ಫಿಟ್ ಆ್ಯಂಡ್ ಹೆಲ್ದೀಯಾಗಿರೋಕೆ ಸರಿಯಾದ ಪೋಷಕಸತ್ವಗಳ ಅಗತ್ಯವಿದೆ. ಹಾಗೆಯೇ ಮಸಲ್ ಬೆಳೆಸಿ, ಟೋನ್ಡ್  ಬಾಡಿ ಹೊಂದಲು ಕೂಡಾ ಸುಮ್ಮನೆ ತೂಕ ಎತ್ತಿಳಿಸುವುದು, ಅತಿಯಾದ ವ್ಯಾಯಾಮ ಮಾಡಿದರೆ ಸಾಲದು, ಜೊತೆಗೆ ಪೂರಕ ಆಹಾರ ಸೇವನೆ ಅಗತ್ಯ. ತೆಳು ಮಸಲ್ಸ್ ಹೊಂದಲು ಬೇಕಾದ ಬಿಲ್ಡಿಂಗ್ ಬ್ಲಾಕ್ಸ್‌ನ್ನು ದೇಹಕ್ಕೆ ಒದಗಿಸಬೇಕು. ನಮ್ಮ ದೇಹದ ಒಂದೊಂದು ಕೆಲಸಗಳಿಗೆ ಒಂದೊಂದು ರೀತಿಯ ಪೋಷಕಾಂಶಗಳು ಬೇಕು. ಅಂತೆಯೇ ದೇಹವನ್ನು ಹುರಿಗೊಳಿಸಲು ಪ್ರೋಟೀನ್ ಬೇಕು. 

ಪ್ರತಿದಿನ ನಮ್ಮ ದೇಹಕ್ಕೆ ನಮ್ಮ ತೂಕದಲ್ಲಿ ಒಂದೊಂದು ಕೆಜಿಗೆ 0.8 ಗ್ರಾಂನಷ್ಟು ಪ್ರೋಟೀನ್ ಬೇಕು. ಈ ಸಂಖ್ಯೆ ನಿಮ್ಮ ದೈಹಿಕ ಚಟುವಟಿಕೆ ಹಾಗೂ ಆಹಾರ ಸೇವನೆಯನ್ನವಲಂಬಿಸಿ ಕೆೊಂಚ ಬದಲಾಗಬಹುದು. ನೀವು ಶಕ್ತಿಗಾಗಿ ತರಬೇತಿ ಹೊಂದುತ್ತಿದ್ದರೆ ಸಾಮಾನ್ಯರಿಗಿಂತ ಹೆಚ್ಚು ಪ್ರೋಟೀನ್ ಸೇವಿಸಬೇಕಾಗುತ್ತದೆ. ಈ ಲೇಖನದಲ್ಲಿ ಯಾವ ಆಹಾರಗಳಿಂದ ಮಸಲ್ ಗಳಿಸಲು ಸಾಧ್ಯ, ಯಾವುದರಲ್ಲಿ ಪ್ರೋಟೀನ್ ಹೇರಳವಾಗಿರುತ್ತದೆ ಎಂಬುದನ್ನು ನೋಡಬಹುದು. 

ಸೋಯಾಬೀನ್ಸ್
ಮೆಗ್ನೀಶಿಯಂ, ಪ್ರೋಟೀನ್, ವಿಟಮಿನ್ ಕೆ ಹಾಗೂ ಫಾಸ್ಪರಸ್‌ನಿಂದ ಶ್ರೀಮಂತವಾಗಿರುವ ಸೋಯಾಬೀನ್ ಮಸಲ್ ಬೆಳೆಸುವ ಆಸೆ ಹೊಂದಿದವರಿಗೆ ಉತ್ತಮ ಆಹಾರ. ಇದು ಮಸಲ್ ಬೆಳವಣಿಗೆ ಹಾಗೂ ರಿಪೇರಿ ಕೆಲಸವನ್ನು ಮಾಡುತ್ತದೆ. ಸೋಯಾದಲ್ಲಿರುವ ಐರನ್ ಆಮ್ಲಜನಕವನ್ನು ಸ್ಟೋರ್ ಮಾಡುವ ಜೊತೆಗೆ ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯುತ್ತದೆ. 
ಎಷ್ಟಿರುತ್ತದೆ ಪ್ರೋಟೀನ್?:  1 ಬಟ್ಟಲು ಬೇಯಿಸಿದ ಸೋಯಾದಲ್ಲಿ 28 ಗ್ರಾಂಗಳಷ್ಟು ಪ್ರೋಟೀನ್ ಇರುತ್ತದೆ. 

