Winterನಲ್ಲಿ ಒಲೆ ಮುಂದೆ ಚಳಿ ಕಾಸೋದು ಕಾಮನ್, ಆದರೆ ಹುಷಾರಾಗಿದ್ದರೆ ಬೆಸ್ಟ್

ಮೈಕೊರೆಯುವ ಚಳಿಯಲ್ಲಿ ಇಡೀ ದೇಹವನ್ನು ಬೆಚ್ಚಗಿಡಲು ನಾವು ಪ್ರಯತ್ನಿಸ್ತೇವೆ. ಪಾದ ಬಿಸಿಯಾದ್ರೆ ಇಡೀ ದೇಹ ಬೆಚ್ಚಗಿರುತ್ತೆ ಎಂಬ ಕಾರಣಕ್ಕೆ ಅನೇಕರು ಪಾದ ಬಿಸಿ ಮಾಡಿಕೊಳ್ತಾರೆ. ಆದ್ರೆ ಬೆಂಕಿ ಮುಂದೆ ತುಂಬಾ ಸಮಯ ಕುಳಿತುಕೊಳ್ಳುವುದು ಹಾಗೂ ಕಾಲುಗಳ ಶಾಖ ಹೆಚ್ಚು ಮಾಡೋದು ಒಳ್ಳೆಯದಲ್ಲ.
 

Fire Safety Tips In Winter

ಚಳಿಗಾಲ ಶುರುವಾಗಿದೆ. ಚಳಿಯಿಂದ ರಕ್ಷಣೆ ಪಡೆಯಲು ನಾವು ಬೆಚ್ಚಗಿನ ಜಾಗ ಹುಡುಕ್ತೇವೆ. ಸ್ವೆಟರ್, ರಗ್ಗನ್ನು ಬಳಕೆ ಮಾಡ್ತೇವೆ. ದೇಹವನ್ನು ಬೆಚ್ಚಗಿಡುವ ಆಹಾರ ಸೇವನೆ ಮಾಡ್ತೇವೆ. ಇನ್ನು ಕೆಲವರು ಬೆಂಕಿಗೆ ಮೈ ಒಡ್ಡಿ ದೇಹವನ್ನು ಬೆಚ್ಚಗೆ ಮಾಡಿಕೊಳ್ಳುತ್ತಾರೆ. ಹಳ್ಳಿಗಳಲ್ಲಿ ಬೆಂಕಿ ಮುಂದೆ ಕುಳಿತುಕೊಳ್ಳೋರನ್ನು ನೀವು ಹೆಚ್ಚಾಗಿ ನೋಡಬಹುದು. ರಸ್ತೆ ಬದಿಗಳಲ್ಲಿ ಕೆಲ ಜನರು ಬೆಂಕಿ ಹಾಕಿ ಮೈ ಬಿಸಿ ಮಾಡಿಕೊಳ್ತಿರುತ್ತಾರೆ. ಚಳಿಗಾಲದಲ್ಲಿ ಬೆಂಕಿ ಮುಂದೆ ಕುಳಿತುಕೊಳ್ಳುವ ಮಜವೆ ಬೇರೆ. ಎಷ್ಟು ಹೊತ್ತು ಕುಳಿತ್ರೂ ಬೇಸರ ಬರೋದಿಲ್ಲ. ಮೈ ಬೆಚ್ಚಾಗ್ತಿರುವ ಕಾರಣ ಹಿತವೆನ್ನಿಸುತ್ತದೆ. ಕೆಲವರು ಕಾಲುಗಳನ್ನು ಬೆಚ್ಚಗಿಡಲು ಪ್ರಯತ್ನಿಸ್ತಾರೆ. ಬೆಂಕಿ ಮುಂದೆ ಪಾದವನ್ನು ಒಡ್ಡಿ, ಬೆಚ್ಚಗೆ ಮಾಡಿಕೊಳ್ತಾರೆ.

