ಮಹಿಳೆಯರಲ್ಲಿ ಹೆಚ್ಚುತ್ತಿದೆ ಬೊಕ್ಕ ತಲೆ, ಕಾರಣಗಳು ಬಿಡಿ ನೂರಾರು!

ತಲೆ ಕೂದಲೂ ತೆಳ್ಳಗೆ (Thin), ಬುರಡೆ (Scalp) ಕಾಣುವಂತಿದೆ. ಕೂದಲು ಉದುರುತ್ತದೆಯೇ ಹೊರತು ಬೆಳೆಯುವುದಿಲ್ಲ. ಇದು ಸಾಮಾನ್ಯವಾಗಿ ಐವತ್ತು ವರ್ಷ ದಾಟಿದ ಮಹಿಳೆಯರಲ್ಲಿ(Woman) ಕಾಡುವ ಸಮಸ್ಯೆ. ಇದಕ್ಕೆ ಆಂಡ್ರೋಜೆನೆಟಿಕ್ ಅಲೊಪೇಸಿಯಾ(Androgenetic Alopecia) ಎಂದು ಕರೆಯಲಾಗುತ್ತದೆ. ಈ ರೀತಿಯ ಸಮಸ್ಯೆಗೆ ಕಾರಣವೇನು? ಏಕೆ ಸಂಭವಿಸುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Female Baldness Reason Behind for Hair Fall

ಯಾವುದೇ ಸಮಾರಂಭಕ್ಕೆ ಹೋಗಬೇಕೆಂದರೆ ಕೂದಲ ಸಮಸ್ಯೆ(Hair Problem) ಕಾಡುವುದು ಹೆಚ್ಚು. ಅತಿಯಾಗಿ ಉದುರುವುದು(Hair Fall) ಅಥವಾ ಬೊಕ್ಕ ತಲೆಯಂತೆ (Baldness) ಕೂದಲಿದ್ದರೂ ಬುರುಡೆ ಕಾಣುವುದು. ಮಹಿಳೆಯರಲ್ಲಿ ಕಾಡುವ ಈ ಅರೆ ಬೊಕ್ಕು ಸಮಸ್ಯೆ ಮುಜುಗರ (Insecure) ಮೂಡಿಸುತ್ತದೆ. 

ಈ ಮಾದರಿಯ ಬೋಳು ತಲೆಯ ಮಹಿಳೆಯರ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕೂದಲು ಉದುರುವಿಕೆಯಾಗಿದೆ. ಇದನ್ನು ಅಂಡ್ರೋಕೆನೆಟಿಕ್ ಅಲೋಪೆಸಿಯಾ (Androgenic Alopecia) ಎಂದು ಕರೆಯಲಾಗುತ್ತದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂದಲು ಉದುರುವಿಕೆಯನ್ನು ಅನುಭವಿಸಬಹುದಾದರೂ, ಇದು ಪುರುಷರಂತೆ ಮಹಿಳೆಯರಲ್ಲಿ ವ್ಯಾಪಕವಾಗಿಲ್ಲ ಮತ್ತು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಬೋಳು ತಲೆಯ ಮಹಿಳೆಯರಲ್ಲಿ ಸಾಮಾನ್ಯವಾಗಿ ಕೂದಲು ತೆಳ್ಳಗಾಗುತ್ತದೆ. ಕೂದಲು ತೆಳ್ಳಗಾಗಿ ಕೆಲ ಭಾಗಗಳಲ್ಲಿ ಅಗಲವಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ನೆತ್ತಿಯು(Scalp) ಕಾಣಿಸಿಕೊಳ್ಳುತ್ತದೆ.

ಮಹಿಳೆಯರಲ್ಲಿ ಇದು ಸ್ವಭಾವತಃ ಅನುವಂಶಿಕವಾಗಿದೆ (Genetic) ಮತ್ತು ಸಾಮಾನ್ಯವಾಗಿ 50ವರ್ಷದ ಕೊನೆಯಲ್ಲಿ ಕಂಡುಬರುತ್ತದೆ. ಅಂದರೆ ಮಹಿಳೆಯರು ಋತುಬಂಧವನ್ನು(Menopause) ತಲುಪಿದ ನಂತರ ಕೂದಲು ತೆಳ್ಳಗಾಗಿ ಬುರುಡೆ ಕಾಣುತ್ತದೆ. ಕೆಲ ಹಾರ್ಮೋನುಗಳು(Hormone) ಸ್ತಿçà ಮಾದರಿಯ ಬೋಳು ತಲೆಗೆ ಪ್ರಾಥಮಿಕ ಕಾರಣವೆಂದು ತಜ್ಞರು ಹೇಳುತ್ತಾರೆ.

