ಪಿತ್ತಕೋಶ ಆಪರೇಷನ್ ಮಾಡೋ ಬದಲು, ಸಂತಾನಹರಣ ಚಿಕಿತ್ಸೆ ಮಾಡಿದ ವೈದ್ಯರು!
ಆಸ್ಪತ್ರೆಗೆ ಹೋಗೋಕೆ ಭಯ ಎನ್ನುವವರನ್ನು ನೀವು ಕೇಳಿರಬಹುದು. ಕೆಲವೊಂದು ಕಡೆ ನಡೆಯುವ ಯಡವಟ್ಟು ಈ ಭಯ ಹುಟ್ಟಿಸುತ್ತಿದೆ. ಏನೋ ಮಾಡಲು ಹೋಗಿ ವೈದ್ಯರು ಇನ್ನೇನೋ ಮಾಡ್ತಾರೆ. ಅದಕ್ಕೆ ಪಾಪ ಈತ ಬಲಿಯಾಗಿದ್ದಾನೆ.
ಆಸ್ಪತ್ರೆಗೆ ಹೋದಾಗ ವೈದ್ಯೋ ನಾರಾಯಣೋ ಹರಿ ಅಂತ ಅವರು ಹೇಳಿದ್ದೆಲ್ಲ ಸುಮ್ಮನೆ ಮಾಡಿಸಿಕೊಳ್ಳೋರಿದ್ದಾರೆ. ಮತ್ತೆ ಕೆಲವರು ವೈದ್ಯರು ಬೈದ್ರೂ ಸರಿ, ಒಂದಿಷ್ಟು ಪ್ರಶ್ನೆ ಕೇಳಿ ತಮ್ಮ ಅನುಮಾನ ಬಗೆಹರಿಸಿಕೊಳ್ತಾರೆ. ಆಸ್ಪತ್ರೆಯಲ್ಲಿ ಕೆಲ ಯಡವಟ್ಟಾಗೋದಿದೆ. ಯಾರಿಗೋ ನೀಡುವ ಔಷಧಿಯನ್ನು ಇನ್ನಾರಿಗೋ ನೀಡಿ ವೈದ್ಯರು, ನರ್ಸ್ ತಪ್ಪು ಮಾಡಿರ್ತಾರೆ. ಆದ್ರೆ ಅದ್ರ ಶಿಕ್ಷೆಯನ್ನು ರೋಗಿಗಳು ಅನುಭವಿಸಬೇಕಾಗುತ್ತದೆ. ಅದನ್ನು ತಪ್ಪಿಸಿಕೊಳ್ಳಲು, ತಮಗೂ ಹಾಗೆಲ್ಲ ಆದ್ರೆ ಎನ್ನುವ ಭಯದಲ್ಲೇ ಜನರು ಪ್ರಶ್ನೆಗಳನ್ನು ಕೇಳ್ತಾರೆ. ಆದ್ರೆ ಈತ ಯಾವ ಪ್ರಶ್ನೆಯನ್ನೂ ಕೇಳದೆ ಆಪರೇಷನ್ ಗೆ ಹೋಗಿದ್ದೇ ದೊಡ್ಡ ತಪ್ಪಾಗಿದೆ. ವೈದ್ಯರು ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡುವ ಬದಲು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದು, ಆತ ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಬರ್ತಾ ಹೊಸ ಚಿಂತೆಯೊಂದಿಗೆ ಹೊರಗೆ ಬಂದಿದ್ದಾನೆ. ಮುಂದೇನು ಗತಿ ಎನ್ನುವ ಆತಂಕ ಆತನನ್ನು ಕಾಡ್ತಿದೆ. ಆದ್ರೆ ವೈದ್ಯರು (Doctor) ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ರೂ ಮಕ್ಕಳನ್ನು ಪಡೆಯಬಹುದು ಅಂತಾ ಸಮಾಧಾನ ಹೇಳಿದ್ದಾರೆ.
ಘಟನೆ ಅರ್ಜೆಂಟೀನಾ (Argentina) ದಲ್ಲಿ ನಡೆದಿದೆ. 41 ವರ್ಷದ ಜಾರ್ಜ್ ಬಾಸ್ಟೊ, ಪಿತ್ತಕೋಶ (Gallbladder)ದ ಶಸ್ತ್ರಚಿಕಿತ್ಸೆಗಾಗಿ ಅರ್ಜೆಂಟೀನಾದ ಕಾರ್ಡೋಬಾದಲ್ಲಿರುವ ಫ್ಲೋರೆನ್ಸಿಯೊ ಡಯಾಜ್ ಪ್ರಾಂತೀಯ ಆಸ್ಪತ್ರೆಗೆ ದಾಖಲಾಗಿದ್ದ. ಫೆಬ್ರವರಿ 28ರಂದು ಶಸ್ತ್ರಚಿಕಿತ್ಸೆ (Surgery) ಮಾಡೋದಾಗಿ ವೈದ್ಯರು ಹೇಳಿದ್ದರು. ಆದ್ರೆ ಯಾವುದೋ ಕಾರಣಕ್ಕೆ ಅದನ್ನು ಬದಲಿಸಿ 29ಕ್ಕೆ ನಿಗದಿಪಡಿಸಲಾಗಿತ್ತು. ಈ ಬದಲಾವಣೆ ದೊಡ್ಡ ನಷ್ಟಕ್ಕೆ ಕಾರಣವಾಯ್ತು.
ನಾಪತ್ತೆಯಾಗಿದ್ದ ಆಟಿಸಂ ಮಗು ಹುಡುಕಲು ಸ್ಪೆಷಲ್ ಮ್ಯೂಸಿಕ್ ಬಳಸಿದ ಪೊಲೀಸ್!
