Asianet Suvarna News Asianet Suvarna News

ಸುಸ್ತಾ? 15 ನಿಮಿಷದ ಈ ಯೋಗ ಮಾಡಿದ್ರೆ ಆಗಬಹುದು ಆ್ಯಕ್ಟಿವ್

ಯೋಗ ಮಾಡ್ಬೇಕು ಆದ್ರೆ ಟೈಂ ಸಿಗ್ತಿಲ್ಲ ಎನ್ನುವವರೇ ಜಾಸ್ತಿ. ನೀವು ದಿನವಿಡಿ ಯೋಗ ಮಾಡ್ಬೇಕಾಗಿಲ್ಲ. ಬರೀ 15  ನಿಮಿಷ ಮೀಸಲಿಡಿ ಸಾಕು. ಕೆಲವೇ ಕೆಲವು ಆಸನಗಳನ್ನು ಮಾಡಿಯೂ ನೀವು ಆರೋಗ್ಯ ಕಾಪಾಡಿಕೊಳ್ಳಬಹುದು. 
 

Energy Boosting Morning Yoga
Author
First Published Jan 4, 2023, 11:20 AM IST

ಪ್ರತಿ ದಿನ ಯೋಗ ಮಾಡಿ ರೋಗದಿಂದ ದೂರವಿರಿ. ಇದು ತಜ್ಞರ ಸಲಹೆಯಾಗಿದೆ. ಯೋಗವನ್ನು ನಿಯಮಿತವಾಗಿ ಮಾಡುವುದ್ರಿಂದ  ಅನೇಕ ಕಾಯಿಲೆಗಳಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳಬಹುದು. ಯೋಗ ನಮ್ಮ ದೇಹವನ್ನು ರಿಫ್ರೆಶ್ ಮಾಡಲು ನೆರವಾಗುತ್ತದೆ. ಹಾಗೆಯೆ ಕೆಲಸ ಮಾಡಲು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುವ ಕಾರ್ಯವನ್ನು ಯೋಗ ಮಾಡುತ್ತದೆ. ಪ್ರತಿದಿನ ಯೋಗ ಮಾಡುವುದ್ರಿಂದ ಜನರ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ ಕೂಡ ವೃದ್ಧಿಯಾಗುತ್ತದೆ. 

ವ್ಯಕ್ತಿಯೊಬ್ಬ ಉತ್ತಮವಾಗಿ ಕಾರ್ಯನಿರ್ವಹಿಸಲು ಯೋಗ (Yoga) ನೆರವಾಗುತ್ತದೆ. ಆತನ ಕೆಲಸದ ದಕ್ಷತೆಯನ್ನು ಯೋಗ ಹೆಚ್ಚಿಸುತ್ತದೆ. ಯೋಗಾಸನ ಒಟ್ಟಾರೆ ಆರೋಗ್ಯ (Health) ಮತ್ತು ಅಭಿವೃದ್ಧಿಗೆ ಸಹಕಾರಿ.  ಕೆಲಸ (Job) ದ ಒತ್ತಡದಲ್ಲಿ ಯೋಗಕ್ಕೆಂದೇ ಒಂದು ಗಂಟೆ ಸಮಯವನ್ನು ಮೀಸಲಿಡಲು ಅನೇಕರಿಗೆ ಸಾಧ್ಯವಿಲ್ಲ.  ಅಂಥವರು ನಿತ್ಯದ ಕೆಲಸದಲ್ಲಿಯೇ ಯೋಗವನ್ನು ಸೇರಿಸಿಕೊಳ್ಳಬಹುದು. ಅಂದ್ರೆ ಬರೀ 15 ನಿಮಿಷವನ್ನು ಅವರು ಯೋಗಕ್ಕೆ ಮೀಸಲಿಟ್ಟರೆ ಸಾಕು. 

15 ನಿಮಿಷದೊಳಗೆ ಮಾಡಬಹುದಾದ ಕೆಲ ಯೋಗಗಳಿವೆ. ಅವುಗಳನ್ನು ಪ್ರತಿ ದಿನ ಮಾಡುವುದ್ರಿಂದ ನಿಮ್ಮ ದೇಹಕ್ಕೆ ಅನೇಕ ಲಾಭ ಸಿಗುತ್ತದೆ. 15 ನಿಮಿಷಗಳಿಗಿಂತ ಕಡಿಮೆ ಅವಧಿಯ ಕೆಲವು ಆಸನಗಳು ರಕ್ತ ಪರಿಚಲನೆ ಸುಧಾರಿಸುತ್ತವೆ. ಇಡೀ ದೇಹವನ್ನು ಹಿಗ್ಗಿಸುವುದರ ಜೊತೆಗೆ ಮನಸ್ಥಿತಿಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಯೋಗಕ್ಕೆ ವಯಸ್ಸಿನ ಮಿತಿಯಿಲ್ಲ. ಎಲ್ಲ ವಯಸ್ಸಿನ ಜನರು ಕೂಡ ಯೋಗಾಭ್ಯಾಸ ಮಾಡಬಹುದು. ಯೋಗದಿಂದ ಸುಸ್ತು, ಆಯಾಸ ಕಡಿಮೆಯಾಗಿ, ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ. ನಾವಿಂದು 15 ನಿಮಿಷದಲ್ಲಿ ಮಾಡಬಹುದಾದ ಕೆಲ ಆಸನಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಗರ್ಭಕಂಠದ ಕ್ಯಾನ್ಸರ್: ಗಂಭೀರ ಅನಾರೋಗ್ಯವನ್ನು ತಡೆಗಟ್ಟುವುದು ಹೇಗೆ?

