Health Tips : ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗೆ ಕಾರಣವಾಗುತ್ತೆ ಬಾಲ್ಯದ ಅಭ್ಯಾಸ

ಮಕ್ಕಳು ಉತ್ತಮ ಭವಿಷ್ಯ ರೂಪಿಸಲು ವಿದ್ಯಾಭ್ಯಾಸ ಮಾತ್ರ ಮುಖ್ಯವಲ್ಲ. ಅವರ ಆರೋಗ್ಯವೂ ಬಹಳ ಮುಖ್ಯ. ಬಾಲ್ಯದಲ್ಲಿ ಮಕ್ಕಳ ಆರೋಗ್ಯ ನಿರ್ಲಕ್ಷ್ಯ ಮಾಡಿದ್ರೆ ಭವಿಷ್ಯದಲ್ಲಿ ಅಪಾಯಕಾರಿ ಖಾಯಿಲೆಗಳನ್ನು ಎದುರಿಸಬೇಕಾಗುತ್ತದೆ. 
 

Heart Disease Risk Children

ಬಾಲ್ಯ (Childhood) ದ ಆರೋಗ್ಯ (Health) ಬಹಳ ಮುಖ್ಯ. ಬಾಲ್ಯವನ್ನು ಆರೋಗ್ಯಕರ ಜೀವನ (Life) ಕ್ಕೆ ಆಧಾರವೆಂದು ಪರಿಗಣಿಸಲಾಗುತ್ತದೆ. ನಮ್ಮ ಮುಂದಿನ ಜೀವನ ಎಷ್ಟು ಆರೋಗ್ಯಕರವಾಗಿರುತ್ತದೆ ಎಂಬುದನ್ನು ಬಾಲ್ಯದ ಆರೋಗ್ಯದ ಆಧಾರದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅಂದಾಜು ಮಾಡಬಹುದು. ಮಕ್ಕಳ ಪೋಷಣೆ ಮತ್ತು ದಿನಚರಿಯ ಬಗ್ಗೆ ವಿಶೇಷ ಗಮನ ಹರಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡಲು ಇದು ಒಂದು ಕಾರಣವಾಗಿದೆ. ಮಕ್ಕಳ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಕಾಳಜಿ ವಹಿಸಿದರೆ, ಭವಿಷ್ಯದಲ್ಲಿ ಅನೇಕ ಗಂಭೀರ ಮತ್ತು ಮಾರಣಾಂತಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ದೃಢಪಡಿಸುತ್ತವೆ. ಬಾಲ್ಯದ ಕೆಲವು ಅಭ್ಯಾಸಗಳು ಮತ್ತು ಸಮಸ್ಯೆಗಳು ಭವಿಷ್ಯದಲ್ಲಿ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಇತ್ತೀಚಿನ ಅಧ್ಯಯನ ನಡೆಸಿದ ಸಂಶೋಧಕರು, ಮಕ್ಕಳ ಯಾವ ಅಭ್ಯಾಸಗಳು ಮುಂದೆ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಮಾರಣಾಂತಿಕ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ವಿಜ್ಞಾನಿಗಳು ಐದು ಬಾಲ್ಯದ ಅಭ್ಯಾಸವನ್ನು ಅಪಾಯಕಾರಿ ಎಂದಿದ್ದಾರೆ. ಇದು ಪ್ರೌಢಾವಸ್ಥೆಯಲ್ಲಿ ಗಂಭೀರ ಹೃದಯ ಕಾಯಿಲೆಗಳ ಅಪಾಯಕ್ಕೆ ಕಾರಣವಾಗಬಹುದು ಎಂದಿದ್ದಾರೆ. ಆರಂಭದಲ್ಲಿಯೇ ಮಕ್ಕಳ ಆರೋಗ್ಯ ಸುಧಾರಿಸುವ ಕೆಲಸ ಮಾಡಿದ್ರೆ  ಮಾರಣಾಂತಿಕ ಹೃದಯ ಕಾಯಿಲೆಗಳ ಸಮಸ್ಯೆಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಈ ಅಧ್ಯಯನದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. 
ಮಕ್ಕಳಲ್ಲಿ ಹೆಚ್ಚಿದ ಬಿಎಂಐ, ರಕ್ತದೊತ್ತಡ, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್‌ಗಳು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಧೂಮಪಾನದ ಅಭ್ಯಾಸಗಳು 40 ನೇ ವಯಸ್ಸಿನಲ್ಲಿ ಹೃದ್ರೋಗ ಮತ್ತು ಗಂಭೀರ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನದ ಹೇಳಲಾಗಿದೆ. 