ಫೆಬ್ರವರಿ 28ರಂದು ನರ್ಸ್ ತಂಡವೊಂದು ಜಾರ್ಜ್ ರೂಮಿಗೆ ಬಂದಿದೆ. ಆತನನ್ನು ಸ್ಟ್ರೆಚ್ಚರ್ ನಲ್ಲಿ ಹಾಕಿಕೊಂಡು ಆಪರೇಷನ್ ರೂಮಿಗೆ ಹೋಗಿದೆ. ಜಾರ್ಜ್ ರೂಮಿಗೆ ಬಂದಾಗ ಮತ್ತು ಆಪರೇಷನ್ ಮಾಡುವ ಮೊದಲು ಜಾರ್ಜ್ ವೈದ್ಯಕೀಯ ರಿಪೋರ್ಟ್ ನೋಡಿಲ್ಲ. ಹಾಗೆಯೇ ವೈದ್ಯರು ಶಸ್ತ್ರಚಿಕಿತ್ಸೆ ಶುರು ಮಾಡಿದ್ದಾರೆ. ವೈದ್ಯರಿಗೆ ಜಾರ್ಜ್ ಆಪರೇಷನ್ ದಿನಾಂಕ ಮುಂದೆ ಹೋಗಿದ್ದು ಗೊತ್ತಿರಲಿಲ್ಲ. ಆ ದಿನ ಯಾವ ಆಪರೇಷನ್ ಇತ್ತೋ ಅದನ್ನೇ ಜಾರ್ಜ್ ಗೆ ಮಾಡಿದ್ದಾರೆ. ಆ ದಿನ ಬೇರೆ ವ್ಯಕ್ತಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಆಗ್ಬೇಕಿತ್ತು. ಅದನ್ನು ಜಾರ್ಜ್ ಗೆ ಮಾಡಲಾಗಿದೆ.
ಆಪರೇಷನ್ ಮುಗಿದ ಮೇಲೂ ಜಾರ್ಜ್ ಗೆ ಏನಾಗಿದೆ ಎಂಬುದು ಗೊತ್ತಾಗಿರಲಿಲ್ಲ. ಅಲ್ಲಿಗೆ ಬಂದ ವೈದ್ಯರು ಪರೀಕ್ಷೆ ಮಾಡಿ, ರಿಪೋರ್ಟ್ ನೋಡಿ ದಂಗಾದ್ರು. ನಿನಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡುವ ಬದಲು ಸಂತಾನಹರಣ ಆಪರೇಷನ್ ಆಗಿದೆ ಅಂದ್ರು. ಇದನ್ನು ಕೇಳಿದ ಜಾರ್ಜ್ ಗೆ ಭೂಮಿ ಕುಸಿದಂತಾಗಿದೆ. ಏನು ಮಾಡ್ಬೇಕು ಎಂಬುದು ತಿಳಿಯುವ ಮುನ್ನವೇ ಪಿತ್ತಕೋಶದ ಆಪರೇಷನ್ ಗೆ ಆತನನ್ನು ಕರೆದೊಯ್ದಿದ್ದಾರೆ. ಆಪರೇಷನ್ ಮುಗಿಸಿ ಬಂದ ಜಾರ್ಜ್ ವೈದ್ಯರನ್ನು ವಿಚಾರಿಸಿದ್ದಾನೆ. ಆರಂಭದಲ್ಲಿ ಒಬ್ಬರ ಮೇಲೆ ಒಬ್ಬರು ದೂರಿದ ಸಿಬ್ಬಂದಿ ನಂತ್ರ ಜಾರ್ಜ್ ಗೆ ಸಲಹೆ ನೀಡಲು ಶುರು ಮಾಡಿದ್ದಾರೆ. ಇದಕ್ಕೆ ಹೆಚ್ಚು ಚಿಂತಿಸಬೇಕಾಗಿಲ್ಲ. ಮಗು ಅವಶ್ಯವಿದ್ರೆ ಕೃತಕ ಗರ್ಭಧಾರಣೆಯ ಮೂಲಕ ತಂದೆಯಾಗಬಹುದು ಎಂದಿದ್ದಾರೆ.
ಸಂದರ್ಶನದ ವೇಳೆ ಇದೊಂದು ಪ್ರಶ್ನೆ ಕೇಳಿದ್ರೆ ಕೆಲಸ ಸಿಗೋದು ಗ್ಯಾರಂಟಿ!
ಆಸ್ಪತ್ರೆ ಈ ನಿರ್ಲಕ್ಷ್ಯ ಜಾರ್ಜ್ ಗೆ ಬೇಸರತರಿಸಿದೆ. ನನ್ನ ರಿಪೋರ್ಟ್ ನ ಎಲ್ಲ ಕಡೆ ಪಿತ್ತಕೋಶ ಎಂದು ಬರೆದಿದೆ. ಇದನ್ನು ತಿಳಿಯಲು ವಿಜ್ಞಾನಿ ಬರಬೇಕಾಗಿರಲಿಲ್ಲ. ಆದ್ರೆ ಯಾರೂ ಅದನ್ನು ನೋಡಿಲ್ಲ. ಆಸ್ಪತ್ರೆಯಲ್ಲಿ ಇನ್ನೂ ಹಗ್ಗಜಗ್ಗಾಟ ನಡೆಯುತ್ತಿದೆ ಎಂದಿದ್ದಾನೆ. ಜಾರ್ಜ್ ಬಯಸಿದ್ರೆ ವೈದ್ಯರು ಹಾಗೂ ಆಸ್ಪತ್ರೆ ವಿರುದ್ಧ ದೂರು ನೀಡಬಹುದಾಗಿದ್ದು, ಜಾರ್ಜ್ ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.