ಪ್ರತಿ ದಿನ ಈ ಯೋಗ ಮಾಡಿ, ದುಪ್ಪಟ್ಟು ಲಾಭ ಪಡೆಯಿರಿ : 
ಕಪಾಲಭಾತಿ ಪ್ರಾಣಾಯಾಮ :
ಯೋಗದ ಒಂದು ಭಾಗ ಪ್ರಾಣಾಯಾಮ. ಪ್ರಾಣಾಯಾಮದ ಆಸನಗಳನ್ನು ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು. ಇದು ನರಗಳನ್ನು ಆರೋಗ್ಯಕರವಾಗಿಡಲು ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಕಪಾಲಭಾತಿ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ನರಗಳು ಸಕ್ರಿಯಗೊಳ್ಳುತ್ತವೆ. ನಿಮ್ಮ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ಕಪಾಲಭಾತಿ ಕೂದಲಿನ ಬೆಳವಣಿಗೆಗೆ ಒಳ್ಳೆಯದು. ಅನೇಕ ದೈಹಿಕ ಸಮಸ್ಯೆಗಳ ಅಪಾಯವನ್ನು ಕಪಾಲಭಾತಿಯಿಂದ ಕಡಿಮೆ ಮಾಡಬಹುದು.  ಪ್ರತಿ ದಿನ 15 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಮಾಡಬಹುದಾದ ಯೋಗದಲ್ಲಿ ಇದು ಒಂದು.

ಅಧೋಮುಖ ಶ್ವಾನಾಸನ : ಅಧೋಮುಖ ಶ್ವಾನಾಸನವನ್ನು ಕೂಡ ನೀವು ಪ್ರತಿ ದಿನ ಮಾಡಬೇಕು. ಇದ್ರಿಂದಲೂ ಸಾಕಷ್ಟು ಪ್ರಯೋಜನವಿದೆ. ಅಧೋಮುಖ ಶ್ವಾನಾಸನ ಯೋಗದ ಅಭ್ಯಾಸವು ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಮನಸ್ಸಿನಲ್ಲಿರುವ ನಕಾರಾತ್ಮಕ ಭಾವನೆ ಕಡಿಮೆ ಮಾಡಿ, ಸಕಾರಾತ್ಮಕತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅಧೋಮುಖ ಶ್ವಾನಾಸನ ಮಾಡುವುದ್ರಿಂದ ನೀವು ಉತ್ತಮ ನಿದ್ರೆ ಪಡೆಯಬಹುದು. ನಿಮ್ಮ ಉತ್ಸಾಹವನ್ನು ಹೆಚ್ಚಿಸುವ ಕೆಲಸ ಇದ್ರಿಂದಾಗುತ್ತದೆ. ಅಧೋಮುಖ ಶ್ವಾನಾಸನದಲ್ಲಿ ನೀವು ಮುಂದಕ್ಕೆ ಬಾಗುವುದ್ರಿಂದ ಮೆದುಳಿಗೆ ರಕ್ತಪರಿಚಲನೆ ಹೆಚ್ಚುತ್ತದೆ. ಇದ್ರಿಂದ ಆಯಾಸ ಕಡಿಮೆಯಾಗುತ್ತದೆ. ಬೆನ್ನು ನೋವಿನ ಸಮಸ್ಯೆ ನಿಮಗೆ ಕಾಡಬಾರದು ಅಂದ್ರೆ ಪ್ರತಿ ದಿನ ಅಧೋಮುಖ ಶ್ವಾನಾಸನ ಮಾಡಿ. 

ದಿನಕ್ಕೆಷ್ಟು ಸಾರಿ ಕಣ್ಣು ಮಿಟುಕಿಸುತ್ತೀರಿ? ಹೆಚ್ಚು ಕಡಿಮೆಯಾದರೆ ಕಣ್ಣಿಗೆ ಅಪಾಯ!

ಸೇತುಬಂಧಾಸನ : ಪ್ರತಿ ದಿನ ಮಾಡಲೇಬೇಕಾದ ಇನ್ನೊಂದು ಯೋಗಾಸನವೆಂದರೆ ಸೇತುಬಂಧಾಸನ. ಈ ಆಸನದಲ್ಲ ಕುತ್ತಿಗೆ, ಸೊಂಟ ಮತ್ತು ಬೆನ್ನು ಮತ್ತು ತೊಡೆಯ ಹಿಂಭಾಗದ ಸ್ನಾಯುಗಳು ಹಿಗ್ಗುತ್ತವೆ. ಈ ಎಲ್ಲ ಸ್ನಾಯುಗಳನ್ನು ಬಲಪಡಿಸಲು ನೀವು ಅವಶ್ಯವಾಗಿ ಸೇತುಬಂಧಾಸನ ಮಾಡಬೇಕು. ಒತ್ತಡವನ್ನು ಕಡಿಮೆ ಮಾಡಿ, ಆಯಾಸವನ್ನು ನಿವಾರಿಸುವ ಕೆಲಸವನ್ನು ಇದು ಮಾಡುತ್ತದೆ. ಮಿದುಳಿನಲ್ಲಿ ರಕ್ತ ಸಂಚಾರ ಇದ್ರಿಂದ ಹೆಚ್ಚಾಗುತ್ತದೆ. ದೇಹ ಚುರುಕಾಗುತ್ತದೆ. ನಿಮಗೆ ಆಯಾಸ ಕಾಡ್ತಿದ್ದರೆ ನೀವು ಈ ಆಸನ ಮಾಡುವುದು ಸೂಕ್ತ. 
 

Follow Us:
Download App:
  • android
  • ios