡಿಸಿಕೊಂಡಿರುವ ಇನ್ನೊಂದು ದೇಶ. ಇದಕ್ಕೆ ಆ ದೇಶ ಬಳಸಿಕೊಂಡಿರುವ ಅಸ್ತ್ರ ಎಂದರೆ ತಂತ್ರಜ್ಞಾನ. ಟೆಕ್ನಿಕಲಿ ಬಹಳ ಮುಂದುವರಿದಿರುವ ದಕ್ಷಿಣ ಕೊರಿಯಾ ಸಾರ್ವಜನಿಕ ಪ್ರದೇಶಗಳಲ್ಲೆಲ್ಲ ಸಾಕಷ್ಟು ಕ್ಯಾಮೆರಗಳನ್ನು ಅಳವಡಿಸಿದೆ. ಕ್ವಾರಂಟೈನ್‌ನಿಂದ ಯಾರೂ ಆಚೆ ಹೋಗುವಂತೆಯೇ ಇಲ್ಲ. ಸೋಂಕಿತರು ಅಥವಾ ಶಂಕಿತ ಸೋಂಕಿತರ ಎಲ್ಲ ಚಲನವಲನವನ್ನೂ ಅವರ ಮೊಬೈಲ್‌ ಲೊಕೇಶನ್‌ಗಳ ಮೂಲಕ ಟ್ರ್ಯಾಕ್‌ ಮಾಡಿ, ಅವರು ಯಾರ ಸಂಪರ್ಕಕ್ಕೆ ಬಂದಿದ್ದಾರೋ ಅವರನ್ನು ಕೂಡಲೇ ಕಂಡುಹಿಡಿದು ಅವರನ್ನು ಚಿಕಿತ್ಸೆಯ ವ್ಯಾಪ್ತಿಗೆ ತರಲಾಗುತ್ತದೆ. ವೈರಸ್‌ ಹುಟ್ಟುಹಾಕಿದ ಚೀನವೇ ಈ ಸೋಂಕು ನಿರ್ಮೂಲನೆಯ ವಿಷಯದಲ್ಲಿ ಬಹಳ ಮುಂದುವರಿದಿದೆ. ಅಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗಲೂ ನಿಮ್ಮ ಮೈ ಸ್ವಲ್ಪ ಅಗತ್ಯಕ್ಕಿಂತ ಹೆಚ್ಚು ಬಿಸಿಯಾಗಿದ್ದರೆ ಅಲ್ಲಿರುವ ಥರ್ಮಲ್‌ ಸ್ಕ್ಯಾನರ್‌ಗಳು ಥಟ್ಟನೆ ನಿಮ್ಮನ್ನು ಹಿಡಿದುಬಿಡುತ್ತವೆ.