ಪಾದ (Foot) ಗಳು ಬೆಚ್ಚಗಿದ್ದರೆ, ಹೊಟ್ಟೆ (Stomach) ಯು ಮೃದುವಾಗಿರುತ್ತದೆ ಮತ್ತು ತಂಪಾಗಿರುತ್ತದೆ. ಆಗ ನಿಮಗೆ ವೈದ್ಯರ ಬಳಿ ಹೋಗುವ ಅಗತ್ಯವಿರೋದಿಲ್ಲ ಅಂದ್ರೆ ನೀವು ರೋಗ (Disease ) ಮುಕ್ತರಾಗಿರುತ್ತೀರಿ ಎಂದು ಹಿರಿಯರು ಹೇಳ್ತಿದ್ದರು. ಆದ್ರೆ ಪಾದಗಳಿಗೆ ಬೆಂಕಿ (Fire) ಶಾಖ ನೀಡುವುದು ವೈದ್ಯರ ಪ್ರಕಾರ ಒಳ್ಳೆಯದಲ್ಲ. ಅದ್ರಿಂದ ಕೆಲ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ನಾವಿಂದು ಪಾದಗಳನ್ನು ಬಿಸಿ ಮಾಡೋದ್ರಿಂದ ಏನೆಲ್ಲ ಆಗುತ್ತೆ ಹಾಗೆ ಬೆಂಕಿ ಮುಂದೆ ಕುಳಿತ್ರೆ ಏನೆಲ್ಲ ಸಮಸ್ಯೆ ಕಾಡುತ್ತದೆ ಎಂಬುದನ್ನು ನಿಮಗೆ ಹೇಳ್ತೇವೆ.

ಚಂದ ಕಾಣುತ್ತೆ ಅಂತಾ ಪುಟಾಣಿ ಮಕ್ಕಳಿಗೆ ನೇಲ್ ಪಾಲಿಶ್ ಹಚ್ಬೇಡಿ

ನೀವು ಪಾದಗಳನ್ನು ಬೆಂಕಿಗೆ ಒಡ್ಡಿ ಶಾಖ ತೆಗೆದುಕೊಳ್ಳುವುದ್ರಿಂದ ನಿಮಗೆ ಹಲವಾರು ತೊಂದರೆಗಳು ಉಂಟಾಗುತ್ತವೆ. ಪಾದ ಹೆಚ್ಚು ಬಿಸಿಯಾಗ್ತಿದ್ದಂತೆ ಅದು ತಲೆಯನ್ನು ತಲುಪುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.  ಶಾಖ ದೇಹದ ಇತರ ಭಾಗ ಸೇರಿದಂತೆ ಮೆದುಳನ್ನು ತಲುಪುತ್ತದೆ. ಇದರಿಂದಾಗಿ ನಮ್ಮ ಮನಸ್ಸು ಮತ್ತು ನಡವಳಿಕೆಯಲ್ಲಿ ಅಸಮತೋಲನ ಉಂಟಾಗುವ ಸಾಧ್ಯತೆಯಿರುತ್ತದೆ. ಅತಿಯಾದ ಶಾಖ ಮೆದುಳು ತಲುಪಿದಾಗ ಮಾತನಾಡುವಾಗ ತೊದಲುವಿಕೆ, ಕಿರಿಕಿರಿ, ಗೊಂದಲ, ಚಡಪಡಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ. ವೈದ್ಯರ ಪ್ರಕಾರ, ತಲೆ ಬಿಸಿಯಾಗ್ತಿದ್ದಂತೆ ಕಣ್ಣಿನಲ್ಲಿ ಕೂಡ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಿವಿಗೆ ಸಂಬಂಧಿಸಿದ ಅನಾರೋಗ್ಯ ನಿಮ್ಮನ್ನು ಕಾಡುವ ಸಾಧ್ಯತೆಯಿರುತ್ತದೆ. ವಾಸನೆಯನ್ನು ಗ್ರಹಿಸುವ ಶಕ್ತಿ ಕೂಡ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಮೆದುಳು ನಿಮ್ಮ ದೇಹದ ಪವರ್ ಹೌಸ್ ಇದ್ದಂತೆ. ಅದಕ್ಕೆ ಸ್ವಲ್ಪ ತೊಂದರೆಯಾದ್ರೂ ಇಡೀ ನಿಮ್ಮ ದೇಹ ಹಾಳಾದಂತೆ. ಮೆದುಳಿಗೆ ಅತಿಯಾದ ಶಾಖ ತಲುಪಿದಾಗ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯಿರುತ್ತದೆ.  ಏಕಾಗ್ರತೆ ಭಂಗವಾಗುತ್ತದೆ. ನಿದ್ರೆ  ಕಡಿಮೆಯಾಗುತ್ತದೆ. 

