Asianet Suvarna News Asianet Suvarna News

ನಿಮ್ ಹುಬ್ಬು ಕೂದಲು ಉದುರುತ್ತಿದ್ಯಾ? ಪಿಸಿಒಡಿ, ಥೈರಾಯ್ಡ್ ಕಾರಣನೂ ಆಗಿರ್ಬೋದು

ತಲೆಕೂದಲು ಉದುರುವ ಸಮಸ್ಯೆ ಹಲವರಲ್ಲಿ ಸಾಮಾನ್ಯವಾಗಿದೆ. ಆದರೆ ಇದಲ್ಲದೆ ಹುಬ್ಬುಗಳಲ್ಲಿ ತಲೆಹೊಟ್ಟು, ಚರ್ಮದ ತುರಿಕೆ ಮತ್ತು ಕೂದಲು ಉದುರುವ ಸಮಸ್ಯೆ ಕೆಲವರಲ್ಲಿದೆ. ಹುಬ್ಬು ಕೂದಲು ಉದುರುವಿಕೆಗೆ ಹಲವಾರು ಕಾರಣಗಳಿವೆ. ಅದೇನೆಂದು ತಿಳ್ಕೊಳ್ಳೋಣ.

Health Tips: Reason For Losing Eyebrow Hair Vin
Author
First Published Nov 4, 2022, 10:05 AM IST

ಸುಂದರವಾದ ಹುಬ್ಬುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಅವುಗಳು ನೀವು ಹೇಗೆ ಕಾಣುತ್ತೀರಿ ಎಂಬುದರ ಮೇಲೆ ಪ್ರಭಾವ ಬೀರುತ್ತವೆ. ಸೌಂದರ್ಯವರ್ಧಕಗಳನ್ನು ನಿಮ್ಮ ಸಂಪೂರ್ಣ ಲುಕ್‌ನ್ನು ಸುಧಾರಿಸಲು ಬಳಸಬಹುದು. ಆದರೆ ಅವುಗಳನ್ನು ದಪ್ಪವಾಗಿ ಮತ್ತು ಪೂರ್ಣವಾಗಿ ಕಾಣುವಂತೆ ಮಾಡಲು ಕೆಲವು ನೈಸರ್ಗಿಕ ವಿಧಾನಗಳು ಇಲ್ಲಿವೆ. ನಿಮ್ಮ ಹುಬ್ಬು ಕೂದಲು ಉದುರುತ್ತಿದ್ದರೆ ಅಥವಾ ನೈಸರ್ಗಿಕವಾಗಿ ತೆಳ್ಳಗಿನ ಹುಬ್ಬುಗಳಿಂದ ಬಳಲುತ್ತಿದ್ದರೆ, ಈ ನೈಸರ್ಗಿಕ ಪರಿಹಾರಗಳು ಇಂಥಾ ಸಮಸ್ಯೆಯನ್ನು ಗುಣಪಡಿಸಬಹುದು.

ಹುಬ್ಬು ಕೂದಲು ಉದುರುವಿಕೆಗೆ ಕಾರಣವೇನು ?
ಐಬ್ರೋ ಹೈಪೋಟ್ರಿಕೋಸಿಸ್ ಅಥವಾ ಐಬ್ರೋ ಮಡಾರೋಸಿಸ್ ಎಂದು ವೈದ್ಯಕೀಯವಾಗಿ ಕರೆಯಲ್ಪಡುವ ಹುಬ್ಬು ಕೂದಲು ಉದುರುವಿಕೆ (Eyebrow hair fall), ಗಂಡು ಮತ್ತು ಹೆಣ್ಣು ಇಬ್ಬರ ಮೇಲೂ ಪರಿಣಾಮ ಬೀರಬಹುದು. ಇದು ಒಂದು ಅಥವಾ ಎರಡೂ ಹುಬ್ಬುಗಳಲ್ಲೂ ಉಂಟಾಗಬಹುದು. ಒಣ ಚರ್ಮ (Dry skin), ತುರಿಕೆ, ಕೂದಲು ಉದುರುವಿಕೆ ಅಥವಾ ದೇಹದ ಇತರ ಭಾಗಗಳಲ್ಲಿ ಕೂದಲು ತೆಳುವಾಗುವುದು ಇದರ ಇತರ ಲಕ್ಷಣಗಳಾಗಿವೆ. ಹುಬ್ಬುಗಳನ್ನು ಗುಣಪಡಿಸುವ ವಿಧಾನಗಳನ್ನು ನೀವು ಕಂಡುಹಿಡಿಯುವ ಮೊದಲು, ಅದರ ಕಾರಣಗಳ ಬಗ್ಗೆಯೂ ತಿಳಿದಿರಬೇಕು. ಹುಬ್ಬುಗಳ ಕೂದಲು ಉದುರುವಿಕೆಯು ನಿರಂತರವಾದ ಕೀಳುವಿಕೆ ಅಥವಾ ಹುಬ್ಬುಗಳಿಗೆ ಮೇಕ್ಅಪ್ ಉತ್ಪನ್ನಗಳ ಅತಿಯಾದ ಬಳಕೆಯ ಪರಿಣಾಮವಾಗಿರಬಹುದು. ಆದರೆ ಅವುಗಳನ್ನು ಸುಲಭವಾಗಿ ನಿರ್ವಹಿಸಬಹುದು.

