ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಏನಿಲ್ಲ ಏನಿಲ್ಲ ಟ್ರೆಂಡಿಂಗ್ ಹಾಡಿನ ರೀಲ್ಸ್ ಮಾಡಿದ್ದಾರೆ. ಆದರೆ ಅದಕ್ಕೊಂದು ಟ್ವಿಸ್ಟ್ ಕೊಟ್ಟಿದ್ದಾರೆ. 

ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಮಗಳು ವಂಶಿಕಾಳೊಂದಿಗೆ ನನ್ನಮ್ಮ ಸೂಪರ್ ಸ್ಟಾರ್‌ಗೆ ಬಂದಾಗಿನಿಂದ ಕನ್ನಡದ ಜನರಿಗೆ ಪರಿಚಿತ. ಈ ಶೋ ಗೆದ್ದ ಈ ಜೋಡಿ ನಂತರ ಆಗಾಗ ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. 

ಈ ಬಾರಿ ಯಶಸ್ವಿನಿ ಟ್ರೆಂಡ್‌ನಲ್ಲಿರುವ 'ಏನಿಲ್ಲ ಏನಿಲ್ಲ' ಹಾಡಿಗೆ ರೀಲ್ಸ್ ಮಾಡಿದ್ದಾರೆ. ಏನಿಲ್ಲ ಏನಿಲ್ಲ ಎಂಬ 25 ವರ್ಷಗಳ ಹಳೆಯ ಹಾಡನ್ನು ಉತ್ತರ ಕರ್ನಾಟಕದ ಯುವಕ ಕನಕ ಕೊಟ್ಟೂರು ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದಂತೆ ಊರಿಗೆ ಊರೇ ಈ ಹಾಡಿಗೆ ರೀಲ್ಸ್ ಮಾಡಲು ಶುರು ಮಾಡಿದೆ. ಅಲ್ಲದೆ ಸಿಂಗಲ್ ಆಗಿರುವ ಹುಡುಗ ಹುಡುಗಿಯರ ಕಾಲರ್ ಟ್ಯೂನ್ ಆಗಿದೆ ಈ ಸಾಂಗ್. ರೀಲ್ಸ್ ಮಾಡುವವರು ಈಗ ಈ ಹಾಡಿಗೊಂದು ರೀಲ್ಸ್ ಮಾಡಲೇಬೇಕು ಎಂಬಷ್ಟು ಟ್ರೆಂಡ್ ಆಗಿದೆ. ಹಾಗೆಯೇ ಯಶಸ್ವಿನಿಯೂ ಈ ಹಾಡಿನ ರೀಲ್ಸ್ ಮಾಡಿದ್ದಾರೆ. ಆದರೆ ಅದಕ್ಕೊಂದು ಟ್ವಿಸ್ಟ್ ಕೊಟ್ಟಿದ್ದಾರೆ. 


ಕರಿಮಣಿ ಮಾಲೀಕ ನೀನಲ್ಲ ಎಂದು ಯಶಸ್ವಿನಿ ರೀಲ್ಸ್ ಮಾಡುತ್ತಿದ್ದ ಸಮಯದಲ್ಲಿ ನೋಡುವ ಆನಂದ್- ಕರಿಮಣಿ ಕಳ್ಕೊಂಡ್ರೆ ಬೇರೆ ಕೊಡ್ಸಲ್ಲ ಅಂತ ಡೈಲಾಗ್ ಹೊಡೀತಿದ್ದಂಗೇ ಪ್ಲೇಟ್ ಚೇಂಜ್ ಮಾಡಿದ್ದಾರೆ. 

ಹೌದು, ಕರಿಮಣಿ ಮಾಲೀಕ ನೀನಲ್ಲ ಎನ್ನುತ್ತಿದ್ದ ಯಶಸ್ವಿನಿ ಪತಿ ಹತ್ರ ಬಂದು ಧಮ್ಕಿ ಹಾಕುತ್ತಿದ್ದಂತೇ 'ಕರಿಮಣಿ ಮಾಲೀಕ ನೀ ನಲ್ಲ' ಎಂದು ಗಂಡನ ಗಲ್ಲ ಹಿಡಿದಿದ್ದಾರೆ. 

ಇಲ್ಲಿದೆ ವಿಡಿಯೋ

View post on Instagram