ಹಲ್ಲು ಬ್ರಷ್ ಮಾಡಲೇಬಾರದು...ಯಾವಾಗ?
ನಾವು ತಿನ್ನೋ ಆಹಾರ ಹಲ್ಲಿನ ಅನಾರೋಗ್ಯಕ್ಕೂ ಕಾರಣವಾಗಬಹುದು. ಅಷ್ಟೇ ಅಲ್ಲ ಮಾಡುವ ಕೆಲಸಕ್ಕೂ, ಹಲ್ಲಿಗೂ ಇದೆ ಅವಿನಾಭಾವ ಸಂಬಂಧ. ಹೇಗೆ?
ಮನುಷ್ಯನ ದೇಹದಲ್ಲಿ ಹಲ್ಲುಗಳು ಬಹು ಮುಖ್ಯ ಅಂಗ. ಹಲ್ಲು ಸರಿಯಾಗಿರದಿದ್ದರೆ ಮುಖದ ಅಂದವೇ ಹದಗೆಡುತ್ತದೆ. ಹಲ್ಲಿನ ಆರೋಗ್ಯದೆಡೆಗೆ ಎಷ್ಟು ಗಮನ ಹರಿಸಿದರೂ ಸಾಲದು. ಬರೀ ಎರಡು ಬಾರಿ ಬ್ರಷ್ ಮಾಡದಿರಷ್ಟೇ ಸಾಲದು, ಹಲ್ಲಿನ ಆರೋಗ್ಯಕ್ಕಾಗಿ ಅಗತ್ಯ ಆಹಾರವನ್ನೂ ಸೇವಿಸುವುದು ಬಹುಮಖ್ಯ. ಅಷ್ಟಕ್ಕೂ ಈ ಹಲ್ಲಿನ ಆರೋಗ್ಯದ ಬಗ್ಗೆ ಪ್ರಭಾವ ಬೀರೋ ಅಂಶಗಳು ಯಾವುವು? ಆಲ್ಲದೇ ನಾವು ಮಾಡುವ ಕೆಲಸವೂ ದಂತ ಆರೋಗ್ಯದ ಬಗ್ಗೆ ಹೇಗೆ ಪರಿಣಾಮ ಬೀರುತ್ತೆ?
ವೇಯ್ಟ್ ಲಿಫ್ಟಿಂಗ್: ಸ್ವಾಭಾವಿಕವಾಗಿ ಭಾರ ಎತ್ತುವಾಗ ಹಲ್ಲುಗಳ ಮೇಲೂ ಹೆಚ್ಚಿನ ಒತ್ತಡ ಬೀರುತ್ತದೆ. ಜೊತೆಗೆ ವಸಡೂ ಸೆಳೆತವೂ ಕಾಡುತ್ತೆ.
ಗಟ್ಟಿ ಬ್ರಶ್: ಗಟ್ಟಿಯಾದ ಬ್ರಶ್‌ನಿಂದ ಹಲ್ಲುಜ್ಜಿದರೆ ವಸಡಿನ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ ಹಲ್ಲುಗಳ ಎನಾಮಲ್ ಉದುರಲು ಆರಂಭವಾಗುತ್ತದೆ. ಆದುದರಿಂದ ಫ್ಲೋರೈಡ್ ಯುಕ್ತ ಪೇಸ್ಟ್ ಬಳಸಿ. ಹಲ್ಲುಗಳನ್ನು ದಿನದಲ್ಲಿ ಎರಡು ಬಾರಿ ಬ್ರಷ್ ಮಾಡಿ.
ಕಾರ್ಡಿಯೋ: ಜರ್ಮನಿ ಶೋಧದ ಪ್ರಕಾರ ತುಂಬಾ ಸಮಯದವರೆಗೆ ಕಾರ್ಡಿಯೋ ವರ್ಕ್ ಔಟ್ ಮಾಡಿದರೆ ಹಲ್ಲುಗಳ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಎಕ್ಸರ್ ಸೈಜ್ ಮಾಡುವ ಮುನ್ನ ಬ್ರಷ್ ಮಾಡುವುದೊಳಿತು.
ಔಷಧಿಗಳು: ಅಲರ್ಜಿ, ಹೃದಯ ಸಮಸ್ಯೆ, ಬಿಪಿ ಮೊದಲಾದ ಔಷಧ ಸೇವಿಸುವುದರಿಂದಲೂ ಬಾಯಿ ಒಣಗಲು ಆರಂಭವಾಗುತ್ತದೆ. ಇದೇನು ದೊಡ್ಡ ಸಮಸ್ಯೆ ಅಲ್ಲ ಎಂದು ಅನಿಸಬಹುದು. ಆದರೆ ಇದು ಹಲ್ಲಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದು ಹಲ್ಲು ಸವೆಯುವಂತೆ ಮಾಡುತ್ತದೆ.
ಈ ಆಹಾರ ಸೇವನೆ ತಕ್ಷಣ ಬ್ರಷ್ ಮಾಡುವುದು: ಆಮ್ಲೀಯ ಖಾದ್ಯ ಪದಾರ್ಥಗಳಾದ ಜ್ಯೂಸ್, ಹಣ್ಣು, ಸ್ಪೋರ್ಟ್ಸ್ ಡ್ರಿಂಕ್, ರೆಡ್ ವೈನ್ ಮತ್ತು ಸೋಡಾ ಸೇವಿಸಿದ ಎನಾಮಲ್ ಸಡಿಲವಾಗುತ್ತದೆ. ಅದಕ್ಕೆ ಈ ಪದಾರ್ಥಗಳನ್ನು ತಿಂದು, ಕುಡಿದ ನಂತರ ಬ್ರಷ್ ಮಾಡಲೇ ಬಾರದು.