ಗರ್ಭಿಣಿ ಹೊಟ್ಟೆ ಗಾತ್ರ ನೋಡಿ ಮಗು ಹೆಣ್ಣಾ, ಗಂಡಾ ಅಂತ ತಿಳೀಬಹುದಾ?...

ನವಣೆ
ಸಸ್ಯಜನ್ಯ ಆಹಾರವಾದ ನವಣೆಯಲ್ಲಿ ನಮ್ಮ ದೇಹ ಬಯಸುವ ಆದರೆ, ಸ್ವತಃ ಉತ್ಪಾದಿಸಲಾರದ ಎಲ್ಲ 9 ಪ್ರಮುಖ ಅಮೈನೋ ಆ್ಯಸಿಡ್‌ಗಳಿದ್ದು, ಇದೊಂದು  ಸಂಪೂರ್ಣ ಪ್ರೋಟೀನ್ ಆಕರ ಎನಿಸಿಕೊಂಡಿದೆ. ಪ್ರೋಟೀನ್ ಆಹಾರಗಳನ್ನು ಹುಡುಕುವ ಸಸ್ಯಾಹಾರಿಗಳಿಗೆ ಇದೊಂದು ವರವೇ ಸರಿ. ಬಾಡಿ ವ್ಹೇಟ್ ಟ್ರೇನಿಂಗ್ ಪಡೆಯುತ್ತಿರುವವರಿಗೆ ನವಣೆಯಿಂದ ತಯಾರಿಸಿದ ಆಹಾರಗಳು ಉತ್ತಮ. 
ಎಷ್ಟಿರುತ್ತದೆ ಪ್ರೋಟೀನ್?: 1 ಕಪ್ ಬೇಯಿಸಿದ ನವಣೆ ಬೀಜಗಳಲ್ಲಿ 8 ಗ್ರಾಂ ಪ್ರೋಟೀನ್ ಇರುತ್ತದೆ. 

ಸಾಲ್ಮೋನ್
ಮಾಂಸಾಹಾರಗಳೆಲ್ಲವೂ ಪ್ರೋಟೀನನ್ನು ಹೊಂದಿರುತ್ತವೆ. ಆದರೆ, ಸಾಲ್ಮೋನ್ ಅವುಗಳ ಲಿಸ್ಟ್‌ನಲ್ಲಿ ಟಾಪ್‌ನಲ್ಲಿರುತ್ತದೆ. ಈ ಸಮುದ್ರ ಮೀನಿನಲ್ಲಿ ಒಮೆಗಾ-3 ಇದ್ದು, ವರ್ಕೌಟ್ ಮುಗಿದ ಬಳಿಕ ಸೇವಿಸುವುದರಿಂದ ದೇಹದ ಫ್ಯಾಟ್ ಕಡಿಮೆಯಾಗಿಸುತ್ತದೆ. ಹಾನಿಗೊಂಡ ಮಸಲ್‌ಗಳನ್ನು ಸರಿಪಡಿಸಿ, ಶಕ್ತಿ ನೀಡುತ್ತದೆ. 
ಎಷ್ಟಿರುತ್ತದೆ ಪ್ರೋಟೀನ್?: 85 ಗ್ರಾಂ ಸಾಲ್ಮೋನ್‌ಗಳಲ್ಲಿ 23 ಗ್ರಾಂನಷ್ಟು ಪ್ರೋಟೀನ್ ಇರುತ್ತದೆ. 

