ಯಂಗ್ ಆಗಿರಬೇಕೆಂದ್ರೆ ನಿದ್ರೆ ಮಾಡಿ.. ಎರಡು ದಿನ ನಿದ್ರೆ ವ್ಯತ್ಯಯವಾದ್ರೂ ಆಯಸ್ಸು ಕಡಿಮೆಯಾಗೋದು ಗ್ಯಾರಂಟಿ!

ಪ್ರತಿ ದಿನ 7 -8 ಗಂಟೆ ನಿದ್ರೆ ಬಹಳ ಮುಖ್ಯ. ಒಂದೆರಡು ದಿನ 4 ಗಂಟೆಗೆ ನಿದ್ರೆಯನ್ನು ಸೀಮಿತಗೊಳಿಸಿದ್ರೆ ಸಮಸ್ಯೆ ಆಗೋದಿಲ್ಲ ಅಂತ ನೀವು ಭಾವಿಸಬಹುದು. ಆದ್ರೆ ಈ ನಿಮ್ಮ ನಿರ್ಲಕ್ಷ್ಯ ನಿಮ್ಮ ಭಾವನೆ, ವಯಸ್ಸಿನ ಮೇಲೆ ಪರಿಣಾಮ ಬೀರುತ್ತದೆ. 
 

Even If You Dont Sleep For Two Days Your Age Will redece roo

ಒಂದು ದಿನ ನಿದ್ರೆ ಮಾಡಿಲ್ಲ (Sleepless Nights), ಎರಡು ದಿನ ನಿದ್ರೆ ಮಾಡಿಲ್ಲ ಅಂದ್ರೆ ಏನಾಗುತ್ತೆ ಅಂತ ನೀವು ಪ್ರಶ್ನೆ ಮಾಡ್ಬಹುದು. ಆದ್ರೆ ನೀವು ಎರಡು ದಿನ ನಿದ್ರೆ ಸ್ಕಿಪ್  ಮಾಡಿದ್ರೂ ಅದು ನಿಮ್ಮ ವಯಸ್ಸಿನ ಮೇಲೆ ಪರಿಣಾಮ ಬೀರುತ್ತೆ. ಇರೋದಕ್ಕಿಂತ ನಿಮ್ಮ ವಯಸ್ಸು ಡಬಲ್ ಆಗುತ್ತೆ. ಸ್ಥಿರವಾದ, ಶಾಂತವಾದ ನಿದ್ರೆಯು ನಿಮ್ಮ ನಿಜವಾದ ವಯಸ್ಸಿನ ಭಾವನೆಯನ್ನು ತಡೆಯಲು ಸಹಾಯ ಮಾಡುವ ಪ್ರಮುಖ ಅಂಶವಾಗಿದೆ.

ಸ್ವೀಡಿಷ್ (Swedish) ಮನಶ್ಶಾಸ್ತ್ರಜ್ಞರು ಈ ಬಗ್ಗೆ ಸಂಶೋಧನೆ (Research) ನಡೆಸಿದ್ದಾರೆ. ಎರಡು ರಾತ್ರಿ ಸತತ ಕೇವಲ ನಾಲ್ಕು ಗಂಟೆಗಳ ನಿದ್ದೆ ಮಾಡಿದವರು ನಾಲ್ಕು ವರ್ಷಗಳಷ್ಟು ಹೆಚ್ಚು ವಯಸ್ಸಾದಂತೆ ಭಾಸವಾಗುತ್ತಿದ್ದರು ಎಂದು ಸಂಶೋಧಕರು ಹೇಳಿದ್ದಾರೆ. ನಿದ್ರೆ (Sleep) ಯ ಕೊರತೆಯು ದಶಕಗಳಷ್ಟು ವಯಸ್ಸನ್ನು ಹೆಚ್ಚು ಮಾಡುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. 

