Asianet Suvarna News Asianet Suvarna News

New Year : ಹೊಸ ವರ್ಷದ ಸಂಭ್ರಮದಲ್ಲಿ ಹಾರ್ಟ್ ಅಟ್ಯಾಕ್ ಆಗ್ಬಹುದು ಎಚ್ಚರ…

ರಜೆ ಬಂತೆಂದ್ರೆ ಜನರು ದಿನಚರಿ ಮರೆಯುತ್ತಾರೆ. ಯಾವಾಗ್ಲೋ ಏಳೋದು, ಯಾವಾಗ್ಲೋ ಮಲಗೋದು, ಬೇಕಾಬಿಟ್ಟಿ ಆಹಾರ ಸೇವನೆ ಮಾಡೋದು. ಇದು ನಮ್ಮ ಆರೋಗ್ಯ ಕೆಡಿಸುವುದಲ್ಲದೆ ಹೃದಯಾಘಾತಕ್ಕೆ ಕಾರಣವಾಗುತ್ತೆ. ರಜೆ ಮಜಾ ಸಾವಿಗೆ ದಾರಿ ತೋರಿಸಬಹುದು.

Holiday Heart Syndrome Causes And Symptoms
Author
First Published Dec 27, 2022, 2:56 PM IST

ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದೆ. 2023ರನ್ನು ಸ್ವಾಗತಿಸಲು ಜನರು ಸಿದ್ಧರಾಗ್ತಿದ್ದಾರೆ. ಪಾರ್ಟಿಗಳ ಆಯೋಜನೆ ಈಗಾಗಲೇ ಶುರುವಾಗಿದೆ. ನೂತನ ವರ್ಷವನ್ನು ವೆಲ್ ಕಂ ಮಾಡಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಹೊಸ ವರ್ಷದ ಸಂಭ್ರಮ ನಿಮ್ಮ ಆರೋಗ್ಯವನ್ನು ಹಾಳು ಮಾಡುವುದಲ್ಲದೆ ಜೀವವನ್ನು ಬಲಿಪಡೆಯುವ ಸಾಧ್ಯತೆಯಿದೆ. ಹಾಗಾಗಿ ಈ ಸಡಗರದಲ್ಲಿಯೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಅಗತ್ಯವಿದೆ. ಈ ರಜಾದಿನಗಳಲ್ಲಿ ಹೃದಯಾಘಾತವಾಗುವ ಅಪಾಯವಿರುತ್ತದೆ.

ಹೌದು, ಇದನ್ನು ಹಾಲಿಡೇ (Holiday) ಹಾರ್ಟ್ ಸಿಂಡ್ರೋಮ್ (Syndrome) ಎಂದು ಕರೆಯಲಾಗುತ್ತದೆ. ಈ ಹಾಲಿಡೇ ಹಾರ್ಟ್ ಸಿಂಡ್ರೋಮ್ ನಿಂದ ಪ್ರತಿ ವರ್ಷ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಹಾಲಿಡೇ ಹಾರ್ಟ್ ಸಿಂಡ್ರೋಮ್ ಎನ್ನುವುದು ಹಬ್ಬದ ಸಮಯದಲ್ಲಿ ಅನಾರೋಗ್ಯಕರ (Unhealthy) ಆಹಾರ ತಿನ್ನುವುದರಿಂದ ಉಂಟಾಗುವ ಹೃದಯ (Heart) ದ ಸಮಸ್ಯೆಗಳನ್ನು ಸೂಚಿಸುತ್ತದೆ.

ದೀರ್ಘ ರಜೆ ಬಂತೆಂದ್ರೆ ಜನರು ಹೊರಗೆ ಪ್ರವಾಸ (Trip) ಕ್ಕೆ ಹೋಗ್ತಾರೆ. ಇಲ್ಲವೆ ಪಾರ್ಟಿಗಳಲ್ಲಿ ಪಾಲ್ಗೊಳ್ತಾರೆ. ಆಗ ಜನರು ಆಹಾರದ ಬಗ್ಗೆ ಅಸಡ್ಡೆ ತೋರುತ್ತಾರೆ. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡೋದಿಲ್ಲ. ಅಲ್ಲದೆ ಉಪ್ಪು ಹೆಚ್ಚಿರುವ ಆಹಾರ ಸೇವನೆ ಮಾಡ್ತಾರೆ. ನ್ಯೂ ಇಯರ್ ಪಾರ್ಟಿ ಅಂದ್ಮೇಲೆ ಮದ್ಯದ ಅತಿಯಾದ ಸೇವನೆ ಇರ್ಲೇಬೇಕು. ಅನಾರೋಗ್ಯಕರ ಆಹಾರ, ಮದ್ಯಪಾನ, ಧೂಮಪಾನ ಹೃದಯ ಬಡಿತವನ್ನು ಅಸಹಜವಾಗಿ ಹೆಚ್ಚಿಸಬಹುದು. ಇದು ಅನಿಯಂತ್ರಿತ ಸ್ಥಿತಿಗೆ ಬಂದಾಗ ಹೃದಯಾಘಾತವಾಗುವ  ಅಪಾಯ ಇರುತ್ತದೆ. ಪ್ರತಿ ವರ್ಷ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಈ ನಿರ್ಲಕ್ಷ್ಯದಿಂದ ಹೃದಯಾಘಾತದ ಅಪಾಯವು ಜಾಗತಿಕವಾಗಿ ಶೇಕಡಾ 15 ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಾಲಿಡೇ ಹಾರ್ಟ್ ಸಿಂಡ್ರೋಮ್‌  ಸಮಸ್ಯೆ ಬಗ್ಗೆ ನಾವು ತಿಳಿದಿರಬೇಕು.  

