Asianet Suvarna News Asianet Suvarna News

ಅನುವಂಶಿಕವಾಗಿಯೂ ಕ್ಯಾನ್ಸರ್ ಬರಬಹುದು, ತಪ್ಪದೇ ಟೆಸ್ಟ್ ಮಾಡಿಸ್ಕೊಳ್ಳಿ

ಕ್ಯಾನ್ಸರ್‌ ಎಂದಾಗ ಯಾರಿಗಾದರೂ ಭಯವಾಗುವುದು ಖಂಡಿತ. ಸ್ತನ ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್‌, ಗಂಟನಿನ ಕ್ಯಾನ್ಸರ್ ಮೊದಲಾದವು ಜೀವವನ್ನೇ ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ. ಹೀಗಾಗಿ ಇವುಗಳ ಬಗ್ಗೆ ಮೊದಲೇ ಟೆಸ್ಟ್ ಮಾಡಿ ತಿಳಿದುಕೊಂಡಿರಬೇಕು. ಅದಲ್ಲದೆ, ಅನುವಂಶಿಕವಾಗಿಯೂ ಕ್ಯಾನ್ಸರ್ ಬರುತ್ತೆ ಅನ್ನೋ ವಿಚಾರ ನಿಮಗೆ ತಿಳಿದಿದ್ಯಾ ?

Health Tips: Cancer can also be hereditary, get tested without fail Vin
Author
First Published Jan 13, 2023, 9:12 AM IST

ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್‌ ಹೊಂದಿರುವ ಇತಿಹಾಸವಿದೆಯೇ? ಹಾಗಿದ್ದರೆ ನೀವು ಸಹ ಅನುವಂಶಿಕ ಕ್ಯಾನ್ಸರ್‌ನ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಏಕೆಂದರೆ, ಕುಟುಂಬದಲ್ಲಿ ಕ್ಯಾನ್ಸರ್‌ ಇತಿಹಾಸ ಹೊಂದಿರುವವರಿಗೆ, ಅನುವಂಶಿಯವಾಗಿ ನಿಮಗೂ ಕ್ಯಾನ್ಸರ್‌  ಬರುವ ಸಾಧ್ಯತೆ ಇದೆ. ಈ ಕುರಿತು ಫೊರ್ಟಿಸ್‌ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿ ಹಿರಿಯ ನಿರ್ದೇಶಕಿ ಡಾ.ನಿತಿ ರೈಜಾಡಾ ವಿವರಿಸಿದ್ದಾರೆ. 

ಅನುವಂಶಿಯವಾಗಿ ಕ್ಯಾನ್ಸರ್‌ ಬರಲಿದೆಯೇ ?
ಅನುವಂಶಿಯವಾಗಿ (Hereditary) ಕ್ಯಾನ್ಸರ್‌ ಬರುವ ಸಾಧ್ಯತೆಯಿದೆಯಾ ? ಹೌದು ಎನ್ನುತ್ತವೆ ಕೆಲವು ಅಧ್ಯಯನಗಳು. ಕೆಲವು ಕ್ಯಾನ್ಸರ್‌ಗಳು ಅನುವಂಶಿಯವಾಗಿ ಬರುವ ಸಾಧ್ಯತೆ ಹೆಚ್ಚು. ಉದಾಹರಣೆಗೆ ಸ್ತನ ಕ್ಯಾನ್ಸರ್‌, ಅಂಡಾಶಯ ಕಾನ್ಸರ್ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್‌ಗಳು ಈ ಪಟ್ಟಿಗೆ ಸೇರಲಿವೆ. ಅಂಡಾಶಯ ಕ್ಯಾನ್ಸರ್‌ಗಾಗಿ BRCA ಜೀನ್ ಪರೀಕ್ಷೆ ಅಥವಾ BRCA2 ಜೀನ್‌ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯ. ಜೀನ್‌ಗಳ ಮೂಲಕ ಸ್ತನ (Breast) ಹಾಗೂ ಅಂಡಾಶಯ ಕ್ಯಾನ್ಸರ್‌ ಅಭಿವೃದ್ಧಿ ಪಡಿಸುವ ಕಣಗಳು ಹುಟ್ಟಲಿವೆ. ಒಂದು ವೇಳೆ ಈ ಬಿಆರ್‌ಸಿಎ ರೂಪಾಂತರವು ಈಗಾಗಲೇ ದೇಹ (Body)ದಲ್ಲಿ ಕ್ಯಾನ್ಸರ್‌ ಕಣಗಳನ್ನು ಅಭಿವೃದ್ಧಿ ಪಡಿಸಿದ್ದರೆ, ಮ್ಯಾಮೋಗ್ರಾಮ್‌, ಶ್ರೇಣಿಯ ಪರೀಕ್ಷೆಗಳ ಮೂಲಕ ಪತ್ತೆ ಹಚ್ಚಿ ಕೂಡಲೇ ಚಿಕಿತ್ಸೆ (Treatment) ಪಡೆದುಕೊಳ್ಳಬಹುದು. 

ಗರ್ಭಕಂಠದ ಕ್ಯಾನ್ಸರ್: ಗಂಭೀರ ಅನಾರೋಗ್ಯವನ್ನು ತಡೆಗಟ್ಟುವುದು ಹೇಗೆ?