ರಾತ್ರಿ 9ಕ್ಕೆ ಊಟ ಮಾಡಿ, ತಕ್ಷಣ ಮಲಗೋ ಬದಲು 6ಕ್ಕೆ ಊಟ ಮಾಡಿದ್ರೆ ಆರೋಗ್ಯದಲ್ಲಿ ಕಮಾಲ್!

ಅದೇ ಒಂಬತ್ತು ಗಂಟೆಗಳ ಕಾಲ ಒಳ್ಳೆ ನಿದ್ರೆ ಮಾಡಿದ ಜನರು ಕೇವಲ ನಾಲ್ಕು ಗಂಟೆ ನಿದ್ರೆ ಮಾಡಿದವರ ವಿರುದ್ಧವಾಗಿ ಪರಿಣಾಮ ಕಂಡುಕೊಂಡರು. ಅಧ್ಯಯನದಲ್ಲಿ ಭಾಗವಹಿಸುವವರು ಸಾಕಷ್ಟು ವಿಶ್ರಾಂತಿಯ ನಂತರ ನಿಜವಾದ ವಯಸ್ಸಿಗಿಂತ ಸರಾಸರಿ ಮೂರು ತಿಂಗಳು ಕಿರಿಯರು ಎಂಬ ಭಾವನೆಗೆ ಒಳಗಾಗಿದ್ದರು.

ನೀವು ಕೇವಲ ಒಂದೆರಡು ರಾತ್ರಿಗಳವರೆಗೆ ಕಡಿಮೆ ನಿದ್ರಿಸಿದರೂ ಸಹ, ಅದು ನಿಮ್ಮ ಭಾವನೆಯ ಮೇಲೆ ನಿಜವಾದ ಪ್ರಭಾವವನ್ನು ಬೀರಬಹುದು ಎಂದು ಸ್ಟಾಕ್‌ಹೋಮ್‌ನ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ ಸೈಕೋನ್ಯೂರೋಇಮ್ಯುನೊಲಾಜಿಸ್ಟ್ ಡಾ. ಲಿಯೋನ್  ಬಾಲ್ಟರ್ ಹೇಳಿದ್ದಾರೆ.

ನಿದ್ರೆ ಕೊರತೆ ವಯಸ್ಸಾದ ಭಾವನೆಯ ಜೊತೆಗೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಅನಾರೋಗ್ಯಕರ ಆಹಾರ ಪದ್ಧತಿ, ಕಡಿಮೆ ದೈಹಿಕ ವ್ಯಾಯಾಮ ಮತ್ತು ಸಾಮಾಜಿಕ ಸಂವಹನ ಮತ್ತು ಹೊಸ ಅನುಭವ ಪಡೆಯುವುದನ್ನು ತಪ್ಪಿಸುತ್ತದೆ. 

ಸಂಶೋಧಕರು ಎರಡು ಅಧ್ಯಯನಗಳನ್ನು ನಡೆಸಿದ್ದಾರೆ. ಮೊದಲನೆಯದರಲ್ಲಿ, 18 ರಿಂದ 70 ವರ್ಷ ವಯಸ್ಸಿನ 429 ಜನರು ಪಾಲ್ಗೊಂಡಿದ್ದರು. ಅವರು ಎಷ್ಟು ದಿನ ನಿದ್ರೆಗೆಟ್ಟಿದ್ದಾರೆ, ಎಷ್ಟು ವಯಸ್ಸಾದಂತೆ ಭಾವಿಸುತ್ತಾರೆ ಎಂಬ ಮಾಹಿತಿ ಆಧಾರದ ಮೇಲೆ ಅಧ್ಯಯನ ನಡೆಸಲಾಗಿದೆ. ಪ್ರತಿ ದಿನ ಕಳಪೆ ನಿದ್ರೆ ಮಾಡಿದ ಜನರು ಸರಾಸರಿ ಮೂರು ತಿಂಗಳು ಹಿರಿಯರಾದಂತ ಅನುಭವಪಡೆದರು. ಅದೇ ಕಳೆದ ತಿಂಗಳು ಸಂಪೂರ್ಣ ನಿದ್ರೆ ಪಡೆದ ಜನರು ಸರಾಸರಿ ಆರು ವರ್ಷ ಚಿಕ್ಕವರಾಗಿದ್ದರು ಎಂದು ಸಂಶೋಧಕರು ಹೇಳಿದ್ದಾರೆ. 

