ಈಕೆ ಹೊಟ್ಟೆಯಲ್ಲಿತ್ತು 2 ಕೆಜಿ ಕೂದಲು, ಇಷ್ಟೊಂದು ಹೋಗಿದ್ಹೇಗೆ?

ಜನರಿಗೆ ಚಿತ್ರವಿಚಿತ್ರ ಅಭ್ಯಾಸಗಳಿರುತ್ವೆ. ಮಣ್ಣು, ಸುಣ್ಣ ತಿನ್ನೋದನ್ನು ಕೇಳಿದ್ದೇವೆ. ಆದ್ರೆ ಈ ಯುವತಿ 16 ವರ್ಷದಿಂದ ನಂಬಲು ಅಸಾಧ್ಯವಾದ ವಸ್ತು ತಿಂದಿದ್ದಾಳೆ. ಹೊಟ್ಟೆ ನೋವು ಅಂತ ಆಸ್ಪತ್ರೆ ಸೇರಿದಾಗ ಸತ್ಯ ಬಯಲಾಗಿದೆ. 
 

Hairball removed from 21 year old woman stomach roo

ಆಕೆಗೆ ಸಿಕ್ಕಾಪಟ್ಟೆ ಹೊಟ್ಟೆ ನೋವು (Stomach pain) ಕಾಡ್ತಾ ಇತ್ತು. ಏನ್ ಮಾಡಿದ್ರೂ ನೋವನ್ನು ತಡೆಯೋಕೆ ಸಾಧ್ಯ ಆಗ್ತಿರಲಿಲ್ಲ. ಚಿಕಿತ್ಸೆಗೆ ಅಂತ ವೈದ್ಯ (doctor) ರ ಬಳಿ ಓಡಿದ್ದಾಳೆ. ಪರೀಕ್ಷೆ ವೇಳೆ ಅಘಾತಕಾರಿ ವಿಷ್ಯ ಗೊತ್ತಾಗಿದೆ. ಯುವತಿ ಹೊಟ್ಟೆಯೊಳಗಿದ್ದ ವಸ್ತು ನೋಡಿ ವೈದ್ಯರು ದಂಗಾಗಿದ್ದಾರೆ. 21 ವರ್ಷದ ಯುವತಿ, ಆಹಾರ ತಿನ್ನೋ ಬದಲು ಕೂದಲು ತಿಂದಿದ್ದಾಳೆ ಅನ್ನಿಸುತ್ತೆ. ಹಾಗಾಗಿ ಹೊಟ್ಟೆಯಲ್ಲಿ 2 ಕೆಜಿ ತೂಕದ ಕೂದಲು ಸೇರಿಕೊಂಡಿತ್ತು. 

ಘಟನೆ ಬರೇಲಿ ಜಿಲ್ಲಾಸ್ಪತ್ರೆ (Bareilly District Hospital)ಯಲ್ಲಿ ನಡೆದಿದೆ. ಸುಭಾಷ್ ನಗರದ ಕಾರ್ಗಿನ್ ನಿವಾಸಿ 21 ವರ್ಷದ ಯುವತಿ ಕಳೆದ ಐದು ವರ್ಷಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಪರಿಹಾರ ಸಿಕ್ಕಿರಲಿಲ್ಲ. ಯುವತಿಯ ಹೊಟ್ಟೆ ನೋವು ನೋಡಿ ಕುಟುಂಬಸ್ಥರು ಭಯಗೊಂಡಿದ್ದರು. ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಿಟಿ ಸ್ಕ್ಯಾನ್‌ನಲ್ಲಿ ಯುವತಿ ಹೊಟ್ಟೆಯಲ್ಲಿ ಕೂದಲಿರುವುದು ಕಂಡು ಬಂದಿದೆ. ಇದೇ ಯುವತಿ ಹೊಟ್ಟೆ ನೋವಿಗೆ ಕಾರಣ ಎಂದು ವೈದ್ಯರು ಪತ್ತೆ ಮಾಡಿದ್ದಾರೆ. ಆಕೆಗೆ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಸ್ವಲ್ಪ ಪ್ರಮಾಣದ ಕೂದಲು ಸಿಗ್ಬಹುದು ಎಂದು ವೈದ್ಯರು ನಿರೀಕ್ಷೆ ಮಾಡಿದ್ದರು. ಆದ್ರೆ ಸಿಕ್ಕ ಕೂದಲು ನೋಡಿ ದಂಗಾಗಿದ್ದಾರೆ. ಗ್ರಾಂ ಲೆಕ್ಕದಲ್ಲಿ ಅಲ್ಲ ಕೆಜಿ ಲೆಕ್ಕದಲ್ಲಿ ಕೂದಲು ಸಿಕ್ಕಿದೆ. ಚೆಂಡಿನ ಆಕಾರದಲ್ಲಿ ಎರಡು ಕೆಜಿ ಕೂದಲನ್ನು ಹೊರತೆಗೆದಿದ್ದಾರೆ. 