ಅಧ್ಯಾತ್ಮದಿಂದ ಕ್ಯಾನ್ಸರ್‌ ಗೆಲ್ಲಬಹುದಾ!...

ಪೇರಳೆ/ಸೀಬೆ ಹಣ್ಣು
ತನ್ನಲ್ಲಿರುವ ಶ್ರೀಮಂತ ಸತ್ವಗಳಿಗೆ ಹೋಲಿಸಿದರೆ, ಪೇರಳೆ ಹಣ್ಣಿಗೆ ಹಣ್ಣುಗಳ ಲೋಕದಲ್ಲಿ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ. ಆದರೆ, ಮಸಲ್ ಬೆಳೆಸಬಯಸುವವರಿಗೆ ಇದೊಂದು ಉತ್ತಮ ಪ್ರೋಟೀನ್ ಆಕರ. ಇದರೊಂದಿಗೆ ವಿಟಮಿನ್ ಸಿ ಹಾಗೂ ಮೆಗ್ನೀಶಿಯಂ ಹೇರಳವಾಗಿರುವುದರಿಂದ ಅವು ವರ್ಕೌಟ್ ಬಲಿಕ ನರಗಳು ಹಾಗೂ ಮಸಲ್ಸ್‌ನ್ನು ರಿಲ್ಯಾಕ್ಸ್ ಮಾಡುತ್ತವೆ. ಪೇರಳೆ ಹಣ್ಣು ದೇಹದಲ್ಲಿ ಕೊಲ್ಯಾಜನ್ ಉತ್ಪಾದನೆ ಹೆಚ್ಚಿಸಿ ನಿಮ್ಮ ಚರ್ಮ ಹೆಚ್ಚು ಮೃದುವಾಗಿ ಕಾಣುವಂತೆ ಮಾಡುತ್ತದೆ. 
ಎಷ್ಟಿರುತ್ತದೆ ಪ್ರೋಟೀನ್?: 1 ಕಪ್ ಹೆಚ್ಚಿದ ಪೇರಳೆ ಹಣ್ಣಿನಲ್ಲಿ 4.2 ಗ್ರಾಂಗಳಷ್ಟು ಪ್ರೋಟೀನ್ ಇರುತ್ತದೆ. 

ಮೊಟ್ಟೆ
ಮೊಟ್ಟೆಗಳು ವರ್ಕೌಟ್ ಬಳಿಕ ಸೇವಿಸಬೇಕಾದ ಪರ್ಫೆಕ್ಟ್ ಆಹಾರ ಪದಾರ್ಥ. ಇವು ಮಸಲ್ಸ್ ಬೆಳೆಸಲು ಸಹಾಯಕ. ಇವುಗಳಲ್ಲಿ ಆರೋಗ್ಯಕರ ಫ್ಯಾಟ್ ಹಾಗೂ ಇತರೆ ಪ್ರಮುಖ ನ್ಯೂಟ್ರಿಯೆಂಟ್ಸ್‌ಗಳಾದ  ವಿಟಮಿನ್ ಬಿ ಹಾಗೂ  ಕೋಲಿನ್ ‌ ಇವೆ.  ಅದಲ್ಲದೆ, ಸ್ನಾಯುಗಳನ್ನು ಗಳಿಸಲು ಬೇಕಾದ ಅಮೈನೋ ಆ್ಯಸಿಡ್ ಇದರಲ್ಲಿ ಹೆಚ್ಚು ಪ್ರಮಾಣದಲ್ಲಿ ದೊರೆಯುತ್ತದೆ. 
ಎಷ್ಟಿರುತ್ತದೆ ಪ್ರೋಟೀನ್?: 1 ದೊಡ್ಡ ಮೊಟ್ಟೆಯಲ್ಲಿ 6 ಗ್ರಾಂನಷ್ಟು ಪ್ರೋಟೀನ್ ಇರುತ್ತದೆ.