ಎರಡನೆಯ ಅಧ್ಯಯನದಲ್ಲಿ, ಸಂಶೋಧಕರು 18 ರಿಂದ 46 ವರ್ಷ ವಯಸ್ಸಿನ 186 ಜನರು ಪಾಲ್ಗೊಂಡಿದ್ದರು. ಎರಡು ರಾತ್ರಿ ಸಾಕಷ್ಟು ನಿದ್ರೆಯ ನಂತರ ಜನರನ್ನು ಪ್ರಶ್ನೆ ಕೇಳಲಾಯ್ತು. ಪ್ರತಿ ರಾತ್ರಿ ನಾಲ್ಕು ಗಂಟೆ ನಿದ್ರೆ ಮಾಡಿದ ಜನರು ಸರಾಸರಿ 4.44 ವರ್ಷ ಹೆಚ್ಚು ವಯಸ್ಸಾದ ಅನುಭವ ಹೊಂದಿದ್ದರು.  

ನೀವು ಯುವಕರಾಗಬೇಕೆಂದು ಬಯಸಿದರೆ ಸೂಕ್ತ ನಿದ್ರೆ ಪಡೆಯುವುದು ಮುಖ್ಯ. ನಿದ್ರೆ ಜನರ ಜೀವನವನ್ನು ಬದಲಾಯಿಸುತ್ತದೆ. ಇದು ಆರೋಗ್ಯದ ಮೇಲೆ ತಕ್ಷಣ  ಮತ್ತು ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ಕಳಪೆ ಆಹಾರ ಮತ್ತು ಕಡಿಮೆ ದೈಹಿಕ ಚಟುವಟಿಕೆಯ ಪರಿಣಾಮಗಳು ಕಾಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ರಾತ್ರಿಯಲ್ಲಿ ಕಳಪೆ ನಿದ್ರೆಯ ಪರಿಣಾಮಗಳು  ಜೀವನಶೈಲಿಯ ನಡವಳಿಕೆಗಳ ಮೇಲೆ ಪರಿಣಾಮ ಬೀರುತ್ತವೆ. 

ಮೋದಿ ಪಕ್ಕದಲ್ಲೇ ಕೂತಿದ್ರೂ ತೂಕಡಿಸಿದ ಶ್ಲೋಕಾ ಅಂಬಾನಿ, ನೀತಾ ಮೊದಲ‌ ಸೊಸೆ ಪರ ನೆಟ್ಟಿಗರ ಬ್ಯಾಟಿಂಗ್!

ಒಂದು ಪ್ರತ್ಯೇಕ ಅಧ್ಯಯನದಲ್ಲಿ 4,000 ಕ್ಕೂ ಹೆಚ್ಚು ಯುರೋಪಿಯನ್ನರ ಮೇಲೆ ಪ್ರಯೋಗ ನಡೆದಿತ್ತು.  10 ವರ್ಷಗಳ ಅಧ್ಯಯನವು ವಾರಕ್ಕೆ ಎರಡು ಅಥವಾ ಮೂರು ಬಾರಿ ನಿಯಮಿತವಾಗಿ ವ್ಯಾಯಾಮ ಮಾಡುವ ಜನರು ನಿಷ್ಕ್ರಿಯವಾಗಿರುವವರಿಗಿಂತ ನಿದ್ರಾಹೀನತೆಯಿಂದ ಬಳಲುತ್ತಿರುವ ಸಾಧ್ಯತೆ ಕಡಿಮೆ ಎಂಬುದನ್ನು ಇದರಿಂದ ಕಂಡುಹಿಡಿಯಲಾಗಿದೆ. 

Latest Videos
Follow Us:
Download App:
  • android
  • ios