ಈ ಅತಿಯಾದ ಮಳೆಯಿಂದಾಗಿ ಬೇಸತ್ತಿದ್ದೀರಿ ಅಲ್ಲವೇ. ಅದರಲ್ಲಿಯೂ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಆರ್ಭಟಿಸುತ್ತಿದೆ. ಭಯ ಬೇಡ, ಆದರೆ ಜಾಗುರೂಕಾರಾಗಿರಿ (Careful). ಅದಕ್ಕಾಗಿ ಈ ಕೆಲವು ಅಂಶಗಳನ್ನು ನೆನಪಿನಲ್ಲಿಡಿ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಇತ್ತೀಚೆಗೆ ಗುಡುಗು ಮತ್ತು ಮರಳು ಬಿರುಗಾಳಿಗಳ (Sandstorms) ಸಮಯದಲ್ಲಿ ಸುರಕ್ಷಿತವಾಗಿರಲು ಕೆಲವು ಕ್ರಮಗಳನ್ನು ಹಂಚಿಕೊಂಡಿದೆ. ದೇಶದ ಬಹುತೇಕ ಭಾಗಗಳು ಈಗ ಮಾನ್ಸೂನ್‌ನಿಂದ ಆವೃತವಾಗಿದ್ದು, ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಹೇಗೆ ತಮ್ಮನ್ನು ತಾವು ರಕ್ಷಿಸಿ ಕೊಳ್ಳಬಹುದು ಎಂಬುದಕ್ಕೆ NDMA ಕೆಲವು ಕ್ರಮಗಳನ್ನು ಕೈಗೊಂಡಿದೆ. ಚಂಡಮಾರುತಗಳು ಮತ್ತು ಬಿರುಗಾಳಿಗಳು ಸಾಮಾನ್ಯವಾಗಿ ಸಾಕು ಪ್ರಾಣಿಗಳು, ಬೆಳೆಗಳು ಮತ್ತು ವಾಹನಗಳಿಗೆ ತೀವ್ರ ಹಾನಿಯನ್ನುಂಟುಮಾಡುತ್ತವೆ. NDMA, ಇತ್ತೀಚಿನ ಟ್ವೀಟ್‌ನಲ್ಲಿ, ಸಂಭವನೀಯ ಗುಡುಗು ಮತ್ತು ಭಾರಿ ಮಳೆಗೆ ಸಿದ್ಧವಾಗಿರಲು ಕೆಲವು ಹಂತಗಳನ್ನು ಹಂಚಿಕೊಂಡಿದೆ. ಮಾರ್ಗಸೂಚಿಗಳನ್ನು ಚಂಡಮಾರುತ ಅಪ್ಪಳಿಸುವ ಮುನ್ನ ಅದನ್ನು ಎದುರಿಸಲು ತಯಾರಿ, ಚಂಡಮಾರುತದ ಸಮಯದಲ್ಲಿ ಪರಿಗಣಿಸಬೇಕಾದ ಕ್ರಮಗಳು ಮತ್ತು ಚಂಡಮಾರುತದ ನಂತರ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಎಂಬುದಾಗಿ ವಿಂಗಡಿಸುವ ಮೂಲಕ ಸಲಹೆಗಳನ್ನು ನೀಡಿದೆ.
ಇದನ್ನೂ ಓದಿ: ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲ ಸಿರಿ, ನೋಡು ಬಾ ಭರಚುಕ್ಕಿ ಜಲಪಾತದ ಸೊಬಗ
NDMA ಪಟ್ಟಿಯ ಪ್ರಕಾರ, ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಯಾವ ಕೆಲಸಗಳನ್ನು ಮಾಡಬೇಕು, ಹಾಗೂ ಯಾವುದನ್ನು ಮಾಡಬಾರದು ಎಂಬ ಪಟ್ಟಿಯನ್ನು ಹೇಗೆ ತಯಾರಿಸುವುದು ಎಂಬ ಮಾಹಿತಿ ಇಲ್ಲಿದೆ ನೋಡಿ..
- ಬದುಕುಳಿಯುವಿಕೆ ಮತ್ತು ಸುರಕ್ಷತೆಗಾಗಿ ಅಗತ್ಯ ವಸ್ತುಗಳನ್ನು ಸಾಗಿಸುವ ತುರ್ತು ಕಿಟ್ (Emergency Kit) ಅನ್ನು ತಯಾರಿಸಿ.
- ಮನೆಯಲ್ಲಿ ಏನಾದರೂ ತೊಂದರೆಗಳು ಇದ್ದರೆ, ಅದನ್ನು ರಿಪೇರಿ (Rpair) ಮಾಡಿ ಮತ್ತು ನಿಮ್ಮ ಮನೆಯನ್ನು ಸುರಕ್ಷಿತಗೊಳಿಸಿ. ಚೂಪಾದ (Sharp) ವಸ್ತುಗಳನ್ನು ಸಡಿಲವಾಗಿ ಬಿಡಬೇಡಿ.