Health tips: ಮೊಟ್ಟೆಯೊಂದಿಗೆ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ

ಚಿಕಿತ್ಸೆ ನಂತ್ರ ಯುವತಿ ಚೇತರಿಸಿಕೊಂಡಿದ್ದು, ಆಕೆಯನ್ನು ಮನೆಗೆ ಕಳುಹಿಸಲಾಗಿದೆ.  ಕುಟುಂಬಸ್ಥರಿಗೆ ಯುವತಿ ಹೊಟ್ಟೆಯಲ್ಲಿ ಇಷ್ಟೊಂದು ಕೂದಲು ಹೇಗೆ ಬಂತು ಎನ್ನುವ ಮಾಹಿತಿ ತಿಳಿದಿಲ್ಲ. ಯುವತಿಯ ಕೌನ್ಸೆಲಿಂಗ್ ಮಾಡಿದಾಗ ಆಕೆ ಭಯಾನಕ ಸತ್ಯವನ್ನು ಹೊರ ಹಾಕಿದ್ದಾಳೆ. ಕಳೆದ 16 ವರ್ಷಗಳಿಂದ ಕೂದಲು ತಿನ್ನುತ್ತಿರುವುದಾಗಿ  ಆಕೆ ಹೇಳಿದ್ದಾಳೆ. ಆಕೆ ಏಕಾಏಕಿ ಕೂದಲು ತಿನ್ನುವ ಅಭ್ಯಾಸ ಬಿಡೋದು ಕಷ್ಟ. ಆದ್ರೆ ಕೌನ್ಸೆಲಿಂಗ್ ಮೂಲಕ ಇದನ್ನು ಬಿಡಿಸುವ ಪ್ರಯತ್ನ ನಡೆಯಲಿದೆ ಎಂದು ವೈದ್ಯರು ಹೇಳಿದ್ದಾರೆ. ಯುವತಿ ತಿಂಗ ಕೂದಲು ಹೊಟ್ಟೆ ಸೇರಿ ದೊಡ್ಡ ಚೆಂಡಾಗಿತ್ತು. ಇದು ಯುವತಿ ಆರೋಗ್ಯವನ್ನು ಹದಗೆಡಿಸಿತ್ತು. ಊಟ ಮಾಡಲಾಗದ ಸ್ಥಿತಿಯಲ್ಲಿ ಯುವತಿ ಇದ್ದಳು. ವೈದ್ಯರ ಪ್ರಕಾರ, ಯುವತಿ ಟ್ರೈಕೊಟಿಲೋಮೇನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಳು.

ಟ್ರೈಕೊಟಿಲೋಮೇನಿಯಾ (Trichotillomania) ಎಂದರೇನು? : ಕೂದಲನ್ನು ಕೀಳಲು  ತೀವ್ರವಾಗಿ ಪ್ರಚೋದಿಸಲ್ಪಡುವ ಖಾಯಿಲೆ ಇದಾಗಿದೆ. ಇದನ್ನು ಹೇರ್ ಪುಲ್ಲಿಂಗ್ ಡಿಸಾರ್ಡರ್ ಎಂದೂ ಕರೆಯುತ್ತಾರೆ. ಟ್ರೈಕೊಟಿಲೊಮೇನಿಯಾದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ, ಕೂದಲನ್ನು ಎಳೆಯುವ ಬಯಕೆ ತೀವ್ರವಾಗಿರುತ್ತದೆ.  ಅದನ್ನು ನಿಲ್ಲಿಸೋದು ಕಷ್ಟ. ಪ್ರತಿ 100 ಜನರಲ್ಲಿ 4 ಜನರು ಕೂದಲು ಎಳೆಯುವ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಟ್ರೈಚೋ ಎಂದರೆ ಕೂದಲು, ತಿಲ್ಲೋ ಎಂದರೆ ಎಳೆಯುವುದು ಮತ್ತು ಉನ್ಮಾದ ಎಂದರೆ ಮಾನಸಿಕ ಸಮಸ್ಯೆ. ಇದು ಮಾನಸಿಕ ಅಸ್ವಸ್ಥತೆಯಾಗಿದ್ದು, ಅದು ಮೆದುಳಿನಲ್ಲಿ ಬೆಳವಣಿಗೆಯಾಗುತ್ತದೆ.  ಟ್ರೈಕೊಟಿಲೊಮೇನಿಯಾ ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಂಡುಬರುತ್ತದೆ. ರೋಗಿಗಳು ಸಾಮಾನ್ಯವಾಗಿ 17 ವರ್ಷ ವಯಸ್ಸಿನವರೆಗೆ ಈ ಕಾಯಿಲೆಗೆ ಚಿಕಿತ್ಸೆ ಪಡೆಯುವುದಿಲ್ಲ. ಈ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಶೇಕಡಾ 70 ರಿಂದ 90 ರಷ್ಟು ಮಹಿಳೆಯರು.

ಹೆಚ್ಚು ಲೈಂಗಿಕ ಕ್ರಿಯೆ ನಡೆಸಿದರೆ ದೀರ್ಘಾಯುಷ್ಯ? ಈ ಸ್ಟಡಿಯ ಫಲಿತಾಂಶವೇ ರೋಚಕ!

ಈ ಖಾಯಿಲೆಯಿಂದ ಬಳಲುವ ಅನೇಕರು ಬರೀ ಕೂದಲು ಕೀಳೋದು ಮಾತ್ರವಲ್ಲ ಅದನ್ನು ತಿನ್ನುತ್ತಾರೆ. ಇದನ್ನು ರಾಪುಂಜೆಲ್ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಅಪರೂಪಕ್ಕೆ ಕೂದಲು ನಿಮ್ಮ ಹೊಟ್ಟೆ ಸೇರಿದ್ರೆ ಸಮಸ್ಯೆಯಿಲ್ಲ. ಆದ್ರೆ ನಿತ್ಯ ಕೂದಲು ತಿನ್ನುವುದು ಮುಂದೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಜೀರ್ಣಾಂಗದ ಮೇಲೆ ಇದು ಪರಿಣಾಮ ಬೀರುತ್ತದೆ. 

Latest Videos
Follow Us:
Download App:
  • android
  • ios