ಚಡ್ವಿಕ್ ಕೊಲೊನ್ (43) ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಕೊಲೊನ್ ಕ್ಯಾನ್ಸರ್‌ನಿಂಬ ಬಳಲುತ್ತಿದ್ದ ನಟನ ಸಾವಿಗೆ ಕಾರಣವಾಗಿದ್ದು ಕೊಲೊನ್ ಕ್ಯಾನ್ಸರ್.

ಕೊಲೊನ್ ಕ್ಯಾನ್ಸರ್ ಡಯಾಗ್ನಿಸಿಸ್ ಆದ ಮೇಲೆಯೂ ನಟ ಕ್ಯಾನ್ಸರ್‌ ಜೊತೆ ಹೋರಾಡುತ್ತಲೇ ಬಂದಿದ್ದರು. ಪತ್ನಿ ಮತ್ತು ಕುಟುಂಬಸ್ಥರ ಜೊತೆಗಿದ್ದ ನಟ ಲಾಸ್‌ಏಂಜಲೀಸ್‌ನಲ್ಲಿ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದರು. 2016ರಲ್ಲಿ ಕೊಲೊನ್ ಕ್ಯಾನ್ಸರ್ 3ನೇ ಹಂತಕ್ಕೆ ಚಿಕಿತ್ಸೆ ಪಡೆದಿದ್ದರು. ಬ್ಲಾಕ್ ಫಾಂಥರ್ ಮೂಲಕ ಜನರ ಮೆಚ್ಚಿನ ನಟನಾಗಿದ್ದ ಚಡ್ವಿಕ್ ಸಾವಿಗೆ ಕಾರಣವಾಗಿದ್ದು ಕೊಲನ್ ಕ್ಯಾನ್ಸರ್.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಟಾರ್ ನಟ ಚಾಡ್ವಿಕ್ ಬೋಸ್‌ಮನ್ ನಿಧನ

ಕೊಲೊನ್ ಕ್ಯಾನ್ಸರ್: ಕೊಲೊನ್ ಕ್ಯಾನ್ಸರ್ ಮೊದಲು ಬಾಧಿಸುವುದು ದೊಡ್ಡ ಕರುಳಿಗೆ ಅಂದರೆ ಕೊಲೊನ್‌ಗೆ. ಕೊಲೊನ್ ಮನುಷ್ಯ ದೇಹದ ಜೀರ್ಣ ಕ್ರಿಯೆಯ ಕೊನೆಯ ಟ್ರ್ಯಾಕ್. ಈ ಕ್ಯಾನ್ಸರ್ ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದಾದರೂ ಸಾಮಾನ್ಯವಾಗಿ ವೃದ್ಧರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಇದು ಸಾಮಾನ್ಯವಾಗಿ ಕೊಲೊನ್ ಒಳಗೆ ರೂಪುಗೊಳ್ಳುತ್ತದೆ. ಪಾಲಿಪ್ಸ್ ಎಂಬ ಸಣ್ಣ ಕ್ಯಾನ್ಸರ್ ರಹಿತ ಕೋಶಗಳಾಗಿ ಮೊದಲು ಪ್ರಾರಂಭವಾಗುತ್ತದೆ. ನಂತರ ಇದುವೇ ಕೊಲೊನ್ ಕ್ಯಾನ್ಸರ್ ಆಗಿ ಬದಲಾಗುತ್ತದೆ.

ಹೊಟ್ಟೆ ಕ್ಯಾನ್ಸರ್ ಲಕ್ಷಣಗಳಿವು, ಕಡೆಗಣಿಸಿದ್ರೆ ಕಡೆಗಾಲ ಬಂದಂತೆ!

ಪೊಲಿಪ್ಸ್ ಕೋಶಗಳು ಸಣ್ಣದಾಗಿದ್ದು, ಬಹಳ ಸಣ್ಣ ಮಟ್ಟಿನ ಗುಣ ಲಕ್ಷಣಗಳನ್ನಷ್ಟೇ ತೋರಿಸುತ್ತವೆ. ಹೀಗಾಗಿ ಕೊಲೊನ್ ಡಯಾಗ್ನಿಸಿಸ್ ಆದವರು ಪದೇ ಪದೇ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಪೊಲಿಪ್ಸ್ ಬೆಳೆಯದಂತೆ ತಡೆಯುವುದು ಅಗತ್ಯ.

