ಯಾವುದೇ ಫಂಕ್ಷನ್‌ಗೆ(Function) ಹೋದರು ಎಲ್ಲರ ಕಣ್ಣು(Eye) ಅವರ ಕೂದಲಿನ(Hair) ಕಡೆ ಮೊದಲು ಹೋಗುತ್ತದೆ. ಕೂದಲು ಚೆನ್ನಾಗಿ ದಪ್ಪ(Thick), ಉದ್ದ(Long) ಇದ್ದರೆ ಅವರ ಬಳಿ ಹೋಗಿ ಟಿಪ್ಸ್(Tips) ಕೇಳುತ್ತೇವೆ. ಕೂದಲು ಉದುರುವುದು(Hair Fall), ತೆಳ್ಳಗಾಗುವುದರ(Thinning) ಬಗ್ಗೆ ಇತ್ತೀಚೆಗೆ ಒಂದು ಅಧ್ಯಯನ ನಡೆದಿದೆ. ಇದರಲ್ಲಿ ಮಾನಸಿಕ ಆರೋಗ್ಯದಲ್ಲಿ(Mental Health) ಹೆಚ್ಚು ಕಮ್ಮಿಯಾದರೂ ಕೂದಲು ತೆಳ್ಳಗಾಗಿ ಉದುರಲು ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಯಾವುದೇ ಫಂಕ್ಷನ್‌ಗೆ ಹೋದರು ಎಲ್ಲರ ಕಣ್ಣು(Eye) ಅವರ ಕೂದಲಿನ(Hair) ಕಡೆ ಮೊದಲು ಹೋಗುತ್ತದೆ. ಅದಾದ ನಂತರ ಉಡುಗೆ ತೊಡುಗೆ ಬಗ್ಗೆ ಗಮನ ಹರಿಸುತ್ತಾರೆ. ಕೂದಲು ಚೆನ್ನಾಗಿ ದಪ್ಪ(Strong), ಉದ್ದ(Long) ಇದ್ದರೆ ಅವರ ಬಳಿ ಹೋಗಿ ಟಿಪ್ಸ್ ಕೇಳುತ್ತೇವೆ. ತೆಳ್ಳಗೆ ಇದ್ದರೆ ಅಯ್ಯೋ ಪಾಪ ಎಂದು ಸುಮ್ಮನಾಗಿ ಸಿಂಪತಿ(Sympathy) ತೋರಿಸುವವರೂ ಇದ್ದಾರೆ. ಕೂದಲು ಉದುರುವುದು, ತೆಳ್ಳಗಾಗುವುದರ ಬಗ್ಗೆ ಇತ್ತೀಚೆಗೆ ಒಂದು ಅಧ್ಯಯನ(Study) ನಡೆದಿದೆ. ಇದರಲ್ಲಿ ಮಾನಸಿಕ ಆರೋಗ್ಯದಲ್ಲಿ(Mental Impact) ಹೆಚ್ಚು ಕಮ್ಮಿಯಾದರೂ ಕೂದಲು ತೆಳ್ಳಗಾಗಿ ಉದುರಲು ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಇನ್ನೊಬ್ಬರ ಕೂದಲು ನೋಡಿದರೆ ನಮಗೂ ಆಸೆಯಾಗುತ್ತದೆ. ಅದು ಕರ್ಲಿ(Curly), ನೇರ(Straight), ನ್ಯಾಚರಲ್(Natural) ಕೂದಲಿರಲಿ. ಕೂದಲೂ ಸಹ ಮನುಷ್ಯನ ಆರೋಗ್ಯದ ಬಗ್ಗೆ ತಿಳಿಸುತ್ತದೆ. ಉತ್ತಮ ಹಾಗೂ ಆರೋಗ್ಯಕರ ಕೂದಲು ಕೇವಲ ಧೈರ್ಯ ನೀಡುವುದಿಲ್ಲ. ಬದಲಾಗಿ ನಮ್ಮ ವ್ಯಕ್ತಿತ್ವದ ಬಗ್ಗೆಯೂ ತಿಳಿಸುತ್ತದೆ. ಒಂದು ವೇಳೆ ವ್ಯಕ್ತಿಯ ಕೂದಲು ಆರಂಭದಲ್ಲೇ ಉದುರುತ್ತಿದ್ದರೆ ವ್ಯಕ್ತಿಯ ಮೇಲೆ ದೊಡ್ಡ ಮಾನಸಿಕ ಪರಿಣಾಮವನ್ನು ಬೀರುತ್ತದೆ. ಗಣನೀಯ ಕೂದಲು ಉದುರುವಿಕೆಯು ಸ್ವಾಭಿಮಾನದ ಕೊರತೆಗೆ ಕಾರಣವಾಗಬಹುದು ಹಾಗೂ ಒತ್ತಡ(Stress) ಮತ್ತು ಆತಂಕ(Anxiety) ತೀವ್ರವಾಗಿ ಆತ್ಮಹತ್ಯೆಯ(Suicide) ಪ್ರವೃತ್ತಿಯವರೆಗಿನ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಇದನ್ನೂ ಓದಿ: ಇವುಗಳನ್ನ ತಿಂತೀರಾ…. ತಲೇಲಿ ಕೂದಲೇ ಉಳಿಯಲ್ಲ ಹುಷಾರ್!