Man Dies Of Hair Transplant: ಕೂದಲು ಕಸಿ ಮಾಡಿಕೊಳ್ಳೋ ಮುನ್ನ ಇವಿಷ್ಟು ಗೊತ್ತಿರಲಿ

ಮಹಿಳೆಯರಲ್ಲಿ ಬೋಳು ತಲೆ ಹೇಗಿರುತ್ತದೆ?
ಪುರುಷರು ಮತ್ತು ಮಹಿಳೆಯರ ಬೋಳು ತಲೆಯ ಪ್ರಮುಖ ವ್ಯತ್ಯಾಸವೆಂದರೆ ಪುರುಷರಲ್ಲಿ 'M' ಆಕಾರದಲ್ಲಿ ಕೂದಲು ಉದುರಿದರೆ, ಮಹಿಳೆಯರ ಬೋಳು ತಲೆ ಪ್ರಕೃತಿಯಲ್ಲಿ(Nature) ಹೆಚ್ಚು ಹರಡಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಕೂದಲು ವಿಭಜಿಸುವ ಅಂದರೆ ನೆತ್ತಿಯಲ್ಲಿನ(Scalp) ವಿಭಜನೆ ರೇಖೆಯಿಂದ ಪ್ರಾರಂಭವಾಗುತ್ತದೆ ಹಾಗೂ ಕ್ರಮೇಣ ಇಡೀ ನೆತ್ತಿಯ ಮೇಲೆ ಪರಿಣಾಮ ಬೀರುತ್ತದೆ. ವೈದ್ಯರು ಇದನ್ನು ಮೂರು ಹಂತದಲ್ಲಿ ವರ್ಗೀಕರಿಸುತ್ತಾರೆ.

ಹಂತ 1: ಕೂದಲು ವಿಭಜನೆಯಿಂದ ಕೂದಲು ಉದುರುವಿಕೆಯ ಪ್ರಮಾಣವು ತೀವ್ರವಾಗಿರದ ಕಾರಣ ಬಹಳಷ್ಟು ಮಹಿಳೆಯರು ಸ್ತಿçà ಅಲೋಪೇಸಿಯಾದಿಂದ ಬಳಲುತ್ತಿದ್ದಾರೆ ಎಂದು ತಿಳಿದಿರುವುದಿಲ್ಲ. ಕೂದಲು ತೆಳ್ಳಗಾಗಿ ಉದುರಲು ಆರಂಭಿಸುತ್ತದೆ. ಸಾಮಾನ್ಯವಾಗಿ ಇದನ್ನು ಮಹಿಳೆಯರು ನಿರ್ಲಕ್ಷಿಸುತ್ತಾರೆ. ಕೂದಲ ವಿಭಜನೆಯ ಭಾಗದಲ್ಲಿ ಕೂದಲು ಕ್ರಮೇಣ ತೆಳ್ಳಗಾಗುತ್ತದೆ ಮತ್ತು ಬೋಳು ಪ್ರದೇಶವನ್ನು ಮರೆಮಾಚಲು ಕೆಲ ತಂತ್ರಗಳ ಮೊರೆಹೋಗುತ್ತಾರೆ.

ಹಂತ 2: ಈ ಹಂತದಲ್ಲಿ ಕೂದಲು ಉದುರುವುದು ಹೆಚ್ಚಾಗಿರುತ್ತದೆ. ಅದಾಗ್ಯೂ ಪೀಡಿತ ಪ್ರದೇಶವು ಇನ್ನೂ ಚಿಕ್ಕದಾಗಿದೆ. ವಿಭಜನೆಯ ಪ್ರದೇಶವು ಅಗಲವಾಗಿದ್ದು(Wide), ಅರೆ ಬೊಕ್ಕು ಬುರುಡೆಗೆ ಕಾರಣವಾಗುತ್ತದೆ.   