ಹಲವು ಪ್ರಕರಣದಲ್ಲಿ ಪೊಲಿಪ್ಸ್ ಕೋಶ ಕ್ಯಾನ್ಸರ್ ಆಗಿ ಬದಲಾಗುವ ಮುನ್ನವೇ ಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಕೊಲೊನ್ ಕ್ಯಾನ್ಸರನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ.

ಕೊಲೊನ್ ಕ್ಯಾನ್ಸರ್‌ನ ಗುಣ ಲಕ್ಷಣಗಳು:

ಕೊಲೊನ್ ಕ್ಯಾನ್ಸರ್‌ನ ದೊಡ್ಡ ಅಪಾಯವೆಂದರೆ ಈ ಕ್ಯಾನ್ಸರ್‌ನ ಆರಮಭೀಕ ಹಂತದಲ್ಲಿ ಯಾವುದೇ ಲಕ್ಷಣಗಳೇ ಕಂಡು ಬರುವುದಿಲ್ಲ. ಗುಣ ಲಕ್ಷಣಗಳು ಕಂಡು ಬಂದಾಗ ಕ್ಯಾನ್ಸರ್ ತೀವ್ರತೆ ಹೆಚ್ಚಾಗಿರುತ್ತದೆ. 

ಮಲ ವಿಸರ್ಜನೆ, ಅತಿಸಾರ ಮತ್ತು ಮಲಬದ್ಧತೆಯ ಅಸ್ಥಿರವಾಗುತ್ತದೆ. ಕರುಳಿನ ಪ್ರಕ್ರಿಯೆಯಲ್ಲಿ ಬದಲಾವಣೆಯಾಗುತ್ತದೆ. ಗುದನಾಳದಲ್ಲಿ ರಕ್ತಸ್ರಾವವಾಗುವುದು, ನೋವು, ಸೆಳೆತದ ಜೊತೆ ಹೊಟ್ಟೆಯಲ್ಲಿ ಭಾರೀ ಅಸ್ವಸ್ಥತೆ ಅನುಭವವಾಗುತ್ತದೆ. ಕ್ರಮೇಣ ತೂಕ ಕಡಿಮೆಯಾಗುವುದು ಆಯಾಸ ಮತ್ತು ನಿಶಕ್ತಿ ಕಾಣಿಸಿಕೊಳ್ಳುತ್ತದೆ.

ಕೊಲೊನ್ ಕ್ಯಾನ್ಸರ್‌ಗೆ ಕಾರಣವೇನು..?

ವೈದ್ಯರೋ, ವಿಜ್ಞಾನಿಗಳೋ ಕೊಲೊನ್ ಕ್ಯಾಮ್ಸರ್‌ಗೆ ಸ್ಪಷ್ಟ ಕಾರಣವನ್ನು ಇದುವರೆಗೂ ನೀಡಿಲ್ಲ. ಕೊಲೊನ್‌ನಲ್ಲಿರುವ ಅಂದರೆ ದೊಡ್ಡ ಕರುಳಿನಲ್ಲಿರುವ ಆರೋಗ್ಯಕರ ಕೋಶಗಳ ಡಿಎನ್‌ಎ ರೂಪಾಂತರವಾಗುತ್ತದೆ. ಆರೋಗ್ಯಕರವಾಗಿದ್ದ ಕೋಶಗಳು ದೇಹದಲ್ಲಿ ಸಮಾನಾಂತರವಾಗಿ ರೂಪಾಂತರಗೊಳ್ಳುತ್ತವೆ. ಯಾವಾಗ ದೇಹದಲ್ಲಿರುವ ಡಿಎನ್‌ಎ ಡ್ಯಾಮೇಜ್ ಆಗುತ್ತದೋ ಅಂತಹ ಸಂದರ್ಭದಲ್ಲಿ ಅಲ್ಲಿ ಕ್ಯಾನ್ಸರ್ ಅಂಶಗಳು ಕಾಣಿಸಿಕೊಳ್ಳುತ್ತವೆ.

ನನ್ನ ಒಂದು ನಗುವಿಗಾಗಿ ಅವಳು ತಲೆ ಬೋಳಿಸಿಕೊಂಡಿದ್ದಳು!

