ಜಪಾನ್‌ನಲ್ಲಿ ಮಾಂಸ ತಿನ್ನುವ ಬ್ಯಾಕ್ಟಿರಿಯಾ ಪತ್ತೆ: ಎರಡೇ ದಿನದಲ್ಲಿ ಮನುಷ್ಯನ ಆಟ ಮುಗಿಸುವ ಕ್ರಿಮಿ

 ಜಪಾನಲ್ಲಿ ವಿಚಿತ್ರ ಕಾಯಿಲೆಯೊಂದು ಕಾಣಿಸಿಕೊಂಡಿದ್ದು, ಇದಕ್ಕೆ ಕಾರಣವಾಗಿರುವುದು ಮಾಂಸ ತಿನ್ನುವ ಬ್ಯಾಕ್ಟಿರಿಯಾ ಎಂದು ತಜ್ಞರು ಪತ್ತೆ ಮಾಡಿದ್ದಾರೆ. ಈ ಮಾಂಸ ತಿನ್ನುವ ಬ್ಯಾಕ್ಟಿರೀಯಾದಿಂದ ಬರುವ ಈ ಕಾಯಿಲೆಯಿಂದಾಗಿ ಮನುಷ್ಯ ಕೇವಲ 48 ಗಂಟೆಗಳಲ್ಲಿ ಜೀವ ಕಳೆದುಕೊಳ್ಳುತ್ತಾನೆ. 

Flesh eating bacteria discovered in Japan A worm that can kill a mans game in two days akb

ಟೋಕಿಯೋ: ಜಪಾನಲ್ಲಿ ವಿಚಿತ್ರ ಕಾಯಿಲೆಯೊಂದು ಕಾಣಿಸಿಕೊಂಡಿದ್ದು, ಇದಕ್ಕೆ ಕಾರಣವಾಗಿರುವುದು ಮಾಂಸ ತಿನ್ನುವ ಬ್ಯಾಕ್ಟಿರಿಯಾ ಎಂದು ತಜ್ಞರು ಪತ್ತೆ ಮಾಡಿದ್ದಾರೆ. ಈ ಮಾಂಸ ತಿನ್ನುವ ಬ್ಯಾಕ್ಟಿರೀಯಾದಿಂದ ಬರುವ ಈ ಕಾಯಿಲೆಯಿಂದಾಗಿ ಮನುಷ್ಯ ಕೇವಲ 48 ಗಂಟೆಗಳಲ್ಲಿ ಜೀವ ಕಳೆದುಕೊಳ್ಳುತ್ತಾನೆ. ಇದು ಕೋವಿಡ್‌ನಿಂದ ಈಗಷ್ಟೇ ಎಚ್ಚೆತ್ತುಕೊಳ್ಳುತ್ತಿರುವ ಜಪಾನ್‌ಗೆ ಮತ್ತೊಂದು ಆಘಾತ ನೀಡಲಿದೆ. ಎಂದು ಅಂಗ್ಲ ಮಾಧ್ಯಮ ಬ್ಲೂಮ್‌ಬರ್ಗ್ ವರದಿ ಮಾಡಿದೆ. 

ಜಪಾನ್‌ನಲ್ಲಿ ಸ್ಟ್ರೆಪ್ಟೋಕೊಕಲ್ ವಿಷಕಾರಿ ಶಾಕ್ ಸಿಂಡ್ರೋಮ್ (Streptococcal toxic shock syndrome) ಎಂಬ ಕಾಯಿಲೆಯೊಂದು ಕಾಣಿಸಿಕೊಂಡಿದ್ದು,  ಇದೊಂದು ಮರಣಾಂತಿಕ ಕಾಯಿಲೆಯಾಗಿದ್ದು, ರೋಗ ಕಾಣಿಸಿಕೊಂಡ 48 ಗಂಟೆಗಳಲ್ಲಿ ರೋಗಿ ಜೀವ ಕಳೆದುಕೊಳ್ಳುತ್ತಾನೆ ಎಂದು ವರದಿ ಆಗಿದೆ. ಈ ವರ್ಷದ ಜೂನ್ 2 ರ ವೇಳೆಗಾಗಲೇ ಜಪಾನ್‌ನಲ್ಲಿಸ್ಟ್ರೆಪ್ಟೋಕೊಕಲ್ ವಿಷಕಾರಿ ಶಾಕ್ ಸಿಂಡ್ರೋಮ್ ಕಾಯಿಲೆಯನ್ನು ಹೊಂದಿರುವ  977ಪ್ರಕರಣಗಳು ಬೆಳಕಿಗೆ ಬಂದಿವೆ.  ಕಳೆದ ವರ್ಷವೂ ಕೂಡ 941 ಪ್ರಕರಣಗಳು ಬೆಳಕಿಗೆ ಬಂದಿದ್ದು,  ಈ ವರ್ಷ ಕಳೆದ ವರ್ಷಕ್ಕಿಂತಲೂ ಹೆಚ್ಚು ಈ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು  ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯು ವರದಿ ಮಾಡಿದೆ ಈ ಸಂಸ್ಥೆ 1999ರಿಂದಲೂ ಕಾಯಿಲೆಗಳ ಪತ್ತೆ ಕಾರ್ಯ ಮಾಡುತ್ತಿದೆ. 

