ಗೊರಕೆ ಹೊಡೆಯೋರಿಗೆ ಖುಷಿ ಸುದ್ದಿ, ಹೆಂಡ್ತಿ ಹೀಯಾಳಿಸಿದರೆ ತಲೆ ಕೆಡಿಸಿಕೊಳ್ಳಬೇಡಿ, ಗಳಿಸಬಹುದು ಕೈ ತುಂಬಾ ಹಣ!
ಗೊರಕೆ ದೊಡ್ಡ ಸಮಸ್ಯೆ ಆದ್ರೂ ಅದನ್ನು ನಿರ್ಲಕ್ಷ್ಯ ಮಾಡೋರೇ ಹೆಚ್ಚು. ಈ ಗೊರಕೆ ಬರೀ ನಿದ್ರೆ ಹಾಳು ಮಾಡೋದಿಲ್ಲ. ತಿಂಗಳಿಗೆ ನಿಮ್ಮ ಖಾತೆ ತುಂಬಿಸುವ ಕೆಲಸ ಕೂಡ ಮಾಡುತ್ತೆ.
ಪಕ್ಕದಲ್ಲಿ ಮಲಗಿದ ವ್ಯಕ್ತಿ ಗೊರಕೆ ಹೊಡೆಯುತ್ತಿದ್ರೆ ನಿದ್ರೆ ಹೇಗೆ ಬರಲು ಸಾಧ್ಯ? ಈ ಗೊರಕೆಯಿಂದ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿ ಮಾತ್ರವಲ್ಲ ಗೊರಕೆ ಹೊಡೆಯುವ ವ್ಯಕ್ತಿಗೂ ತೊಂದರೆ ತಪ್ಪಿದ್ದಲ್ಲ. ಗೊರಕೆಯನ್ನು ಅನೇಕರು ನಿರ್ಲಕ್ಷ್ಯ ಮಾಡ್ತಾರೆ. ಇದು ಸಾಮಾನ್ಯ ಸಮಸ್ಯೆ ಎಂದುಕೊಳ್ತಾರೆ. ಆದ್ರೆ ಗೊರಕೆ ಹೊಡೆಯುತ್ತಾರೆ ಎನ್ನುವ ಕಾರಣ ಹೇಳಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪ್ರಕರಣವಿದೆ. ಗೊರಕೆ ಸಾಮಾನ್ಯದಂತೆ ಕಾಣಿಸಿದ್ರೂ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಈ ಗೊರಕೆ ಬಗ್ಗೆ ಆಸಕ್ತಿಕರ ವಿಷ್ಯ ಒಂದಿದೆ. ಗೊರಕೆ ಬರೀ ಸಮಸ್ಯೆ ಮಾತ್ರವಲ್ಲ ಹಣ ಕೂಡ ತರುತ್ತೆ ಅಂದ್ರೆ ನೀವು ನಂಬ್ಲೇಬೇಕು. ನೀವೂ ಗೊರಕೆ ಹೊಡೆಯುವ ವ್ಯಕ್ತಿಯಾಗಿದ್ದರೆ ಪ್ರತಿ ತಿಂಗಳು 78 ಸಾವಿರ ರೂಪಾಯಿಯನ್ನು ಸರ್ಕಾರದಿಂದ ಪಡೆಯಬಹುದು. ಆದ್ರೆ ನಮ್ಮ ಸರ್ಕಾರ ಈ ಹಣ ನೀಡ್ತಿಲ್ಲ. ಬ್ರಿಟನ್ ಸರ್ಕಾರ, ಅಲ್ಲಿನ ಜನರಿಗೆ ಈ ವ್ಯವಸ್ಥೆ ಮಾಡಿದೆ. ವ್ಯಕ್ತಿ ಯಾವುದೇ ಕೆಲಸದಲ್ಲಿರಲಿ ಇಲ್ಲ ನಿರುದ್ಯೋಗಿ ಆಗಿರಲಿ, ಷರತ್ತುಗಳನ್ನು ಪೂರ್ಣಗೊಳಿಸಿದ್ದರೆ ಆತ ತಿಂಗಳಿಗೆ 78 ಸಾವಿರ ರೂಪಾಯಿ ಪಡೆಯುತ್ತಾನೆ. ಯಾಕೆಂದ್ರೆ ಈ ದೇಶದಲ್ಲಿ ಗೊರಕೆಯನ್ನು ಒಂದು ಖಾಯಿಲೆ ಅಂತಾ ಪರಿಗಣಿಸಲಾಗುತ್ತದೆ.
ಗೊರಕೆ (Snoring) ನಮಗೆ ದೊಡ್ಡ ಸಮಸ್ಯೆ ಎನ್ನಿಸದೆ ಇದ್ರೂ ಗೊರಕೆಯಿಂದ ಸ್ಲೀಪ್ ಅಪ್ನಿಯಾ (Sleep Apnea) ಕಾಡುತ್ತದೆ. ಇದು ನಮ್ಮ ನಿತ್ಯ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ದೈನಂದಿನ ಜೀವನದ ಗುಣಮಟ್ಟವನ್ನು ಇದು ಹಾಳು ಮಾಡುವ ಕಾರಣ ಇದನ್ನು ಅಂಗವೈಕಲ್ಯ ಎಂದೂ ಕರೆಯಲಾಗುತ್ತದೆ. ಗೊರಕೆ ಹೊಡೆಯುವ ವ್ಯಕ್ತಿ ನಿಮಗೆ ನಿದ್ರೆ ಮಾಡಿದಂತೆ ಕಂಡ್ರೂ ಅದು ಪೂರ್ಣ ನಿದ್ರೆಗೆ ಅವಕಾಶ ನೀಡೋದಿಲ್ಲ. ನಿದ್ರೆಯ ಗುಣಮಟ್ಟವನ್ನು ಹಾಳು ಮಾಡುತ್ತದೆ. ಇದ್ರಿಂದ ವ್ಯಕ್ತಿ ನಾನಾ ಅನಾರೋಗ್ಯಕ್ಕೆ ಒಳಗಾಗ್ತಾನೆ.