ಈ ಅಧ್ಯಯನವು ಜರ್ನಲ್ ಆಫ್ ಡರ್ಮಟೊಲಾಜಿಕಲ್ ರಿವ್ಯೂಸ್‌ನಲ್ಲಿ(Journal of Dermatological Reviews) ಪ್ರಕಟವಾಗಿದ್ದು, ಇದರಲ್ಲಿ ಕೂದಲ ಸಮಸ್ಯೆಗೆ ಒಳಗಾದವರನ್ನು ಪ್ರಶ್ನಿಸಲಾಗಿತ್ತು(Question). 18 ವರ್ಷಕ್ಕೂ ಮೇಲ್ಪಟ್ಟ 800 ಜನರ ಪೈಕಿಯಲ್ಲಿ 442 ಪುರುಷರು(Male) ಹಾಗೂ 328 ಹೆಂಗಸರಿದ್ದರು(Female). ಡಾಟಾ ಪ್ರಕಾರ 18ರಿಂದ 30 ವರ್ಷದವರಲ್ಲಿ ಶೇ.30ರಷ್ಟು ಗಂಡಸರು(Male) ಹಾಗೂ ಶೇ.27ರಷ್ಟು ಹೆಂಗಸರ(Female) ಸಾಮಾಜಿಕ ಜೀವನದ(Social Life) ಮೇಲೆ ಕೂದಲು ಉದುರುವಿಕೆಯು ಸಮಸ್ಯೆಯಾಗಿ ಪರಿಣಾಮ ಬೀರಿದೆ ಎಂದು ವರದಿ ಮಾಡಿದೆ. ಅವರೆಲ್ಲಾ ಖಿನ್ನತೆಗೆ ಒಳಗಾದರು(Depression), ಮನೆಯಲ್ಲಿಯೇ ಇದ್ದರು ಮತ್ತು ಬೇರೆಯುವುದನ್ನು ತಪ್ಪಿಸಿದರು. ಅವರಲ್ಲಿ ಹಲವರು ಅಲೋಪೆಸಿಯಾದಿಂದಾಗಿ ನಾಚಿಕೆ, ಮುಜುಗರ, ಹತಾಶೆ, ಅವಮಾನ ಅಥವಾ ಕಿರಿಕಿರಿ(Irritation) ಅನುಭವಿಸಿದ್ದಾರೆಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಸಮಾಜ ಕೂದಲು ಇರುವವರನ್ನು ಗೌರವಿಸುತ್ತೆ ಹಾಗೂ ಸ್ವೀಕರಿಸುತ್ತೆ. ಅದರಲ್ಲೂ ಪುರುಷರಲ್ಲಿ ಬೊಕ್ಕು ತಲೆ(Bald Head) ಇದ್ದರೂ ಅವರನ್ನು ಸ್ವೀಕರಿಸುತ್ತಾರೆ ಕೂಡ. ಅದೇ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಲ್ಲಿ ಅವರನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಅಂದರೆ ಯಾರೂ ಅವರನ್ನು ಮಾಮೂಲಿಯಂತೆ ನೋಡುವುದಿಲ್ಲ. ಏಕೆಂದರೆ ಕೂದಲು ಹೆಣ್ಣಿಗೆ ಸ್ತಿçÃತ್ವವನ್ನು ಸಂಕೇತಿಸುತ್ತದೆ. ಅಲೋಪೆಸಿಯಾ(Alopecia) ಅಥವಾ ಕೂದಲು ಉದುರುವುದು(Hair Loss) ಮಾನಸಿಕ ಆರೋಗ್ಯದ ಪ್ರಸ್ತುತತೆ ಮತ್ತು ಸಾರ್ವಜನಿಕ ಆರೋಗ್ಯ ಕಾಳಜಿಯನ್ನು ಗುರುತಿಸಬೇಕು. ಅದರ ಪರಿಹಾರಕ್ಕಾಗಿ ಶಿಸ್ತಿನ(Discipline) ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಡಾಕ್ಟರ್(Doctor) ರಿಂಕಿ ಕಪೂರ್(Rinky Kapoor) ತಿಳಿಸಿದ್ದಾರೆ.
