ಅಪರಿಚತರೊಂದಿಗೆ ಲೈಂಗಿಕ ಸಂಪರ್ಕ: ಹರಡುತ್ತೆ ಫಂಗಲ್ ಸೋಂಕು, ಎಚ್ಚರ ಬೇಡದ ಕೆಲ್ಸಕ್ಕೆ ಕೈ ಹಾಕೋ ಮುನ್ನ

ಲೈಂಗಿಕವಾಗಿ ಸಕ್ರಿಯವಾಗಿರುವ ಜನರು ಎಚ್ಚರಿಕೆಯಿಂದಿರಬೇಕು. ಅದ್ರಲ್ಲೂ ಅಪರಿಚಿತರ ಜೊತೆ ಹಾಗೂ ಪುರುಷರ ಜೊತೆ ಸಂಬಂಧ ಬೆಳೆಸುವ ಪುರುಷರಿಗೆ ಈಗ ಮತ್ತೊಂದು ಸುದ್ದಿಯಿದೆ. ಅಮೆರಿಕಾದಲ್ಲಿ ಹೊಸ ಶೀಲೀಂಧ್ರ ಸೋಂಕು ಪತ್ತೆಯಾಗಿದೆ.
 

Experts Alert Doctors Public Arrival Hard Treat Fungal Skin Infections Us roo

ಅಪರೂಪದ ಲೈಂಗಿಕವಾಗಿ ಹರಡುವ ಶಿಲೀಂಧ್ರಗಳ ಸೋಂಕಿನ ಪ್ರಕರಣವು ಅಮೆರಿಕದಲ್ಲಿ ಬೆಳಕಿಗೆ ಬಂದಿದೆ. ಆರೋಗ್ಯ ತಜ್ಞರು ಇದನ್ನು ದೃಢಪಡಿಸಿದ್ದಾರೆ ಮತ್ತು ಇದು ಹೊಸ ರೀತಿಯ ಸೋಂಕು, ಇದು ಅಮೆರಿಕದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ ಎಂದು ಹೇಳಿದ್ದಾರೆ. ಜಾಮಾ ಡರ್ಮಟಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಹೊಸ ರೂಪದ ರಿಂಗ್‌ವರ್ಮ್‌ನ ಮೊದಲ ಪ್ರಕರಣ ನ್ಯೂಯಾರ್ಕ್ ನಗರದಲ್ಲಿ ಕಂಡು ಬಂದಿದೆ. 30 ವರ್ಷದ ವ್ಯಕ್ತಿಯಲ್ಲಿ ಇದು ಪತ್ತೆಯಾಗಿದೆ. ಈ ಅಪರೂಪದ ಸೋಂಕಿನ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಲೈಂಗಿಕ (Sexual) ವಾಗಿ ಹರಡುವ ಅಪರೂಪದ ಶಿಲೀಂಧ್ರ (Sungus) ಸೋಂಕು : ಅಧ್ಯಯನ (Studies) ದ ವರದಿ ಪ್ರಕಾರ, ಇದು ಹೆಚ್ಚು ಸಾಂಕ್ರಾಮಿಕ ಖಾಯಿಲೆಯಾಗಿದೆ. ತಕ್ಷಣಕ್ಕೆ ಈ ಖಾಯಿಲೆಗೆ ಚಿಕಿತ್ಸೆ ಪಡೆದರೂ ಅದು ಗುಣವಾಗಲು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. 

ಜಾಸ್ತಿ ಬೈಕ್ ಓಡಿಸಿದ್ರೆ ಹಾಳಾಗೋದು ಗಾಡಿಯಲ್ಲ, ನಿಮ್ಮ ಬಾಡಿ… ಹುಷಾರು!

ಅಮೆರಿಕಾದಲ್ಲಿ ಅಪರೂಪದ ಶಿಲೀಂಧ್ರ ಸೋಂಕಿಗೆ ಒಳಗಾದ ವ್ಯಕ್ತಿ ಅನೇಕ ಕಡೆ ಸುತ್ತಾಡಿದ್ದ. ಆತ ಇಂಗ್ಲೆಂಡ್, ಗ್ರೀಸ್ ಮತ್ತು ಕ್ಯಾಲಿಫೋರ್ನಿಯಾಗೆ ಪ್ರಯಾಣಿಸಿದ್ದ. ನಂತ್ರ ನ್ಯೂಯಾರ್ಕ್ ಗೆ ಹಿಂದಿರುಗಿದ್ದ. ಈ ಸಮಯದಲ್ಲಿ ಅವನ ಶಿಶ್ನ, ಪೃಷ್ಠದ ಮತ್ತು ಇತರ ದೇಹದ ಭಾಗಗಳಲ್ಲಿ ಟಿನಿಯಾ, ಒಂದು ರೀತಿಯ ಚರ್ಮದ ದದ್ದು ಕಾಣಿಸಿಕೊಂಡಿತ್ತು  ಎಂದು ಅಧ್ಯಯನವು ವರದಿ ಮಾಡಿದೆ. 