ಎಚ್ಚರ...ಐದೇ ನಿಮಿಷದಲ್ಲಿ ರೆಡಿಯಾಗೋ ನೂಡಲ್ಸ್‌ನಲ್ಲೂ ಇರುತ್ತೆ ಬ್ಯಾಕ್ಟಿರೀಯಾ!

ಗ್ರೂಪ್ A ಸ್ಟ್ರೆಪ್ಟೋಕೊಕಸ್  ಕಾಯಿಲೆ ಹೊಂದಿರುವ ಮಕ್ಕಳಲ್ಲಿ ಸಾಮಾನ್ಯವಾಗಿ ಇದು  'ಸ್ಟ್ರೆಪ್ ಥ್ರೋಟ್' ಎಂದು ಕರೆಯಲ್ಪಡುವ ಊತ ಮತ್ತು ಗಂಟಲು ನೋವಿಗೆ ಕಾರಣವಾಗುತ್ತದೆ. ಆದರೆ ಕೆಲವು ರೀತಿಯ ಬ್ಯಾಕ್ಟಿರಿಯಾಗಳು ಗಂಟು ನೋವು, ಅಂಗಾಗಳ ನೋವು, ಊತ, ಜ್ವರ, ಕಡಿಮೆ ರಕ್ತದೊತ್ತಡ ಸೇರಿದಂತೆ ವಿವಿಧ ರೋಗಲಕ್ಷಣಗಳನ್ನು ವೇಗವಾಗಿ ಹೆಚ್ಚಿಸಲು ಕಾಣವಾಗುತ್ತದೆ.  ಅಷ್ಟೇ ಅಲ್ಲದೇ ಮುಂದೆ ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ, ಉಂಟಾಗಿ ಸಾವಿಗೆ ಕಾರಣವಾಗುತ್ತದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

ಬಹುತೇಕ ಸಾವುಗಳು 48 ಗಂಟೆಗಳ ಒಳಗೆ ಸಂಭವಿಸುತ್ತದೆ ಎಂದು ಟೋಕಿಯೊದ ಮಹಿಳಾ ವೈದ್ಯಕೀಯ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಗಳ ವಿಭಾಗದ ಪ್ರೊಫೆಸರ್‌ ಕೆನ್ ಕಿಚುಚಿ ಹೇಳುತ್ತಾರೆ. ಅದರಲ್ಲೂ 50 ವರ್ಷ ದಾಟಿದ ಜನರು ಈ ರೋಗಕ್ಕೆ ಹೆಚ್ಚು ಒಳಗಾಗುತ್ತಾರೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಸೋಂಕಿನ ದರವನ್ನು ಗಮನಿಸಿದಾಗ ಈ ವರ್ಷ ಜಪಾನ್‌ನಲ್ಲಿ  ಪ್ರಕರಣಗಳ ಸಂಖ್ಯೆ 2,500 ತಲುಪಬಹುದು ಹಾಗೂ ಶೇಕಡಾ 30ರಷ್ಟು ಇದರಿಂದ ಸಾವು ಸಂಭವಿಸಬಹುದು ಎಂದು ಕಿಕುಚಿ ಹೇಳಿದ್ದಾರೆ. ಈ ಮಾಂಸ ತಿನ್ನುವ ಬ್ಯಾಕ್ಟಿರಿಯಾದ ಹಿನ್ನೆಲೆಯಲ್ಲಿ ಜನರಿಗೆ ಅವರು ಕೆಲವು ಆರೋಗ್ಯ ಮುನ್ಸೂಚನೆಗಳನ್ನು ನೀಡಿದ್ದು, ಕೈಗಳ ಶುಚಿತ್ವ ಕಾಪಾಡುವುದು, ತೆರೆದ ಗಾಯಗಳಿಗೆ ಆದಷ್ಟು ಬೇಗ ಚಿಕಿತ್ಸೆ ನೀಡುವುದನ್ನು ಮಾಡಬೇಕು ಎಂದು ಹೇಳಿದ್ದಾರೆ. 

ಬಾಹ್ಯಾಕಾಶ ಕೇಂದ್ರದಲ್ಲೂ ವೈರಸ್‌: ಸುನಿತಾಗೆ ಆತಂಕ..!

Latest Videos
Follow Us:
Download App:
  • android
  • ios