Health Tips : ಅಪ್ಪಿತಪ್ಪಿಯೂ ಈ ಸಪ್ಲಿಮೆಂಟ್ ಸೇವಿಸ್ಬೇಡಿ!

ಪೌಷ್ಠಿಕಾಂಶವನ್ನು ಕಾಪಾಡಿಕೊಳ್ಳಲು ಸಪ್ಲಿಮೆಂಟ್ ಅವಶ್ಯಕ. ಆದ್ರೆ ಕೆಲ ಸಪ್ಲಿಮೆಂಟ್ ಸೇವನೆ ಮಾಡುವಾಗ ಎಚ್ಚರಿಕೆವಹಿಸಬೇಕು. ಅವುಗಳನ್ನು ಒಟ್ಟಿಗೆ ಸೇವಿಸಿದರೆ ಅನೇಕ ರೀತಿಯ ಹಾನಿ ಉಂಟಾಗುತ್ತದೆ. ಹಾಗಾಗಿ ಕೆಲವು ಪೂರಕಗಳನ್ನು ತಪ್ಪಾಗಿಯೂ ಒಟ್ಟಿಗೆ ತೆಗೆದುಕೊಳ್ಳಬಾರದು.
 

Health Tips Do Not Take Five Vitamins And Supplements Avoid Combinations

ದೇಹಕ್ಕೆ ಪೋಷಕಾಂಶದ ಅವಶ್ಯಕತೆಯಿರುತ್ತದೆ. ದೇಹದಲ್ಲಿ ಪೋಷಕಾಂಶ ಕಡಿಮೆ ಇದೆ ಎಂದಾಗ ಜನರು ಸಪ್ಲಿಮೆಂಟರಿ ತೆಗೆದುಕೊಳ್ತಾರೆ. ವೈದ್ಯರು ಕೂಡ ಸಪ್ಲಿಮೆಂಟರಿ ತೆಗೆದುಕೊಳ್ಳುವಂತೆ ಸಲಹೆ ನೀಡ್ತಾರೆ. ದೇಹದಲ್ಲಿ ಪೋಷಕಾಂಶ ಕಡಿಮೆಯಾಗಿರಲಿ ಬಿಡಲಿ ಕೆಲವರಿಗೆ ಸಪ್ಲಿಮೆಂಟರಿ ತೆಗೆದುಕೊಳ್ಳುವ ಅಭ್ಯಾಸವಿರುತ್ತದೆ. ವೈದ್ಯರ ಸಲಹೆಯಿಲ್ಲದೆ ಅವರು ಸಪ್ಲಿಮೆಂಟರಿ ಮಾತ್ರೆಗಳನ್ನು ಸೇವನೆ ಮಾಡ್ತಾರೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದ್ರಲ್ಲೂ ಕೆಲವರು ಒಂದೇ ಬಾರಿ ಎರಡು, ಮೂರು ಸಪ್ಲಿಮೆಂಟರಿಯನ್ನು ತೆಗೆದುಕೊಳ್ತಾರೆ. ಇದು ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಹಾಗಾಗಿಯೇ ಕೆಲವು ಪೂರಕಗಳನ್ನು ಒಟ್ಟಿಗೆ ತೆಗೆದುಕೊಳ್ಳಬಾರದು. ನಾವಿಂದು ಯಾವೆಲ್ಲ ಸಪ್ಲಿಮೆಂಟರಿಯನ್ನು ತೆಗೆದುಕೊಳ್ಳಬಾರದು ಅಂತಾ ನಿಮಗೆ ಹೇಳ್ತೇವೆ.

