Home Remedies : ಸಿಕ್ಕಿದ್ದೆಲ್ಲ ತಿಂದು ವಾಂತಿ ಶುರುವಾದ್ರೆ ಕ್ವಿಕ್ ರಿಲೀಫ್ ಗೆ ಈ ಟಿಪ್ಸ್ ಬಳಸಿ
ಹೊಟೇಲ್, ರೆಸ್ಟೋರೆಂಟ್ ಗೆ ಹೋದಾಗ ಮೆನುನಲ್ಲಿ ನೋಡಿದ್ದೆಲ್ಲ ಸ್ವಾಹಾ ಆಗಿರುತ್ತೆ. ಬಾಯಿ ಖಾರ ಮಾಡ್ಕೊಂಡು, ಹೊಟ್ಟೆ ಭಾರ ಮಾಡ್ಕೊಂಡು ಮನೆಗೆ ಬಂದ್ರೆ ಗೊಳಕ್ ಗೊಳಕ್ ಶುರು. ಸಾಕಪ್ಪ ಸಹವಾಸ ಎನ್ನುವಷ್ಟು ವಾಂತಿ ಮಾಡೋರು ಅಡಿಗೆ ಮನೆಯಲ್ಲಿರುವ ಕೆಲ ಪದಾರ್ಥದಿಂದಲೇ ಸಮಸ್ಯೆ ಸರಿ ಮಾಡ್ಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ವೆರೈಟಿ (Variety) ಫುಡ್ (Food) ಗಳು ಮಾರುಕಟ್ಟೆಯಲ್ಲಿ ಆರಾಮಾಗಿ ಸಿಗ್ತಿವೆ. ಮನೆಯಲ್ಲಿ ಆಹಾರ ತಯಾರಿಸಿ ಸೇವನೆ ಮಾಡ್ಬೇಕಾಗಿಲ್ಲ. ರೆಡಿಮೆಡ್ (Readymade) ತಿಂಡಿಗಳು ಬಾಯಿರುಚಿ ಹೆಚ್ಚಿಸುತ್ತವೆ. ಜನರು ಸುಲಭವಾಗಿ ಸಿಗುವ ರೆಡಿಮೆಡ್ ತಿಂಡಿಗಳು, ಫಾಸ್ಟ್ ಫುಡ್ ಗಳನ್ನು ಹೆಚ್ಚು ಇಷ್ಟಪಡ್ತಾರೆ. ಅದಕ್ಕೆ ಯಾವ ಪದಾರ್ಥವನ್ನು ಹಾಕಿದ್ದಾರೆ ಮತ್ತೆ ಎಷ್ಟು ದಿನಗಳ ಹಿಂದೆ ಸಿದ್ಧವಾಗಿದೆ ಎಂಬುದನ್ನು ಗಮನಿಸದೆ ಆಹಾರ ಸೇವನೆ ಮಾಡ್ತಾರೆ. ಈ ನಿರ್ಲಕ್ಷ್ಯ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಹಾಕಿದ್ದನ್ನೆಲ್ಲ ಜೀರ್ಣಿಸಿಕೊಳ್ಳುವ ಶಕ್ತಿ ಹೊಟ್ಟೆಗೆ ಇರುವುದಿಲ್ಲ. ಎಲ್ಲವನ್ನೂ ಜೀರ್ಣ ಮಾಡಲು ಹೊಟ್ಟೆಗೆ ಕಷ್ಟವಾಗುತ್ತದೆ. ಇದ್ರಿಂದ ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಹೀಗೆ ನಾನಾ ಸಮಸ್ಯೆ ಶುರುವಾಗುತ್ತದೆ. ಹೊಟ್ಟೆ ತನಗೆ ಬೇಡದ್ದನ್ನು ನಾನಾ ರೂಪದಲ್ಲಿ ಹೊರಹಾಕುತ್ತದೆ. ಮಲದ ಮೂಲಕ ಮಾತ್ರವಲ್ಲ ವಾಂತಿ ಮೂಲಕವೂ ಹೊರಗೆ ಹಾಕುತ್ತದೆ. ದಿನಕ್ಕೆ ಒಂದು ಬಾರಿ ವಾಂತಿ ಬಂದ್ರೆ ಚೇತರಿಸಿಕೊಳ್ಳುವುದು ಕಷ್ಟ. ಇನ್ನು ಅಜೀರ್ಣವಾಗಿ ನಾಲ್ಕೈದು ಬಾರಿ ವಾಂತಿಯಾಗಿ, ಹೊಟ್ಟೆ ಖಾಲಿಯಾದ್ರೆ ಡಿಹೈಡ್ರೇಟ್ ಆಗುವ ಸಾಧ್ಯತೆಯಿರುತ್ತದೆ. ದೇಹ ಸುಸ್ತಾಗುತ್ತದೆ. ಶಕ್ತಿ ಕಳೆದುಕೊಂಡ ದೇಹ ಯಾವುದೇ ಕೆಲಸ ಮಾಡಲು ಒಪ್ಪುವುದಿಲ್ಲ. ಹಾಗಾಗಿ ವಾಂತಿ ಹೆಚ್ಚಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.