ಚೈನೀಸ್‌ ಫುಡ್‌ನಲ್ಲಿ ಬಳಸೋ ಸೋಯಾ ಸಾಸ್‌ನಿಂದ ಆರೋಗ್ಯಕ್ಕೆಷ್ಟು ಪ್ರಯೋಜನವಿದೆ ನೋಡಿ

ಅಧ್ಯಯನದ ವಿವರ : ಆಸ್ಟ್ರೇಲಿಯಾ, ಫಿನ್‌ಲ್ಯಾಂಡ್ ಮತ್ತು ಯುಎಸ್ ನಿಂದ 3-19 ವರ್ಷ ವಯಸ್ಸಿನ 38,589 ಮಕ್ಕಳನ್ನು ಅಧ್ಯಯನಕ್ಕೆ ಸೇರಿಸಲಾಗಿದೆ. 35-50 ವರ್ಷ ವಯಸ್ಸಿನವರೆಗೂ ಅವರನ್ನು ಅಧ್ಯಯನ ನಡೆಸಲಾಗಿದೆ.  ಅಧ್ಯಯನದ ಕೊನೆಯಲ್ಲಿ, ಸಂಶೋಧಕರು ಅರ್ಧಕ್ಕಿಂತ ಹೆಚ್ಚು ಮಕ್ಕಳು  ವಯಸ್ಕರಾಗ್ತಿದ್ದಂತೆ  ಹೃದ್ರೋಗದ ಅಪಾಯ ಕಂಡು ಬಂದಿತ್ತು.  ಜಾಗತಿಕ ಮಟ್ಟದಲ್ಲಿ ಹೃದಯರಕ್ತನಾಳದ ಕಾಯಿಲೆಗಳ ಪ್ರಕರಣಗಳು ವೇಗವಾಗಿ ವರದಿಯಾಗುತ್ತಿವೆ ಎಂದು ಸಂಶೋಧನೆಯ ಪ್ರಮುಖ ಮತ್ತು ಅಧ್ಯಯನದ ಲೇಖಕ ಟೆರೆನ್ಸ್ ಡ್ವೈಯರ್ ಹೇಳಿದ್ದಾರೆ. ಪ್ರಸ್ತುತ, ಹಲವಾರು ರೀತಿಯ ಪರಿಣಾಮಕಾರಿ ಔಷಧಗಳು ಮತ್ತು ಚಿಕಿತ್ಸೆಗಳು ಲಭ್ಯವಿವೆ. ಆದರೆ ಬಾಲ್ಯದಿಂದಲೇ ಕಾಳಜಿವಹಿಸಿದ್ರೆ ಈ ರೋಗ ಬರುವುದಿಲ್ಲ. ರೋಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಡೆಗಟ್ಟಲು ಬಾಲ್ಯದ ದಿನಚರಿಯೇ ಸಾಕು ಎಂದವರು ಹೇಳಿದ್ದಾರೆ. 

ಬಾಲ್ಯದಲ್ಲಿ ಆಹಾರ ಪದ್ಧತಿ ಬಗ್ಗೆ ಕಾಳಜಿ : ಸಂಶೋಧಕ ಟೆರೆನ್ಸ್ ಡ್ವೈಯರ್ ಪ್ರಕಾರ, ಚಿಕ್ಕ ವಯಸ್ಸಿನಿಂದಲೇ ಆಹಾರ ಪದ್ಧತಿಯನ್ನು ಸುಧಾರಿಸುವುದು ಬಹಳ ಮುಖ್ಯ, ಧೂಮಪಾನವನ್ನು ತ್ಯಜಿಸುವ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ದೈಹಿಕ ಚಟುವಟಿಕೆ ಮತ್ತು ವ್ಯಾಯಾಮಕ್ಕೆ ಹೆಚ್ಚು ಗಮನ ನೀಡಬೇಕು. ಇದರಿಂದ ಭವಿಷ್ಯದಲ್ಲಿ ಹೃದ್ರೋಗದ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಬಾಲ್ಯ ಮತ್ತು ಹದಿಹರೆಯದಲ್ಲಿ ನಾವು ನಮ್ಮ ಜೀವನಶೈಲಿ ಮತ್ತು ಆಹಾರವನ್ನು ಸುಧಾರಿಸಿದರೆ, ಭವಿಷ್ಯದಲ್ಲಿ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ ಎಂದವರು ಹೇಳಿದ್ದಾರೆ.

Men Health : ಮೂತ್ರ ವಿಸರ್ಜನೆ ವೇಳೆ ವಿಪರೀತ ನೋವಾಗ್ತಿದೆಯಾ? ಎಚ್ಚರ

ಅಧ್ಯಯನದ ತೀರ್ಮಾನವೇನು? : ಸಂಶೋಧಕರ ಪ್ರಕಾರ,  ಅಪಧಮನಿಗಳಲ್ಲಿ ಕೊಬ್ಬಿನ ಶೇಖರಣೆಯ ಆರಂಭಿಕ ಚಿಹ್ನೆಗಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತವೆ. ಹಾಗಾಗಿ,  ಹೃದಯರಕ್ತನಾಳದ ಕಾಯಿಲೆ ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡಲು, ಬಾಲ್ಯದ ಅಪಾಯಕಾರಿ ಅಂಶಗಳ ಮೇಲೆ ಗಮನ ನೀಡುವ ಅವಶ್ಯಕತೆಯಿದೆ. 

Latest Videos
Follow Us:
Download App:
  • android
  • ios