ಕೋಶಗಳನ್ನು ವಿಭಜಿಸಲ್ಪಡದಿದ್ದರೂ  ಕೋಶಗಳು ವಿಭಜನೆಯಾಗಲಾರಂಭಿಸುತ್ತದೆ. ಜೀವಕೋಶಗಳು ಸಂಗ್ರಹವಾಗಿ ಅದು ಗಡ್ಡೆಯಾಗಿ ರೂಪಿಸಲ್ಪಡುತ್ತದೆ. ಕ್ಯಾನ್ಸರ್ ಅಂಗಾಂಶಗಳು ಬೆಳೆದಾಗ ಅವು ಹತ್ತಿರದಲ್ಲಿರುವ ಎಲ್ಲ ಆರೋಗ್ಯಕರ ಕೋಶಗಳನ್ನು ನಾಶಮಾಡುತ್ತವೆ. ಇನ್ನೂ ಅಪಾಯಕಾರಿ ಎಂದರೆ ಈ ಕ್ಯಾನ್ಸರ್ ಅಂಶಗಳು ದೇಹದ ಎಲ್ಲೆಡೆ ಸಂಚರಿಸಬಹುದಾಗಿದ್ದು, ಅವುಗಳು ದೇಹದ ಬೇರೆ ಭಾಗಗಳಲ್ಲಿಯೂ ನಿಕ್ಷೇಪಗೊಳ್ಳುತ್ತವೆ.

ಕರುಳಿನ ಕ್ಯಾನ್ಸರ್‌ನಲ್ಲಿ ಅಪಾಯಕಾರಿ ಅಂಶ:

ಕೆಲವು ಅಂಶಗಳು ಕೊಲೊನ್ ಕ್ಯಾನ್ಸರ್ ತೀವ್ರತೆಯನ್ನು ಹೆಚ್ಚಿಸಬಹುದು. ಅಂತವುಗಳಲ್ಲಿ ಒಂದು ವಯಸ್ಸು. ನಾವು ನಮ್ಮ ವಯಸ್ಸು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ ವಯಸ್ಉ ಕ್ಯಾನ್ಸರ್ ತೀವ್ರತೆ ಹೆಚ್ಚಿಸುವ ಪ್ರಮುಖ ಅಂಶ.

ಹೆಚ್ಚಿನ ಪ್ರಕರಣದಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿಯೇ ಕೊಲೊನ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಆದರೆ 50 ವರ್ಷಕ್ಕಿಂತ ಕೆಳಗಿನವರಲ್ಲೂ ಕೊಲೊನ್ ಕ್ಯಾನ್ಸರ್ ಹೆಚ್ಚುತ್ತಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಆದರೆ ಈ ಬಗ್ಗೆ ವೈದ್ಯರಿಗೂ ಕಾರಣಗಳು ತಿಳಿದಿಲ್ಲ.

ಆಫ್ರಿಕನ್-ಅಮೆರಿಕನ್ ರೇಸ್: ಆಫ್ರಿಕಾ ಮತ್ತು ಅಮೆರಿಕನ್ನರಲ್ಲಿ ಕೊಲೊನ್ ಕ್ಯಾನ್ಸರ್ ಅಪಾಯ ಹೆಚ್ಚು ಎನ್ನುತ್ತಾರೆ ವೈದ್ಯರು.

ಉರಿಯೂತದ ಕರುಳಿನ ಲಕ್ಷಣ: ಅಲ್ಸರೇಟಿವ್ ಕೊಲೈಟಿಸ್ ಮತ್ತು ಕ್ರೋನ್ಸ್ ಕಾಯಿಲೆಗಳಿಂದ ಉಂಟಾಗುವ ಕೊಲೊನ್  ಉರಿಯೂತ ಕಾಯಿಲೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಒಬ್ಬ ವ್ಯಕ್ತಿಯಲ್ಲಿ ಕೊಲೊನ್ ಕ್ಯಾನ್ಸರ್ ಕಾಣಿಸಿಕೊಂಡರೆ ಅದು ಆ ಕುಟುಂಬದ ಇತರ ವ್ಯಕ್ತಿಗೂ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕುಟುಂಬದ ಒಬ್ಬರಿಗಿಂತ ಹೆಚ್ಚು ಜನರಲ್ಲಿ ಕೊಲೊನ್ ಕ್ಯಾನ್ಸರ್ ಕಂಡು ಬಂದರೆ ಅದು ಅಪಾಯಕಾರಿ ಎಂದರ್ಥ.

