Healthy Food : ಪಿ ಅಕ್ಷರದಿಂದ ಶುರುವಾಗುವ ಈ ಹಣ್ಣಿನಲ್ಲಿವೆ ಮಹಾನ್ ಶಕ್ತಿ
ಪಪ್ಪಾಯಿಯಿಂದ ಹಿಡಿದು ಪೈನಾಪಲ್ ವರೆಗೆ ಸಾಕಷ್ಟು ರುಚಿಕರವಾದ ಮತ್ತು ನೀರಿನಂಶವಿರುವ ಹಣ್ಣುಗಳನ್ನು ನಾವು ಸೇವನೆ ಮಾಡ್ತೇವೆ. ಪಿ ಅಕ್ಷರದಿಂದ ಶುರುವಾಗುವ ಈ ಹಣ್ಣುಗಳಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಇದು ನಮ್ಮ ಆರೋಗ್ಯ ವೃದ್ಧಿಸುತ್ತದೆ.
ಹಣ್ಣು ತಿಂದು ಆರೋಗ್ಯ ಕಾಪಾಡಿಕೊಳ್ಳಿ ಎಂದು ವೈದ್ಯರು ಹೇಳ್ತಾರೆ. ಹಣ್ಣಿನಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿರುತ್ತವೆ. ಹಣ್ಣು ಕೇವಲ ನಮ್ಮ ಆರೋಗ್ಯವನ್ನು ಮಾತ್ರವಲ್ಲ ನಮ್ಮ ಚರ್ಮ ಹಾಗ ಕೂದಲಿನ ಸೌಂದರ್ಯಕ್ಕೂ ಒಳ್ಳೆಯದು. ಕೆಲ ಹಣ್ಣುಗಳ ಬೀಜ, ಸಿಪ್ಪೆ ಕೂಡ ಪ್ರಯೋಜನಕ್ಕೆ ಬರುತ್ತದೆ. ಹಣ್ಣುಗಲ್ಲಿ ಸಾಕಷ್ಟು ವೆರೈಟಿಗಳನ್ನು ನಾವು ನೋಡಬಹುದು. ನಾವಿಂದು ಸ್ವಲ್ಪ ಸ್ಪೇಷಲ್ ವಿಷ್ಯವನ್ನು ನಿಮಗೆ ಹೇಳ್ತಿದ್ದೇವೆ. ಪಿ ಅಕ್ಷರದಿಂದ ಶುರುವಾಗುವ ಹಣ್ಣುಗಳ ಮಹತ್ವವನ್ನು ನಿಮಗೆ ತಿಳಿಸ್ತೇವೆ.
ಪಿ (P) ಅಕ್ಷರದಿಂದ ಶುರುವಾಗುವ ಹಣ್ಣುಗಳು :
ಪಪ್ಪಾಯಿ (Papaya) : ಪಿ ಅಕ್ಷರದಿಂದ ಶುರುವಾಗುವ ಹಣ್ಣುಗಳಲ್ಲಿ ಅಗ್ರ ಸ್ಥಾನ ಪಪ್ಪಾಯಿ ಹಣ್ಣಿಗಿದೆ ಅಂದ್ರೆ ತಪ್ಪಾಗಲಾರದು. ಸಾಮಾನ್ಯವಾಗಿ ಎಲ್ಲ ಋತುವಿನಲ್ಲಿ ಸಿಗುವು ಹಾಗೂ ಎಲ್ಲರಿಗೂ ಸಿಗುವ ಹಣ್ಣು ಪಪ್ಪಾಯ. ಈ ಈ ಹಣ್ಣು ಸಾಕಷ್ಟು ಪೋಷಕಾಂಶಗಳಿಂದ ಕೂಡಿದೆ. ಇದು ರುಚಿಯಲ್ಲಿ ತುಂಬಾ ಸಿಹಿಯಾಗಿರುತ್ತದೆ. ಪಪ್ಪಾಯವನ್ನು ನೀವು ಜ್ಯೂಸ್ ಮಾಡಿ ಸೇವನೆ ಮಾಡಿದ್ರೆ ಪ್ರಯೋಜನ ಹೆಚ್ಚು. ಪಪ್ಪಾಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಜೀರ್ಣಕ್ರಿಯೆ (Digestion) ಯನ್ನು ಸುಧಾರಿಸುತ್ತದೆ. ಪಪ್ಪಾಯಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಅನೇಕ ಇತರ ಪ್ರಯೋಜನಗಳನ್ನು ಕೂಡ ಹೊಂದಿದೆ. ಪಪ್ಪಾಯ ಹಣ್ಣಿನಲ್ಲಿ ಸೋಪ್ ಕೂಡ ತಯಾರಿಸಲಾಗುತ್ತದೆ. ಇದು ಚರ್ಮಕ್ಕೆ ಕಾಂತಿ ನೀಡುತ್ತದೆ. ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸಲು ನೆರವಾಗುತ್ತದೆ.