ಅಲೋಪೇಸಿಯಾ ಸಮಸ್ಯೆಯು ಒತ್ತಡ, ಆತಂಕ, ಖಿನ್ನತೆ, ಆತ್ಮವಿಶ್ವಾಸ ನಷ್ಟ, ಕಡಿಮೆ ಗೌರವ, ಆತ್ಮಹತ್ಯೆ ಯೋಚನೆ, ಸಾಮಾಜಿಕ ತಿರಸ್ಕಾರ ಹೀಗೆ ನಾನಾ ರೀತಿಯಲ್ಲಿ ವ್ಯಕ್ತಿಯನ್ನು ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಸರಿಸುಮಾರು ಶೇ.50ರಷ್ಟು ಪುರುಷರು ಮತ್ತು ಮಹಿಳೆಯರು ತಮ್ಮ ವಯಸ್ಸಿನ ಹೊರತಾಗಿಯೂ ದೈಹಿಕ(Physical), ರಾಸಾಯನಿಕ(Chemical), ಹಾರ್ಮೋನುಗಳ(Harmon) ಬದಲಾವಣೆ, ಸ್ವಯಂ ನಿರೋಧಕ, ಉರಿಯೂತದ ಕಾಯಿಲೆಗಳು, ಜನ್ಮಜಾತ ರೋಗಗಳು, ಸೋಂಕುಗಳು(Diseases) ಮತ್ತು ನಿಯೋಪ್ಲಾಮ್‌ಗಳಂತಹ ಹಲವಾರು ಅಂಶಗಳಿAದ ಅಲೋಪೆಸಿಯಾಕ್ಕೆ ಪ್ರಭಾವಿತರಾಗಿದ್ದಾರೆ. ತೆಲೆಯ ಮೇಲೆ ಇಲ್ಲದಿರುವ ಕೂದಲು ವಾಸ್ತವವಾಗಿ ವ್ಯಕ್ತಿಯ ತಲೆಯೊಳಗೆ ಏನನ್ನು ಪ್ರಭಾವಿಸುತ್ತದೆ ಎಂಬುದನ್ನು ತೋರಿಸುತ್ತದೆ.
ಇದನ್ನೂ ಓದಿ: Kids Care : ಬಾಲ್ಯದಲ್ಲೇ ಮಕ್ಕಳ ಕೂದಲು ಉದುರ್ತಿದ್ದರೆ ಕಾರಣ ತಿಳಿದು ಚಿಕಿತ್ಸೆ ನೀಡಿ
ಇದರಿಂದ ಹೊರಬರುವುದು ಹೇಗೆ
1. ನಿಮ್ಮ ಕೂದಲು ನಿಮ್ಮ ಒಂದು ಭಾಗವಾಗಿದೆ. ಅದನ್ನು ಕಳೆದುಕೊಳ್ಳುವುದು ಅಹಿತಕರ. ಆದರೆ ಜನರು ನಿಮ್ಮನ್ನು ಇಷ್ಟಪಡುವುದು ನಿಮ್ಮ ವ್ಯಕ್ತಿತ್ವದಿಂದಲೇ(Behaviour) ಹೊರತು ನೀವು ಹೇಗೆ ಕಾಣುತ್ತೀರಿ ಎಂದಲ್ಲ.
2. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು(Drinking Water), ಉತ್ತಮ ಆಹಾರ ಸೇವನೆ(Diet Healthy Food), ಪ್ರತೀ ದಿನ ವ್ಯಾಯಾಮ(Exercise) ಮಾಡುವುದು, ಕಣ್ತುಂಬಾ ನಿದ್ರೆ(Sleep). ಹೀಗೆ ಮಾಡುವುದರಿಂದ ಮಾನಸಿಕವಾಗಿ(Mentally) ಹಾಗೂ ದೈಹಿಕವಾಗಿ(Physically) ಫಿಟ್ ಆಗಿರಬಹುದು. ಇದರಿಂದ ಇನ್ನಿತರೆ ಆಲೋಚನೆಗಳು ಮೂಡುವುದು ತಪ್ಪುತ್ತದೆ.
3. ನಿಮ್ಮ ಕೂದಲು ತೆಳ್ಳಗಿದೆ(Thin) ಎಂದು ಯೋಚಿಸುವ ಬದಲು, ಹೇರ್‌ಸ್ಟೆöÊಲ್‌ಗಳ(Hairstylist) ಹತ್ತಿರ ನಿಮ್ಮ ಕೂದಲಿಗೆ ಸರಿಹೊಂದುವ ಹೇರ್‌ಸ್ಟೆöÊಲ್(Hairstyle) ಬಗ್ಗೆ ತಿಳಿದುಕೊಳ್ಳಿ. ಅದಕ್ಕೆ ತಕ್ಕಂತೆ ಹೇರ್‌ಸ್ಟೆöÊಲ್ ಮಾಡಿದರೆ ಕೂದಲೂ ಚೆನ್ನಾಗಿ ಕಾಣುತ್ತದೆ.
