ಹೃದಯಾಘಾತ ತಪ್ಪಿಸೋಕೆ ವ್ಯಾಯಾಮ ಸಾಕಾಗೋಲ್ಲ, ಈ ಅಭ್ಯಾಸ ಬಿಡಲೇಬೇಕು!
ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣಗಳಲ್ಲೊಂದಾಗಿರುವುದು ಹೃದಯ ವೈಫಲ್ಯ. ವ್ಯಾಯಾಮ ಮಾಡಿದರೆ ಹೃದಯ ಸಮಸ್ಯೆಗಳಿಂದ ಮುಕ್ತರಾಗಬಹುದು ಎಂಬ ನಂಬಿಕೆ ಇದೆ. ಇಂದು ಸಂಪೂರ್ಣ ಸುಳ್ಳಲ್ಲ, ಹಾಗಂಥ ವ್ಯಾಯಾಮವೊಂದೇ ಸಾಕಾಗೋಲ್ಲ. ಹೃದಯ ವೈಫಲ್ಯ ತಡೆಯಲು ನೀವು ಮುಖ್ಯವಾಗಿ ಮಾಡಿಕೊಳ್ಳಬೇಕಾದ ಬದಲಾವಣೆ ಇದು.
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನೀವು ಪ್ರತಿದಿನ ಗಂಟೆಗಟ್ಟಲೆ ಕಾರ್ಡಿಯೋ ಮಾಡುತ್ತಿರಬಹುದು. ಆದರೆ, ಈ ಒಂದು ತಪ್ಪು ಮಾಡುತ್ತಿದ್ದರೆ ಮಾತ್ರ ನೀವೆಷ್ಟೇ ಬೆವರಿಳಿಸಿದರೂ ಅಷ್ಟೇನು ಪರಿಣಾಮಕಾರಿಯಲ್ಲಿ ಎನ್ನುತ್ತಿದೆ ಹಾರ್ವರ್ಡ್‌ನ ಹೊಸ ಅಧ್ಯಯನ.
ಹೌದು, ಹೃದಯಕ್ಕೆ ಆರೋಗ್ಯಕರವೆಂದು ದೈನಂದಿನ ದಿನಚರಿಯಲ್ಲಿ ಹೆಚ್ಚಿನ ದೈಹಿಕ ಚಟುವಟಿಕೆ ಸೇರಿಸಿದ್ದರೂ ನೀವು ಬಹಳ ಸಕ್ಕರೆ ಪಾನೀಯಗಳನ್ನು ಸೇವಿಸುತ್ತಿದ್ದರೆ ಹೃದಯಾಘಾತ ಅಪಾಯ ಇದ್ದೇ ಇರುತ್ತದೆ ಎನ್ನುತ್ತಿದೆ ಈ ಅಧ್ಯಯನ.
ಪೆಪ್ಸಿ, ಕೋಕಾಕೋಲ, ಮಿರಿಂಡ, ಫ್ಯಾಂಟಾ, ಕಡೆಗೆ ಮನೆಯಲ್ಲಿ ಸಕ್ಕರೆ ಹಾಕಿ ಮಾಡುವ ಲಿಂಬು ಶರಬತ್ತಾದರೂ ಸರಿ- ಅತಿಯಾಗಿ ಸಕ್ಕರೆ ಸೇವಿಸುತ್ತಿದ್ದಲ್ಲಿ, ನೀವು ದೈಹಿಕವಾಗಿ ಸಕ್ರಿಯರಾಗಿದ್ದರೂ ಅದರಿಂದ ಹೃದಯಕ್ಕೆ ಪ್ರಯೋಜನವಿಲ್ಲ ಎನ್ನಲಾಗಿದೆ.
ಮಾಸ್ಟರ್ ಆನಂದ್ ಡೈಲಾಗ್ ಕೇಳಿ ಕರಿಮಣಿ ಮಾಲೀಕ ನೀನಲ್ಲ ಎನ್ನುತ್ತಿದ್ದ ಪತ್ನಿ ಪ್ಲೇಟ್ ಚೇಂಜ್ ಮಾಡಿದ್ದು ಹೀಗೆ..