ಹಂತ 3: ಇಲ್ಲಿ ಕೂದಲು ಉದುರುವಿಕೆ ಹಾಗೂ ತೆಳ್ಳಗಾಗುವುದು ಹೆಚ್ಚಾಗಿ ನೆತ್ತಿಯ ಉದ್ದಕ್ಕೂ ಹೆಚ್ಚು ಹರಡಿ, ಬುರುಡೆ ಕಾಣಿಸಿಕೊಳ್ಳುತ್ತದೆ. ನೆತ್ತಿಯ ಎಲ್ಲಾ ಭಾಗಗಳಿಂದ ಕೂದಲು ತೆಳುವಾಗುವುದನ್ನು ಗಮನಿಸಬಹುದು. ಕೂದಲು ಮತ್ತೆ ಅದೇ ಜಾಗದಲ್ಲಿ ಬೆಳೆಯುವುದು ಕಷ್ಟಕರವಾಗುತ್ತದೆ.

ನಿಮ್ಮ ಈ ತಪ್ಪುಗಳೂ ಸಹ ಕೂದಲು ಉದುರಲು ಕಾರಣವಿರಬಹುದು

ಬೋಳು ತಲೆಗೆ ಕಾರಣಗಳು
ಅನುವಂಶಿ ಅಥವಾ ಹಾರ್ಮೋನ್ ಅಂಶಗಳು ಮಹಿಳೆಯ ಬೋಳು ತಲೆಗೆ ಕಾರಣ. ಅದು ಕೂದಲು ತೆಳುವಾಗಲು ಮತ್ತು ಕಡಿಮೆ ಕೂದಲ ಬೆಳವಣಿಗೆಗೆ ಕಾರಣವಾಗುತ್ತದೆ. 
1. ಹಾರ್ಮೋನ್ (Hormone): ಆಂಡ್ರೋಜೆನ್‌ಗಳ(Androgen) ಹೆಚ್ಚಿದ ಮಟ್ಟಗಳು ಕೂದಲು ಉದುರುವಿಕೆ ಮತ್ತು ಕೂದಲು ತೆಳುವಾಗುವುದಕ್ಕೆ ಕಾರಣವಾಗಬಹುದು.

2. ಅನುವಂಶಿ (Genetic): ತಳೀಯವಾಗಿ ಕಡಿಮೆಯಾದ ಅನಾಜೆನ್ ಹಂತವನ್ನು ನಿರ್ಧರಿಸಿದ್ದರೆ, ಕೂದಲು ಉದುರುವಿಕೆ ಮತ್ತು ಹೊಸ ಕೂದಲಿನ ಬೆಳವಣಿಗೆಯ ನಡುವೆ ಹೆಚ್ಚಿನ ಸಮಯವಿದೆ ಎಂದರ್ಥ. ಫೋಲಿಕ್ಯುಲರ್ ಮಿನಿಯೇಟರೈಸೇಶನ್ ಸಂಭವಿಸುತ್ತದೆ. ಇದರಲ್ಲಿ ದಪ್ಪವಾದ ಕೂದಲನ್ನು ಚಿಕ್ಕದಾದ ಮತ್ತು ತೆಳ್ಳಗಿನ ಕೂದಲಿನಿಂದ ಬದಲಾಯಿಸಲಾಗುತ್ತದೆ.

3. ಕೊರತೆಗಳು (Deficiency): 50 ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ಕಬ್ಬಿಣದ(Iron) ಕೊರತೆಯಿಂದ ರಕ್ತಹೀನತೆಯನ್ನು(Anemia) ಹೊಂದಿರುತ್ತಾರೆ. ಇದು ಕೂದಲು ಉದುರುವಿಕೆ ಮತ್ತು ಕಡಿಮೆ ಕೂದಲ ಬೆಳವಣಿಗೆಗೆ ಕಾರಣವಾಗುತ್ತದೆ.

4. ವೃದ್ಧಾಪ್ಯ (Ageing): ಋತುಬಂಧದ(Menopause) ನಂತರ ದೇಹದಲ್ಲಿ ಈಸ್ಟ್ರೋಜೆನ್(Oestrogen) ಮತ್ತು ಪ್ರೊಜೆಸ್ಟರಾನ್ ಕಡಿಮೆ ಉತ್ಪಾದನೆಯಾಗುವುದರಿಂದ ಕೂದಲು ಉದುರುವುದು ಹೆಚ್ಚಾಗುತ್ತದೆ. ಈ ಹಾರ್ಮೋನುಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ ಮತ್ತು ನೆತ್ತಿಯ ಮೇಲೆ ಹೆಚ್ಚಿನ ಕಾಲ ಇರುತ್ತದೆ.