ಅನುವಂಶಿಕ ಪರೀಕ್ಷೆಯ ಅನುಕೂಲವೇನು ?
ಅನುವಂಶಿಕ ಪರೀಕ್ಷೆಯು, ಕೊಲೊನ್, ಪ್ಯಾಂಕ್ರಿಯಾಟಿಕ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ನಂತಹ ಇತರ ರೀತಿಯ ಕ್ಯಾನ್ಸರ್‌ ಅಭಿವೃದ್ಧಿ ಪಡಿಸುವ ಅಪಾಯವನ್ನು ಮೊದಲೇ ತಿಳಿಸಿಬಿಡುತ್ತದೆ. ಉದಾಹರಣೆಗೆ, APC ಜೀನ್‌ನ ಮೂಲಕ ಕರುಳಿನ ಕ್ಯಾನ್ಸರ್‌ನನ್ನು ಅಭಿವೃದ್ಧಿಪಡಿಸುವ ಅಪಾಯವಿದೆ. ಹೀಗಾಗಿ, ಕರುಳಿನ ಕ್ಯಾನ್ಸರ್‌ನ ಇತಿಹಾಸ ಹೊಂದಿರುವ ಕುಟುಂಬದ ಜನರು ಕೂಡಲೇ ಕೊಲೊನೋಸ್ಕೋಪಿ ಅಥವಾ ಸಂಬಂಧಿಸಿದ ಸ್ಕ್ರೀನಿಂಗ್‌ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. ಇನ್ನೂ ಕೆಲವು ಪ್ರಕರಣದಲ್ಲಿ ಅವರ ಮಕ್ಕಳಿಗೂ ಈ ಕ್ಯಾನ್ಸರ್‌ ಹರಡುವ ಮೊದಲೇ ಅದನ್ನು ಡಿಟೆಕ್ಟ್‌ ಮಾಡಬಹುದಾಗಿದೆ.

ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದರೆ, ಅಪಾಯ ಕಡಿಮೆ
ಅನುವಂಶಿಕ ಕ್ಯಾನ್ಸರ್‌ ಬರುವ ಬಗ್ಗೆ ಸಾಕಷ್ಟು ಜನರಲ್ಲಿ ಅರಿವಿನ ಕೊರತೆ ಇದೆ. ಕೆಲವು ಪ್ರಕರಣಗಳಲ್ಲಿ ತಂದೆಯಿಂದ ಮಕ್ಕಳಿಗೆ ಬಾರದೇ ಹೋದರೂ, ಮೊಮ್ಮಕ್ಕಳಿಗೆ ಬರಬಹುದು. ಅಥವಾ ಚಿಕ್ಕಪ್ಪ, ದೊಡ್ಡಪ್ಪ ಇಂತಹ ಸಂಬಂಧಗಳಲ್ಲಿಯೂ ಸಹ ಕ್ಯಾನ್ಸರ್‌ ಅನುವಂಶಿಕವಾಗಿ ಹರಡಬಹುದು. ಅಪ್ಪ ಹಾಗೂ ಅಮ್ಮನ ಜೀನ್ಸ್‌ ಹೊಂದಿರುವ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್‌ ಇದೆ ಎಂಬ ಮಾಹಿತಿ ದೊರೆತ ಕೂಡಲೇ ಆ ಕ್ಯಾನ್ಸರ್‌ಗೆ ಸಂಬಂಧಿಸಿದ ಅನುವಂಶಿಕ ಪರೀಕ್ಷೆ ಮಾಡಿಸಿಕೊಳ್ಳಿ. ಅಥವಾ ವೈದ್ಯರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ (Information) ನೀಡಿ. ಇದರಿಂದ ಮುಂದಾಗುವ ಅನಾಹುತ ತಡೆಯಬಹುದು. 

Gynecological Cancer: ಮಹಿಳೆಯರನ್ನು ಕಾಡೋ ಕ್ಯಾನ್ಸರ್‌ ರೋಗಲಕ್ಷಣಗಳ ಬಗ್ಗೆ ಗೊತ್ತಿರಲಿ

ಇಲ್ಲವಾದರೆ, ಪ್ರಾರಂಭದಲ್ಲಿಯೇ ಕ್ಯಾನ್ಸರ್‌ನನ್ನು ಪತ್ತೆ ಹಚ್ಚಿ ಗುಣಪಡಿಸಬಹುದು. ಸಾಕಷ್ಟು ಪ್ರಕರಣಗಳಲ್ಲಿ ಅನುವಂಶಿಕ ಕ್ಯಾನ್ಸರ್‌ ಬಗ್ಗೆ ಮಾಹಿತಿ ಇಲ್ಲದೇ, ಪರೀಕ್ಷೆ ಮಾಡಿಸಿಕೊಳ್ಳದೇ ಕೊನೆ ಹಂತಕ್ಕೆ ಕ್ಯಾನ್ಸರ್‌ ತಲುಪಿದ ಪ್ರಕರಣಗಳೇ ಹೆಚ್ಚು.  ಒಟ್ಟಾರೆಯಾಗಿ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಆನುವಂಶಿಕ ಪರೀಕ್ಷೆಯು ಅಮೂಲ್ಯವಾದ ಸಾಧನವಾಗಿದೆ.

Follow Us:
Download App:
  • android
  • ios