ಸಕ್ಕರೆ ಪಾನೀಯಗಳ ಅತಿಯಾದ ಸೇವನೆಯು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ಗೊತ್ತಿರುವ ವಿಷಯವೇ. ಈ ಪಾನೀಯಗಳು ಅಧಿಕ ಸಕ್ಕರೆಗಳನ್ನು ಒಳಗೊಂಡಿದ್ದು, ತೂಕ ಹೆಚ್ಚಾಗುವುದು, ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ರಕ್ತನಾಳಗಳಿಗೆ ಹಾನಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು, ಉರಿಯೂತ, ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸುವುದು ಮತ್ತು ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗಬಹುದು. ಸಾರ್ವಜನಿಕ ಆರೋಗ್ಯ ಶಿಫಾರಸುಗಳು ಸಕ್ಕರೆ ಪಾನೀಯಗಳ ಸೇವನೆಯನ್ನು ಸೀಮಿತಗೊಳಿಸುವುದು ಮತ್ತು ಜೀವನಶೈಲಿ ಮಾರ್ಪಾಡುಗಳನ್ನು ಒಳಗೊಂಡಿವೆ. ಆದರೆ, ದೈಹಿಕವಾಗಿ ಸಕ್ರಿಯವಾಗಿರುವವರು ತಾನು ಸಕ್ಕರೆ ಸೇವಿಸಿದರೆ ಅಂಥಾ ಅಪಾಯವಿಲ್ಲ ಎಂದುಕೊಳ್ಳುತ್ತಾರೆ. ಇದು ಮಾತ್ರ ತಪ್ಪಾಗಿದೆ.
ಅಧ್ಯಯನ
ಹೃದ್ರೋಗವು ಪರಿಧಮನಿಯ ಕಾಯಿಲೆ ಮತ್ತು ಹೃದಯ ವೈಫಲ್ಯದಂತಹ ಪರಿಸ್ಥಿತಿಗಳನ್ನು ಒಳಗೊಳ್ಳುತ್ತದೆ, ಇದು ಜಾಗತಿಕವಾಗಿ ಸಾವಿನ ಪ್ರಮುಖ ಕಾರಣವಾಗಿದೆ. ನೀವು ದೈಹಿಕವಾಗಿ ಸಕ್ರಿಯರಾಗಿದ್ದರೂ ಸಕ್ಕರೆ ಪಾನೀಯಗಳ ಅತಿಯಾದ ಸೇವನೆಯು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವು ಸೂಚಿಸಿದೆ. ನೀವು ಸಕ್ಕರೆ ಪಾನೀಯಗಳನ್ನು ಸೇವಿಸುತ್ತಿದ್ದರೆ ವಾರದಲ್ಲಿ 150 ನಿಮಿಷಗಳ ವ್ಯಾಯಾಮವು ಸಹಾಯ ಮಾಡುವುದಿಲ್ಲ.
ನಟ ಮಿಥುನ್ ಚಕ್ರವರ್ತಿಗೆ ಇಸ್ಕೆಮಿಕ್ ಸ್ಟ್ರೋಕ್; ಏನಿದರ ಲಕ್ಷಣ?
30 ವರ್ಷ ಮೇಲ್ಪಟ್ಟ ಸುಮಾರು 1 ಲಕ್ಷ ವಯಸ್ಕರನ್ನು ಅನುಸರಿಸಿ, ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಯುಎಸ್ ನೇತೃತ್ವದ ಸಂಶೋಧಕರು, ಡಬ್ಲ್ಯುಎಚ್‌ಒ ಶಿಫಾರಸು ಮಾಡಿದ 150 ನಿಮಿಷಗಳ ಸಾಪ್ತಾಹಿಕ ವ್ಯಾಯಾಮ, ಹೃದಯರಕ್ತನಾಳದ ಕಾಯಿಲೆಯಿಂದ ರಕ್ಷಿಸುವ ಗುರಿಯನ್ನು ಹೊಂದಿದ್ದು, ಸಕ್ಕರೆಯ ದುಷ್ಪರಿಣಾಮಗಳನ್ನು ಎದುರಿಸಲು ಸಾಕಾಗುವುದಿಲ್ಲ ಎಂದು ಕಂಡುಹಿಡಿದಿದೆ. ದೈಹಿಕ ಚಟುವಟಿಕೆಯ ಮಟ್ಟವನ್ನು ಲೆಕ್ಕಿಸದೆ, ವಾರಕ್ಕೆ ಎರಡು ಬಾರಿ ಈ ಪಾನೀಯಗಳನ್ನು ಸೇವಿಸುವವರು ಹೃದಯರಕ್ತನಾಳದ ಕಾಯಿಲೆಯ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಅವರ ಡೇಟಾ ತೋರಿಸಿದೆ.