ಬರೀ ಮಾನಸಿಕ ಸಮಸ್ಯೆ ಮಾತ್ರವಲ್ಲ, ದೈಹಿಕ ಸಮಸ್ಯೆ ಕೂಡ ನಿಮ್ಮನ್ನು ಕಾಡುತ್ತದೆ. ನಿಮ್ಮ ದೇಹದ ಶಾಖ ಹೆಚ್ಚಾಗುತ್ತದೆ. ದೇಹದಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಚರ್ಮ ಒಣಗುವುದು, ಬೆವರು ಕಡಿಮೆಯಾಗುವುದು, ಉಸಿರಾಟ ಕ್ರಿಯೆಯಲ್ಲಿ ಏರುಪೇರು ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಮೆದುಳಿಗೆ ಶಾಖ ಹೆಚ್ಚಾದ್ರೆ ಹೃದಯ ಬಡಿತ ಹೆಚ್ಚಾಗುತ್ತದೆ. ವಾಂತಿ ಬರುವ ಸಾಧ್ಯತೆಯಿರುತ್ತದೆ. ತಲೆನೋವು ಸಹ ನಿಮ್ಮನ್ನು ಕಾಡುತ್ತದೆ.  ಇದಲ್ಲದೆ, ಬೆಂಕಿಯಿಂದ ಹೊರಬರುವ ಗಾಳಿ ನೇರವಾಗಿ ನಿಮ್ಮ ಮುಖ ಮತ್ತು ನಿಮ್ಮ ಚರ್ಮವನ್ನು ತಲುಪುತ್ತದೆ. ಇದು ಚರ್ಮವನ್ನು ಒಣಗಿಸುತ್ತದೆ. ಇದರಿಂದಾಗಿ ತುರಿಕೆ, ಕೆಂಪು ತೇಪೆ, ಸುಕ್ಕು ಸೇರಿದಂತೆ ಅನೇಕ ಸಮಸ್ಯೆ ನಿಮ್ಮನ್ನು ಕಾಡಲು ಶುರುವಾಗುತ್ತದೆ. ನಿಮ್ಮ ತಲೆಯ ಶಾಖ ಹೆಚ್ಚಾಗಿದೆ ಎಂದಾದ್ರೆ ಸಾಮಾನ್ಯ ತಲೆನೋವು, ಮೈಗ್ರೇನ್, ಸೈನಸ್ ಸಮಸ್ಯೆ,ಒತ್ತಡ,ತಲೆತಿರುಗುವಿಕೆ, ವಾಕರಿಕೆ ನಿಮ್ಮನ್ನು ಕಾಡುತ್ತದೆ. 

ಮುಖದ ಮೇಲೆ ಕಾಣಿಸಿಕೊಳ್ಳೋ ಕಪ್ಪು ಕಲೆಗೆ ಇಲ್ಲಿವೆ ಸಿಂಪಲ್ Home Remedies

ಬೆಂಕಿಗೆ ಅನೇಕರು ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡ್ತಾರೆ. ಹಾಗಾಗಿ ಅದ್ರ ಹೊಗೆ ನಮ್ಮ ದೇಹವನ್ನು ಸೇರಿ ಕ್ಯಾನ್ಸರ್ ಸೇರಿದಂತೆ ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಕೈಗಳನ್ನು ನಾವು ತುಂಬಾ ಸಮಯ ಬೆಂಕಿ ಮುಂದೆ ಹಿಡಿದ್ರೆ ಕೈ ಊದಿಕೊಳ್ಳುವ ಸಂಭವವಿರುತ್ತದೆ. 

Latest Videos
Follow Us:
Download App:
  • android
  • ios