Asianet Suvarna News Asianet Suvarna News

ಕಣ್ಣುರಿ ಸದಾ ಕಾಡೋದು ಕಾಮನ್, ಈ ಐ ಡ್ರಾಪ್ಸ್ ಬಳಸಿದರೆ ಬೆಸ್ಟ್ ಮದ್ದು

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೆಚ್ಚುನ ಸಮಯ ಗೆಜೆಟ್ ಬಳಕೆಯಿಂದಾಗಿ ಹಾಗೂ ಮಾಲಿನ್ಯದಿಂದಾಗಿ ಕಣ್ಣಿನ ಸಮಸ್ಯೆ ಸಣ್ಣ ಮಕ್ಕಳನ್ನು ಕೂಡ ಕಾಡ್ತಿದೆ. ಕಣ್ಣಿನ ಕಿರಿಕಿರಿಗೆ ನೀವು ಹರ್ಬಲ್ ಕಣ್ಣಿನ ಡ್ರಾಪ್ಸ್ ಮೂಲಕ ಪರಿಹಾರ ಕಂಡುಕೊಳ್ಳಬಹುದು. 
 

Eye Drops For Red Eyes And Itching
Author
First Published Jan 13, 2023, 12:19 PM IST

ಕಣ್ಣು ನಮ್ಮ ದೇಹದ ಮುಖ್ಯ ಅಂಗಗಳಲ್ಲಿ ಒಂದು. ಕಣ್ಣಿಗೆ ಸಣ್ಣ ಕಸ ಬಿದ್ರೂ ಸಾಕಷ್ಟು ಕಿರಿಕಿರಿಯಾಗುತ್ತದೆ. ಧೂಳಿನ ಕಣಗಳು ಕಣ್ಣಿಗೆ ಹೋಗಿ ಆಗಾಗ ತೊಂದರೆಯನ್ನುಂಟು ಮಾಡುತ್ತವೆ. ರಾತ್ರಿ ಸರಿಯಾಗಿ ನಿದ್ರೆ ಬಂದಿಲ್ಲವೆಂದ್ರೂ ಕಣ್ಣು ಕೆಂಪಾಗಿ ಊದಿಕೊಳ್ಳುತ್ತದೆ. ಅತಿಯಾದ ಗಾಳಿಯಲ್ಲಿ ಹೋದಾಗ, ಸೂರ್ಯನ ಕಿರಣಗಳು ಕಣ್ಣಿಗೆ ಬಿದ್ದಾಗ ಕೂಡ ಕಣ್ಣು ಕೆಂಪಾಗುತ್ತದೆ. ಕಣ್ಣಿನಲ್ಲಿ ತುರಿಕೆ, ಕಣ್ಣಿನ ಉರಿ ಕಾಡುವುದಿದೆ. ಕಂಪ್ಯೂಟರ್ ಮುಂದೆ ತುಂಬಾ ಸಮಯ ಕುಳಿತು ಕೆಲಸ ಮಾಡುವವರಿಗೆ ಕೂಡ ಈ ಕಣ್ಣಿನ ಸಮಸ್ಯೆ ಸಾಮಾನ್ಯ. ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳುವುದು ಮಾಮೂಲಿ. ಕಣ್ಣಿನ ಉರಿ ಅಥವಾ ಕಣ್ಣಿಗೆ ಧೂಳು ಹೋದಾಗ ನಾವು ಕಣ್ಣಿನ ಆರೈಕೆ ಮಾಡುವುದು ಅನಿವಾರ್ಯ. ಕಣ್ಣಿಗೆ ಡ್ರಾಪ್ಸ್ ಹಾಕುವ ಮೂಲಕ ಸಮಸ್ಯೆಯಿಂದ ಹೊರಗೆ ಬರಬಹುದು. 

ಮಾರುಕಟ್ಟೆ (Market) ಯಲ್ಲಿ ಕಣ್ಣಿನ ಆರೋಗ್ಯ (Health) ಕ್ಕೆ ಸಂಬಂಧಿಸಿದಂತೆ ಅನೇಕ ಡ್ರಾಪ್ಸ್ ಲಭ್ಯವಿದೆ. ಅದ್ರಲ್ಲಿ ಕೆಲವೊಂದು ಡ್ರಾಪ್ಸ್ ಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗಿದೆ. ಅವುಗಳನ್ನು ಕಣ್ಣಿ (Eye) ಗೆ ಹಾಕಿದ್ರೆ ಯಾವುದೇ ಅಡ್ಡಪರಿಣಾಮವಿಲ್ಲ. ನಾವಿಂದು ಕೆಲ ಕಣ್ಣಿನ ಡ್ರಾಪ್ಸ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

Nacharo Herbal - ಜೂಮ್ ಕ್ಲೆನ್ಸರ್ ಐ ಡ್ರಾಪ್ : ಕಣ್ಣಿನಲ್ಲಿ ಧೂಳಿದ್ದರೆ ನೀವು ಈ ಡ್ರಾಪ್ಸ್ ಬಳಸಬಹುದು. ಇದು ಕಣ್ಣಿನಲ್ಲಿರುವ ಕೊಳಕನ್ನು ಸ್ವಚ್ಛಗೊಳಿಸುತ್ತದೆ.  ಈ ಐ ಡ್ರಾಪ್ ಬಳಕೆಯಿಂದ ಯಾವುದೇ ಹಾನಿಯಾಗುವುದಿಲ್ಲ. ಈ ಕಣ್ಣಿನ ಹನಿಗಳು ಎಣ್ಣೆ ಮುಕ್ತವಾಗಿದೆ. ಇದ್ರಲ್ಲಿ ಯಾವುದೇ ವಿಷವಿಲ್ಲ.ಇದನ್ನು ರೋಸ್ ವಾಟರ್ ನಿಂದ ತಯಾರಿಸಲಾಗುತ್ತದೆ. ಇದು ಕಣ್ಣಿಗೆ ತುಂಬಾ ಒಳ್ಳೆಯದು.