5. ಒತ್ತಡ (Stress): ಒತ್ತಡವು ಹೆಚ್ಚಿದ ಕಾರ್ಟಿಕೊಸ್ಟೆರಾನ್ ಮಟ್ಟಗಳಿಗೆ ಕಾರಣವಾಗುತ್ತದೆ. ಇದು ಕೂದಲಿನ ಕಿರುಚೀಲಗಳನ್ನು ವಿಶ್ರಾಂತಿ ಹಂತಕ್ಕೆ ತಳ್ಳುತ್ತದೆ. ಕೂದಲಿನ ಪುನರುತ್ಪಾದನೆಗಾಗಿ ವಿಭಜಿಸುವ ಕಾಂಡಕೋಶಗಳನ್ನು ನಿಷ್ಕ್ರಿಯಗೊಳಿಸುತ್ತದೆ.

6. ಆಂತರಿಕ ಕಾಯಿಲೆಗಳು (Internal Diseases): ಮಧುಮೇಹ(Diabetic), ಅಧಿಕ ರಕ್ತದೊತ್ತಡ (High Blood Pressure) ಮತ್ತು ಕ್ಯಾನ್ಸರ್‌ನಂತಹ (Cancer) ಇತರೆ ದೀರ್ಘಕಾಲದ ಪರಿಸ್ಥಿತಿಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಏಕೆಂದರೆ ಕೂದಲಿನ ಕಿರುಚೀಲಗಳಿಗೆ ಆಮ್ಲಜನಕ (Oxygen) ಮತ್ತು ಪೋಷಕಾಂಶಗಳ (Nutrition) ಹರಿವು ನಿರ್ಬಂಧಿಸಲ್ಪಡುತ್ತದೆ. ಆಟೋಇಮ್ಯೂನ್ ಕಾಯಿಲೆಯಲ್ಲಿ, ಅಲೋಪೆಸಿಯಾ ಏರಿಯಾಟಾ (Alopecia Areata) ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಕೂದಲು ಉದುರುವಿಕೆಗೆ ಕಾರಣವಾಗುವ ಕೂದಲಿನ ಕಿರುಚೀಲಗಳ ಮೇಲೆ ದಾಳಿ ಮಾಡುತ್ತದೆ.

7. ನೆತ್ತಿಯ ರೋಗ(Scalp Disease): ರಿಂಗ್ವಾರ್ಮ್(Ringworm), ಸೋರಿಯಾಸಿಸ್(Psoriasis), ಅಥವಾ ಹೊಟ್ಟಿನಂತಹ (Dandruff) ಶಿಲೀಂಧ್ರಗಳ ಸೋಂಕು ಕೂದಲು ನಷ್ಟಕ್ಕೆ ಕಾರಣವಾಗುತ್ತದೆ.

ಕ್ಯಾಲ್ಸಿಯಂ ಕೊರತೆ, ಕೈ, ತೋಳು, ಪಾದ ಕೀಲೂ ನೋವಿಗೂ ಕಾರಣವಾಗುತ್ತೆ

ಮಹಿಳೆಯರು ಬೊಕ್ಕು ತಲೆಯನ್ನು ಹೀಗೆ ತಡೆಂಯಿರಿ
1. ಆರೋಗ್ಯಕರ ಆಹಾರವನ್ನು ಸೇವಿಸಿ. 
2. ಹಾನಿಕರವಾದ ಕೇಶ ವಿನ್ಯಾಸವನ್ನು ತಪ್ಪಿಸಿ ಮತ್ತು ಕಲರ್‌ಗಳು(Color) ಮತ್ತು ಸ್ಟ್ರೈಟ್ನರ್‌ಗಳಂತಹ (Straightener) ಎಲೆಕ್ಟ್ರಾನಿಕ್ ತಾಪನ ಉಪಕರಣಗಳ ಬಳಕೆಯನ್ನು ತಪ್ಪಿಸಿ.
3. ಹೊರಗೆ ಹೋಗುವಾಗ ಕೂದಲನ್ನು ರಕ್ಷಿಸಿಕೊಳ್ಳಬೇಕು. ಇದು ಕೂದಲಿನ ಎಳೆಗಳನ್ನು ಹಾನಿಕಾರಕ ಕಿರಣಗಳು(Rays), ಧೂಳು(Dust) ಮತ್ತು ಮಾಲಿನ್ಯದಿಂದ(Pollution) ರಕ್ಷಿಸುತ್ತದೆ. 
4. ಒಮೆಗಾ-3(Omega 3) ಕೊಬ್ಬಿನಾಮ್ಲಗಳಂತಹ ಕೆಲವು ಪೂರಕಗಳು ಸಹಾಯಕವಾಗಿವೆ. 

Latest Videos
Follow Us:
Download App:
  • android
  • ios