ಜಾಸ್ತಿ ಬೈಕ್ ಓಡಿಸಿದ್ರೆ ಹಾಳಾಗೋದು ಗಾಡಿಯಲ್ಲ, ನಿಮ್ಮ ಬಾಡಿ… ಹುಷಾರು!
ತುಂಬಾ ದೂರದವರೆಗೆ ಬೈಕ್ ಸವಾರಿ ಮಾಡೋದ್ರಿಂದ ದೇಹದ ಮೇಲೆ ಒತ್ತಡ ಬಿದ್ದು, ಸಮಸ್ಯೆ ಉಂಟಾಗೋ ಸಾಧ್ಯತೆ ಇದೆ. ಇದರಿಂದ ಮೂಳೆ ಮುರಿತ, ಸಂಧಿವಾತ ಮತ್ತು ಗಾಯದ ಅಪಾಯವೂ ಇದೆ. ನೀವು ಈ ಅಪಾಯಗಳನ್ನು ತಪ್ಪಿಸಲು ಬಯಸಿದ್ರೆ, ವೈದ್ಯರ ಈ ಸಲಹೆ ಅನುಸರಿಸಿ.
ಬೈಕಲ್ಲಿ ಲಾಂಗ್ ಡ್ರೈವ್ ಹೋಗೋದು ಈಗಿನ ಟ್ರೆಂಡ್. ಹೆಚ್ಚಿನ ಹುಡುಗರಿಗೆ ಈ ಕ್ರೇಜ್ ಇದ್ದೇ ಇರುತ್ತೆ. ವೀಕೆಂಡ್ ಬಂದ್ರೆ ಸಾಕು ಬೈಕ್ ಹಿಡ್ಕೊಂಡು, ದೂರದ ಊರಿಗೆ ಹೋಗಿ ಬರೋದು. ಆದರೆ ದೂರ ದೂರದವರೆಗೂ ಬೈಕು ಸವಾರಿ ಮಾಡುವುದು ಸುಲಭದ ಕೆಲಸವೇನಲ್ಲ. ಇದು ಸಾಕಷ್ಟು ಆಯಾಸ ಮತ್ತು ಬಿಗಿತ ಉಂಟುಮಾಡಬಹುದು. ಆದರೆ ಹೆಚ್ಚು ಗಂಟೆಗಳ ಕಾಲ ಮೋಟಾರ್ ಬೈಕ್ ಸವಾರಿ (bike ride) ಮಾಡೊದ್ರಿಂದ ಮೂಳೆಗಳು ಮುರಿಯುವ ಅಪಾಯವೂ ಹೆಚ್ಚಾಗುತ್ತದೆ ಅನ್ನೋದು ನಿಮಗೆ ತಿಳಿದಿದೆಯೇ. ಹೌದು ಇದು ಸಂಧಿವಾತದ ಅಪಾಯ ಹೆಚ್ಚಿಸುತ್ತೆ.
ಲಾಂಗ್ ಬೈಕ್ ರೈಡಿನಿಂದ ದೇಹದ 3 ಭಾಗಗಳು ದುರ್ಬಲವಾಗಬಹುದು
ದೀರ್ಘ ಕಾಲದವರೆಗೆ (long drive) ಮೋಟಾರ್ ಸೈಕಲ್ ರೈಡ್ ಮಾಡೊದ್ರಿಂದ ತೊಡೆ, ಕಾಲು ಮತ್ತು ಸೊಂಟದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಈ ರೀತಿ ಆಗಬಾರದು ಅನ್ನೋದಾದ್ರೆ, ನೀವು ತಜ್ಞರ ಕೆಲವೊಂದು ಸಲಹೆಗಳನ್ನು ಪಾಲಿಸಬೇಕು. ಇದ್ರಿಂದ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತೆ.