ಮೂಳೆ ಮುರಿತ ಶಸ್ತ್ರಚಿಕಿತ್ಸೆಗೆ ಔಷಧಿಯಾಗಿ 'ಮೆಹಂದಿ ಕೋನ್' ಬಳಸಿದ ಹಾಸನ ವೈದ್ಯರು
ಗೊರಕೆ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ ಅಂದ್ರೆ ನೀವು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಈ ಚಿಕಿತ್ಸೆಗೆ ಅಗತ್ಯವಿರುವ ಭತ್ಯೆಯನ್ನು ಬ್ರಿಟನ್ ನಲ್ಲಿ ಸರ್ಕಾರ ನೀಡುತ್ತದೆ. ಬ್ರಿಟನ್‌ನ ಕೆಲಸ ಮತ್ತು ರೋಗಿಗಳ ಇಲಾಖೆ (DWP) ಈ ಭತ್ಯೆಯನ್ನು ನೀಡುತ್ತದೆ. ದೀರ್ಘ ಕಾಲದಿಂದ ಮಾನಸಿಕ ಹಾಗೂ ದೈಹಿಕ ವಿಕಲಾಂಗತೆ ಇದ್ದರೆ, ಈ ಭತ್ಯೆ ನಿಮ್ಮ ಜೀವನ ನಿರ್ವಹಣೆಗೆ ನೆರವಾಗಲಿದೆ. ನೀವು ಕೆಲಸ ಮಾಡ್ತಿದ್ದರೂ, ಗೊರಕೆ ರೋಗದಿಂದ ಬಳಲುತ್ತಿದ್ದರೆ ಈ ಭತ್ಯೆಯನ್ನು ಪಡೆಯಬಹುದು. ಇದನ್ನು ವೈಯಕ್ತಿಕ ಸ್ವಾತಂತ್ರ್ಯ ಪಾವತಿ ಅಂದ್ರೆ ಪಿಐಪಿ ಎಂದು ಕರೆಯಲಾಗುತ್ತದೆ. ನಿಮ್ಮ ಬಳಿ ಚಿಕಿತ್ಸೆಗೆ ಸಾಕಷ್ಟು ಹಣವಿದ್ದರೂ ನೀವು ಈ ಪಿಐಪಿ ಪಡೆಯಬಹುದು. ವಿಶೇಷವೆಂದ್ರೆ ನೀವು ಪಡೆದ ಈ ಹಣಕ್ಕೆ ಯಾವುದೇ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ನಿಮ್ಮ ಆದಾಯ ಹಾಗೂ ಸಂಪಾದನೆ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ.
ನೀವು ಬ್ರಿಟನ್ ಸರ್ಕಾರದಿಂದ ಈ ಭತ್ಯ ಪಡೆಯಲು ಕೆಲ ಷರತ್ತುಗಳನ್ನು ಪಾಲಿಸಬೇಕು. ಈ ಭತ್ಯೆ ಪಡೆಯುವ ವ್ಯಕ್ತಿ 16 ವರ್ಷ ಮೇಲ್ಪಟ್ಟಿರಬೇಕು. ದೀರ್ಘ ಕಾಲದಿಂದ ಮಾನಸಿಕ ಅಥವಾ ದೈಹಿಕ ವಿಕಲಾಂಗತೆ ಹೊಂದಿದ್ದು, ನಿತ್ಯದ ಕೆಲಸ ಮಾಡಲು ಸಮಸ್ಯೆ ಆಗ್ತಿದ್ದರೆ, ಕನಿಷ್ಠ ಕಳೆದ 12 ತಿಂಗಳಿಂದ ನೀವು ಗೊರಕೆ ಸಮಸ್ಯೆಯಿಂದ ಬಳಲುತ್ತಿರಬೇಕು. ಇಂಥವರು ಸರ್ಕಾರ ನೀಡುವ 78 ಸಾವಿರ ಭತ್ಯೆ ಹಣವನ್ನು ತಿಂಗಳು, ತಿಂಗಳು ಪಡೆಯಬಹುದು.
ದೇಹದ 78 ಅಂಗಗಳಿಗೆ ಈ 3 ಆಹಾರ ತುಂಬಾ ಅಪಾಯಕಾರಿ; ICMRನಿಂದ ಜನತೆಗೆ ಎಚ್ಚರಿಕೆ ಸಂದೇಶ
ಗೊರಕೆ ನಿಯಂತ್ರಣಕ್ಕೆ ಉಪಾಯ : ಗೊರಕೆ ನಿಯಂತ್ರಣಕ್ಕೆ ಜನರು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಮಲಗುವ ಅರ್ಧ ಗಂಟೆ ಮೊದಲು ಕುಡಿಯಬೇಕು.