ಅಧಿಕ ಕೊಬ್ಬು ಮತ್ತು ಕಡಿಮೆ-ನಾರಿನ ಆಹಾರ:

ಪಾಶ್ಚಾತ್ಯ ಆಹಾರ ಪದ್ಧತಿ ಕೊಲೊನ್ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನುಂಟುಮಾಡುತ್ತದೆ. ಪಾಶ್ಚಾತ್ಯ ಆಹಾರದಲ್ಲಿ ಕೊಬ್ಬು ಹೆಚ್ಚು ಮತ್ತು ಫೈಬರ್ ಕಡಿಮೆ ಇರುತ್ತದೆ. ಹೆಚ್ಚು ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸವನ್ನು ತಿನ್ನುವ ಜನರಿಗೆ ಕೊಲೊನ್ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ಅಧ್ಯಯನಗಳು ಹೇಳುತ್ತವೆ.

ಜಡ ಜೀವನಶೈಲಿ: ಜಡ ಜೀವನಶೈಲಿ ನಡೆಸುವವರಲ್ಲಿ ಜನರು ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.

ಮಧುಮೇಹ: ಇನ್ಸುಲಿನ್ ಪ್ರತಿರೋಧ ಹೊಂದಿರುವ ಜನರಿಗೂ ಅಪಾಯ ಹೆಚ್ಚಾಗಿರುತ್ತದೆ.

ಸ್ಥೂಲಕಾಯ: ಅತಿಯಾದ ದಪ್ಪವಿರುವ ಜನರು ಸಹ ಕರುಳಿನ ಕ್ಯಾನ್ಸರ್ ಮತ್ತು ಅದರಿಂದ ಸಾಯುವ ಅಪಾಯವಿದೆ.

ಧೂಮಪಾನ ಮತ್ತು ಮದ್ಯಪಾನ : ಅತಿಯಾಗಿ ಕುಡಿಯುವವರು ಮತ್ತು ಧೂಮಪಾನ ಮಾಡುವವರಿಗೂ ಅಪಾಯ ತಪ್ಪಿದ್ದಲ್ಲ.

ತಡೆಯುವುದು ಹೇಗೆ..?

ಕೊಲೊನ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದವರು 50 ವರ್ಷದ ನಂತರ ನಿಯಮಿತವಾಗಿ ಪರೀಕ್ಷೆ ನಡೆಸುತ್ತಿರಬೇಕು. ಕುಟುಂಬದಲ್ಲಿ ಕೊಲೊನ್ ಕ್ಯಾನ್ಸರ್ ಇದ್ದವರಾಗಿದ್ದರೆ 50 ವರ್ಷಕ್ಕಿಂತ ಮೊದಲೇ ಸ್ಕ್ರೀನಿಂಗ್ ಆರಂಭಿಸಬೇಕು.

ಮನೆಯಲ್ಲೇ ಇದ್ದು ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಿದ ಸುಕೃತ ವಾಗ್ಲೆ

ತಾಜಾ ತರಕಾರಿ, ಹಣ್ಣುಗಳನ್ನು ಧಾನ್ಯಗಳನ್ನೂ ಸೇವಿಸಬೇಕು. ಮದ್ಯಪಾನ, ಧೂಮಪಾನ ತ್ಯಜಿಸುವುದು ಅಗತ್ಯ. ಆದಷ್ಟು ಕ್ರಿಯಾಶೀಲತೆಯಿಂದ ಕೂಡಿದ್ದು ಆರೋಗ್ಯಕರ ಜೀಔನಶೈಲಿಯನ್ನು ಕಾಪಾಡಿಕೊಳ್ಳಬೇಕು. ಈ ಮೂಲಕ ಕೊಲೊನ್ ಕ್ಯಾನ್ಸರ್ ರಿಸ್ಕ್ ಕಡಿಮೆ ಮಾಡಬಹುದು.