ಮೊಣಕಾಲು ಮತ್ತು ಬೆನ್ನುಮೂಳೆ ಸಂಧಿವಾತ
ವೈದ್ಯರ ಪ್ರಕಾರ, ಈ ಸ್ನಾಯುಗಳ ಮೇಲಿನ ಒತ್ತಡವು ಮೊಣಕಾಲು ಮತ್ತು ಬೆನ್ನುಮೂಳೆಯ (back pain) ಸಂಧಿವಾತದ ಅಪಾಯ ಹೆಚ್ಚಿಸುತ್ತದೆ. ಏಕೆಂದರೆ ಬೈಕ್ ರೈಡ್ ಮಾಡೋವಾಗ ಪದೇ ಪದೇ ಬ್ರೇಕ್ ಹೊಡೆಯಬೇಕಾಗುತ್ತದೆ ಮತ್ತು ಕೆಲವು ಸಮಯ ಸಡನ್ ಆಗಿ ಕಾಲನ್ನು ನೆಲದ ಮೇಲೆ ಇಡಬೇಕಾಗುತ್ತೆ. ಇದರಿಂದಾಗಿ ಕಾಲಿನಲ್ಲಿ ಒತ್ತಡ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತೆ.
ಬೈಕ್ ರೈಡ್ ಮಾಡೋವಾಗ ಈ ವಸ್ತುಗಳನ್ನು ಧರಿಸಿ
ಬೈಕ್ ಸವಾರಿ ಮಾಡುವಾಗ ಉತ್ತಮ ಪ್ಯಾಡಿಂಗ್ ಧರಿಸಲೇಬೇಕು. ಮೊಣಕಾಲು, ಮೊಣಕೈ ಮತ್ತು ಸೊಂಟಕ್ಕೆ ಸಪೋರ್ಟ್ ನೀಡುವ ಗಾರ್ಡ್ ಗಳನ್ನು ಧರಿಸಬೇಕು. ಇದು ಸಂಧಿವಾತ ಮತ್ತು ಗಾಯ ಉಂಟಾಗೋ ಸಾಧ್ಯತೆಯನ್ನು ತಪ್ಪಿಸುತ್ತದೆ.
ದೀರ್ಘ ಪ್ರಯಾಣ ಮಾಡೋವಾಗ ರೆಸ್ಟ್ ಮಾಡೊದ ಮರೀಬೇಡಿ
ದೀರ್ಘ ಪ್ರಯಾಣದ ಸಮಯದಲ್ಲಿ ಮಧ್ಯದಲ್ಲಿ ನಿಲ್ಲಿಸುವುದು ಬಹಳ ಮುಖ್ಯ (take rest). ಇದು ನಿಮ್ಮ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಪದೇ ಪದೇ ಲಾಂಗ್ ಡ್ರೈವ್ ಮಾಡೋದನ್ನು ತಪ್ಪಿಸಿ.
ಈ ಕೆಲಸ ಮಾಡಿ
ಬೈಕ್ ಅನ್ನು ಸುರಕ್ಷಿತವಾಗಿ ಓಡಿಸಬೇಕು ಅಂದ್ರೆ ನೀವು ಕೆಲವೊಂದು ವಿಷ್ಯಗಳನ್ನು ನೆನಪಿನಲ್ಲಿಡಬೇಕು. ಅದೇನೆಂದ್ರೆ ನೀವು ಯಾವಾಗಲೂ ಹೆಲ್ಮೆಟ್ (Helmate) ಧರಿಸಬೇಕು ಮತ್ತು ಸಂಚಾರ ನಿಯಮಗಳನ್ನು ಅನುಸರಿಸಬೇಕು. ಇದರಿಂದ ಅಪಾಯ ಆಗೋದು ಕಡಿಮೆಯಾಗುತ್ತೆ.
ಕುಡಿದು ವಾಹನ ಚಲಾಯಿಸಬೇಡಿ
ಎಂದಿಗೂ ಕುಡಿದು ವಾಹನ ಚಲಾಯಿಸಬೇಡಿ. ಇದು ತಮ್ಮ ಮತ್ತು ಇತರರ ಜೀವವನ್ನು ಅಪಾಯಕ್ಕೆ ತಳ್ಳುತ್ತದೆ. ನೀವು ಪೂರ್ಣ ಪ್ರಜ್ಞೆ ಮತ್ತು ಆರೋಗ್ಯವಾಗಿದ್ದಾಗ ಮಾತ್ರ ಸವಾರಿ ಮಾಡಿ. ಇಲ್ಲ ಅಂದ್ರೆ ಡ್ರೈವ್ ಮಾಡೋದು ಬೇಡ, ಇನ್ನೊಬ್ಬರ ಅಥವಾ ನಿಮ್ಮ ಪ್ರಾಣವನ್ನು ತೆಗಿಯೋದು ಬೇಡ.