THYROID AWARENESS MONTH: ಮಹಿಳೆಯರಲ್ಲೇಕೆ ಥೈರಾಯ್ಡ್ ಸಮಸ್ಯೆ ಹೆಚ್ಚು?

Sreedhareeyam Ayurveda Sunetra Regular Herbal Eyedrops : ಇದು ಆಯುರ್ವೇದಿಕ್ ಐ ಡ್ರಾಪ್ ಆಗಿದೆ. ಇದು ಕಣ್ಣಿಗೆ ತುಂಬಾ ಒಳ್ಳೆಯದು. ಈ ಐ ಡ್ರಾಪ್‌ನಿಂದ ಅನೇಕ ಕಣ್ಣಿನ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ನಿದ್ರೆ ಸರಿಯಾಗಿ ಆಗದ ಕಾರಣ ನಿಮ್ಮ ಕಣ್ಣುಗಳು ಕೆಂಪಾಗಿದ್ದರೆ ನೀವು ಈ ಐ ಡ್ರಾಪ್ ಬಳಸಬಹುದು. ಇದನ್ನು ತುಳಸಿ ಮತ್ತು ಜೇನುತುಪ್ಪದಂತಹ ಅನೇಕ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ. ಕಣ್ಣಿನ ತುರಿಕೆಯನ್ನು ಕಡಿಮೆ ಮಾಡುವ ಜೊತೆಗೆ ಕಣ್ಣಿನ ಶುಷ್ಕತೆ ಕಡಿಮೆ ಮಾಡಲು ಈ ಡ್ರಾಪ್ ಹೆಚ್ಚು ಪರಿಣಾಮಕಾರಿಯಾಗಿದೆ.  

Ayuvision Herbal Eye Drops : ಈ ಐ ಡ್ರಾಪ್ ಕೂಡ ಕಣ್ಣುಗಳ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಈ ಐ ಡ್ರಾಪ್ ಅನ್ನು ಆಯುರ್ವೇದ ವಸ್ತುಗಳಿಂದ ತಯಾರಿಸಲಾಗಿದೆ. ಕಣ್ಣುಗಳು ಧೂಳಿನಿಂದ ಕೆಂಪಾದ್ರೆ ನೀವು ಈ ಡ್ರಾಪ್ ಹಾಕಬಹುದು.  ಈ ಕಣ್ಣಿನ ಡ್ರಾಪ್ ವಿಷ ಹೊಂದಿಲ್ಲ. ಕಂಪ್ಯೂಟರ್ ಬಳಕೆ ಮಾಡುವವರು ಈ ಡ್ರಾಪ್ಸ್ ಬಳಸಬಹುದು. 

Clear Eyes Redness Relief Handy Pocket Drop : ಕೆಂಪಾದ ಕಣ್ಣು ಹಾಗೂ ಶುಷ್ಕತೆ ಕಡಿಮೆ ಮಾಡಲು ಈ ಐ ಡ್ರಾಪ್  ಬಳಸಬಹುದು. ಕಣ್ಣಿನಲ್ಲಾಗುವ ಕಿರಿಕಿರಿಯನ್ನು ಇದು ತಡೆಯುತ್ತದೆ. ಕಣ್ಣಿನಲ್ಲಿ ತುರಿಕೆ ಕಾಣಿಸಿಕೊಂಡ್ರೆ ನೀವು ಈ ಐ ಡ್ರಾಪ್ ಹಾಕಿ ಉತ್ತಮ ಫಲಿತಾಂಶ ಪಡೆಯಬಹುದು. 

CareVed Herbal Eye Drop : ಕಣ್ಣು ತಂಪಾಗಿರಬೇಕು ಎಂದಾದ್ರೆ ನೀವು ಈ ಐ ಡ್ರಾಪ್ ಬಳಕೆ ಮಾಡಿ. ಇದು ನೂರಕ್ಕೆ ನೂರು ಸುರಕ್ಷಿತವಾಗಿದೆ. ಇದು ಕಣ್ಣನ್ನು ಸ್ವಚ್ಛಗೊಳಿಸುವ ಜೊತೆಗೆ ಕಣ್ಣಿನ ಸೋಂಕನ್ನು ಕಡಿಮೆ ಮಾಡುತ್ತದೆ.

Women Health: ಮುಟ್ಟಿನ ಮೂರು ದಿನ ತಲೆಸ್ನಾನ ಮಾಡಬಾರದಾ?

ಯಾವುದೇ ಕಣ್ಣಿನ ಡ್ರಾಪ್ ಬಳಸುವ ಮುನ್ನ ನೀವು ವೈದ್ಯರನ್ನು ಭೇಟಿಯಾದ್ರೆ ಒಳ್ಳೆಯದು. ಒಂದ್ವೇಳೆ ಡ್ರಾಪ್ ಹಾಕಿದ ನಂತ್ರ ನಿಮಗೆ ಸಮಸ್ಯೆ ಕಂಡು ಬಂದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ. 
 

Follow Us:
Download App:
  • android
  • ios