ನ್ಯೂಯಾರ್ಕ್‌ನ ಈ ವ್ಯಕ್ತಿ ಟ್ರೈಕೊಫೈಟನ್ ಮೆಂಟಾಗ್ರೋಫೈಟ್ಸ್ ಟೈಪ್ VII (ಟಿಎಂ VII) ಜಾತಿಯ ಸೋಂಕಿಗೆ ಒಳಗಾಗಿದ್ದ ಎಂಬುದು ಸೋಂಕಿತ ವ್ಯಕ್ತಿಯನ್ನು ಪರೀಕ್ಷಿಸಿದ ನಂತರ ಪತ್ತೆಯಾಗಿದೆ. ಈ ಶಿಲೀಂಧ್ರ ಚರ್ಮದ ಮೇಲೆ ದದ್ದುಗಳನ್ನು ಉಂಟುಮಾಡುತ್ತದೆ. ಇದನ್ನು ಟಿನಿಯಾ ಎಂದೂ ಕರೆಯುತ್ತಾರೆ. ಕೈಗಳು, ಕಾಲುಗಳು, ಮುಖ, ಸೊಂಟ ಮತ್ತು ಪಾದಗಳ ಮೇಲೆ ಈ ದುದ್ದು ಹರಡುತ್ತ ಹೋಗುತ್ತದೆ. 

2023 ರಲ್ಲಿ ಫ್ರಾನ್ಸ್‌ನಲ್ಲಿ ಈ ಸೋಂಕು ಪತ್ತೆಯಾಗಿತ್ತು. 13 ಪ್ರಕರಣಗಳು ವರದಿಯಾಗಿದ್ದವು. ಪುರುಷರ ಜೊತೆ ಸಂಬಂಧ ಬೆಳೆಸಿದ ಹೆಚ್ಚಿನ ಪುರುಷರಿಗೆ ಈ ಸೋಂಕು ಕಾಣಿಸಿಕೊಂಡಿತ್ತು. ವಿಶೇಷವೆಂದ್ರೆ ಈಗ ಸೋಂಕಿಗೆ ತುತ್ತಾಗಿರುವ ವ್ಯಕ್ತಿ ಕೂಡ ಪ್ರವಾಸದ ವೇಳೆ ಅನೇಕ ಪುರುಷರ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ. ಆದ್ರೆ ಆತ ಸಂಬಂಧ ಬೆಳೆಸಿದ್ದ ಯಾವುದೇ ಪುರುಷರಿಗೆ ಈ ಸೋಂಕು ಇರಲಿಲ್ಲ ಎಂದೂ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. 

ನಿಮ್ಮ ಟೂಥ್ ಪೇಸ್ಟ್‌ನಲ್ಲಿ ಸಿಹಿ ಹೆಚ್ಚಿದೆಯಾ? ಹಾಗಿದ್ದರೆ ಹೃದಯಾಘಾತ ಅಪಾಯ ಹೆಚ್ಚು!

ಸಾಮಾನ್ಯವಾಗಿ ಜನರು ಲೈಂಗಿಕ ವಿಷ್ಯದ ಬಗ್ಗೆ ಮಾತನಾಡಲು ಹಿಂದೇಟು ಹಾಕುತ್ತಾರೆ. ಅದ್ರಲ್ಲೂ ಜನನಾಂಗ ಅಥವಾ ಅದರ ಸುತ್ತಮುತ್ತ ದುದ್ದುಗಳಾಗಿದ್ದರೆ, ತುರಿಕೆ ಕಾಣಿಸಿಕೊಂಡ್ರೆ ವೈದ್ಯರನ್ನು ಅವರು ಭೇಟಿ ಮಾಡೋದಿಲ್ಲ. ಜನರು ವೈದ್ಯರ ಬಳಿ ಹೋದ್ರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಒಂದ್ವೇಳೆ ಇದನ್ನು ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ಹೆಚ್ಚಾಗುತ್ತದೆ. ಜನನಾಂಗ ಅಥವಾ ಪುಷ್ಠದ ಸುತ್ತಮುತ್ತ ದುದ್ದುಗಳು ಕಾಣಿಸಿಕೊಳ್ತಿದ್ದರೆ ಜನರು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲ ದಿನಗಳ ಹಿಂದಷ್ಟೆ ವಿದೇಶಿ ಪ್ರಯಾಣ ಮಾಡಿದ್ದು, ಲೈಂಗಿಕವಾಗಿ ಸಕ್ರಿಯವಾಗಿರುವ ಜನರು ಇದ್ರ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ವಿದೇಶದಿಂದ ವಾಪಸ್ ಬಂದ ಸಮಯದಲ್ಲಿ ದೇಹದಲ್ಲಿ ದುದ್ದುಗಳು, ತುರಿಕೆಗಳು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ ಪರೀಕ್ಷೆಗೆ ಒಳಗಾಗಬೇಕು ಎಂದು . ಅಧ್ಯಯನದ ಹಿರಿಯ ಲೇಖಕರಾದ ಡಾ. ಜಾನ್ ಜಿ. ಜಂಪೆಲ್ಲಾ ಹೇಳಿದ್ದಾರೆ. ಟಿಎಂ VII ಸೋಂಕಿಗೆ ಚಿಕಿತ್ಸೆ ಇಲ್ಲವೆಂದಲ್ಲ. ಅದಕ್ಕೆ ಟೆರ್ಬಿನಾಫೈನ್ ನಂತಹ ಔಷಧಿ ಬಳಸಲಾಗುತ್ತದೆ. ಆದ್ರೆ ಅದ್ರಿಂದ ತಕ್ಷಣ ಚೇತರಿಕೆ ಸಿಗೋದಿಲ್ಲ. ಗುಣವಾಗಲು ತಿಂಗಳು ಹಿಡಿಯುತ್ತದೆ. 

Latest Videos
Follow Us:
Download App:
  • android
  • ios