ಇವಳಿಗೆ ಎರಡಲ್ಲ, 4 ಹುಬ್ಬು ! ಕಾಸ್ಮೆಟಿಕ್ ಸರ್ಜರಿಯಿಂದಾಯ್ತು ಎಡವಟ್ಟು

1. ವಯಸ್ಸಾಗುವಿಕೆ: 40ರ ಹರೆಯದಲ್ಲಿ, ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಮಹಿಳೆಯರಲ್ಲಿ ಈಸ್ಟ್ರೊಜೆನ್ ನಿಯಂತ್ರಣವಿಲ್ಲದೆ ಅಥವಾ ಅಸಮತೋಲನಗೊಂಡಾಗ ಕೂದಲು ತೆಳುವಾಗುವುದನ್ನು ಪುರುಷರು (Men) ಮತ್ತು ಮಹಿಳೆಯರು (Woman) ಅನುಭವಿಸುತ್ತಾರೆ. ಇದರಲ್ಲಿ ಹುಬ್ಬು ತೆಳುವಾಗುವ ಸಮಸ್ಯೆ ಸಹ ಸೇರುತ್ತದೆ.

2. ಅಲೋಪೆಸಿಯಾ: ಅಲೋಪೆಸಿಯಾ ಅರೆಟಾ ಎಂಬ ಸ್ವಯಂ ನಿರೋಧಕ ಸ್ಥಿತಿಯು ಕೂದಲು ಕಿರುಚೀಲಗಳನ್ನು ಗುರಿಯಾಗಿಸುತ್ತದೆ, ಇದರಿಂದ ಪ್ರತ್ಯೇಕ ಕೂದಲುಗಳು ಬೆಳೆಯುತ್ತವೆ, ಕೂದಲು ಬೆಳವಣಿಗೆಯನ್ನು ವಿಳಂಬಗೊಳಿಸುತ್ತದೆ ಅಥವಾ ನಿಲ್ಲಿಸುತ್ತದೆ. ಇದರಿಂದ ಹುಬ್ಬು ಸಹ ಉದುರುಲು ಶುರುವಾಗುತ್ತದೆ.

3. ಥೈರಾಯ್ಡ್:ಥೈರಾಯ್ಡ್ ಗ್ರಂಥಿಯು ಹಾರ್ಮೋನುಗಳನ್ನು ಬಿಡುಗಡೆ ಮಾಡುವುದರಿಂದ ಇದು ದೇಹದ (Body) ಅನೇಕ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಈ ಪ್ರಕ್ರಿಯೆ ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ.

4. ಪಿಸಿಓಡಿ: ಪಿಸಿಓಡಿ ಹಾಮೋನುಗಳ ಅಸಮತೋಲನದಿಂದಾಗಿ ಸಂಭವಿಸುತ್ತದೆ. ಸಾಮಾನ್ಯವಾಗಿ ಸ್ತ್ರೀ ಅಂಡಾಶಯಗಳು ಸ್ತ್ರೀ ಲೈಂಗಿಕ ಹಾರ್ಮೋನುಗಳಾದ ಈಸ್ಟ್ರೊಜೆನ್ (Estrogen) ಮತ್ತು ಪ್ರೊಜೆಸ್ಟೀರಾನ್  ಮತ್ತು ಕೆಲವು ಪ್ರಮಾಣದ ಪುರುಷ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುತ್ತವೆ. ಹೀಗಾದಾಗ ಹುಬ್ಬು ಕೂದಲು ಉದುರೋ ಸಮಸ್ಯೆ ಸಹ ಎದುರಾಗುತ್ತದೆ.