ಹಾಲಿಡೇ ಹಾರ್ಟ್ ಸಿಂಡ್ರೋಮ್ ಎಂಬುದು ಹೆಸರೇ ಸೂಚಿಸುವಂತೆ  ರಜೆ ದಿನಗಳಲ್ಲಿ ಸಂಭವಿಸುವ ಗಂಭೀರ ಹೃದಯ ಸಮಸ್ಯೆಯಾಗಿದೆ. ಹೃದಯಾಘಾತಕ್ಕೆ ಯಾವುದೇ ಸಮಯವಿಲ್ಲ ನಿಜ. ಆದ್ರೆ ಈ ಹೃದಯಾಘಾತ  ಸಾಮಾನ್ಯವಾಗಿ ರಜಾದಿನಗಳಲ್ಲಿ ಕಂಡುಬರುತ್ತದೆ. ಆಲ್ಕೊಹಾಲ್ಯುಕ್ತ ಪಾನೀಯಗಳು ಮತ್ತು ಹೆಚ್ಚಿನ ಕ್ಯಾಲೋರಿ ಆಹಾರದ ಸೇವನೆ  ಗಮನಾರ್ಹವಾಗಿ ಹೆಚ್ಚಾಗುವುದೇ ಇದಕ್ಕೆ ಮೂಲ ಕಾರಣ. ಹೃದಯ ಬಡಿತದಲ್ಲಿ ಹೆಚ್ಚಳ, ಅಪಧಮನಿಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ನೀವು ರಜಾ ದಿನಗಳಲ್ಲಿ ನಿಮ್ಮ ಆರೋಗ್ಯದ ಬಗ್ಗೆ  ಕಾಳಜಿ ವಹಿಸದಿದ್ದರೆ ಹೃದಯಾಘಾತದಿಂದ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. 

ಅಬ್ಬಬ್ಬಾ, ನೆಲದ ಮೇಲೆ ಕುಳಿತುಕೊಂಡ್ರೆ ಇಷ್ಟೆಲ್ಲಾ ಲಾಭವಿದ್ಯಾ?

ಆರೋಗ್ಯ ತಜ್ಞರು ಪ್ರಕಾರ, ಹೃತ್ಕರ್ಣದ ಕಂಪನವು ಮಾರಣಾಂತಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಅದರ ಲಕ್ಷಣಗಳನ್ನು ಸಮಯಕ್ಕೆ ಗುರುತಿಸಿ ಚಿಕಿತ್ಸೆ ಪಡೆಯಬೇಕಾಗುತ್ತದೆ.  ತ್ವರಿತ ಹೃದಯ ಬಡಿತ, ಎದೆನೋವು, ತಲೆಸುತ್ತು, ವಿಪರೀತ ಸುಸ್ತು ಮತ್ತು ಉಸಿರಾಟದ ತೊಂದರೆಗಳ ಬಗ್ಗೆ ಕಾಳಜಿ ವಹಿಸಬೇಕು. ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಆಗ ಮಾತ್ರ ಹೃದಯಾಘಾತದ ಅಪಾಯದಿಂದ ರಕ್ಷಣೆ ಪಡೆಯಬಹುದು. ಇದಲ್ಲದೆ ಹಾಲಿಡೇ ಹಾರ್ಟ್ ಸಿಂಡ್ರೋಮ್ ತಪ್ಪಿಸಲು ನೀವು ಕೆಲ ಸರಳ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಹೊಸ ವರ್ಷ ಅಥವಾ ಹಬ್ಬದ ಸಂದರ್ಭದಲ್ಲಿ ಊಟ-ತಿಂಡಿಗಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಉಪ್ಪಿರುವ ಆಹಾರ ರಕ್ತದೊತ್ತಡವನ್ನು ಹೆಚ್ಚಿಸುವ ಕಾರಣ ನೀವು ಅದ್ರಿಂದ ದೂರವಿರುವುದು ಒಳ್ಳೆಯದು. 

Organic Food: ಸಾವಯವ ಆಹಾರ ಖರೀದಿಸೋ ಮುನ್ನ ಈ ಎಚ್ಚರ!

ಕಡಿಮೆ ಅವದಿಯಲ್ಲಿ ನೀವು ಹೆಚ್ಚಿನ ಆಲ್ಕೋಹಾಲ್ ಸೇವನೆ ಮಾಡಿದ್ರೆ  ಹಾಲಿಡೇ ಹಾರ್ಟ್ ಸಿಂಡ್ರೋಮ್‌ ಅಪಾಯ ಕಾಡುತ್ತದೆ. ಆದಷ್ಟು ಆಲ್ಕೋಹಾಲ್ ಇಲ್ಲದೆ ರಜೆಯ ಮಜವನ್ನು ಅನುಭವಿಸಲು ಪ್ರಯತ್ನಿಸಿ. ಇದು ಅಸಾಧ್ಯ ಎನ್ನುವವರು ಕಡಿಮೆ ಪ್ರಮಾಣದಲ್ಲಿ ಮದ್ಯಪಾನ ಸೇವನೆ ಮಾಡಿ. 
 

Follow Us:
Download App:
  • android
  • ios