Health: ಅಲಾಸ್ಕಾಪಾಕ್ಸ್‌ಗೆ ಮೊದಲ ಸಾವು, ಏನಿದರ ಲಕ್ಷಣ?
ಪ್ರಾಣಿ, ಸಸ್ತನಿಗಳಿಂದ ಅನೇಕ ವೈರಸ್ ಮನುಷ್ಯನಿಗೆ ಹರಡುತ್ತಿರುತ್ತದೆ. ಕೆಲವೊಂದು ವೈರಸ್ ಯಾವುದೇ ಲಕ್ಷಣ ತೋರಿಸದೆ ಸಾವು ತರುತ್ತದೆ. ಈಗ ಅಲಾಸ್ಕಾಪಾಕ್ಸ್ ಭಯ ಹುಟ್ಟಿಸಿದೆ. ಓರ್ವ ಈ ವೈರಸ್ ಗೆ ಬಲಿಯಾಗಿದ್ದಾನೆ.
ವಿಶ್ವದಲ್ಲಿ ದಿನಕ್ಕೊಂದು ಹೊಸ ರೋಗಗಳು ಪತ್ತೆ ಆಗ್ತಿವೆ. ಹೊಸ ಹೊಸ ಸೋಂಕು, ವೈರಸ್ ಹರಡುತ್ತಿದೆ. ಈಗ ಯುಎಸ್‌ನ ಅಲಾಸ್ಕಾದ ಆರೋಗ್ಯ ಅಧಿಕಾರಿಗಳು ಹೊಸ ವೈರಸ್ ಅಲಾಸ್ಕಾಪಾಕ್ಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲಾಸ್ಕಾಪಾಕ್ಸ್ ವೈರಸ್ ನಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆಂಕಾರೇಜ್ (Anchorageನ ) ದಕ್ಷಿಣದ ಕೆನೈ ಪೆನಿನ್ಸುಲಾದಲ್ಲಿ ಘಟನೆ ನಡೆದಿದೆ, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದ ವ್ಯಕ್ತಿಯ ಮೇಲೆ ಈ ವೈರಸ್ (Virus) ದಾಳಿ ನಡೆಸಿದೆ. ಜನವರಿ ಅಂತ್ಯದ ವೇಳೆಗೆ ಆತ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ. ಆತನಿಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದರು. ಆರಂಭದಲ್ಲಿ ಕೌಪಾಕ್ಸ್ ಪರೀಕ್ಷೆ ವೇಳೆ ಧನಾತ್ಮಕ ಫಲಿತಾಂಶ ಬಂದಿತ್ತು. ಹೆಚ್ಚಿನ ಪರೀಕ್ಷೆ ನಂತ್ರ ಆತ ಅಲಾಸ್ಕಾಪಾಕ್ಸ್ ವೈರಸ್ ದಾಳಿಗೆ ಒಳಗಾಗಿದ್ದಾನೆ ಎಂಬುದನ್ನು ಪತ್ತೆ ಮಾಡಲು ಕೆಲ ದಿನಗಳ ಹಿಡಿದವು. ಮೃತ ವ್ಯಕ್ತಿ ಮೂತ್ರಪಿಂಡ ಮತ್ತು ಉಸಿರಾಟದ ವೈಫಲ್ಯದಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲಾಸ್ಕಾಪಾಕ್ಸ್ (Alaskapox) ಸೋಂಕಿಗೆ ಒಳಗಾದ 7 ರೋಗಿಗಳಲ್ಲಿ ಈ ವ್ಯಕ್ತಿಯೂ ಸೇರಿದ್ದ.
Weight Loss Tips: ತೂಕ ಇಳಿಬೇಕಾ? ಎಳ ನೀರಿಗೆ ಈ ಬೀಜ ಸೇರಿಸಿ ಕುಡಿದ್ನೋಡಿ
ರೋಗ ನಿರೋಧಕ ಶಕ್ತಿ ಕಡಿಮೆ ಇರುವುದೇ ಈತನ ಸಾವಿಗೆ ಕಾರಣ ಎಂದು ವೈದ್ಯರು ಅಂದಾಜಿಸಿದ್ದಾರೆ. ಮೃತ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಒಂಟಿಯಾಗಿ ವಾಸವಾಗಿದ್ದನಂತೆ. ಆತನ ಜೊತೆ ಬೆಕ್ಕಿತ್ತು. ಸಣ್ಣ ಸಸ್ತನಿಗಳನ್ನು ಬೇಟೆಯಾಡುವ ಬೆಕ್ಕಿನಿಂದ ಈ ವೈರಸ್ ವ್ಯಕ್ತಿಗೆ ಹರಡಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ವ್ಯಕ್ತಿ ಕೈ ಮೇಲೆ ಪ್ರಾಣಿ ಗೀಚಿದೆ. ಆದ್ರೆ ಬೆಕ್ಕನ್ನು ಪರೀಕ್ಷೆ ನಡೆಸಿದಾಗ ಅದಕ್ಕೆ ಯಾವುದೇ ವೈರಸ್ ಇರಲಿಲ್ಲ. ಬೆಕ್ಕಿನ ಉಗುರಿನ ಮೂಲಕ ವ್ಯಕ್ತಿಗೆ ವೈರಸ್ ಹರಿಡಿದೆ ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ. ಅಲಾಸ್ಕಾಪಾಕ್ಸ್ ವೈರಸ್ ಬಗ್ಗೆ ಹೆದರುವ ಅಗತ್ಯವಿಲ್ಲ. ಹೆಚ್ಚು ಜಾಗೃತರಾಗಿರಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಅಲಾಸ್ಕಾಪಾಕ್ಸ್ ವೈರಸ್ ಎಂದರೇನು? : ಅಲಾಸ್ಕಾಪಾಕ್ಸ್ ಡಬಲ್-ಸ್ಟ್ರಾಂಡೆಡ್ ಡಿಎನ್‌ಎ ವೈರಸ್ ಸಿಡುಬು, ಮಂಕಿಪಾಕ್ಸ್ ಮತ್ತು ಕೌಪಾಕ್ಸ್‌ನ ಗುಂಪಿನಿಂದ ಬಂದಿದೆ, ಫೇರ್‌ಬ್ಯಾಂಕ್ಸ್ ನಾರ್ತ್ ಸ್ಟಾರ್‌ನಲ್ಲಿ ಹೆಪ್ಪುಗಟ್ಟಿದ ಪರ್ಮಾಫ್ರಾಸ್ಟ್ ಕರಗುವಿಕೆಯಿಂದ ಇದು ರೂಪಗೊಂಡಿದೆ. ಮೊದಲ ಪ್ರಕರಣವು 2015 ರಲ್ಲಿ ಫೇರ್‌ಬ್ಯಾಂಕ್ಸ್‌ನಲ್ಲಿ ವಯಸ್ಕರಲ್ಲಿ ಪತ್ತೆಯಾಗಿತ್ತು. ಇದು ಮನುಷ್ಯರಿಗೆ ಮಾತ್ರವಲ್ಲದೆ ಸಸ್ತನಿಗಳಲ್ಲೂ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಚರ್ಮದ ಮೇಲೆ ಗಾಯಗಳು ಕಾಣಿಸಿಕೊಳ್ಳುತ್ತವೆ. ನಂತ್ರ ಅದು ಹರಡಲು ಶುರುವಾಗುತ್ತದೆ. ಇದಲ್ಲದೆ ಇದರಿಂದ ಬಳಲುವ ಜನರು ದುಗ್ಧರಸ ಗ್ರಂಥಿ ಊದಿಕೊಂಡಿರುತ್ತದೆ. ಕೀಲು ಅಥವಾ ಸ್ನಾಯು ನೋವಿನಂತಹ ಇತರ ರೋಗಲಕ್ಷಣ ಅವರಲ್ಲಿ ಕಂಡು ಬರುತ್ತದೆ. ಇದಕ್ಕೆ ತುತ್ತಾಗಿದ್ದ ಜನರು ತಮಗೆ ಜೇಡ ಅಥವಾ ಕೀಟ ಕಚ್ಚಿದೆ ಎಂದುಕೊಳ್ಳುತ್ತಾರೆ. ಇದ್ರ ಲಕ್ಷಣ ಸಾಮಾನ್ಯವಾಗಿರುತ್ತದೆ. ಕೆಲವೇ ವಾರಗಳಲ್ಲಿ ಅವರು ತಾವಾಗಿಯೇ ಚೇತರಿಸಿಕೊಳ್ಳುತ್ತಾರೆ. ರೋಗನಿರೋಧಕ ಶಕ್ತಿ ಅತ್ಯಂತ ಕಡಿಮೆ ಇರುವ ವ್ಯಕ್ತಿಗೆ ಸಮಸ್ಯೆ ಹೆಚ್ಚಾಗುತ್ತದೆ. ಸಾವು ಸಂಭವಿಸುವ ಅಪಾಯವೂ ಇದೆ.
ಸಾವನ್ನಪ್ಪಿದ ವ್ಯಕ್ತಿಯ ರೋಗ ಲಕ್ಷಣ : ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೇ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ. ದಿನ ಕಳೆದಂತೆ ಪರಿಸ್ಥಿತಿ ಹದಗೆಟ್ಟಿತ್ತು. ಜನವರಿ ಅಂತ್ಯದ ಸಮಯದಲ್ಲಿ ಆಯಾಸ ಮತ್ತು ನೋವು ಹೆಚ್ಚಾಗಿದ್ದಲ್ಲದೆ ಮೂತ್ರಪಿಂಡ (Kidney) ಮತ್ತು ಉಸಿರಾಟದ ವೈಫಲ್ಯದಿಂದ ಸಾವನ್ನಪ್ಪಿದರು.
ಲತಾ ಮಂಗೇಶ್ಕರ್ ಏ ಮೇರೆ ವತನ್ ಹಾಡಿನ ಮೂಲಕ ಬ್ರೈನ್ ಸ್ಟ್ರೋಕ್‌ಗೆ ಚಿಕಿತ್ಸೆ, AIIMS ಪ್ರಯೋಗ!
ಅಲಾಸ್ಕಾಪಾಕ್ಸ್ ವೈರಸ್ ನಿಂದ ರಕ್ಷಣೆ ಹೇಗೆ? : ಅಲಾಸ್ಕಾಪಾಕ್ಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಯಾವುದೇ ಲಕ್ಷಣಗಳು ಇನ್ನೂ ಕಂಡುಬಂದಿಲ್ಲ. ಆದರೆ ಜನರು ಅಂತರ ಕಾಯ್ದುಕೊಳ್ಳುವುದು ಮುಖ್ಯ. ಗಾಯಗಳಾದ ಜಾಗದಲ್ಲಿ ಬ್ಯಾಡೇಜ್ ಹಾಕಿ ಅದನ್ನು ಮುಚ್ಚಬೇಕು. ಗಾಯದ ಸಂಪರ್ಕಕ್ಕೆ ಬಂದ ವಸ್ತುಗಳನ್ನು ಆಗಾಗ ಸ್ವಚ್ಛಗೊಳಿಸಬೇಕು.