ದಾಳಿಂಬೆ (Pomegranate) : ಸಣ್ಣ ಸಣ್ಣ ಬೀಜಗಳನ್ನು ಹೊಂದಿರುವ ಸುಂದರ ಹಾಗೂ ಶಕ್ತಿ ನೀಡುವ ಹಣ್ಣು ದಾಳಿಂಬೆ. ದಾಳಿಂಬೆ ಬೀಜ ತೆಗೆಯಲು ಅನೇಕರು ಸೋಮಾರಿತನ ತೋರಿಸ್ತಾರೆ. ಹಣ್ಣು ಬಿಡಿಸಲು ಸ್ವಲ್ಪ ಕಿರಿಕಿರಿ ಎನ್ನಿಸಿದ್ರೂ ಇದ್ರ ಬೀಜ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ. ದಾಳಿಂಬೆಯು ಗ್ರೀನ್ ಟೀಗಿಂತ ಮೂರು ಪಟ್ಟು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಪ್ರತಿ ದಿನ ದಾಳಿಂಬೆ ಸೇವನೆ ಮಾಡಬೇಕು. ದಾಳಿಂಬೆ ಹಣ್ಣು ವಿಟಮಿನ್ ಸಿ ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ.
ಚಿಕನ್ ಸೂಪ್ ಕುಡೀರಿ ಸಾಕು, ವೈರಲ್ ಸೋಂಕು ತಗುಲೋ ಭಯ ಬೇಕಿಲ್ಲ
ಪ್ಯಾಷನ್ ಫ್ರೂಟ್ಸ್ : ಇದನ್ನು ಕೃಷ್ಣಕಮಲದ ಹಣ್ಣು ಎಂದೂ ಅನೇಕರು ಕರೆಯುತ್ತಾರೆ. ಇದು ನೋಡಲು ಆಕರ್ಷಕವಾದ ಹಾಗೂ ರುಚಿಕರ ಹಣ್ಣುಗಳಲ್ಲಿ ಒಂದಾಗಿದೆ. ಹೊರಭಾಗದಲ್ಲಿ ಕುಂಕುಮದ ಬಣ್ಣ ಮತ್ತು ಒಳಗೆ ಹಳದಿ ಬಣ್ಣವನ್ನು ಹೊಂದಿದೆ. ಇದನ್ನು ಅನೇಕ ಪಾನಿಯಗಳಿಗೆ ಕೂಡ ಬಳಕೆ ಮಾಡಲಾಗುತ್ತದೆ. ಇದು ಕೂಡ ಆರೋಗ್ಯಕ್ಕೆ ಅತ್ಯುತ್ತಮ.