ವಾಂತಿ ಹಾಗೂ ವಾಕರಿಕೆಗೆ ಮನೆ ಮದ್ದು
ಲವಂಗ : ವಾಂತಿಯಾಗ್ತಿದ್ದರೆ ಅಥವಾ ಹೊಟ್ಟೆ ತೊಳಸಿ ಹಿಂಸೆಯಾಗ್ತಿದ್ದರೆ ಅದಕ್ಕೆ ಲವಂಗ ಒಳ್ಳೆಯ ಮದ್ದು. ಕೆಲವು ಲವಂಗವನ್ನು ನಿಮ್ಮ ಬಾಯಿಯಲ್ಲಿ ಹಾಕಿ ಮತ್ತು ಅದರ ರಸವನ್ನು ಹೀರುತ್ತಿರಿ. ಲವಂಗದ ರುಚಿ ಮತ್ತು ಸುವಾಸನೆಯು ವಾಂತಿಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ವಾಂತಿ ನಿಲ್ಲಬೇಕೆನ್ನುವವರು ಅದನ್ನು ಟೀ ರೂಪದಲ್ಲಿಯೂ ಸೇವನೆ ಮಾಡಬಹುದು. ಸ್ವಲ್ಪ ನೀರಿಗೆ ಲವಂಗವನ್ನು ಹಾಕಿ ಕುದಿಸಬೇಕು. ನಂತ್ರ ಆ ನೀರನ್ನು ಸೇವನೆ ಮಾಡ್ಬೇಕು.
Food And Drinks: ಈ 5 ವಸ್ತುಗಳು ಕೇವಲ 2 ದಿನದಲ್ಲಿ ವಾಸನೆಯುಕ್ತ ಮೂತ್ರ ಸಮಸ್ಯೆ ನಿವಾರಿಸುತ್ತವೆ!
ಶುಂಠಿ : ಶುಂಠಿ ಅನೇಕ ರೋಗಕ್ಕೆ ರಾಮಬಾಣವಾಗಿದೆ. ಶುಂಠಿಯಲ್ಲಿ ವಾಂತಿ ತಡೆಯುವ ಗುಣವಿದೆ. ಶುಂಠಿಯನ್ನು ಪುಡಿಮಾಡಿ ಅದರ ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ನಂತರ ಕುಡಿಯಿರಿ. ಇದಕ್ಕೆ ನೀರನ್ನು ಬೆರೆಸಬಹುದು. ಇದನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಕುಡಿಯುವುದರಿಂದ ವಾಂತಿ ಬರುವುದು ನಿಲ್ಲುವುದಲ್ಲದೆ ಹೊಟ್ಟೆಯಲ್ಲಾಗ್ತಿರುವ ಕಿರಿಕಿರಿ ಕಡಿಮೆಯಾಗುತ್ತದೆ.
ನಿಂಬೆ ಹಣ್ಣಿನ ಪಾನಕ : ನಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಖನಿಜಾಂಶಗಳು ವಾಂತಿಯನ್ನು ತಕ್ಷಣವೇ ನಿಲ್ಲಿಸಲು ಸಹಕಾರಿ. ನಿಂಬೆ ಹಣ್ಣಿನ ರಸಕ್ಕೆ ಸ್ವಲ್ಪ ನೀರು,ಸ್ವಲ್ಪ ಉಪ್ಪು ಹಾಗೂ ಚಿಟಕಿ ಸಕ್ಕರೆ ಬೆರೆಸಿ ಸೇವನೆ ಮಾಡ್ಬೇಕು. ಇದ್ರಿಂದ ದೇಹ ಡಿಹೈಡ್ರೇಟ್ ಆಗದಂತೆಯೂ ತಡೆಯಬಹುದು. ವಾಂತಿ ಮಾಡಿದಾಗ ಕಾಡುವ ಸುಸ್ತು ಕೂಡ ಇದ್ರಿಂದ ಕಡಿಮೆಯಾಗುತ್ತದೆ.
Health Tips: ಸಕ್ಕರೆ ತಯಾರಿಸುವಾಗ ಮೂಳೆಯ ಪುಡಿ ಸೇರಿಸುತ್ತಾರಾ?
ಓಂ ಕಾಳು : ಓಂ ಕಾಳುಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಒಳ್ಳೆಯ ಪರಿಹಾರ ನೀಡಬಲ್ಲದು. ಸಾಮಾನ್ಯವಾಗಿ ಹೊಟ್ಟೆ ನೋವು ಕಾಣಿಸಿಕೊಂಡಾಗ ಓಂ ಕಾಳು ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ವಾಂತಿ ಬಂದಾಗ ಕೂಡ ಓಂ ಕಾಳುಗಳನ್ನು ಜಗಿಯುವ ಮೂಲಕ ವಾಂತಿ ನಿಲ್ಲಿಸಬಹುದು. ನೀರಿಗೆ ಓಂ ಕಾಳನ್ನು ಸೇರಿಸಿ, ಕುದಿಸಿ ಆ ನೀರನ್ನು ಟೀ ರೂಪದಲ್ಲಿ ಸೇವನೆ ಮಾಡಬಹುದು. ಓಂ ಕಾಳಿನ ಟೀ ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
ಉಪ್ಪು ಮತ್ತು ಸಕ್ಕರೆ ನೀರು : ಉಪ್ಪು ಮತ್ತು ಸಕ್ಕರೆಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದಲ್ಲಿರುವ ಪೋಷಕಾಂಶಗಳು ಸಮತೋಲನಕ್ಕೆ ಮರಳುತ್ತವೆ. ಇದರಿಂದ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ. ದೇಹಕ್ಕೆ ಶಕ್ತಿ ಸಿಗುತ್ತದೆ. ವಾಂತಿ ಕೂಡ ಕಡಿಮೆಯಾಗುತ್ತದೆ.