- ಟಿವಿ ಚಾನೆಲ್‌ಗಳು ಮತ್ತು ರೇಡಿಯೊದಲ್ಲಿನ (Radio) ಇತ್ತೀಚಿನ ಬೆಳವಣಿಗೆಗಳ ಮೇಲೆ ಕಣ್ಣಿಡಿ.
ಚಂಡಮಾರುತವು ಅಪ್ಪಳಿಸಿದಾಗ (Hits), ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಮುಖ್ಯ ಅಂಶಗಳು ಹೀಗಿವೆ..
- ಮನೆಯೊಳಗೆ ಮತ್ತು ವರಾಂಡಾಗಳು ಅಥವಾ ಬಾಲ್ಕನಿಗಳಲ್ಲಿ ಉಳಿಯಲು (Stay) ಪ್ರಯತ್ನಿಸಿ.
- ವಿದ್ಯುತ್ ಉಪಕರಣಗಳನ್ನು (Electrical) ಅನ್‌ಪ್ಲಗ್ ಮಾಡಿ ಮತ್ತು ತಂತಿಯ ಟೆಲಿಫೋನ್‌ಗಳ ಬಳಕೆಯನ್ನು ತಪ್ಪಿಸಿ.
- ಹರಿಯುವ ನೀರನ್ನು ಬಳಸಬೇಡಿ ಮತ್ತು ಲೋಹದ ಕೊಳವೆಗಳಿಂದ (Metal pipe) ದೂರ ಉಳಿಯಿರಿ
- ಲೋಹದ ಹಾಳೆ (Sheet) ಮತ್ತು ಛಾವಣಿಯ (Roof) ರಚನೆಗಳಿಂದ ದೂರವಿರಿ.
- ಅಂತಹ ಸಮಯದಲ್ಲಿ ನೀವು ಬಸ್ ಅಥವಾ ಕಾರಿನೊಳಗೆ (Car) ಉಳಿಯಿರಿ.
- ಮರದ ಕೆಳಗೆ ಅಥವಾ ಹತ್ತಿರ ಆಶ್ರಯ ಪಡೆಯಬೇಡಿ. ವಿದ್ಯುತ್ ತಂತಿಗಳಿಂದ ದೂರವಿರಿ.
- ಯಾವುದೇ ಲೋಹೀಯ ವಸ್ತುಗಳನ್ನು (Metalic Objects) ಬಳಸಬೇಡಿ.
ಇದನ್ನೂ ಓದಿ: Monsoon Remedies : ಮನೆ ತೇವಗೊಂಡು ಗಬ್ಬು ವಾಸನೆ ಬರ್ತಿದ್ಯಾ?
ಚಂಡಮಾರುತವು ಹಾದುಹೋದ ನಂತರ, NDMA ಇದನ್ನು ಸೂಚಿಸುತ್ತದೆ:
- ಗುಡುಗಿನಿಂದ ಹಾನಿಗೊಳಗಾದ (Damaged) ಪ್ರದೇಶಗಳಿಂದ ದೂರವಿರಿ
- ವೃದ್ಧರು, ಮಕ್ಕಳು ಮತ್ತು ವಿಕಲಚೇತನರಿಗೆ ಸಹಾಯ (Help) ಮಾಡಿ
- ಬಿದ್ದ ಮರಗಳು ಅಥವಾ ವಿದ್ಯುತ್ ತಂತಿಗಳಿಂದ ದೂರವಿರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಆದಷ್ಟು ಬೇಗ ವರದಿ (Report) ಮಾಡಿ.
NDMA ಪ್ರಾಣಿಯನ್ನು ಸಾಕುವ ಪೋಷಕರಿಗೆ ಸಹ ಮಾರ್ಗಸೂಚಿಗಳನ್ನು ಹಂಚಿಕೊಂಡಿದೆ.
- ಪ್ರಾಣಿಗಳಿಗೆ (Animals) ನಿಮ್ಮ ಮನೆಯಲ್ಲಿ ಅಥವಾ ಹತ್ತಿರ ಸುರಕ್ಷಿತ ಪ್ರದೇಶವನ್ನು ಗೊತ್ತುಪಡಿಸಿ.
- ತೆರೆದ ನೀರಿನಿಂದ (Open Waters) ಪ್ರಾಣಿಗಳನ್ನು ದೂರವಿಡಿ
- ನಿಮ್ಮ ಪ್ರಾಣಿಗಳು ಮರದ (Tree) ಕೆಳಗೆ ಆಶ್ರಯ ಪಡೆಯಲು ಅನುಮತಿಸಬೇಡಿ.
ಈ ಎಲ್ಲಾ ವಿಚಾರಗಳ ಕಡೆಗೆ ಹೆಚ್ಚು ಗಮನ ನೀಡುವ ಮೂಲಕ ಸುರಕ್ಷಿತವಾಗಿ ಇರಬಹುದು. ಕೆಲವೊಮ್ಮೆ ನಮ್ಮ ಸಣ್ಣ ನೆಗ್ಲಿಜೆನ್ಸ್ (Negligence) ಇಂದಾಗಿ ದೊಡ್ಡ ಅಪಾಯಗಳನ್ನು ಎದುರಿಸಬೇಕಾಗಿ ಬರಬಹುದು ಎಚ್ಚರಿಕೆ!