ಪ್ರೂನ್ಸ್ (Prune ) : ಡ್ರೈಫ್ರೂಟ್ಸ್ ಲೀಸ್ಟ್ ನಲ್ಲಿ ಪ್ರೂನ್ ಕೂಡ ಸೇರಿದೆ. ಪ್ಲಮ್ ಹಣ್ಣನ್ನು ಹೈಡ್ರೀಕರಿಸಿ ನಂತ್ರ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಇದರಲ್ಲಿ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ. ಇದು ಮೂಳೆ ಆರೋಗ್ಯಕ್ಕೆ ಉತ್ತಮ ಹಣ್ಣು ಎಂದು ಪರಿಗಣಿಸಲಾಗಿದೆ. ಇದ್ರಲ್ಲಿ ಫೈಬರ್ ಉತ್ತಮವಾಗಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಕೆಲಸವನ್ನು ಈ ಹಣ್ಣುಗಳು ಮಾಡುತ್ತವೆ.
ಪೀಚ್ (Peach) : ಪೀಚ್ ತುಂಬಾ ರುಚಿಕರ ಹಣ್ಣಾಗಿದೆ. ಆಗಸ್ಟ್ ನಲ್ಲಿ ಬೆಳೆಯುವ ಹಣ್ಣಿದು. ಪೀಚ್ ಹಣ್ಣಿನಲ್ಲಿ ವಿಟಮಿನ್-ಸಿ ಮತ್ತು ಎ ಸಮೃದ್ಧವಾಗಿದೆ. ಬದಲಾಗುತ್ತಿರುವ ಋತುಗಳಲ್ಲಿ ಖಿನ್ನತೆಗೆ ಒಳಗಾಗಿದ್ದರೆ ದಿನಕ್ಕೊಂದು ಪೀಚ್ ಸೇವನೆ ಮಾಡ್ಬೇಕು. ಹೀಗೆ ಮಾಡಿದಲ್ಲಿ ನೀವು ವೈದ್ಯರಿಂದ ದೂರವಿರಬಹುದು.
ಪಿಯರ್ಸ್ (Pears) : ಪಿ ಅಕ್ಷರದಿಂದ ಶುರುವಾಗುವ ಇನ್ನೊಂದು ಹಣ್ಣು ಪಿಯರ್ಸ್. ಅತ್ಯಧಿಕ ಫೈಬರ್ ಹೊಂದಿರುವ ಹಣ್ಣಿದು. ಬಹುತೇಕ ಎಲ್ಲರೂ ಪಿಯರ್ಸ್ ಇಷ್ಟಪಡುತ್ತಾರೆ. ಈ ಹಣ್ಣನ್ನು ಗ್ರೀಕ್ ಪುರಾಣಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆರೋಗ್ಯಕರ ಹಣ್ಣುಗಳಲ್ಲಿ ಇದೂ ಒಂದು.
ಅನಾನಸ್ ( ಪೈನಾಪಲ್ ) : ಪೈನಾಪಲ್ ಹಣ್ಣು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ವಿಟಮಿನ್ ಸಿಯಿಂದ ಸಮೃದ್ಧವಾಗಿದೆ. ದಕ್ಷಿಣ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದಂತಹ ತಂಪಾದ ವಾತಾವರಣದಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ಅಡುಗೆ ರುಚಿಗೆ ಮಾತ್ರವಲ್ಲ, ಮನುಷ್ಯನ ದೇಹಕ್ಕೂ ಬೇಕು ಉಪ್ಪು, ಕಡಿಮೆಯಾದ್ರೆ ಕಾಡುತ್ತೆ ರೋಗ
ಪ್ಲಮ್ (Plum) : ಆರೋಗ್ಯಕರ ಹೃದಯ ಬೇಕೆಂದ್ರೆ ನೀವು ಪ್ಲಮ್ ಸೇವನೆ ಮಾಡ್ಬೇಕು. ಹೃದಯಕ್ಕೆ ಇದು ತುಂಬಾ ಒಳ್ಳೆಯದು. ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ಎಲ್ಲಾ ಖಂಡಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ಪ್ಲಮ್‌ನಲ್ಲಿ ವಿಟಮಿನ್ ಸಿ ಕೂಡ ಹೇರಳವಾಗಿದೆ.