ಕೇಂದ್ರ ಆರೋಗ್ಯ ಸಚಿವಾಲಯವು ಇಯರ್‌ಫೋನ್ ಮತ್ತು ಹೆಡ್‌ಫೋನ್‌ಗಳ ಅತಿಯಾದ ಬಳಕೆಯಿಂದ ಉಂಟಾಗುವ ಶ್ರವಣದೋಷದ ಬಗ್ಗೆ ಎಚ್ಚರಿಕೆ ನೀಡಿದೆ. ಯುವಕರಲ್ಲಿ ಇದು ಹೆಚ್ಚಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.
ಇಯರ್‌ಫೋನ್ ಅತಿ ಬಳಕೆ ವಿರುದ್ಧ ಕೇಂದ್ರ ಎಚ್ಚರಿಕೆ - ಅತಿ ಬಳಕೆಯಿಂದ ಶ್ರವಣದೋಷ : ಆರೋಗ್ಯ ಇಲಾಖೆ
ನವದೆಹಲಿ: ಇಯರ್‌ಫೋನ್ ಮತ್ತು ಹೆಡ್‌ಫೋನ್‌ಗಳ ಅತಿಯಾದ ಬಳಕೆಯಿಂದ ಜನರಲ್ಲಿ ಶ್ರವಣದೋಷ ಉಂಟಾಗುತ್ತಿದೆ ಎಂದಿರುವ ಕೇಂದ್ರ ಆರೋಗ್ಯ ಸಚಿವಾಲಯ. ಇದರ ದೀರ್ಘಕಾಲದ ಬಳಕೆ ವಿರುದ್ಧ ಜಾಗೃತಿ ಮೂಡಿಸುವಂತೆ ರಾಜ್ಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸೂಚಿಸಿದೆ.
ಈ ಕುರಿತು ವಿವರಿಸಿದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಪ್ರೊ. ಅತುಲ್ ಗೋಯೆಲ್, ‘ಆಡಿಯೋ ಸಾಧನಗಳ ಅತಿಯಾದ ಬಳಕೆಯಿಂದ ಜನರಲ್ಲಿ ಸರಿಪಡಿಸಲಾಗದಂತಹ ಶ್ರವಣದೋಷ ಉಂಟಾಗುತ್ತಿದೆ. ಯುವಕರಲ್ಲಿ ಇದು ಅತಿಯಾಗಿದೆ. 50 ಡೆಸಿಬಲ್‌ಗಳಿಗೆ ಹಾಗೂ ದಿನಕ್ಕೆ 2 ಗಂಟೆ ಮೀರದಂತೆ ಈ ಸಾಧನಗಳನ್ನು ಬಳಸಬೇಕು. ಆಗಾಗ ವಿರಾಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ.
ಅಲ್ಲದೆ, ಮಕ್ಕಳು ನಿರಂತರವಾಗಿ ಮೊಬೈಲ್/ಟೀವಿ ನೋಡುವುದರಿಂದ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಎಚ್ಚರಿಸಿರುವ ಅವರು, ಶ್ರವಣ ದೋಷ ಪತ್ತೆ ಹಚ್ಚಲು ನಿರಂತರ ತಪಾಸಣಾ ಶಿಬಿರಗಳನ್ನು ಆಯೋಜಿಸಿ, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯಗಳು, ವೈದ್ಯಕೀಯ ಕಾಲೇಜುಗಳಿಗೆ ಸೂಚಿಸಿದ್ದಾರೆ.
ನೀವು ಇಯರ್ ಫೋನ್/ಇಯರ್ ಬಡ್ಸ್ ಬಳಸುತ್ತಿದ್ದೀರಾ? ಹಾಗಿದ್ರೆ ಸ್ಟೋರಿ ಓದಲೇಬೇಕು!
ಹೆಡ್ ಫೋನ್ ಬಳಕೆಯಿಂದ ಕಾಡುವ ಸಮಸ್ಯೆ : ಈಗಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಹುತೇಕ ಎಲ್ಲರ ಕಿವಿಯಲ್ಲಿ ಹೆಡ್ ಫೋನ್ ನೋಡ್ಬಹುದು. ಫೋನ್ ಕೈನಲ್ಲಿ ಹಿಡಿದು ಮಾತನಾಡುವುದು ಕಷ್ಟ ಎನ್ನುವ ಕಾರಣಕ್ಕೆ ಇಲ್ಲವೆ ತಾವು ಕೇಳುವ ಸಂಗೀತ ಬೇರೆಯವರಿಗೆ ತೊಂದರೆ ನೀಡಬಾರದು ಎನ್ನುವ ಕಾರಣಕ್ಕೆ ಜನರು ಹೆಡ್ ಫೋನ್ ಬಳಸ್ತಾರೆ. ಆದ್ರೆ ಇದು ಮಿತಿ ಮೀರಿದ ಪ್ರಮಾಣದಲ್ಲಿ ಬಳಕೆ ಆಗ್ತಿದೆ. ಹೆಡ್ ಫೋನ್ ಮೇಲಿಂದ ಸುಂದರವಾಗಿ ಕಂಡ್ರೂ ಅದ್ರ ಒಳಗೆ ನಿರೀಕ್ಷೆಗಿಂತ ಹೆಚ್ಚು ಕೊಳಕಿರುತ್ತದೆ.
ಕಿವಿಯೊಳಗೆ ಒಂದು ಪರದೆ ಇದ್ದು, ಇದನ್ನು ಇಯರ್ ಡ್ರಮ್ ಎಂದು ಕರೆಯಲಾಗುತ್ತದೆ. ಇದು ಮೆದುಳಿಗೆ ಸಂಪರ್ಕ ಹೊಂದಿರುತ್ತದೆ. ಇಯರ್‌ಫೋನ್ ಧರಿಸಿ ಜೋರಾಗಿ ಧ್ವನಿ ಕೇಳಿದಾಗ, ಧ್ವನಿ ಮತ್ತು ಅದರ ಕಂಪನಗಳು ಒತ್ತಡದಿಂದ ಇಯರ್ ಡ್ರಮ್ ಗೆ ಹೊಡೆಯುತ್ತವೆ. ಇದು ಸಮಸ್ಯೆಯುಂಟು ಮಾಡುತ್ತದೆ. ಇದು ಶಾಶ್ವತ ಕಿವುಡುತನಕ್ಕೆ ಕಾರಣವಾಗುತ್ತದೆ. ಇಯರ್ ಫೋನ್ ಅಗತ್ಯವಿದ್ದಾಗ ಮಾತ್ರ ಬಳಕೆ ಮಾಡಿದ್ರೆ ಒಳ್ಳೆಯದು. ಇಯರ್ ಫೋನ್ ಬಳಸುವ ವೇಳೆ ಕಡಿಮೆ ಧ್ವನಿ ಇರಲಿ. ಒಳ್ಳೆ ಗುಣಮಟ್ಟದ ಇಯರ್ ಫೋನ್ ಆಯ್ಕೆ ಮಾಡಿಕೊಳ್ಳಿ.