5. ಪೋಷಕಾಂಶಗಳ ಕೊರತೆಗಳು: ಕೂದಲು ಉದುರುವಿಕೆಯ ಮೇಲೆ ನಿರ್ದಿಷ್ಟವಾಗಿ ಪರಿಣಾಮ ಬೀರುವ ಪೋಷಕಾಂಶಗಳ ಕೊರತೆಯು ಬಯೋಟಿನ್ (ವಿಟಮಿನ್ ಬಿ-7), ವಿಟಮಿನ್ ಸಿ (ಕಾಲಜನ್ ಅಭಿವೃದ್ಧಿ), ಕಬ್ಬಿಣ, ವಿಟಮಿನ್ ಇ, ಬಿ-12 ಮತ್ತು ಡಿ, ಸಿಸ್ಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುತ್ತದೆ.

Samudrik Shastra: ಹುಬ್ಬುಗಳ ಆಕಾರದಿಂದ ಗುಣ ಅರಿಯಬಹುದು, ಹೇಗೆ ಗೊತ್ತಾ?

6.ಒತ್ತಡ: ಒತ್ತಡ (Pressure) ಮತ್ತು ಆತಂಕವು ಒಬ್ಬರ ಶಾರೀರಿಕ ಸ್ಥಿತಿಯನ್ನು ಬದಲಾಯಿಸಬಹುದು, ಇದರ ಪರಿಣಾಮವಾಗಿ ಹಾರ್ಮೋನ್ ಮಟ್ಟಗಳಲ್ಲಿ ಬದಲಾವಣೆಗಳು ಮತ್ತು ಕೂದಲು ಕಿರುಚೀಲಗಳು ಸ್ವೀಕರಿಸುವ ಆಮ್ಲಜನಕದ ಪ್ರಮಾಣವು ಹುಬ್ಬುಗಳನ್ನು ತೆಳುವಾಗುವಂತೆ ಮಾಡುತ್ತದೆ.

7. ಗರ್ಭಾವಸ್ಥೆ ಮತ್ತು ಹೆರಿಗೆ: ಹಾರ್ಮೋನುಗಳು ಮತ್ತು ನಿಮ್ಮ ದೇಹದ ಜೀವರಸಾಯನಶಾಸ್ತ್ರದ ಇತರ ಅಂಶಗಳು ಗರ್ಭಧಾರಣೆ ಮತ್ತು ಹೆರಿಗೆಯಿಂದ ಪ್ರಭಾವಿತವಾಗಬಹುದು, ಇದು ನಿಮ್ಮ ಕೂದಲು ಚಕ್ರವನ್ನು ಅಡ್ಡಿಪಡಿಸಬಹುದು ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಹುಬ್ಬು ಕೂದಲು ಉದುರೋಕೆ ಈ ಎಲ್ಲಾ ವಿಷಯಗಳು ಕಾರಣವಾಗುತ್ತೆ ನಿಜ. ಆದ್ರೆ ಕೂದಲು ಉದುರದಂತೆ ಏನ್ಮಾಡ್ಬೋದು ? ಹೆಚ್ಚು ಚಿಂತಿಸೋದು ಬೇಡ. ಹುಬ್ಬು ಕೂದಲು ಉದುರೋ ಸಮಸ್ಯೆ ಕಡಿಮೆ ಮಾಡೋಕೆ ಮನೆಮದ್ದುಗಳೇ ಸಾಕಾಗುತ್ತೆ. ಅ ಬಗ್ಗೆ ಮಾಹಿತಿ ಮುಂದಿನ ಲೇಖನದಲ್ಲಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಲೈಫ್‌ಸ್ಟೈಲ್‌ ಕಾಲಂ ಓದುತ್ತಿರಿ.

Follow Us:
Download App:
  • android
  • ios