ಈ ಸಪ್ಲಿಮೆಂಟರಿ (Supplementary) ಯನ್ನು ಒಟ್ಟಿಗೆ ತೆಗೆದುಕೊಳ್ಳಬೇಡಿ : 

ವಿಟಮಿನ್ ಬಿ 12 (Vitamin B12) ಮತ್ತು ವಿಟಮಿನ್ ಸಿ : ವಿಟಮಿನ್ ಬಿ 12 ದೇಹದ ನರ ಕೋಶಗಳು ಮತ್ತು ರಕ್ತ ಕಣಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಡಿಎನ್‌ಎ (DNA ) ತಯಾರಿಸಲು ಸಹ ಸಹಾಯ ಮಾಡುತ್ತದೆ. ದೇಹ ವಿಟಮಿನ್ ಬಿ 12 ಅನ್ನು ಉತ್ಪಾದಿಸುವುದಿಲ್ಲ. ಹಾಗಾಗಿ ನಾವು ಆಹಾರದಿಂದ ಅದನ್ನು ಪಡೆಯಬೇಕಾಗುತ್ತದೆ. ಇಲ್ಲವೆ ವಿಟಮಿನ್ ಬಿ 12 ಮಾತ್ರೆಗಳನ್ನು ಸೇವನೆ ಮಾಡಬೇಕಾಗುತ್ತದೆ. ಇನ್ನು ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ನಮ್ಮ ದೇಹಕ್ಕೆ ಬಹಳ ಅಗತ್ಯ. ವಿಟಮಿನ್ ಬಿ 12 ಹಾಗೂ ವಿಟಮಿನ್ ಸಿ ಎರಡೂ ನಮ್ಮ ದೇಹಕ್ಕೆ ಬಹಳ ಅವಶ್ಯಕವಾದ್ರೂ ಈ ಎರಡೂ ಸಪ್ಲಿಮೆಂಟರಿಯನ್ನು ಏಕಕಾಲದಲ್ಲಿ ತೆಗೆದುಕೊಳ್ಳಬಾರದು. ಇದು ನಮ್ಮ ದೇಹಕ್ಕೆ ಗಂಭೀರ ಹಾನಿಯುಂಟು ಮಾಡುತ್ತದೆ.  ವಿಟಮಿನ್ ಸಿ ಜೊತೆ ವಿಟಮಿನ್ ಬಿ 12 ಸೇವನೆ ಮಾಡಿದ್ರೆ ಏನೂ ಪ್ರಯೋಜನವಿಲ್ಲ. ವಿಟಮಿನ್ ಬಿ 12 ಪರಿಣಾಮವನ್ನು ವಿಟಮಿನ್ ಸಿ ಕಡಿಮೆ ಮಾಡುತ್ತದೆ.  ಒಂದ್ವೇಳೆ ಈವೆರಡನ್ನೂ ಒಂದೇ ದಿನ ತೆಗೆದುಕೊಳ್ಳಬೇಕೆಂದ್ರೆ ನೀವು ಎರಡು ಗಂಟೆ ಬಿಟ್ಟು ಸೇವನೆ ಮಾಡ್ಬೇಕು. 

Heart Health : ವಯಸ್ಸಾದಂತೆ ಹೃದಯವೂ ಬದಲಾಗುತ್ತೆ, ಹೇಗಿರಬೇಕು ಲೈಫ್‌ಸ್ಟೈಲ್

ತಾಮ್ರ ಮತ್ತು ಸತು ಸಪ್ಲಿಮೆಂಟ್ : ತಾಮ್ರ ಹಾಗೂ ಸತು ಎರಡೂ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶವಾಗಿದೆ. ಆಹಾರದ ಮೂಲಕವೇ ಇದು ದೇಹ ಸೇರುವಂತೆ ಅನೇಕರು ನೋಡಿಕೊಳ್ತಾರೆ.  ತಾಮ್ರದಿಂದ ಮೆದುಳಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ನರಮಂಡಲದ ಆರೋಗ್ಯ ಕಾಪಾಡಲು ತಾಮ್ರ ನೆರವಾಗುತ್ತದೆ. ಸತುವು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಸತುವಿನ ಕೊರತೆಯಿಂದಾಗಿ ರೋಗನಿರೋಧಕ ಶಕ್ತಿ, ಆಯಾಸ ಮತ್ತು ತೂಕ ನಷ್ಟ ಪ್ರಾರಂಭವಾಗುತ್ತದೆ. ಆದ್ರೆ ಈ ಎರಡೂ ಪೂರಕಗಳನ್ನು ಒಂದೇ ಸಮಯದಲ್ಲಿ ತೆಗೆದುಕೊಂಡರೆ, ಜೀರ್ಣಾಂಗ ವ್ಯವಸ್ಥೆಯು ಹಾನಿಗೊಳಗಾಗುತ್ತದೆ. ತಾಮ್ರವನ್ನು ನೀವು ಹೆಚ್ಚಾಗಿ ಸೇವನೆ ಮಾಡಿದ್ರೆ ಅದು ಸತುವಿನ ಕೊರತೆಗೆ ಕಾರಣವಾಗಬಹುದು.

ಗ್ರೀನ್ ಟೀ ಮತ್ತು ಐರನ್ : ಗ್ರೀನ್ ಟೀ ಹಾಗೂ ಐರನ್ ಇದು ಕೂಡ ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದ್ರೆ ಈ ಎರಡು ಪೂರಕಗಳನ್ನು ಎಂದಿಗೂ ಒಟ್ಟಿಗೆ ತೆಗೆದುಕೊಳ್ಳಬಾರದು. ಗ್ರೀನ್ ಟೀನಲ್ಲಿ ಉರಿಯೂತದ ಸಂಯುಕ್ತಗಳು ಕಂಡುಬರುತ್ತವೆ. ಉರಿಯೂತ ಮತ್ತು ಕರುಳಿನ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುವ ಕೆಲಸವನ್ನು ಗ್ರೀನ್ ಟೀ ಮಾಡುತ್ತದೆ. ಇದೇ ರೀತಿ ದೇಹದಲ್ಲಿ ಹಿಮೋಗ್ಲೋಬಿನ್ ತಯಾರಿಸುವ ಕೆಲಸವನ್ನು ಕಬ್ಬಿಣ ಮಾಡುತ್ತದೆ. ಆದ್ರೆ ನೀವು ಗ್ರೀನ್ ಟೀ ಹಾಗೂ ಐರನ್ ಒಟ್ಟಿಗೆ ತೆಗೆದುಕೊಂಡ್ರೆ ಕಬ್ಬಿಣದ ಪರಿಣಾಮ ನಿಮ್ಮ ದೇಹದ ಮೇಲಾಗುವುದಿಲ್ಲ. ಇದ್ರಿಂದಾಗಿ ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆ ಕಾಣಿಸಿಕೊಳ್ಳುತ್ತದೆ.  

ಆರೋಗ್ಯ ಟ್ರ್ಯಾಕ್ ಮಾಡಲು Smart Watch ಬಳಸಿ ಆಸ್ಪತ್ರೆ ಸೇರಿದ ಯುವಕ!

ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 : ಫೋಲಿಕ್ ಆಮ್ಲ ಕೂಡ ಒಂದು ರೀತಿಯ ವಿಟಮಿನ್ ಆಗಿದೆ. ಫೋಲಿಕ್ ಆಮ್ಲವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದು. ಫೋಲಿಕ್ ಆಮ್ಲವನ್ನು ವಿಟಮಿನ್-ಬಿ ಎಂದೂ ಕರೆಯುತ್ತಾರೆ. ಗರ್ಭಾವಸ್ಥೆಯಲ್ಲಿ ಮಗುವಿನ ಸರಿಯಾದ ಬೆಳವಣಿಗೆಗೆ ಫೋಲಿಕ್ ಆಮ್ಲ ಅವಶ್ಯಕ. ಆದ್ರೆ ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ಎರಡನ್ನೂ ನೀವು ಒಟ್ಟಿಗೆ ತೆಗೆದುಕೊಳ್ಳಬಾರದು. ಇದ್ರಿಂದ ನಿಮ್ಮ ಆರೋಗ್ಯ ಹಾಳಾಗುವ ಸಾಧ್ಯತೆಯಿದೆ. ವಿಟಮಿನ್ ಬಿ 12 ಕೊರತೆಯಿಂದಾಗಿ ಅನೇಕ ರೋಗಗಳು ಉಲ್ಬಣಗೊಳ್ಳುತ್ತವೆ. ಈ ಎರಡೂ ಸಪ್ಲಿಮೆಂಟ್ ತೆಗೆದುಕೊಳ್ಳುವ ಮೊದಲು ನೀವು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.  

Latest Videos
Follow Us:
Download App:
  • android
  • ios